Connect with us

LATEST NEWS

ಮಂಗಳೂರು ಬೂದಿ ಮುಚ್ಚಿದ ಕೆಂಡ-ಪೊಲೀಸರ ಎಚ್ಚರಿಕೆಯ ನಡೆ ಅಗತ್ಯ..!

Published

on

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡದಲ್ಲಿ ಪ್ರತಿನಿತ್ಯ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಅಪರಾಧ ಪ್ರಕರಣಗಳು ಹಲ್ಲೆ, ಕಳ್ಳತನಕ್ಕೆ ಮಾತ್ರ ಸೀಮಿತವಾಗಿಲ್ಲ.

ಈ ಅಪರಾಧಗಳು ಒಂದು ಧರ್ಮಲೇಪಿತ, ರಾಜಕಾರಣ ಹಿನ್ನೆಲೆ ಹೊಂದಿರುವ ಪ್ರಕರಣಗಳಾಗಿ ಮಾರ್ಪಾಡುತ್ತಿವೆ. ಇದರಿಂದ ಕೋಮುಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಕಳೆದ ಕೆಲವು ದಿನಗಳಿಂದೀಚೆ ನಿರಂತರವಾಗಿ ಮಂಗಳೂರು ನಗರವನ್ನು ಕೇಂದ್ರೀಕರಿಸಿ ಜಿಲ್ಲೆಯಾದ್ಯಂತ ದೈವಸ್ಥಾನದ ಮೂರ್ತಿ ವಿರೂಪಗೊಳಿಸುವುದು. ನಾಗನ ಕಟ್ಟೆ, ಮೂರ್ತಿ ವಿರೂಪಗೊಳಿಸುವುದು ಸೇರಿದಂತೆ ಹಲವು ಅಪರಾಧ ಪ್ರಕರಣಗಳು ನಡೆಯುತ್ತಿವೆ.

ಅದರ ಜತೆಗೆ ಇಂದು ಕೊಣಾಜೆ ಕುರ್ನಾಡು ಸುಬ್ಬಗೋಳಿ ಮಸೀದಿ ಬಳಿ ಮೂವರು ಯುವಕರು ಅಶಾಂತಿ ಸೃಷ್ಟಿಸಲು ಯತ್ನಿಸಿದ ಘಟನೆ ನಡೆದಿದೆ. ಇದರ ಜೊತೆ ಜೊತೆಗೆ ಕೇವಲ 2 ದಿನದ ಅಂತರದಲ್ಲಿ ಬಸ್‌ಗಳಿಗೆ ಕಲ್ಲು ತೂರಾಟ ಪ್ರಕರಣ ನಡೆದಿದೆ.
ಇದು ಕೇವಲ ಅಪರಾಧ ಪ್ರಕರಣಗಳಲ್ಲ ಬದಲಾಗಿ ಒಂದು ಧರ್ಮಮತ್ತೊಂದು ಧರ್ಮವನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ.

ಕರಾವಳಿಯಲ್ಲಿ ಕಳೆದ ದಶಕದಿಂದ ಕೋಮು ಸೂಕ್ಷ್ಮ ಹಣೆಪಟ್ಟಿ ಕಟ್ಟಿದ್ದ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಆರಂಭದಲ್ಲೇ ಇದನ್ನು ಹತ್ತಿಕ್ಕಬೇಕಾದ ಪೊಲೀಸ್‌ ಇಲಾಖೆ ಇದು ಹತ್ತರಲ್ಲಿ ಹನ್ನೊಂದನೇ ಘಟನೆ ಎಂಬಂತೆ ಭಾವಿಸಿ ಮೂಕಪ್ರೇಕ್ಷಕನಾಗಿರುವುದು ಅಪಾಯದ ಸಂಕೇತವಾಗಿದೆ.
ಇದರಲ್ಲಿ ಮತ್ತೊಂದು ಪ್ರಮುಖ ಅಂಶ ಎಂದರೆ ಮಂಗಳೂರಿಗೆ ವರ್ಗವಾಗಿ ಬರುವ ಹಿರಿಯ ಪೊಲೀಸ್‌ ಅಧಿಕಾರಿಗಳು ಎಲ್ಲಾ ಜಿಲ್ಲೆಗಳಿಗೆ ವರ್ಗವಾಗಿ ಹೋಗುವಂತೆ ಹೋಗುವುದಲ್ಲ. ಬದಲಾಗಿ ಇಲ್ಲಿಗೆ ಬರುವ ಮುನ್ನ ಅಥವಾ ಬಂದ ಮೇಲೆ ಕರಾವಳಿಯ ಇತಿಹಾಸವನ್ನೊಮ್ಮೆ ತಿರುವಿ ಹಾಕಿ ನೋಡಬೇಕು.

ಕರ್ನಾಟಕಕ್ಕೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಮಂಗಳೂರು ನಗರ ಇತರ ಜಿಲ್ಲೆ, ಅಥವಾ ನಗರಗಳಂತಲ್ಲ. ಇಲ್ಲಿನ ಜನ ಪೊಲೀಸ್‌ ಸ್ನೇಹಿಯಾಗಿದ್ದರೂ,

ಧರ್ಮದದ ವಿಷಯದಲ್ಲಿ ಅತ್ಯಂತ ಸೂಕ್ಷ್ಮ. ಆದ್ದರಿಂದ ಇಲ್ಲಿಗೆ ಬರುವ ಅಧಿಕಾರಿಗಳು ಕೂಡ ಯಾವುದೇ ಕಡೆ ವಾಲದೇ ತಟಸ್ಥವಾಗಿ ನಿಂತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿ ಇದೆ.

ಈ ಹಿನ್ನೆಲೆಯಲ್ಲಿ ಇಲ್ಲಿಗೆ ವರ್ಗವಾಗಿ ಬರುವ ಪೊಲೀಸ್‌ ಅಧಿಕಾರಿಗಳು ಇಲ್ಲಿನ ಇತಿಹಾಸ ಅರಿಯುವುದು ಅತ್ಯಗತ್ಯ.

ಈ ಹಿಂದೆ ಮಂಗಳೂರು ನಗರಕ್ಕೆ ಪೊಲೀಸ್‌ ಆಯುಕ್ತರಾಗಿ ಬಂದ ಹಲವು ಅಧಿಕಾರಿಗಳು ಉತ್ತಮ ಹೆಸರುಗಳಿಸಿದ್ದಾರೆ. ಜೊತೆಗೆ ಮಂಗಳೂರಿಗರ ಸ್ಮೃತಿಪಟಲದಲ್ಲಿ ಜನಾನುಮಾಸರಾಗಿದ್ದಾರೆ.

ಅಂತಹ ಅಧಿಕಾರಿಗಳಲ್ಲಿ ಚಂದ್ರಶೇಖರ್‌, ಸೀಮಂತ್‌ ಕುಮಾರ್‌ ಸಿಂಗ್‌, ವಿಫುಲ್‌ ಕುಮಾರ್‌, ಸಂದೀಪ್‌ ಪಾಟೀಲ್‌, ಗೋಪಾಲ್‌ ಹೊಸೂರು ಪ್ರಮುಖರು.

ಇಂತಹ ಸಮಯದಲ್ಲಿ ಅನುಭವವನ್ನು ಇಲ್ಲಿನ ಅಧಿಕಾರಿಗಳು ಸಲಹೆ ರೂಪದಲ್ಲಿ ಪಡೆಯುವುದು ಅತ್ಯಂತ ಸೂಕ್ತ.

ಜೊತೆಗೆ ಮಂಗಳೂರಿನ ಸೂಕ್ಷ್ಮ ಪರಿಸ್ಥಿತಿಯನ್ನು ಕಳೆದ ದಶಕಗಳಿಂದ ಯಶಸ್ವಿಯಾಗಿ ನಿಭಾಯಿಸಿದ ಅನೇಕ ಪೊಲೀಸ್‌ ಸಿಬ್ಬಂದಿಳಿದ್ದಾರೆ.

ಅವರನ್ನು ವಿಶ್ವಾಸಕ್ಕೆ ಪಡೆದು ಇಲ್ಲಿನ ಹಿರಿಯ ಅಧಿಕಾರಿಗಳು ಕಾರ್ಯೋನ್ಮುಕವಾಗಬೇಕಿದೆ. ಆಗ ಮಾತ್ರ ಮಂಗಳೂರಿನಲ್ಲಿ ಶಾಂತಿ ನೆಸಲು ಸಾಧ್ಯ.

ಈ ನಿಟ್ಟಿನಲ್ಲಿ ಕೂಡಲೇ ಕಾರ್ಯತತ್ಪರವಾಗಬೇಕು. ಇಲ್ಲವಾದಲ್ಲಿ ಮಂಗಳೂರಿನಲ್ಲಿ ಮತ್ತೊಂದು ಕೋಮು ಗಲಭೆ ನಡೆಯುವುದಕ್ಕೆ ಹೆಚ್ಚು ದಿನವಿಲ್ಲ.

Click to comment

Leave a Reply

Your email address will not be published. Required fields are marked *

DAKSHINA KANNADA

‘ನಾಟು ನಾಟು’ ರೀತಿಯ ಸಾಂಗ್‌..! ಕುತೂಹಲ ಮೂಡಿಸಿದ ‘ವಾರ್ 2’

Published

on

2019 ರಲ್ಲಿ ಸೂಪರ್ ಹಿಟ್ ಆಗಿದ್ದ ‘ವಾರ್’ ಸಿನೆಮಾದ ಸೆಕಂಡ್ ವರ್ಷನ್‌ ‘ವಾರ್ 2’ ತೆರೆ ಮೇಲೆ ಬರಲು ಭರದ ಸಿದ್ಧತೆ ನಡೆಸಿದೆ. ‘ವಾರ್’ ಸಿನೆಮಾದಲ್ಲಿ ‘ ಜೈ ಜೈ ಶಿವಶಂಕರ್’ ಹಾಡು ಸುಪರ್ ಹಿಟ್ ಆಗಿದ್ದು ಫ್ಯಾನ್ಸ್‌ಗಳು ಹಾಡಿಗೆ ಫಿದಾ ಆಗಿದ್ರು. ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್’ ಸಿನೆಮಾ ಬಳಿಕ ಈಗ ‘ವಾರ್‌ 2’ ರೆಡಿ ಆಗ್ತಾ ಇದೆ. ಇದರಲ್ಲಿ ಹೃತಿಕ್ ರೋಷನ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಜೊತೆಯಾಗಿದ್ದಾರೆ.

ಅದ್ಧೂರಿಯಾಗಿ ನಿರ್ಮಾಣ ಆಗ್ತಾ ಇರೋ ‘ವಾರ್ 2’ ಸಿನೆಮಾಗೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲಾಗ್ತಾ ಇದೆ. ಯಶ್‌ ರಾಜ್ ಫಿಲಂಸ್‌ ಸಂಸ್ಥೆ ಈ ‘ವಾರ್ 2’ ಸಿನೆಮಾಗೆ ಬಂಡವಾಳ ಹಾಕುತ್ತಿದೆ. ‘ವಾರ್’ ಸಿನೆಮಾದಂತೆ ಈ ಸಿನೆಮಾದಲ್ಲೂ ವಿಶೇಷ ಹಾಡನ್ನ ಸಿನೆಮಾ ತಂಡ ಪ್ಲ್ಯಾನ್ ಮಾಡಿದೆ. ಜೂನಿಯರ್ ಎನ್‌ಟಿಆರ್ ಅವರ ಆಸ್ಕರ್ ಅವಾರ್ಡ್‌ ವಿನ್ ಆಗಿದ್ದ ‘ನಾಟು ನಾಟು” ಹಾಡಿನಂತೆ ಇರೋ ಹಾಡಿಗೆ ಹೃತಿಕ್ ಹಾಗೂ ಜ್ಯೂನಿಯರ್ ಎನ್‌ಟಿಆರ್‌ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ‘ನಾಟು ನಾಟು’ ರೀತಿಯ ಹಾಡು ಹಾಗೂ ಡ್ಯಾನ್ಸ್‌ ‘ವಾರ್ 2’ ಸಿಎನಮಾದ ಹೈಲೈಟ್ ಆಗಲಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.


ಈಗಾಗಲೇ ‘ವಾರ್ 2’ ಚಿತ್ರದ ಶೂಟಿಂಗ್ ಆರಂಭವಾಗಿದೆ. ಚಿತ್ರದ ಸೆಟ್​ ಫೋಟೋಗಳು ಕೂಡಾ ಲೀಕ್ ಆಗಿವೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಚೋಪ್ರಾ ಅವರು ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ಆಗಸ್ಟ್ 14ರಂದು ರಿಲೀಸ್ ಆಗಲಿದೆ.

Continue Reading

LATEST NEWS

ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

Published

on

ಉಡುಪಿ : ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ಬೆಂಗಳೂರು ಪ್ರವಾಸ ಮಾಡ್ತಿದ್ದಾರೆ. ಮೂರು ಬಾರಿ ಕಾರಣಾಂತರದಿಂದ ಉಡುಪಿಗೆ ಬರಲು ಸಾಧ್ಯವಾಗಿರಲಿಲ್ಲ. ಪ್ರಧಾನಮಂತ್ರಿ ಕಚೇರಿಯಿಂದ ಅನುಮತಿ ಪಡೆದು ಉಡುಪಿ ಬಂದಿದ್ದೇನೆ. ಕರಾವಳಿ ಜನರ ರಕ್ತದಲ್ಲಿ ಹಿಂದುತ್ವ ಇದೆ. ಮೋದಿಯ 10 ವರ್ಷದ ಆಡಳಿತವನ್ನು ಜಗತ್ತು ಕೊಂಡಾಡಿದೆ. ಎಲ್ಲಾ ಅಸಾಧ್ಯಗಳನ್ನು ಪ್ರಧಾನಿ ಮೋದಿ ಸಾಧ್ಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.


ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದ ಜನರಲ್ಲಿ ವಿಶ್ವಾಸ -ಭರವಸೆ ಮೂಡಿಸಿದ್ದು ಮೋದಿ. ರಾಮಮಂದಿರ, ಆರ್ಟಿಕಲ್ 370 ರದ್ದು, ಅಭಿವೃದ್ಧಿ ಎಲ್ಲವೂ ಮೋದಿ ಕಾಲದಲ್ಲಿ ಆಗಿದೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ. ನಾವು ರಕ್ಷಣೆ ಮಾಡ್ತೇವೆ ಎಂದು ಖರ್ಗೆ ಹೇಳ್ತಾರೆ. ಮೋದಿ ಮತ್ತೆ ಪ್ರಧಾನಿ ಆಗಬಾರದು ಅಂತ ಖರ್ಗೆ ಕರೆ ಕೊಡ್ತಾರೆ. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೇ ಕಗ್ಗೊ*ಲೆ ಮಾಡಿದ್ದಾರೆ. ಅಂಬೇಡ್ಕರ್ ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಬಾಬಾ ಸಾಹೇಬರ ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಅಂಬೇಡ್ಕರ್ ರ ಪಂಚ ತೀರ್ಥಕ್ಷೇತ್ರ ಅಭಿವೃದ್ಧಿ ಮಾಡಿದ್ದು ಮೋದಿ – ಬಿಜೆಪಿ ಸರಕಾರ ಎಂದರು.

ಇದನ್ನೂ ಓದಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್

Continue Reading

DAKSHINA KANNADA

ಕಡಬ: ಬಿಳಿನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!

Published

on

ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.

ಅಸ್ಥಿಪಂಜರ

ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.

Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್‌:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

Trending