Connect with us

UDUPI

ಮಣಿಪಾಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ನ ನೂತನ ಡೀನ್‌ ಆಗಿ ಡಾ.ಜುಡಿತ್‌ ಅಂಜೆಲಿಟ್ಟ ನೊರೊನ್ಹಾ ಅಧಿಕಾರ ಸ್ವೀಕಾರ

Published

on

ಮಂಗಳೂರು: ಮಣಿಪಾಲ್‌ ಕಾಲೇಜ್‌ ಆಫ್‌ ನರ್ಸಿಂಗ್‌(ಮಾಹೆ)ಯ ನೂತನ ಡೀನ್‌ ಆಗಿ ಡಾ.ಜುಡಿತ್‌ ಅಂಜೆಲಿಟ್ಟ ನೊರೊನ್ಹಾ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು.


ಈ ಹಿಂದೆ ಡೀನ್‌ ಆಗಿ ಕಾರ್ಯನಿರ್ವಹಿಸಿದ್ದ ಡಾ.ಅನೀಸ್‌ ಜೋರ್ಜ್‌ ಅವರು ಡಾ.ಜುಡಿತ್‌ ಅಂಜೆಲಿಟ್ಟ ನೊರೊನ್ಹಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಮಾಹೆಯ ರಿಜಿಸ್ಟ್ರಾರ್‌ ಡಾ.ನಾರಾಯಣ ಸಬಹಿತ್‌ ಅವರು ಮಾತನಾಡಿ, ಡಾ.ಅನೀಸ್‌ ಜೋರ್ಜ್‌ ಅವರ ಕಾಲಾವಧಿಯಲ್ಲಿ ಸಂಸ್ಥೆಯು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೇರಿತ್ತು.

ಜೊತೆಗೆ ಯಾವುದೇ ಸಮಸ್ಯೆ ಎದುರಾದಾಗ ಅದನ್ನು ದಿಟ್ಟವಾಗಿ ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದರು. 12 ವರ್ಷಗಳ ಕಾಲ ಅಸೋಸಿಯೇಟ್‌ ಡೀನ್‌ ಹಾಗೂ 14 ವರ್ಷಗಳ ಕಾಲ ಡೀನ್‌ ಆಗಿ ಕಾರ್ಯನಿರ್ವಹಿಸಿದ್ದ ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಅನೀಸ್‌ ಜಾರ್ಜ್‌ ಅವರು ಮಾತನಾಡಿ, ತನ್ನ ಅಧಿಕಾರವಧಿಯಲ್ಲಿ ತನಗೆ ಮಾರ್ಗದರ್ಶನಗೈದ ವಿವಿಯ ಕುಲಾಧಿಪತಿಗಳಿಗೆ, ಸಂಸ್ಥೆಯ ಪ್ರಾಧ್ಯಪಕರು, ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ಮುಂದಿನ ಡೀನ್‌ ಅವರಿಗೆ ಶುಭಹಾರೈಸಿದರು.


ಅಧಿಕಾರ ಸ್ವೀಕರಿಸಿದ ಡಾ.ಜುಡಿತ್‌ ಅಂಜೆಲಿಟ್ಟ ನೊರೊನ್ಹಾ ಅವರು ಮಂಗಳೂರಿನ ಫಾದರ್‌ ಮುಲ್ಲರ್‌ ಆಫ್‌ ನರ್ಸಿಂಗ್‌ ಕಾಲೇಜಿನಿಂದ 1992ರಲ್ಲಿ ಪದವಿ ಪಡೆದಿದ್ದರು. ನಂತರ 1997ರಲ್ಲಿ ಸ್ನಾತಕೋತ್ತರ ಪದವಿ, 1999ರಲ್ಲಿ ಮಣಿಪಾಲ್‌ ಕಾಲೇಜ್‌ ಆಫ್‌ ನರ್ಸಿಂಗ್ ಸಂಸ್ಥೆಯಿಂದ ಎಂ.ಫಿಲ್‌ ಪದವಿ, 2007ರಲ್ಲಿ ಪಿ.ಎಚ್‌.ಡಿ ಪಡೆದ ಇವರು 2008ರಿಂದ 201ರವರೆಗೆ ಮಣಿಪಾಲ್‌ ಮೆಡಿಕಲ್‌ ಕಾಲೇಜ್‌ ಆಫ್‌ ನರ್ಸಿಂಗ್‌ನಲ್ಲಿ ಅಸೋಸಿಯೇಟ್ ಡೀನ್‌ ಆಗಿ ಕಾರ್ಯನಿರ್ವಹಿಸಿದ್ದರು. ಓಬಿಜಿ ನರ್ಸಿಂಗ್‌ ವಿಭಾಗದ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

Click to comment

Leave a Reply

Your email address will not be published. Required fields are marked *

FILM

ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Published

on

ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು,  ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.

ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.

Continue Reading

DAKSHINA KANNADA

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ

Published

on

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ.

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇದಾಗಿದ್ದು, ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನವಾಗಿದೆ. ಮತದಾರರು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.

ಅದರಂತೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

Continue Reading

DAKSHINA KANNADA

ಬಡಗುತಿಟ್ಟು ಯಕ್ಷಗಾನದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ..

Published

on

ಉಡುಪಿ: ಬಡಗುತಿಟ್ಟು ಯಕ್ಷಗಾನ ಲೋಕದ ಶ್ರೇಷ್ಠ ಭಾಗವತ, ಸ್ವರ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ (67ವ) ಇಹಲೋಕ ತ್ಯಜಿಸಿದ್ದಾರೆ. ಅಲ್ಪಕಾಲದಿಂದ ಅಸೌಖ್ಯದಿಂದಿದ್ದ ಇವರು ಬೆಂಗಳೂರಿನಲ್ಲಿರುವ ಪುತ್ರನ  ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಮನೆಯಲ್ಲಿ ಇಂದು(ಎ.25) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕಾಳಿಂಗ ನಾವುಡರ ಬಳಿಕ ಮಧುರ ಕಂಠದಿಂದ ಹೆಚ್ಚು ಜನಪ್ರಿಯತೆಗಳಿಸಿದ್ದ ಕೀರ್ತಿ ಅವರದ್ದಾಗಿತ್ತು.

bharadeshwara

ಭಾಗವತಿಕೆಯಲ್ಲಿ ಗಾನ ಕೋಗಿಲೆ ಎನಿಸಿಕೊಂಡ ಧಾರೇಶ್ವರ:

ಇವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿ ಪೇರ್ಡೂರು ಮೇಳದಲ್ಲಿ ನಿವೃತ್ತಿ ಹೊಂದಿದ್ದರು. ಆರಂಭದಲ್ಲಿ ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಭಾಗವತರಾಗಿ ಪ್ರಖ್ಯಾತಿಗೊಂಡಿದ್ದರು. ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಪ್ರಯೋಗಶೀಲ ಭಾಗವತರೆಂದೇ ಹೆಸರುವಾಸಿಯಾಗಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ 28 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ  ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ‌ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ನಂತರ ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕವೂ ಅನಿವಾರ್ಯ ಸಂದರ್ಭದಲ್ಲಿ ಭಾಗವತರಾಗಿ ಕಲಾ ಸೇವೆ ಮಾಡಿ ಕಲಾವಿದರ ಮನ ಗೆದ್ದಿದ್ದರು.

ಮುಂದೆ ಓದಿ..; ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ

ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸಜ್ಜನ, ಸದ್ಗುಣಿ, ಮಿತಭಾಷಿಯಾಗಿದ್ದ ಧಾರೇಶ್ವರರು ಯಕ್ಷಗಾನಕ್ಕೆ ಕಾಳಿಂಗ ನಾವಡರ ಅನಂತರ ಭಾಗವತಿಕೆ ತಾರಾ ಮೌಲ್ಯ ತಂದಿದ್ದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿದ್ದರು. ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗ, ಯಕ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ.

Continue Reading

LATEST NEWS

Trending