Connect with us

    LATEST NEWS

    ಇತಿಹಾಸ ಪ್ರಸಿದ್ದ ಮಂಗಳೂರು ರಥೋತ್ಸವ ಕಂಡು ಪುನೀತರಾದ ಭಕ್ತಗಣ..

    Published

    on

    ಮಂಗಳೂರು: ನಗರದ ಇತಿಹಾಸ ಪ್ರಸಿದ್ದ ರಥಬೀದಿಯ ವೆಂಕರಮಣ ದೇವಳದ 201ನೇ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು. ದೇಶ-ವಿದೇಶದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಜೊತೆಗೆ ನೂತನ ಬ್ರಹ್ಮ ರಥ ದಲ್ಲಿ ಪಾಲ್ಗೊಂಡರು.

    ಶ್ರೀ ಮಂಗಳಾದೇವಿಯ ನೆಲೆಬೀಡಾದ ಮಂಗಳೂರು ಗೌಡ ಸಾರಸತ್ತ ಬ್ರಾಹ್ಮಣ ಸಮಾಜದ್ದ ಪಾಲಿಗೂ ಸಾಧನೆಯ ಕ್ಷೇತ್ರ. ಇಲ್ಲಿನ ರಥಬೀದಿಯ ಶ್ರೀ ವೆಂಕಟರಮಣ ದೇ ವಳ ಸಮಾಜದ ಧರ್ಮ ಪೀಠಗಳಲ್ಲೊಂದಾದ

    ಶ್ರೀ ಕಾಶೀಮಠ ಸಂಸ್ಥಾನ್ ವಾರಾಣಸಿಯ ಒಂದ್ದು ಕಣ್ಣಿನಂತೆ ಮತ್ತು ದೇಶದ ಪ್ರಮುಖ ದೇವಾಲಯ ಎಂದು ಬಿಂಬಿತವಾಗಿದೆ ಕಾಲ ಉರುಳಿದ ಪ್ರಭಾವ ಇಲ್ಲಿನ ವಾರ್ಷಿಕ ರಥೋತ್ಸವ ಒಂದು. ಸಮಗ್ರ ಭಜಕ ವೃಂದದವರಿಗೆ ಅವರ್ಣನೀಯ ಪುಳಕೋತ್ಸವ, ಧನ್ಯತೆಯಿಂದ ಬೀಗುವ ಸಂದರ್ಭ.
    ಪ್ರತಿ ಮಾಘ ಮಾಸದ ಶುದ್ಧ ತದಿಗೆಯಂದು ಆರಂಭವಾಗಿ ಅಷಮಿಯಂದು ಮುಕಾಯಗೊಳ್ಳುವ ರಥೋತ್ಸವ ಕಾರ್ಯಕ್ರಮದಲ್ಲಿ ರಥಸಪ್ತಮಿಯ ಶುಭದಿನ ದಂದು ಆ ಬ್ರಹ್ಮರಥೋತ್ಸವ ನಡೆಯುವುದು ವಾಡಿಕೆ.

    ಮಂಗಳೂರು ರಥ ಎಂದು ಅಭಿದಾನಗೈದಿರುವ ಶ್ರೀ ರಥೋತ್ಸವ ಧಾರ್ಮಿಕ ವಿಧಿ ಆಚರಣೆಗೆ ಮಾತ್ರ ಸೀಮಿತಗೊಳ್ಳದ ಲೌಕಿಕ-ಪಾರಲೌಕಿಕ ಸಾಮಾಜಿಕ, ಸೌಹಾರ್ದತೆಗಳನ್ನೊಳಗೊಂಡು ಸಂಸ್ಕೃತಿ – ಪರಂಪರೆಯ ಕೊಂಡಿಯಾಗಿ ಅನುಸೂತ್ರವಾಗಿ ಮುಂದುವರಿದು ಭಾವೀ ಪೀಳಿಗೆಗೆ ವರ್ಗಾಯಿಸುವ ಸಂಪ್ರದಾಯಗಳ ಹಿನ್ನೆಲೆಯ ಮಹಾಪರ್ವ ಮತ್ತು ದಕ್ಷಿಣ ಭಾರತದ ಮಹೋತ್ಸವಗಳ ಪೈಕಿ ಒಂದು ಪ್ರಮುಖ ಮಹೋತ್ಸವವಾಗಿ ರೂಪುಗೊಂಡಿದೆ .

    ಶ್ರೀ ಕಾಶಿ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿಗಳವರ ಈ ಬಾರಿಯ ಉಪಸ್ಥಿತಿ ರಥೋತವವನ್ನು ಚಂದಗಾಣಿಸಲು ಸಂಭ್ರಮಿಸಲು ಕಾರಣವಾಗುತ್ತದೆ.
    ಈ ಬಾರಿ 201 ನೇ ವರ್ಷಾಚರಣೆಯಲ್ಲದೆ ನೂತನ ಬ್ರಹ್ಮ ರಥ ದಲ್ಲಿ ರಥೋತ್ಸವ ದೇಶ ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡು ಪುನೀತರಾದರು.

    ಶ್ರೀ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಕೊಡುಗೈ ದಾನಿ ಪಿ . ದಯಾನಂದ ಪೈ , ಮುಂಡ್ಕುರ್ ರಾಮದಾಸ್ ಕಾಮತ್ , ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು .

    LATEST NEWS

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡುಬಿದ್ರಿ: ಜೂ. 23 ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    Published

    on

    ಪಡುಬಿದ್ರಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡುಬಿದ್ರಿ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರವು ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ಯುವವಾಹಿನಿ (ರಿ.) ಪಡುಬಿದ್ರಿ ಘಟಕ, ಇವರುಗಳ ಜಂಟಿ ಸಹಯೋಗದೊಂದಿಗೆ ಜೂನ್ ೨೩ ರ ಆದಿತ್ಯವಾರ, ಪೂರ್ವಾಹ್ನ ೯.೩೦ ರಿಂದ ಅಪರಾಹ್ನ ೧೨.೩೦ರವರೆಗೆ ಕರ್ನಾಟಕ ಪಬ್ಲಿಕ್ ಶಾಲೆ (ಬೋರ್ಡ್ ಶಾಲೆ), ಪಡುಬಿದ್ರಿಯಲ್ಲಿ ಆಯೋಜಿಸಲಾಗಿದೆ.

    ವೈದ್ಯಕೀಯ ಶಿಬಿರದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ ,ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ವೈದ್ಯರ ತಂಡದಿAದ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು, ಬಿ.ಪಿ. ಮತ್ತು ಮಧುಮೇಹ ತಪಾಸಣೆ, ಸಾಮಾನ್ಯ ರೋಗ ತಪಾಸಣೆ, ಉಚಿತ ಔಷಧಿ ವಿತರಣೆ, ರಕ್ತ ಗುಂಪಿನ ವರ್ಗಿಕರಣ, ಇತರ ವೈದ್ಯಕೀಯ ಸೇವೆಗಳು ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆಗಳನ್ನು ನೀಡಲಾಗುವುದು. ಅಗತ್ಯವುಳ್ಳ ಕಣ್ಣಿನ ರೋಗಿಗಳಿಗೆ ಸಂಘದ ವತಿಯಿಂದ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗುವುದು.

    ಇದನ್ನೂ ಓದಿ : ಬೆಂಗಳೂರಿನಲ್ಲಿ ಭಾರತ​ ತಂಡದ ಮಾಜಿ ಕ್ರಿಕೆಟರ್ ಆತ್ಮಹ*ತ್ಯೆ; ಕಂಬನಿ ಮಿಡಿದ ಅನಿಲ್ ಕುಂಬ್ಳೆ

    ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

    Continue Reading

    LATEST NEWS

    ಬೆಂಗಳೂರಿನಲ್ಲಿ ಭಾರತ​ ತಂಡದ ಮಾಜಿ ಕ್ರಿಕೆಟರ್ ಆತ್ಮಹ*ತ್ಯೆ; ಕಂಬನಿ ಮಿಡಿದ ಅನಿಲ್ ಕುಂಬ್ಳೆ

    Published

    on

    ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟರ್ ಡೇವಿಡ್ ಜಾನ್ಸನ್​(52) ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಇಂದು (ಜೂನ್ 20) ಬೆಂಗಳೂರಿನ ಕೊತ್ತನೂರು ಬಳಿ ಇರುವ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ*ಗೆ ಶರಣಾಗಿದ್ದಾರೆ.

    ಡೇವಿಡ್ ಜಾನ್ಸನ್ ಅವರು ಅನಾರೋಗ್ಯ ನಿಮಿತ್ತ ಖಿನ್ನತೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 1996ರಲ್ಲಿ ಭಾರತ​ ತಂಡದ ಪರ ಟೆಸ್ಟ್​ ಪಂದ್ಯ ಆಡಿದ್ದ ಡೇವಿಡ್ ಜಾನ್ಸನ್. ಕೆಪಿಎಲ್​ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದರು.

    ಸದ್ಯ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಘಟನೆಯ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇನ್ನು ಡೇವಿಡ್ ಜಾನ್ಸನ್ ನಿಧನಕ್ಕೆ ಕ್ರಿಕೆಟ್ ವಲಯದಿಂದ ಸಂತಾಪಗಳು ವ್ಯಕ್ತವಾಗಿವೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹಿರಿಯ ಕ್ರಿಕೆಟಿಗ ಜಾನ್ಸನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ್ದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು.

    1996ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡೇವಿಡ್ ಜಾನ್ಸನ್, ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಮಾಡಿದ್ದಾಗ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆ ಸರಣಿಯಲ್ಲಿ ಡೇವಿಡ್ ಜಾನ್ಸನ್ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರನ್ನು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

    ಇನ್ನು ಡೇವಿಡ್ ಜಾನ್ಸನ್‌ ಒಟ್ಟು 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ ಒಟ್ಟು 125 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಬ್ಯಾಟರ್ ಆಗಿದ್ದ ಜಾನ್ಸನ್ 437 ರನ್ ಪೇರಿಸಿದ್ದರು.

    Continue Reading

    LATEST NEWS

    ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಹ*ತ್ಯೆಗೈದ ಪಾಪಿ!

    Published

    on

    ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬುಧವಾರ(ಜೂ.19) ಸಂಜೆ  3 ವರ್ಷದ ಮಗುವನ್ನು ಹ*ತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬೆಂಬತ್ತಿದ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊ*ಲೆಗೈದಿದ್ದು ಬೇರ್ಯಾರೂ ಅಲ್ಲ, ಮಗುವಿನ ಚಿಕ್ಕಪ್ಪನೆ ಎಂಬುದು ಬಹಿರಂಗವಾಗಿದೆ.


    ಆರೋಪಿ ರಂಜಿತ್​ಗೆ ಅತ್ತಿಗೆ,​ ದುಡಿದು ತಿನ್ನುವಂತೆ ಬುದ್ದಿವಾದ ಹೇಳಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇಂಜಿನಿಯರಿಂಗ್ ಮುಗಿಸಿದ್ದ ಆರೋಪಿ ರಂಜಿತ್​ ಕೆಲಸವಿಲ್ಲದೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ ಅತ್ತಿಗೆ ಉಂಡಾಡಿ ಗುಂಡ ಆಗಿದ್ದೀಯಾ ಅಂತ ಬುದ್ದಿವಾದ ಹೇಳಿದ್ದಾರಂತೆ. ಇದರಿಂದ ಕೋಪಗೊಂಡ ರಂಜಿತ್, ಅತ್ತಿಗೆಗೆ ಹೊಡೆದಿದ್ದಲ್ಲದೆ, ಮಗುವನ್ನು ಕರೆದುಕೊಂಡು ಹೋಗಿ ಕೊ*ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಏನಿದು ಪ್ರಕರಣ ?

    ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬುಧವಾರ(ಜೂ.20) ಸಂಜೆ ಬೆಚ್ಚಿ ಬೀಳುವಂತಹ ಘಟನೆ ನಡೆದಿತ್ತು. ಸ್ವತಃ ಚಿಕ್ಕಪ್ಪ ರಂಜಿತ್ ತನ್ನ ಅಣ್ಣನ 3 ವರ್ಷದ ಮಗುವನ್ನು ಮನೆ ಬಳಿಯ ಪಾಳುಬಿದ್ದ ಮನೆಯೊಂದರಲ್ಲಿ ಬಟ್ಟೆ ಒಗೆದಂತೆ ಚಪ್ಪಡಿಕಲ್ಲಿಗೆ ಹೊಡೆದು, ನಂತರ ಚಾಕುವಿನಿಂದ ಕತ್ತುಸೀಳಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾನೆ.

    ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್, ಬಟ್ಲಹಳ್ಳಿ ಠಾಣೆಯ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.  ಆರೋಪಿ ರಂಜಿತ್ ಮೃ*ತ ಬಾಲಕನ ತಂದೆ ಮಂಜುನಾಥ್ ಚಿಕ್ಕಪ್ಪನ ಮಗನಾಗಿದ್ದಾನೆ. 2 ಕುಟುಂಬಗಳು ಒಟ್ಟಿಗೆ ಇವೆ. ಭೂ ವಿವಾದ, ವೈಯಕ್ತಿಕ ದ್ವೇಷ, ಹಳೇ ದ್ವೇಷ ಯಾವುದೂ ಇವರ ನಡುವೆ ಇರಲಿಲ್ಲವಂತೆ. ಹಾಗಾಗಿ ಯಾವುದೇ ಅನುಮಾನ ಬಂದಿರಲಿಲ್ಲ.

    ಇದನ್ನೂ ಓದಿ …ಬೆಚ್ಚಿ ಬಿದ್ದ ಹಾಸನ….ಹಾಡಹಗಲೇ ಗುಂಡಿಕ್ಕಿ ಇಬ್ಬರ ಹ*ತ್ಯೆ

    ಆರೋಪಿ ರಂಜಿತ್ ಬುಧವಾರ ಸಂಜೆ 4 ಗಂಟೆ ಸಮಯದಲ್ಲಿ ಅಣ್ಣನ ಮನೆಯಲ್ಲೇ ಊಟ ಮಾಡಿ, ಮಗುವಿನ ಜೊತೆ ಆಟವಾಡಿದ್ದಾನೆ. ನಂತರ ಮಗುವನ್ನು ಕರೆದುಕೊಂಡು ಹೋಗಿದ್ದ. ಇನ್ನು ಆರೋಪಿಯ ಮೇಲೆ ಆತನ ಸಂಬಂಧಿಕರಿಗೆ ಯಾವುದೇ ಅನುಮಾನವಿರಲಿಲ್ಲ. ಪೊಲೀಸರ ಮುಂದೆಯೂ ಆರೋಪಿ ಬಾಯ್ಬಿಡುತ್ತಿರಲಿಲ್ಲ. ಇದರಿಂದ ಪುಟಾಣಿ ಕೊ*ಲೆ ನಿಗೂಢವಾಗಿ ಉಳಿದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    Continue Reading

    LATEST NEWS

    Trending