Connect with us

DAKSHINA KANNADA

Mangaluru: ಅಕ್ರಮ ಮರ ಸಾಗಟ – ಪಿಡಿಒ ಅಮಾನತುಗೊಳಿಸಿ ತನಿಖೆ ನಡೆಸಲು ಒತ್ತಾಯ..!

Published

on

ಮುನ್ನೂರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಮಾಜಿ ಪಂಚಾಯತ್‌ ಸದಸ್ಯರಾದ ಗಿರೀಶ್ ಕೊಟ್ಟಾರಿ ಇವರು ಮರ ಕಡಿಯುವ ಕಾರ್ಮಿಕರಾದ ಹನೀಫ ಮತ್ತು ಸುಲೈಮಾಣ್‌ ಮೂಲಕ 2022ರ ಸೆ. 12ರಂದು ಉಳ್ಳಾಲದ ಮುನ್ನೂರು ಗ್ರಾಮದ ಸರ್ವೇ ನಂಬರ್‌ 55ರ ಸರಕಾರಿ ಜಾಗದಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. 

ಮಂಗಳೂರು: ಮುನ್ನೂರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಮಾಜಿ ಪಂಚಾಯತ್‌ ಸದಸ್ಯರಾದ ಗಿರೀಶ್ ಕೊಟ್ಟಾರಿ ಇವರು ಮರ ಕಡಿಯುವ ಕಾರ್ಮಿಕರಾದ ಹನೀಫ ಮತ್ತು ಸುಲೈಮಾಣ್‌ ಮೂಲಕ 2022ರ ಸೆ. 12ರಂದು ಉಳ್ಳಾಲದ ಮುನ್ನೂರು ಗ್ರಾಮದ ಸರ್ವೇ ನಂಬರ್‌ 55ರ ಸರಕಾರಿ ಜಾಗದಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಿದ್ದಾರೆ.

ಈ ಬಗ್ಗೆ ಮಂಗಳೂರು ಅರಣ್ಯ ವಲಯ ವಿಭಾಗದಲ್ಲಿ ಪ್ರಕರಣವೂ ದಾಖಲಾಗಿದೆ ಎಂದು ಉಳ್ಳಾಲ ತಾಲೂಕು ಸಮಿತಿಯ ಪರವಾಗಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ಸುದ್ದಿಗೋಷ್ಠೀಯಲ್ಲಿ ಈ ಬಗ್ಗೆ ಮಾತನಾಡಿದ ಕಿನ್ಯಾ ಗ್ರಾಮದ ಭಾರತೀಯ ಕಿಸಾನ್ ಸಂಘದ ಸಮಿತಿಯ ಸಂಚಾಲಕ ಸಮೀರಾ ರಾವ್‌ ಅವರು, ಮುನ್ನೂರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ್ ನಾಯ್ಕ ತನ್ನ ಅದಿಕಾರವನ್ನು ದುರುಪಯೋಗ ಪಡಸಿಕೊಂಡು ಕಾನೂನು ಬಾಹಿರ ಕೃತ್ಯಗಳನ್ನು ಮಾಡಿದ್ದಾರೆ.

ಸರಕಾರಿ ಆಸ್ತಿಯಲ್ಲಿದ್ದ 57 ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ.

ಅಲ್ಲದೆ ಸರಕಾರಿ ಸೊತ್ತುಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ.

ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಈ ರೀತಿ ಕೃತ್ಯ ಎಸಗಿರುವುದರ ವಿರುದ್ಧ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗೂ ದೂರು ನೀಡಲಾಗಿದೆ.

ಆದ್ದರಿಂದ ಪಿಡಿಒ ರವೀಂದ್ರರನ್ನು ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲಾಖಾ ತನಿಖೆ ನಡೆಸಬೇಕು.

ಇಲ್ಲದೇ ಇದ್ದಲ್ಲಿ ಆ. 14ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲೋಕನಾಥ್‌ ಕುತ್ತಾರು, ರವಿ ಭಂಡಾರಿ, ರವಿರಾಜ್ ಮೊದಲಾದವರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಇಂತಹ ವಿಷಕಾರಿ ಗಿಡಗಳನ್ನು ಯಾವತ್ತೂ ನೀವು ಮನೆಯಲ್ಲಿ ಇಡಬೇಡಿ!!

Published

on

ಮಂಗಳೂರು: ನಮ್ಮ ತೋಟಗಳು ಮತ್ತು ಬಾಲ್ಕನಿಗಳಲ್ಲಿ ಅರಳುವ ಹೂವುಗಳು ಮತ್ತು ನಮ್ಮ ಮುಖದಲ್ಲಿ ನಗು ತರುವ ಸಾಕು ಪ್ರಾಣಿಗಳನ್ನು ನಾವು ಪ್ರೀತಿಸುತ್ತೇವೆ. ಆದ್ಧರಿಂದ ಅವರಿಬ್ಬರನ್ನೂ ಉಳಿಸಲು ಮತ್ತು ಸಂತೋಷದ ಶಕ್ತಿಯನ್ನು ಕಾಪಾಡಿಕೊಳ್ಳಲು ಇಲ್ಲಿ ನಾವು ನಿಮ್ಮ ಸಾಕು ಪ್ರಾಣಿಗಳಿಗೆ ಹಾನಿಕಾರಕವಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ಈ ಸಸ್ಯಗಳು ನಿಮ್ಮ ಮನೆಯಲ್ಲಿ ಇದ್ದರೆ ಅದು ವಿಷಕಾರಿ ಗಿಡ. ಅಂತಹ ಸಸ್ಯಗಳನ್ನು ಯಾವತ್ತೂ ನಿಮ್ಮ ಮನೆಯಲ್ಲಿ ಇಡಬೇಡಿ.

ಲೋಳೆ ಸರ

ಅಲೋವೆರಾ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅದು ಮನುಷ್ಯರಿಗೆ ಮಾತ್ರ ಸೀಮಿತವಾಗಿದೆ. ಸಸ್ಯವನ್ನು ಸೇವಿಸಿದರೆ ಸಾಕುಪ್ರಾಣಿಗಳಿಗೆ ತುಂಬಾ ವಿಷಕಾರಿಯಾಗಬಹುದು ಮತ್ತು ವಾಂತಿ, ಅತಿಸಾರ ಮತ್ತು ನಡುಕವನ್ನು ಉಂಟುಮಾಡಬಹುದು.

ಪೊಥೋಸ್

ಪೋಥೋಸ್ ಜನಪ್ರಿಯ ಒಳಾಂಗಣ ಸಸ್ಯವಾಗಿದ್ದು ಅದು ಗಾಳಿಯನ್ನು ಶುದ್ದೀಕರಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅವುಗಳನ್ನು ಇಟ್ಟುಕೊಳ್ಳುವುದರ ಸಮಸ್ಯೆಯೆಂದರೆ ಎಲೆಗಳು ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ಹೊಂದಿರುತ್ತವೆ. ಇದು ಸಾಕು ಪ್ರಾಣಿಗಳ ಬಾಯಿ ಮತ್ತು ಜೀರ್ಣಾಂಗವನ್ನು ಕೆರಳಿಸಬಹುದು.

ಹಾವಿನ ಗಿಡ

ನಮ್ಮ ಸುತ್ತಲಿನ ಗಾಳಿಯನ್ನು ಶುದ್ದೀಕರಿಸಲು ಸಹಾಯ ಮಾಡುವ ಮತ್ತು ಬೆಳೆಯಲು ತುಂಬಾ ಸುಲಭವಾದ ಮತ್ತೊಂದು ಉತ್ತಮ ಸಸ್ಯವೆಂದರೆ ಸ್ನೇಕ್ ಸಸ್ಯ. ಆದರೆ ಮನೆಯಲ್ಲಿ ಸಾಕುಪ್ರಾಣಿ ಇದ್ದರೆ ಜಾಗರೂಕರಾಗಿರಿ. ಹಾವಿನ ಸಸ್ಯಗಳು ಸಪೋನಿನ್‌ಗಳನ್ನು ಹೊಂದಿರುತ್ತವೆ. ಇದು ಸಾಕುಪ್ರಾಣಿಗಳಲ್ಲಿ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.

ZZ ಸಸ್ಯ

ZZ ಸಸ್ಯಗಳು ತುಂಬಾ ಕಡಿಮೆ ನಿರ್ವಹಣೆಯನ್ನು ಹೊಂದಿವೆ ಮತ್ತು ಯಾರು ಬೇಕಾದರೂ ಬೆಳೆಸಬಹುದು. ಆದರೆ, ZZ ಸಸ್ಯದ ರಸವು ವಿಷಕಾರಿ ಪದಾರ್ಥಗಳು ಮತ್ತು ಉದ್ರೇಕಕಾರಿಗಳನ್ನು ಹೊಂದಿರುತ್ತದೆ. ಅದು ಮನುಷ್ಯರು ಅಥವಾ ಪ್ರಾಣಿಗಳು ಸೇವಿಸಿದರೆ, ಸುಟ್ಟಗಾಯಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೂಕ ಕಬ್ಬಿನ ಗಿಡ

ಡೈಫೆನ್‌ ಬಾಚಿಯಾ ಅಥವಾ ಮೂಕ ಕಬ್ಬನ್ನು ಉಲ್ಲೇಖಿಸಿದಂತೆ, ವಿಶೇಷವಾಗಿ ಸಾಕುಪ್ರಾಣಿಗಳಿಗೆ ಹೆಚ್ಚು ವಿಷಕಾರಿ ಸಸ್ಯವಾಗಿದೆ. ಮೂಕ ಕಬ್ಬಿನ ಎಲೆಗಳನ್ನು ಅಗಿಯುವುದು ಅಥವಾ ರುಚಿ ನೋಡುವುದು ಕಿರಿಕಿರಿ, ವಾಂತಿ ಮತ್ತು ನುಂಗಲು ತೊಂದರೆ ಉಂಟುಮಾಡಬಹುದು. ಇದನ್ನು ಪಶುವೈದ್ಯರು ಮಾತ್ರ ಚಿಕಿತ್ಸೆ ಮಾಡಬಹುದು.

ರಬ್ಬರ್ ಸಸ್ಯ

ರಬ್ಬರ್ ಸಸ್ಯಗಳು ಒಳಾಂಗಣದಲ್ಲಿ ಇರಿಸಿಕೊಳ್ಳಲು ಉತ್ತಮವಾದ ಮತ್ತೊಂದು ಸೆಟ್, ಆದರೆ ದುರದೃಷ್ಟವಶಾತ್ ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ ಹಾಗಲ್ಲ. ರಬ್ಬರ್ ಸಸ್ಯವು ಫಿಸಿನ್ ಮತ್ತು ರಬ್ಬರ್ ಟ್ರೀ ಲ್ಯಾಟೆಕ್ಸ್ ಎಂದು ಕರೆಯಲ್ಪಡುವ ವಿಷವನ್ನು ಹೊಂದಿರುತ್ತದೆ. ಇದು ಎಲೆಗಳನ್ನು ಅಗಿಯಲು ಅಥವಾ ನುಂಗಲು ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಿದೆ.

ಲಿಲ್ಲಿಗಳು

ಲಿಲ್ಲಿಗಳು ಸುಂದರವಾಗಿದ್ದರೂ, ಬೆಕ್ಕುಗಳಿಗೆ ಹೆಚ್ಚು ವಿಷಕಾರಿ ಮತ್ತು ಸಣ್ಣ ಪ್ರಮಾಣದಲ್ಲಿ ಮೂತ್ರಪಿಂಡ ವೈಫಲ್ಯವನ್ನು ಉಂಟುಮಾಡಬಹುದು. ಸಸ್ಯದ ಎಲ್ಲಾ ಭಾಗಗಳು, ಪರಾಗ ಮತ್ತು ಹೂದಾನಿಗಳಿಂದ ನೀರು ಸೇರಿದಂತೆ, ತಿಂದರೆ ಅಥವಾ ಕುಡಿದರೆ ಹಾನಿಕಾರಕವಾಗಬಹುದು.

Continue Reading

DAKSHINA KANNADA

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

Published

on

ಮಂಗಳೂರು: ಮುಲ್ಕಿ  ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ  ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಎಂದು ಗುರುತಿಸಲಾಗಿದೆ.

abhilash

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದಾರೆ. ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ.   ಈಜು ಅರಿತಿದ್ದ  ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್  ಧಾವಿಸಿ ಧನುಷ್ ಮತ್ತು ಜೀವನ್ ರವರ ನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ,ಕರಾವಳಿ  ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

Continue Reading

DAKSHINA KANNADA

ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!

Published

on

ಮಂಗಳೂರು: ಹೂವುಗಳ ಅಲಂಕಾರದಿಂದ ದೇವರ ಕೋಣೆ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ದೇವರ ಪೂಜೆ ಪೂರ್ಣವೆನಿಸುತ್ತದೆ. ಹೂವುಗಳು ಮನೆಯ ಶಕ್ತಿಯನ್ನು ಬದಲಾಯಿಸುತ್ತದೆ. ಆದರೆ ಅದೇ ಹೂಗಳು ನಿಮ್ಮ ಮನೆಯಲ್ಲಿ ದೋಷಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ.

ಒಣಗಿದ ಹೂವುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಅಥವಾ ಅದನ್ನು ತೆಗೆಯದೇ ಹಾಗೇ ಬಿಟ್ಟರೆ, ಅದು ನಿಮ್ಮ ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಒಣಗಿದ ಅಥವಾ ಬಾಡಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ದೇವರಿಗೆ ಆಗಿರಬಹುದು ಅಥವಾ ಮನೆಯಲ್ಲೇ ಆಗಿರಬಹುದು ಯಾವಾಗಲೂ ಪರಿಮಳಯಕ್ತ ಹೂವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

ತಾಜಾ ಹೂವುಗಳಿಗೆ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವುಗಳಿಂದ ಉತ್ಪತ್ತಿಯಾಗುವ ಶಕ್ತಿಯು ಧನಾತ್ಮಕವಾಗಿ ನಮ್ಮ ಸುತ್ತಮುತ್ತಲಿನ ಸ್ಥಳವನ್ನು ಬದಲಾಯಿಸುತ್ತದೆ. ತಾಜಾ ಹೂವುಗಳು ಇರುವಲ್ಲೆಲ್ಲಾ ತಮ್ಮ ಸುತ್ತಲಿನ ಜೀವಿಗಳನ್ನು ಸಕಾರಾತ್ಮಕವಾಗಿರಿಸುತ್ತದೆ. ಅದೇ ಹೂವುಗಳು ಒಣಗಲು ಪ್ರಾರಂಭವಾದಾಕ್ಷಣ ಅದರಿಂದ ನಕಾರಾತ್ಮಕ ಕಂಪನಗಳು ಹರಡಲು ಪ್ರಾರಂಭವಾಗುತ್ತದೆ.

ಪೂಜೆಯಲ್ಲಿ ಒಣಗಿದ ಹೂವುಗಳನ್ನು ಬಳಸುವುದರಿಂದ ಆ ಪೂಜೆಯಿಂದ ಯಾವುದೇ ರೀತಿಯ ಫಲವನ್ನು ನಮಗೆ ಅನುಭವಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಪೂಜೆಯು ಯಾವುದೇ ಶುಭ ಫಲವನ್ನು ಪಡೆಯುವುದಿಲ್ಲ. ಬದಲಾಗಿ ಅಶುಭ ಫಲಗಳನ್ನು ಅನುಭವಿಸುವಂತಾಗುತ್ತದೆ.

ಅದಕ್ಕಾಗಿಯೇ ಹೂವುಗಳನ್ನು ಒಣಗುತ್ತಿದ್ದಂತೆ ಅವುಗಳನ್ನು ತಕ್ಷಣವೇ ಅಲ್ಲಿಂದ ಬದಲಾಯಿಸಬೇಕು. ಒಂದು ವೇಳೆ ಒಣಗಿದ ಹೂವುಗಳು ಇದ್ದರೆ ಅದು ಆರೋಗ್ಯದ ಮೇಲೆಯೂ ಮತ್ತಷ್ಟು ಕೆಟ್ಟ ಪರಿಣಾಮ ಬೀರಬಹುದು.

Continue Reading

LATEST NEWS

Trending