DAKSHINA KANNADA
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ ದ.ಕ ಸಂಸದ ಕಟೀಲ್
ಮಂಗಳೂರು: ಬಹುಚರ್ಚಿತ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಕಾಶ್ಮೀರ್ ಫೈಲ್ಸ್ ಸಿನಿಮಾಗೆ 100 ಶೇಕಡಾ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಈ ಸಿನಿಮಾವನ್ನು ಬೆಂಬಲಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ಹಿಂದೂ ಪಂಡಿತರ ಮೇಲಾದ ದೌರ್ಜನ್ಯ, ಅತ್ಯಾಚಾರ, ಕ್ರೂರತೆ, ನರಮೇಧದ ಇತಿಹಾಸವನ್ನು ಅರಿಯುವ ಪ್ರಯತ್ನವೇ ದಿ ಕಾಶ್ಮೀರ್ ಫೈಲ್ಸ್.
ಈ ಸಿನಿಮಾವನ್ನು ಪ್ರತಿಯೊಬ್ಬ ದೇಶಾಭಿಮಾನಿಯು ನೋಡಬೇಕು. ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರಲೇಬೇಕು ಎಂದು ಸಾಬೀತಾಗಿದೆ. ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲಾರರು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
DAKSHINA KANNADA
ಸಿಎಂ ರಾಜಿನಾಮೆ ನೀಡಬೇಕು; ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ
ಮಂಗಳೂರು: ಸಿದ್ದರಾಮಯ್ಯ 14 ಸೈಟ್ ವಾಪಾಸ್ ಕೊಟ್ಟಿರುವುದು ಅವರಿಗೆ ಅವರ ತಪ್ಪಿನ ಅರಿವಾದಂತೆ ಇದೆ. ಅವರು ಬದುಕುಳಿಯುವ ಕೊನೆಯ ಯತ್ನವಾಗಿ ಕಾಣುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಸಂವಿಧಾನದ ಆಶಯಗಳಿಗೆ ಗೌರವ ನೀಡಬೇಕು ಕೇವಲ ಕುರ್ಚಿಗೆ ಅಂಟಿಕೊಂಡಿರುವುದಲ್ಲ . ಸಿದ್ದರಾಮಯ್ಯ ಕೇವಲ ಕುರ್ಚಿಗಾಗಿಯೇ ಇರುವಂತೆ ಮಾಡುತ್ತಾರೆ ಎಂದು ಹೇಳಿದರು.
ಆಮಿಷಗಳಿಗೆ ಜನರನ್ನು ಒಳಪಡಿಸುತ್ತಾ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಕಿಂಚಿತ್ತೂ ಆಭಿವೃದ್ಧಿ ಕಾಣುತ್ತಿಲ್ಲ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್ ಮಾಡಿಕೊಂಡಿದ್ದಾರೆ ಎಂದರು.
BANTWAL
ಬಸ್ಸಿನಿಂದ ಪರಿಸರ ಮಾಲಿನ್ಯ; ಸಾರ್ವಜನಿಕರ ಆಕ್ರೋಶ
ಬಂಟ್ವಾಳ: ಮಂಗಳೂರು ವಿಭಾಗಕ್ಕೆ ಸೇರಿದ ಕೆಎಸ್ಆರ್ಟಿಸಿ ಬಸ್ಸೊಂದು ಮಂಗಳೂರು – ಧರ್ಮಸ್ಥಳ ಸಂಚರಿಸುವ ವೇಳೆಯಲ್ಲಿ ಜೀವಕ್ಕೆ ಹಾಗೂ ಪರಿಸರಕ್ಕೆ ಹಾನಿಕಾರಕವಾದ ಕಪ್ಪು ಹೊಗೆಯನ್ನು ಹೊರ ಹಾಕುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಸರಿಯಾದ ನಿರ್ವಹಣೆ ಇಲ್ಲದ ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುತ್ತಿದ್ದು, ಇದರಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರವೇ ನಿವಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕಪ್ಪು ಹೋಗೆ ಹೊರ ಸೂಸುವ ಬಸ್ಸಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.
DAKSHINA KANNADA
ಬಸ್ಸುಗಳು ಮುಖಾಮುಖಿ; ದಂಪತಿಗೆ ಗಾಯ
ನೆಲ್ಯಾಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸ್ ಹಾಗೂ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸ್ ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ಮುಖಾಮುಖಿ ಡಿಕ್ಕಿಹೊಡೆದು ವಾಹನಗಳು ಜಖಂಗೊಂಡಿದೆ.
ಹಾಸನ ಮೂಲದ ದಂಪತಿಗಳಾದ ನಾಗೇಂದ್ರ ಪ್ರಸಾದ್ (60) ಮತ್ತು ಭಾರತಿ (54) ಎಂಬುವವರಿಗೆ ಗಾಯಗಳಾಗಿದ್ದು, ಶಿರಾಡಿಯ ಆಂಬ್ಯುಲೆನ್ಸ್ ಮೂಲಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇತ್ತೀಚೆಗೆ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಚಾಲಕನ ಅತಿವೇಗ ಹಾಗೂ ಅಜಾಗರುಕತೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- DAKSHINA KANNADA6 days ago
ಮಂಗಳೂರು : ಪಾನಿಪುರಿ ಸವಿಯುತ್ತಿದ್ದ ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿದ ಭೂಪ!
- DAKSHINA KANNADA5 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- DAKSHINA KANNADA6 days ago
ಮೂಡುಬಿದಿರೆ: ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾ*ವು
- LATEST NEWS5 days ago
ಪುತ್ತೂರು: ಸಾಲ ವಸೂಲಿಗೆಂದು ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ತಂದೆ ಮಗ