Connect with us

DAKSHINA KANNADA

Mangaluru: ಹೊಸ ಮೀನುಗಾರಿಕಾ ಸೀಸನ್ ಆರಂಭ..!

Published

on

ಮೀನುಗಾರಿಕೆ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು ಆ. 1ರಿಂದ  ಮೀನುಗಾರಿಕೆ ಆರಂಭವಾಗಿದೆ. 

ಮಂಗಳೂರು: ಸರಕಾರದ ನಿಯಮಗಳ ಪ್ರಕಾರ ಪ್ರತಿ ವರ್ಷ ಜೂ. 1 ರಿಂದ ಜು. ಅಂತ್ಯದವರೆಗೂ ಆಳ ಸಮುದ್ರ ಮೀನುಗಾರಿಕೆಯ ಮೇಲೆ ನಿರ್ಬಂಧ ಇರುತ್ತದೆ.

ಮೀನುಗಳ ಸಂತಾನೋತ್ಪತ್ತಿ ದೃಷ್ಟಿಯಿಂದ ಹಾಗೂ ಮಳೆಗಾಲದ ಮೀನುಗಾರಿಕೆ ಅಪಾಯಕಾರಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಎರಡು ತಿಂಗಳುಗಳ ಕಾಲ ನಿಷೇಧ ಹೇರಲಾಗುತ್ತದೆ.

ಇದೀಗ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು ಆ. 1ರಿಂದ ಮೀನುಗಾರಿಕೆ ವರ್ಷದ ಮೀನುಗಾರಿಕೆ ಆರಂಭವಾಗಿದೆ.

ಹಿಂದಿನ ವರ್ಷದ ಮೀನುಗಾರಿಕೆ ಋತು ಮುಗಿಸಿ ವಿಶ್ರಾಂತಿಯಲ್ಲಿದ್ದ ಮೀನುಗಾರರು ಕಳೆದ 2 ವಾರಗಳಿಂದ ಬೋಟು ಮತ್ತು ಬಲೆ ದುರಸ್ತಿ ಹಾಗೂ ಇತರ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಮಳೆಗಾಲದ 61 ದಿನಗಳ ಆಳ ಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಜು. 31ಕ್ಕೆ ಕೊನೆಗೊಂಡಿದ್ದು, ಇಂದು ಮೀನುಗಾರಿಕೆ ಸೀಸನ್‌ ಆರಂಭವಾಗಿದ್ದರಿಂದ ಟ್ರಾಲ್‌ ಬೋಟ್‌ ಮೀನುಗಾರರು ಮುಂಜಾನೆ ವೇಳೆಯೇ ತಮ್ಮ ಬೋಟುಗಳೊಂದಿಗೆ ಕಡಲಿಗೆ ಇಳಿದಿದ್ದಾರೆ.

ರಾಜ್ಯದ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಥರಾವರಿ ತಾಜಾ ಸಮುದ್ರ ಮೀನುಗಳ ಪೂರೈಕೆ ಆರಂಭವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,676, ಉಡುಪಿ ಜಿಲ್ಲೆಯಲ್ಲಿ 2,222 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 1,139 ಬೋಟುಗಳು ಸೇರಿದಂತೆ ಒಟ್ಟು 5037 ಯಾಂತ್ರೀಕೃತ ಬೋಟುಗಳಿವೆ. 11,061 ಮೋಟಾರೀಕೃತ ದೋಣಿಗಳು ಇವೆ. ಮಳೆ ಬಿಡುವು ನೀಡಿರುವುದರಿಂದ ಮೀನುಗಾರರು ಉತ್ತಮ ಮತ್ಸ್ಯ ಬೇಟೆಯ ನಿರೀಕ್ಷೆಯಲ್ಲಿದ್ದಾರೆ.

ಟ್ರಾಲ್‌ ಬೋಟ್‌ ಮೀನುಗಾರಿಕೆ ಮಾತ್ರ ಇಂದು ಆರಂಭವಾಗಿದ್ದು, ಪರ್ಸಿನ್‌ ಮೀನುಗಾರಿಕೆ ಆ. 4 ರ ಬಳಿಕ ಆರಂಭವಾಗಲಿದೆ.

ತಿಂಗಳ ಮೊದಲ ಶುಕ್ರವಾರ ಅಂದರೆ ಆ. 4 ರಂದು ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ನಡೆಸಿ ಅಲ್ಲಿನ ಪ್ರಸಾದವನ್ನು ಕೊಂಡೊಯ್ದು ಸಮುದ್ರಕ್ಕೆ ಹಾಕಿದ ಬಳಿಕ ಸಮುದ್ರದ ಪರಿಸ್ಥಿತಿಯನ್ನು ನೋಡಿಕೊಂಡು ಮೀನುಗಾರಿಕೆಗೆ ಹೋಗುತ್ತಾರೆ ಎಂದು ಮಂಗಳೂರಿನ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಶಶಿ ಕುಮಾರ್‌ ಬೆಂಗ್ರೆ ಅವರು ಮಾಹಿತಿ ನೀಡಿದ್ದಾರೆ.

ಪಾಲ್ಗುಣಿ ಮತ್ತು ನೇತ್ರಾವತಿ ನದಿಗಳೆರಡರಲ್ಲಿಯೂ ಉಳ್ಳಾಲದಿಂದ ಕೂಳೂರು ತನಕ ಹೂಳು ತುಂಬಿದ್ದು, ಇದು ಸುಗಮ ಮೀನುಗಾರಿಕೆಗೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.

ಮಂಗಳೂರಿಗೆ ಪ್ರತ್ಯೇಕ ಡ್ರೆಜರ್ ಇರಿಸಿ ಹೂಳೆತ್ತಲು ವ್ಯವಸ್ಥೆ ಮಾಡ ಬೇಕೆಂದು ಅವರು ಆಗ್ರಹಿಸಿದ್ದಾರೆ.

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

DAKSHINA KANNADA

ಇಂದು ಕರ್ನಾಟಕ ಬಂದ್‌: ಕರಾವಳಿಗರಿಂದ ನೈತಿಕ ಬೆಂಬಲ-ಬಸ್‌, ಹೊಟೇಲ್‌, ಶಾಲೆಗಳು ಎಂದಿನಂತೆ

Published

on

ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.

ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.

ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.

ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.

ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

Continue Reading

DAKSHINA KANNADA

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ‘ಸ್ಕಿಲ್ ಅಪ್’ ಕಾರ್ಯಕ್ರಮ

Published

on

ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಸ್ಕಿಲ್ ಅಪ್’ ಎಂಬ ಕಾರ್ಯಕ್ರಮ ಸೆ. 23 ರಂದು ನಡೆಯಿತು.

ಆರೋಗ್ಯ ಕ್ಷೇತ್ರದ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.

ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಎಚ್. ಪ್ರಶಾಂತ್ ಮಿರಾಂಡ, ಎಂಡಿಪಿ ನಿರ್ದೇಶಕ ಪ್ರೊ.ವೆಂಕಟೇಶ್ ಅಮೀನ್ ಮತ್ತು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಡೀನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಕಾರ್ಯಕ್ರಮವನ್ನು ಎಚ್‌. ಪ್ರಶಾಂತ್ ಮಿರಾಂಡ, ಪ್ರೊ. ವೆಂಕಟೇಶ್ ಶೇಖರ್ ಅಮಿನ್, ಪ್ರೊ. ಡಾ. ಅಮುತಾ ಪಿ. ಮಾರ್ಲಾ, ಡಾ. ಶಾಶ್ವತ್ ಎಸ್., ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ವಹಣೆಗಾರ ಪ್ರೊ. ವಿಜಯ ಪಿ., ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಾಧಿಕಾರಿ ಅವರು ಉದ್ಘಾಟಿಸಿದರು.

ಚೆನ್ನೈ ಅಪೋಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್, ಆಥರ್ವ ಆರ್ಥೋ ಕೇರ್ ಮಂಗಳೂರು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು(ಸಿಎಂಸಿ) ವೆಲ್ಲೂರು, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ, ಉಡುಪಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ದೇರೆಳಕಟ್ಟೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಅತ್ತಾವರ, ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ರಾಜಗಿರಿ ಆಸ್ಪತ್ರೆ ಬೆಂಗಳೂರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರು, ರಾಮಯ್ಯ ಯೂನಿವರ್ಸಿಟಿ ಆಫ್ ಆಪ್ಲೈಡ್ ಸೈನ್ಸೆಸ್ ಬೆಂಗಳೂರು, ಶ್ರೀ ರೇಂಗ ಆಸ್ಪತ್ರೆ ತಮಿಳುನಾಡು, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಸೈಂಟ್‌ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ಯೂನಿಟಿ ಆಸ್ಪತ್ರೆ ಮಂಗಳೂರು, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಮತ್ತಿತರ ಸಂಸ್ಥೆಗಳಿಂದ ಆಧಿಕಅರಿ ಮತ್ತು ಸಿಬಂದಿ ಭಾಗವಹಿಸಿದ್ದರು. ಎ. ಜೆ. ಹ್ಯೂಮನ್ ರಿಸೋರ್ಸಸ್ ನ ಮ್ಯಾನೇಜರ್ ಶಶಧರ ಆಚಾರ್ಯ ಪ್ರಸ್ತಾವನೆಗೈದರು.

ಎ..ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ನ ಸಹಾಯಕ ಪ್ರಾಧ್ಯಾಪಕಿ ಪ್ರೀಮ್ ರೋಸ್ ವಿಷ್ಣು ಸ್ವಾಗತಿಸಿದರು.

Continue Reading

LATEST NEWS

Trending