Saturday, July 2, 2022

ಮಂಗಳೂರು ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರು ನಾಮಕರಣ

ಮಂಗಳೂರು : ಭಾರೀ ವಿವಾದಕ್ಕೆ ಕಾರಣವಾಗಿದ್ದ ಲೇಡಿಹಿಲ್‌ವೃತ್ತಕ್ಕೆ ನಾಮಕರಣ ಮಾಡುವ ವಿವಾದ ಕೊನೆಗೂ ಅಂತ್ಯಗೊಂಡಿದ್ದು, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಲೇಡಿಹಿಲ್‌ವೃತ್ತ ಅನಾವರಣ ಮಾಡಲಾಗಿದೆ.


ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡುವ ಮೂಲಕ ಅವರ ಆದರ್ಶವನ್ನು ಪಾಲಿಸಬೇಕು ಎನ್ನುವ ಸಂದೇಶವನ್ನು ಪರೋಕ್ಷವಾಗಿ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.


ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಲೇಡಿಹಿಲ್ ಶಾಲೆ ಬಳಿಯ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ನಾಮಕರಣ ಸಮಾರಂಭದಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ನಾರಾಯಣ ಗುರುಗಳಿಂದ ಕುದ್ರೋಳಿ ದೇವಾಲಯ ಸ್ಥಾಪಿಸಲ್ಪಟ್ಟಿತ್ತು. ಆವಾಗಿನಿಂದಲೇ ಮಂಗಳೂರು ಹಾಗೂ ನಾರಾಯಣಗುರುಗಳ ನಡುವೆ ನಂಟಿದೆ.

ನಾರಾಯಣಗುರುಗಳು ಪ್ರಾಥಃಸ್ಮರಣೀಯರು, ತಳಮಟ್ಟದಲ್ಲಿದ್ದ ಸಮುದಾಯವನ್ನು ಮೇಲುಸ್ತರಕ್ಕೆ ತರಲು ಸೌಹಾರ್ದತೆಯನ್ನು ಸಾರಿ ಅಸ್ಪ್ರಸ್ತೆಯನ್ನು ನಿವಾರಣೆ ಮಾಡಲು ಮುನ್ನಡಿ ಇಟ್ಟಿರುವುದನ್ನು ನಾವು ಅರಿತಿದ್ದೇವೆ, ಇಂತಹ ಆದರ್ಶಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಲು ಈ ರೀತಿಯಾಗಿ ಸ್ಮರಣೀಯವಾಗಿ ಉಳಿಯಲು ವೃತ್ತಗಳಿಗೆ, ಸ್ಮಾರಕಗಳಿಗೆ ನಾಮಕರಣ ಮಾಡುವುದು ಪೂರಕ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹೃದಯದಲ್ಲಿ ನಾರಾಯಣ ಗುರುಗಳ ಬಗ್ಗೆ ಅಭಿಮಾನ ಇದ್ದಿದ್ದರೆ ಯಾರೂ ರಾಜಕೀಯ ಮಾಡುತ್ತಿರಲಿಲ್ಲ, ಅವರು ಅಧಿಕಾರದಲ್ಲಿದ್ದಾಗ ಈ ಕಾರ್ಯ ಮಾಡಬಹುದಿತ್ತು, ಅದೂ ಆಗಲಿಲ್ಲ,
ಈಗ ನಾವು ಮಾಡಿದ್ರು ಕಾರ್ಯಕ್ರಮದ ಹಿಂದಿನಿಂದ ತೊಂದರೆ ಕೊಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕುಟುಕಿದರು.

ಇನ್ನು ವೃತ್ತವನ್ನು ಮಂಗಳೂರು ನಗರಾಭಿವೃದ್ಧಿ ನಿರ್ವಹಿಸಲಿದೆ. ಶಾಸಕರಾದ ವೇದವ್ಯಾಸ್, ಭರತ್ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಎಂಎಲ್‌ಸಿ ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ, ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಎಚ್‌ಎಸ್ ಸಾಯಿರಾಂ, ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics

ಸುಳ್ಯ: ರಸ್ತೆ ಬದಿ ತ್ಯಾಜ್ಯ ಎಸೆದಿದ್ದ ವ್ಯಕ್ತಿಗೆ ದಂಡ ವಿಧಿಸಿ, ಆತನಿಂದಲೇ ಕಸ ತೆಗೆಸಿದ ಪಿಡಿಒ

ಸುಳ್ಯ: ರಸ್ತೆ ಬದಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದ ವ್ಯಕ್ತಿಗೆ 5 ಸಾವಿರ ದಂಡ ವಿಧಿಸಿ ಆತನಿಂದಲೇ ತ್ಯಾಜ್ಯ ತೆರವುಗೊಳಿಸಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ...

ಅಗ್ನಿಪಥ್‌ ರಾಜಕೀಯ ಪ್ರೇರಿತ ಬಿಜೆಪಿ ಅಸ್ತ್ರ-ಮಾಜಿ ಶಾಸಕ ಲೋಬೋ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಗರ ಹಾಗು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ಅಗ್ನಿಪಥ್‌ ಯೋಜನೆ ವಿರುದ್ದ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಇಂದು...

ಮುಖ್ಯಮಂತ್ರಿಯಾಗುತ್ತಿದ್ದಂತೆ ಶಿಂಧೆ ಶಿವಸೇನೆಯಿಂದ ಉಚ್ಛಾಟನೆ

ಮುಂಬೈ: ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರನ್ನು ಶಿವಸೇನೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.‘ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ ಮತ್ತು ಸ್ವಯಂಪ್ರೇರಣೆಯಿಂದ ಶಿವಸೇನೆಯ ಸದಸ್ಯತ್ವವನ್ನು ತ್ಯಜಿಸಿದ್ದೀರಿ.ಆದ್ದರಿಂದ, ಶಿವಸೇನಾ ಪಕ್ಷದ ಪ್ರಮುಖನಾಗಿ ನನಗೆ ನೀಡಲಾದ...