Connect with us

    DAKSHINA KANNADA

    ಮಂಗಳೂರು ಜ್ಯುವೆಲ್ಲರ್ಸ್‌ ಸಿಬ್ಬಂದಿ ಕೊಲೆ ಪ್ರಕರಣ: ಕ್ಲೂ ಕೊಟ್ಟ ಬ್ಯಾಗ್‌-ಕಿಲ್ಲರ್‌ನ ಹಿಸ್ಟರಿ ಬಿಚ್ಚಿಟ್ಟ ಕಮೀಷನರ್‌..!

    Published

    on

    ಮಂಗಳೂರು: ತಿಂಗಳ ಹಿಂದೆ ಮಂಗಳೂರು ನಗರದ ಚಿನ್ನಾಭರಣ ಅಂಗಡಿಯ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯನ್ನು ಕೇರಳ ಪೊಲೀಸರ ಸಹಾಯದಿಂದ ಬಂಧಿಸಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್ ಕುಮಾರ್‌ ಜೈನ್‌ ತಿಳಿಸಿದ್ದಾರೆ.


    ನಗರದ ಪೊಲೀಸ್‌ ಆಯಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಫೆ.3 ರಂದು ಮಂಗಳೂರು ಜ್ಯುವೆಲರ್ಸ್ ಹೆಸರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಹತ್ಯೆ ಮಾಡಿ, ಪರಾರಿಯಾಗಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕೊಚ್ಚಿ ಮೂಲದ ಶಿಫಾಝ್‌(31)ನನ್ನು ಕಾಸರಗೋಡು ಜಿಲ್ಲಾ ಪೊಲೀಸರ ಸಹಕಾರದಿಂದ ಬಂಧಿಸಿದ್ದಾರೆ.

    ಕೊಲೆಗೈದು ನಡೆದುಕೊಂಡೇ ಹೋಗಿದ್ದ ಆರೋಪಿ
    ಆರೋಪಿ ಶಿಫಾಝ್‌ ಮಂಗಳೂರು ಜ್ಯುವೆಲರ್ಸ್ ಅಂಗಡಿ ಸಿಬ್ಬಂದಿ ರಾಘವೇಂದ್ರ ಆಚಾರ್ಯನನ್ನು ಕೊಲೆಗೈದು ಒಂದಷ್ಟು ದೂರ ನಡೆದುಕೊಂಡೇ ಹೋಗಿ ಅಲ್ಲಿಂದ ರಿಕ್ಷಾ ಬಳಸಿ ನಗರದ ಹೊರವಲಯಕ್ಕೆ ತಲುಪಿ ಬಸ್‌ ಮೂಲಕ ಕಾಸರಗೋಡಿಗೆ ಹೋಗಿದ್ದನು.

    ಕಾಸರಗೋಡಿನಿಂದ ರೈಲಿನ ಮೂಲಕ ಕೊಚ್ಚಿಗೆ ಕಾಲ್ಕಿತ್ತಿದ್ದನು ಎಂದು ಪೊಲೀಸ್‌ ತನಿಖೆ ವೇಳೆ ಬಯಲಾಗಿದೆ. ಸದ್ಯ ಈ ಬಂಧಿತ ಆರೋಪಿಯ ವಿರುದ್ದ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿಯಿಲ್ಲ. ಇದೀಗ ಈ ಬಗ್ಗೆ ನೆರೆರಾಜ್ಯ ಹಾಗೂ ಉಳಿದ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

    ಮಧ್ಯಾಹ್ನದ ವೇಳೆ ಒಂಟಿ ಸಿಬ್ಬಂದಿಯಿದ್ದ ಅಂಗಡಿಗಳೇ ಈತನ ಟಾರ್ಗೆಟ್‌
    ಆರೋಪಿ ಶಿಫಾಝ್‌ ಮಧ್ಯಾಹ್ನದ ವೇಳೆಯಲ್ಲಿ ಅತ್ಯಂತ ವಿರಳ ಗ್ರಾಹಕರಿರುವ ಜ್ಯುವೆಲ್ಲರಿ ಶಾಪ್‌ಗಳನ್ನು ಟಾರ್ಗೆಟ್‌ ಮಾಡುತ್ತಿದ್ದ.

    ಇದೇ ವೇಳೆ ಒಬ್ಬರೇ ಸಿಬ್ಬಂದಿ ಇರುವ ಶಾಪ್‌ಗಳನ್ನು ನೋಡಿಕೊಂಡು ಗ್ರಾಹಕನ ಸೋಗಿನಲ್ಲಿ ಅಂಗಡಿಯೊಳಗೆ ನುಗ್ಗುತ್ತಿದ್ದ. ಅದರಂತೆ ಫೆ.3 ರಂದು ರಾಘವೇಂದ್ರ ಅವರು ಒಬ್ಬಂಟಿಯಾಗಿದ್ದನ್ನು ಖಾತ್ರಿ ಮಾಡಿಕೊಂಡಿದ್ದ ಆರೋಪಿ ಜ್ಯುವೆಲ್ಲರಿ ಒಳಗೆ ಹೋಗಿದ್ದ.

    ಅಲ್ಲಿ ಸ್ವಲ್ಪ ಹೊತ್ತು ಗ್ರಾಹಕನಂತೆ ವರ್ತಿಸಿ ರಾಘವೇಂದ್ರ ಅವರು ಬೆನ್ನು ಹಾಕಿ ಒಳಹೋಗುತ್ತಿದ್ದಂತೆ ಅವರನ್ನು ಚಾಕು ಮೂಲಕ ಬೆದರಿಸಿ ಚಿನ್ನಾಭರಣ ಎಗರಿಸಲು ಮುಂದಾಗಿದ್ದಾನೆ. ಅಷ್ಟರದಲ್ಲಿ ಹೊರಗಿನಿಂದ ಜ್ಯುವೆಲ್ಲರಿ ಮಾಲಕ ಒಳಗೆ ಬರುತ್ತಿರುವುದನ್ನು ಕಂಡು ರಾಘವೇಂದ್ರ ಅವರನ್ನು ಕೊಲೆಗೈದು ನಿಮಿಷಗಳಲ್ಲಿ ಪರಾರಿಯಾಗಿದ್ದಾನೆ.

    ಕ್ಲೂ ಕೊಟ್ಟ ಬ್ಯಾಗ್‌
    ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆ ತನಿಖೆಗಿಳಿದ ಪೊಲೀಸರು ಸಿಸಿಟಿವಿಯ ಆಧಾರದಲ್ಲಿ ಆರೋಪಿಯ ಚಹರೆಯನ್ನು ಪತ್ತೆ ಹಚ್ಚಿದ್ದರು. ಈ ಫೋಟೋವನ್ನು ಕಾಸರಗೋಡು ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಛಾಯಾಚಿತ್ರದ ಭಿತ್ತಿಪತ್ರ ಹಚ್ಚಿದ್ದರು.

    ಇದರ ಆಧಾರದಲ್ಲಿ ಕೇರಳ ಪೊಲೀಸರು ಕಾಸರಗೋಡು ಪೇಟೆಯಲ್ಲಿ ಇದೇ ಬ್ಯಾಗ್‌ ಹಾಕಿ ತಿರುಗಾಡುತ್ತಿದ್ದ ಹಾಗೂ ಭಿತ್ತಿಪತ್ರದಲ್ಲಿರುವ ಚಹರೆಯನ್ನು ಹೋಲುವಂತಹ ಆರೋಪಿಯ ವಿಚಾರಣೆಗೊಳಪಡಿಸಿದಾಗ ಕೊಲೆ ಕೃತ್ಯ ಬಯಲಾಗಿದೆ.

    ಮೂರು ಪದರದ ಬಟ್ಟೆ ಹಾಕುತ್ತಿದ್ದ ಶಿಫಾಝ್‌
    ಆರೋಪಿಯ ಯಾವಾಗಲೂ ಮೂರು ಪದರದ ವಸ್ತ್ರಗಳನ್ನು ಧರಿಸುತ್ತಿದ್ದ. ಕಾರಣ ಯಾವುದೇ ಕೊಲೆ ಕೃತ್ಯ ಸಂದರ್ಭ ರಕ್ತದ ಕಲೆಗಳು ಆದಾಗ ತಕ್ಷಣ ಬಟ್ಟೆ ಬದಲಿಸಲು ಹಾಗೂ ಕೃತ್ಯ ನಡೆಸಿ ಪರಾರಿಯಾಗುವ ವೇಳೆ ತನ್ನ ಗುರುತು ಸಿಗಬಾರದೆಂದು ಬೇರೆ ಬೇರೆ ಬಣ್ಣದ ಮೂರು ಬಟ್ಟೆಗಳನ್ನು ಒಂದರ ಮೇಲೊಂದರಂತೆ ಧರಿಸುತ್ತಿದ್ದ ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ. ಜೊತೆಗೆ ಕಾಸರಗೋಡು ಪೊಲೀಸರು ಬಂಧಿಸುವ ವೇಳೆಯೂ ಆತ ಮೂರು ಪದರ ವಸ್ತ್ರ ಧರಿಸಿ ದರೋಡೆಗೆ ಹೊಂಚು ಹಾಕಿದ್ದ ಎಂದು ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ.

    ಆರೋಪಿ ಕೈಯಲ್ಲಿತ್ತು ಆಟಿಕೆ ಪಿಸ್ತೂಲ್‌
    ಆರೋಪಿ ಶಿಫಾಝ್‌ ಕೊಲೆ ಕೃತ್ಯಕ್ಕೆ ಆಟಿಕೆ ಪಿಸ್ತೂಲ್‌ ಹಾಗೂ ಪೆಪ್ಪರ್‌ ಸ್ಪ್ರೇ ಬಳಸುತ್ತಿದ್ದ ಎಂಬ ಅಂಶವೂ ವಿಚಾರಣೆ ವೇಳೆ ಬಯಲಾಗಿದೆ.

    ಮಂಗಳೂರಿನಲ್ಲೇ ಎಂಜನಿಯರಿಂಗ್‌ ಮಾಡಿದ್ದ ಆರೋಪಿ
    ಶಿಫಾಯ್‌ ಮಂಗಳೂರು ಹೊರವಲಯದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮಾಡಿದ್ದ, ತದನಂತರ ವಿದೇಶಕ್ಕೆ ತೆರಳಿ ಅಲ್ಲೇ ಉದ್ಯೋಗ ಮಾಡಿ ಮತ್ತೆ ಊರಿಗೆ ವಾಪಾಸಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಕೇರಳ ಪೊಲೀಸರಿಗೆ ಪ್ರಶಂಸನಾ ಪತ್ರದ ಮೂಲಕ ಗೌರವಿಸಿದ ಮಂಗಳೂರು ನಗರ ಪೊಲೀಸ್‌

    ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇರಳ ಪೊಲೀಸ್‌ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಗೌರವಿಸಿದ್ದಾರೆ. ಜೊತೆಗೆ ಈ ತನಿಖೆಯಲ್ಲಿ ಭಾಗವಹಿಸಿದ್ದ ಮಂಗಳೂರು ನಗರ ಪೊಲೀಸರಿಗೆ 25 ಸಾವಿರ ರೂ ನಗದು ಬಹುಮಾನ ಘೋಷಿಸಿದರು. ಈ ಪ್ರಕರಣದ ತನಿಖೆಗಾಗಿ 8 ತಂಡಗಳನ್ನು ರಚಿಸಿದ್ದರು.

    DAKSHINA KANNADA

    ಮಂಗಳೂರು: ಬೆಳ್ಳಂಬೆಳಗ್ಗೆ ಏರ್‌ಪೋರ್ಟ್‌ ಪರಿಸರದಲ್ಲಿ ಪ್ರತ್ಯಕ್ಷವಾದ ಚಿರತೆ

    Published

    on

    ಮಂಗಳೂರು:  ಬಜಪೆ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿರುವ ಘಟನೆ ಶುಕ್ರವಾರ(ನ.8) ಮುಂಜಾನೆ ಬೆಳಕಿಗೆ ಬಂದಿದೆ.

    ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ವೀಕ್ಷಕರು ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಅಧಿಕಾರಿಯೊಬ್ಬರು ಶುಕ್ರವಾರ ಮುಂಜಾನೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಚಿರತೆ ರಸ್ತೆ ದಾಟಿದೆ ಕೂಡಲೇ ಅಧಿಕಾರಿ ತನ್ನ ಮೊಬೈಲ್ ನಿಂದ ಚಿರತೆ ದೃಶ್ಯವನ್ನು ಸೆರೆ ಹಿಡಿದ್ದಿದ್ದಾರೆ,

    ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಜ.22ಕ್ಕೆ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮ

    Published

    on

    ಮಂಗಳೂರು: ಯಕ್ಷಬೊಳ್ಳಿ ಅಭಿಮಾನಿ ಬಳಗ ಮತ್ತು ಯಕ್ಷಾಭಿಮಾನಿಗಳು ಕಡಬ ನೇತೃತ್ವದಲ್ಲಿ ಯಕ್ಷಗಾನ ಹಾಸ್ಯ ಕಲಾವಿದ ಯಕ್ಷಬೊಳ್ಳಿ ಕಡಬ ದಿನೇಶ್ ರೈ ‘ಕಲಾ ಯಾನದ ರಜತ ಸಂಭ್ರಮ- ಬೊಳ್ಳಿ ಪರ್ಬ- 25’ ಕಾರ್ಯಕ್ರಮ ಜ.22ಕ್ಕೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಕ್ಷೇತ್ರದ ವಠಾರದಲ್ಲಿ ಆಯೋಜಿಸಲಾಗಿದೆ.

    ಬೆಳಗ್ಗೆ 8ರಿಂದ ಸಪ್ತಶತಿ ಪಾರಾಯಣ ಸಹಿತ ನವಚಂಡಿಕಾ ಯಾಗ, ಮಧ್ಯಾಹ್ನ 2ರಿಂದ ಬೊಳ್ಳಿ ಪರ್ಬ- 25 ಉದ್ಘಾಟನೆ- ಯಕ್ಷಬೊಳ್ಳಿ ಸಂಭ್ರಮಕ್ಕೆ ಚಾಲನೆ, ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ಜಿಲ್ಲೆಯ ಪ್ರಸಿದ್ಧ ಹಿಮ್ಮೇಳ – ಮುಮ್ಮೇಳ ಕಲಾ – ವಿದರ ಕೂಡುವಿಕೆಯಲ್ಲಿ ಯಕ್ಷ ಹಾಸ್ಯ ವೈಭವ, ಸಂಜೆ 5.30 ರಿಂದ 7.30ರವರೆಗೆ ಸಭಾ ಕಾರ್ಯಕ್ರಮ ಗುರುವಂದನೆ, ಗೌರವಾರ್ಪಣೆ, ಸನ್ಮಾನ ನೆರವೇರಲಿದೆ. ರಾತ್ರಿ 7.30 ರಿಂದ 1.30 ರವರೆಗೆ ಶ್ರೀ ಗೆಜ್ಜೆಗಿರಿ ಮೇಳದವರಿಂದ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

    ಕಡಬ ದಿನೇಶ ರೈ ಕಲಾಸೇವೆ ವಿವರ :

    ಕಡಬ ದಿನೇಶ ರೈ ಪ್ರಾರಂಭದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿ, ಬಳಿಕ ಶ್ರೀ ಕ್ಷೇತ್ರ ಕಟೀಲು, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ.

    ರವಿ ಕುಮಾರ್ ಸುರತ್ಕಲ್ ರಚಿಸಿದ ನಾಗತಂಬಿಲದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು. ನಾಗರಪಂಚಮಿಯ ನೋಣಯ್ಯ, ವಜ್ರ ಕುಟುಂಬದ ಕಪಟ ಸ್ವಾಮೀಜಿ, ಪವಿತ್ರ ಪಲ್ಲವಿಯ ಪದ್ಮಾವತಿ, (ಪದ್ದು) ಚೆನ್ನಿ- ಚೆನ್ನಮ್ಮದ ಪುರುಷೋತ್ತಮ, ವಿಜಯಕೇಸರಿಯ ಮಾರುತಿ, ಜೀವನಚಕ್ರದ ನಿಷ್ಠಾವಂತ ಸೇವಕ, ಗುಳಿಗೋದ್ಭವ ಪಂಜುರ್ಲಿ – ಪ್ರತಾಪ ದ ಗೋಪಾಲ, ಹಾಗೂ ಚಂದ್ರ, ಮನ ಸೂರೆಗೊಂಡ ಪಾತ್ರಗಳು. ತೆಂಕು -ಬಡಗಿನಲ್ಲಿ ತುಳು – ಕನ್ನಡದಲ್ಲಿ ಪೌರಾ ಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ಕಥೆಗೆ ಲೋಪ ಬಾರದಂತೆ ತಮ್ಮದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಿದ್ದಾರೆ. ಯಕ್ಷಗಾನ ಮಾತ್ರವಲ್ಲದೆ ನಾಟಕ, ತುಳು ಸಿನೆಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

    ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಡಬ ದಿನೇಶ ರೈ ಗೆ ಇರುವೈಲು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ‘ಯಕ್ಷ ಬೊಳ್ಳಿ’ ಎಂಬ ಬಿರುದು ನೀಡಿ ಗೌರವಿಸಿದೆ.

    Continue Reading

    DAKSHINA KANNADA

    ಉಳಾಯಿಬೆಟ್ಟು ಪರಾರಿ ಬಳಿ ಬಾಲಕಿ ಅ*ತ್ಯಾಚಾರ, ಕೊ*ಲೆ ಪ್ರಕರಣ: ಮೂವರಿಗೆ ಜೀವಾವಧಿ

    Published

    on

    ಮಂಗಳೂರು: ಶಾಲೆಗೆ ಹೋಗುವ ಬಾಲಕಿಯ ಮೇಲೆ ಅ*ತ್ಯಾಚಾರ ನಡೆಸಿ ಕೊ*ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮೂವರು ಆರೋಪಿಗಳನ್ನು ಗುರುವಾರ(ನ.7) ಜೀವಾವಧಿ ಶಿಕ್ಷೆಗೆ ಒಳಪಡಿಸಿದೆ.

    2021ರಲ್ಲಿ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿ ಬಳಿ ಎಂಟು ವರ್ಷದ ಬಾಲಕಿಯನ್ನು ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿ ಮೂವರು ಆರೋಪಿಗಳು ಅ*ತ್ಯಾಚಾರವೆಸಗಿ ಹ*ತ್ಯೆಗೈದಿದ್ದರು. ಈ ಘಟನೆಗೆ ಸಂಬಂಧಿಸಿ ಪೋಕ್ಸೋ ಪ್ರಕರಣದಡಿ ಮೂವರನ್ನು ಬಂಧಿಸಲಾಗಿತ್ತು.

    ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕರಾದ ಜಾನ್ಸನ್ ಡಿಸೋಜಾ ರವರು ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಘನ ನ್ಯಾಯಾಲಯದ ನ್ಯಾಯಾದೀಶ ಮಾನು, ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೃ*ತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸಿದೆ.

    Continue Reading

    LATEST NEWS

    Trending