MANGALORE
ಮಂಗಳೂರು: ವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ
ಮಂಗಳೂರು: ಅಧಿಕ ಮಾಸ ಪ್ರಯುಕ್ತ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆ.13ರಂದು ಅಬಾಲವೃದ್ದ ಸಮಾಜ ಭಾಂದವರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ಬೆಳಿಗ್ಗೆ 10 ಗಂಟೆಗೆ ದೇವಳದಲ್ಲಿ ಉಪಸ್ಥಿತರಿದ್ದು ಮಧ್ಯಾಹ್ನ 12:30 ಕ್ಕೆ ಅಧಿಕಮಾಸ ಮಂಗಳಾಚರಣೆ ಕಾರ್ಯಕ್ರಮ ವಿರುವುದು . ಸಾಯಂಕಾಲ 5:30 ಕ್ಕೆ ಸಮಾಜದ ಮಾತೃ ವರ್ಗದವ ರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಲಿರುವುದು. ಭಾಗವಹಿಸಲಿಚ್ಛಿಸುವ ಮಾತೃ ವರ್ಗದವರು ಸಾಂಪ್ರದಾಯಿಕ ಸೀರೆ ಧರಿಸಿ ಪಾಲ್ಗೊಳ್ಳತಕ್ಕದ್ದು. ಜೊತೆಗೆ ದೇವಳದಲ್ಲಿ ಜರಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮೊಕ್ತೇಸರರು ವಿನಂತಿಸಿದ್ದಾರೆ.
DAKSHINA KANNADA
ಇಂದು ಕರ್ನಾಟಕ ಬಂದ್: ಕರಾವಳಿಗರಿಂದ ನೈತಿಕ ಬೆಂಬಲ-ಬಸ್, ಹೊಟೇಲ್, ಶಾಲೆಗಳು ಎಂದಿನಂತೆ
ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.
ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.
ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.
ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
DAKSHINA KANNADA
ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ‘ಸ್ಕಿಲ್ ಅಪ್’ ಕಾರ್ಯಕ್ರಮ
ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಸ್ಕಿಲ್ ಅಪ್’ ಎಂಬ ಕಾರ್ಯಕ್ರಮ ಸೆ. 23 ರಂದು ನಡೆಯಿತು.
ಆರೋಗ್ಯ ಕ್ಷೇತ್ರದ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.
ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಎಚ್. ಪ್ರಶಾಂತ್ ಮಿರಾಂಡ, ಎಂಡಿಪಿ ನಿರ್ದೇಶಕ ಪ್ರೊ.ವೆಂಕಟೇಶ್ ಅಮೀನ್ ಮತ್ತು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಡೀನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕಾರ್ಯಕ್ರಮವನ್ನು ಎಚ್. ಪ್ರಶಾಂತ್ ಮಿರಾಂಡ, ಪ್ರೊ. ವೆಂಕಟೇಶ್ ಶೇಖರ್ ಅಮಿನ್, ಪ್ರೊ. ಡಾ. ಅಮುತಾ ಪಿ. ಮಾರ್ಲಾ, ಡಾ. ಶಾಶ್ವತ್ ಎಸ್., ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ವಹಣೆಗಾರ ಪ್ರೊ. ವಿಜಯ ಪಿ., ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಾಧಿಕಾರಿ ಅವರು ಉದ್ಘಾಟಿಸಿದರು.
ಚೆನ್ನೈ ಅಪೋಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್, ಆಥರ್ವ ಆರ್ಥೋ ಕೇರ್ ಮಂಗಳೂರು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು(ಸಿಎಂಸಿ) ವೆಲ್ಲೂರು, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ, ಉಡುಪಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ದೇರೆಳಕಟ್ಟೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಅತ್ತಾವರ, ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ರಾಜಗಿರಿ ಆಸ್ಪತ್ರೆ ಬೆಂಗಳೂರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರು, ರಾಮಯ್ಯ ಯೂನಿವರ್ಸಿಟಿ ಆಫ್ ಆಪ್ಲೈಡ್ ಸೈನ್ಸೆಸ್ ಬೆಂಗಳೂರು, ಶ್ರೀ ರೇಂಗ ಆಸ್ಪತ್ರೆ ತಮಿಳುನಾಡು, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ಯೂನಿಟಿ ಆಸ್ಪತ್ರೆ ಮಂಗಳೂರು, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಮತ್ತಿತರ ಸಂಸ್ಥೆಗಳಿಂದ ಆಧಿಕಅರಿ ಮತ್ತು ಸಿಬಂದಿ ಭಾಗವಹಿಸಿದ್ದರು. ಎ. ಜೆ. ಹ್ಯೂಮನ್ ರಿಸೋರ್ಸಸ್ ನ ಮ್ಯಾನೇಜರ್ ಶಶಧರ ಆಚಾರ್ಯ ಪ್ರಸ್ತಾವನೆಗೈದರು.
ಎ..ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ನ ಸಹಾಯಕ ಪ್ರಾಧ್ಯಾಪಕಿ ಪ್ರೀಮ್ ರೋಸ್ ವಿಷ್ಣು ಸ್ವಾಗತಿಸಿದರು.
DAKSHINA KANNADA
Mangaluru: ಸಿನೆಮಾಕ್ಕೆ ಸಾವಿದೆ, ನಾಟಕಕ್ಕೆ ಸಾವಿಲ್ಲ-ವಿಜಯಕುಮಾರ್ ಕೊಡಿಯಾಲ್ ಬೈಲ್
ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿಯಾಗಿ ಗುರುವಾರದಂದು ರಂಗಕರ್ಮಿ, ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಭಾಗವಹಿಸಿದ್ದರು.
ತನ್ನ ನಾಟಕ, ಸಿನೆಮಾ, ರಂಗಭೂಮಿ ಜರ್ನಿ ಬಗ್ಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಈ ಸಂದರ್ಭ ಸಂವಾದ ನಡೆಯಿತು.
ರಂಗಭೂಮಿ, ಸಿನೆಮಾ ರಂಗ ಹೀಗೆ ಎರಡೂ ಕ್ಷೇತ್ರಗಳಲ್ಲಿ ನಾನು ಇಷ್ಟೊಂದು ಬೆಳೆದುಕೊಂಡು ಬರಲು ಕಾರಣವಾಗಿದ್ದು, ಮಾಧ್ಯಮ ಮಿತ್ರರು ಹಾಗು ನಾಡಿನ ಜನತೆ.
ಪತ್ರಿಕಾ ರಂಗದ ಮಿತ್ರರು ಕೊಟ್ಟ ಸಹಕಾರ ನಾನು ಎಂದಿಗೂ ಮರೆಯಲ್ಲ ಎಂದರು. ನಾನು ನೇರ ನಡೆ ನುಡಿಯ ವ್ಯಕ್ತಿ. ಹೀಗಾಗಿ ನನ್ನ ನೇರ ಮಾತುಗಳು ಹಲವರಿಗೆ ಕಹಿ ಆಗುತ್ತಿದೆ ಎಂದು ಅವರು ನಾನು ಏಕತಾನತೆಗೆ ಶರಣಾಗಿಲ್ಲ.
ನಾಟಕದಿಂದ ನಾಟಕಕ್ಕೆ ನಾನು ಬದಲಾವಣೆ ಕೊಟ್ಟಿದ್ದೇನೆ. ಇಲ್ಲಿ ನನಗೆ ತುಂಬಾ ತೃಪ್ತಿ ಇದೆ. ಸಿನೆಮಾಕ್ಕೆ ಸಾವಿದೆ. ಆದರೆ ನಾಟಕಕ್ಕೆ ಸಾವಿಲ್ಲ.
ತುಳುನಾಡಿನಲ್ಲಿ ಎಂದಿನವರೆಗೆ ಜಾತ್ರೆ, ನಾಟಕ, ಕೋಲ ಇರುತ್ತದೆಯೋ ಅಲ್ಲಿಯವರೆಗೂ ನಾಟಕ ರಂಗ ಇದ್ದೇ ಇರುತ್ತದೆ ಎಂದರು.
ನಾನು 26 ನಾಟಕಗಳನ್ನು ಬರೆದಿದ್ದೇನೆ. ಶಾಂತಿ ಮತ್ತು ಹಿಂಸೆಯ ಸಂಘರ್ಷದ ನಾಟಕ ‘ಒಯ್ಕ್ ಲ ಆವಂದಿನಕುಲು’ ನಾಟಕ ನನಗೆ ಆತ್ಮತೃಪ್ತಿ ಕೊಟ್ಟ ನಾಟಕವಾಗಿದೆ. ಆದರೆ ಆರ್ಥಿಕವಾಗಿ ನಾನು ಅದರಲ್ಲಿ ಸೋಲು ಕಂಡೆ ಎಂದರು.
ಜನರಿಗೆ ಈಗ ಹಾಸ್ಯ ನಾಟಕಗಳು ಬೇಡವಾಗಿದೆ. ‘ಮೈತಿದಿ’ ನಾಟಕದಲ್ಲಿ ಹಾಸ್ಯ ಕಡಿಮೆ. ಆದರೂ ಜನ 2 ಗಂಟೆಗಳ ಕಾಲ ಅಲ್ಲಾಡದೇ ನಾಟಕ ನೋಡ್ತಾರೆ.
ತುಳು ಸಿನೆಮಾಗಳು ಏಕತಾನತೆಯಿಂದ ಬೋರ್ ಹೊಡೆಸುತ್ತಿದೆ. ಇದು ವಿಷಾದನೀತ ಸಂಗತಿ ಎಂದರು.
ಕಾರ್ಯಕ್ರಮವನ್ನು ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು ಉದ್ಘಾಟಿಸಿ, ಮಂಗಳೂರು ಪತ್ರಕರ್ತರ ಸಂಘ ನಡೆಸುವ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಸಂಘದ ಸದಸ್ಯರು ಉಪಸ್ಥಿತರಿದ್ದರು.
- FILM7 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA7 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM7 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!
- bangalore6 days ago
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?