Connect with us

    LATEST NEWS

    ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ರೆಮೋಲಾ ಸಿಕ್ವೇರಾ ನಿಧನ

    Published

    on

    ಮಂಗಳೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಂಗಳೂರು ನಗರ ಹೊರವಲಯದ ತಲಪಾಡಿಯ ರೆಮೋಲಾ ಸಿಕ್ವೇರಾ (24) ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.


    ತಲಪಾಡಿಯ ಮರಿಯಾಶ್ರಮ್ ಚರ್ಚ್‌ನ ಮರಿಯಕೃಪಾ ವಾಳೆಯ ರೆಮೋಲಾ ಸಿಕ್ವೇರಾ ಮಂಗಳೂರು ನಗರದ ಕಂಪನಿಯೊಂದರಲ್ಲಿ ಉದ್ಯೋಗಿಯಾದ್ದರು.

    ಈಕೆಗೆ ಕೆಲ ದಿನಗಳಿಂದ ಅನಾರೋಗ್ಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ ಹೊಂದಿದ್ದಾರೆ.

    ಈಕೆಯ ತಂದೆ ರಾಲ್ಫಿ ಸಿಕ್ವೇರಾ ಕೆಲ ವರ್ಷದ ಹಿಂದೆ ನಿಧನ ಹೊಂದಿದ್ದರು. ರೆಮೋಲಾ ಸಿಕ್ವೇರಾ ತಾಯಿ ಜೆಸಿಂತಾ ಸಿಕ್ವೇರಾ ಹಾಗೂ ಸಹೋದರಿ ರೋಶಲ್‌ ಸಿಕ್ವೇರಾ ಸೇರಿ ಹಲವು ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
    ಅಂತಿಮ ಸಂಸ್ಕಾರ ಶುಕ್ರವಾರ ಸಂಜೆ 4.00 ಗಂಟೆಗೆ ತಲಪಾಡಿಯ ಮರಿಯಾಶ್ರಮ್ ಚರ್ಚ್‌ನಲ್ಲಿ ನಡೆಯಲಿದೆ.

    LATEST NEWS

    ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

    Published

    on

    ಮಂಗಳೂರು/ಚೆನ್ನೈ  :  ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸುಮಾರು ಮೂರು ದಿನಗಳ ಬಳಿಕ ಇದೀಗ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ‘ಫೆಂಗಲ್’ ಚಂಡಮಾರುತ ರೂಪುಗೊಂಡಿದೆ. ಅದು ಉತ್ತರ ತಮಿಳುನಾಡು – ಪುದುಚೇರಿ ಕರಾವಳಿಯತ್ತ ಸಾಗುತ್ತಿದ್ದು, ಇಂದು(ನ.30) ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

    ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಚಂಡಮಾರುತವು ವಾಯುವ್ಯಕ್ಕೆ 15 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ನಾಗಪಟ್ಟಣಂನ ಪೂರ್ವ-ಈಶಾನ್ಯಕ್ಕೆ 240 ಕಿ.ಮೀ, ದೂರ, ಪಾಂಡಿಚೇರಿಯ ಪೂರ್ವ-ಆಗ್ನೇಯಕ್ಕೆ 230 ಕಿ.ಮೀ. ದೂರ ಹಾಗೂ ಚೆನ್ನೈನಿಂದ ಆಗ್ನೇಯಕ್ಕೆ 250 ಕಿ.ಮೀ. ದೂರ ಕೇಂದ್ರೀಕೃತವಾಗಿದೆ.

    ತೀವ್ರ ಚಂಡಮಾರುತವಾಗಿ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಹಾಗೂ ಚಂಡಮಾರುತ ನೆಲೆಯಾಗುವ ಸಮಯದಲ್ಲಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಪಾಂಡಿಚೇರಿಗೆ ಸಮೀಪದಲ್ಲಿರುವ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    7 ಜಿಲ್ಲೆಗಳಿಗೆ ರೆಡ್ ಅಲರ್ಟ್ :

    ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಮತ್ತು ಪಾಂಡಿಚೇರಿ, ಚೆನ್ನೈ ಸೇರಿದಂತೆ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಇತರ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಣಾಮ ಕರ್ನಾಟಕದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು,  ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

    ಇದನ್ನೂ ಓದಿ : ಪತ್ನಿಯನ್ನು ಹನಿಮುನ್‌ಗೆ ಕರೆದೊಯ್ದು ಮಾರಿದ ಪಾ*ಪಿ ಪತಿ !! ಮುಂದೇನಾಯ್ತು…..

    ಕರ್ನಾಟಕ ಕರಾವಳಿಯಲ್ಲಿ ಮುಂದಿನ 3 ದಿನಗಳಿಗೆ ಎಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಡಿಸೆಂಬರ್‌ 1,2, 3 ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ರಾತ್ರಿ ವೇಳೆ ಹೆಚ್ಚು ಚಳಿಯ ಅನುಭವವಾಗಿದ್ದು, ಮುಂದಿನ ಒಂದು ವಾರಕ್ಕೂ ಅಧಿಕ ಕಾಲ ಚಳಿಯ ವಾತಾವರಣ ಇರುವ  ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    Continue Reading

    LATEST NEWS

    ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶ*ವವಾಗಿ ಪತ್ತೆ; ಚಿರತೆ ದಾ*ಳಿ ಶಂಕೆ

    Published

    on

    ಉಡುಪಿ : ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಮನೆಯ ಎದುರಿನ ಗುಡ್ಡದಲ್ಲಿ ಶ*ವವಾಗಿ ಪತ್ತೆಯಾಗಿರುವ ಘಟನೆ ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ  ನಡೆದಿದೆ‌. ಅವರ ಮೃತದೇಹ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾ*ಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

    ಸರಳೇಬೆಟ್ಟುವಿನ ನೆಹರು ನಗರ ನಿವಾಸಿ ಪುಷ್ಪಾ ನಾಯ್ಕ್ (66) ಮೃ*ತಪಟ್ಟವರು. ಅವರು‌ ಗುರುವಾರ(ನ.28) ಸಂಜೆ ಹಸುಗಳಿಗೆ ಹುಲ್ಲು ತರಲು ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ನೆರೆಮನೆಯವರ ಜೊತೆಗೂಡಿ ಗುಡ್ಡದಲ್ಲಿ ಹುಡುಕಾಡಿದ್ದಾರೆ. ಆದರೆ ಪುಷ್ಪ ನಾಯ್ಕ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಶುಕ್ರವಾರ(ನ.29) ಬೆಳಿಗ್ಗೆ ಮನೆ ಎದುರು ಗುಡ್ಡೆಯಲ್ಲಿ ಪುಷ್ಪಾ ನಾಯ್ಕ್ ಶ*ವ ಪತ್ತೆಯಾಗಿದೆ.‌ ಅವರ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು, ಕೈಗಳಿಗೂ ಪರಚಿದ ಗಾ*ಯಗಳಾಗಿವೆ ಎಂದು ಪುತ್ರ ಗಣೇಶ್ ನಾಯ್ಕ್ ತಿಳಿಸಿದ್ದಾರೆ.

    ಇದನ್ನೂ ಓದಿ : ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !

    ಈ ಭಾಗದಲ್ಲಿ ಚಿರತೆ ಹಾ*ವಳಿ ಕೂಡ ಹೆಚ್ಚಾಗಿದೆ. ಹೀಗಾಗಿ ಚಿರತೆ ದಾ*ಳಿಯಿಂದ ಮೃ*ತಪಟ್ಟಿದ್ದಾರೆಯೋ‌ ಅಥವಾ ಇನ್ಯಾವುದೋ ಕಾರಣದಿಂದ ಮೃ*ತಪಟ್ಟಿದ್ದಾರೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

     

    Continue Reading

    LATEST NEWS

    ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !

    Published

    on

    ಮಂಗಳೂರು/ಬೆಂಗಳೂರು: ಆರ್‌ಸಿಬಿ ಎಂದರೆ ಸಾಕು ಕನ್ನಡಿಗರಿಗೆ ಎಲ್ಲಿಲ್ಲದ ವ್ಯಾಮೋಹ. ಆದರೆ ಅಭಿಮಾನಿಗಳ ಪ್ರಿತೀಯನ್ನು ಆರ್‌ಸಿಬಿ ಬಂಡಾವಾಳವನ್ನಾಗಿ ಪರಿವರ್ತಿಸುತ್ತಿರುವುದೇ ಬೇಸರದ ಸಂಗತಿ
    ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹಿಂದಿ ಪೇಜ್ ಪ್ರಾರಂಭಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ವಿವಾದಕ್ಕೆ ಈಗ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ.


    ಈ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿಯ ಎಲ್ಲಾ ಅಪ್ಡೇಟ್ಸ್ ಗಳನ್ನು ನಾವು ಮೀಡಿಯಾದಲ್ಲಿ ಗಮನಿಸುತ್ತಿದ್ದೇವೆ. ಆರ್‌ಸಿಬಿಯನ್ನು ನಾವು ಬಹಳ ಗೌರವಿಸುತ್ತೇವೆ. ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ನೋವು ಮಾಡಬೇಡಿ ಎಂದು ಹೇಳಲಾಗಿದೆ. ಆರ್‌ಸಿಬಿ ಅವರು ಬದಲಾವಣೆ ಮಾಡಿಕೊಳ್ಳಬಹುದು ಎಂದು ಅಂದುಕೊಂಡಿದ್ದೇನೆ. ಇಲ್ಲವಾದರೆ ನಾವು ಕಾರ್ಯದರ್ಶಿ ಗೆ ನೋಟಿಸ್ ಜಾರಿ ಮಾಡ್ತೀವಿ.

    ಇದನ್ನೂ ಓದಿ: ಭಾರತೀಯ ಕೋಸ್ಟ್ ಗಾರ್ಡ್‌ನ ಗೌಪ್ಯ ಮಾಹಿತಿ ಪಾಕ್‌ಗೆ ರವಾನೆ; ಆರೋಪಿ ಅರೆಸ್ಟ್

    ಆರ್‌ಸಿಬಿ ಎಷ್ಟೇ ಬಾರಿ ಸೋತರೂ ನಾವು ಆ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಅದಕ್ಕೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವುದು ಕನ್ನಡಿಗರು ಹಾಗೂ ಕರ್ನಾಟಕದಲ್ಲಿ ಎಂದು ಹೇಳಿದ್ದಾರೆ.
    ಆರ್‌ಸಿಬಿ ಹಿಂದಿಯಲ್ಲಿ ಮಾತ್ರವಲ್ಲದೇ ಇನ್ನೂ ಬೇರೆ ಬೇರೆ ಭಾಷೆಯಲ್ಲೂ ಪೇಜ್ ತೆಗೆಯುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.

    Continue Reading

    LATEST NEWS

    Trending