Connect with us

DAKSHINA KANNADA

ಮಂಗಳೂರು: ಬಿಗಿ ಭದ್ರತೆಯಲ್ಲಿ ಮತಸಮರಕ್ಕೆ ಸಜ್ಜಾದ ದಕ್ಷಿಣ ಕನ್ನಡ ಜಿಲ್ಲಾಡಳಿತ..!

Published

on

ರಾಜ್ಯ ವಿಧಾನ ಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಕೊನೆ ಹಂತದ ಸಿದ್ಧತೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿಕೊಳ್ಳುತ್ತಿದೆ.

ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಕೊನೆ ಹಂತದ ಸಿದ್ಧತೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿಕೊಳ್ಳುತ್ತಿದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಅಬ್ಬರದ ಪ್ರಚಾರವನ್ನು ಸಮಾಪನಗೊಳಿಸಿದ್ದು, ರೋಡ್‌ಶೋ, ಸಾರ್ವಜನಿಕ ಸಭೆ, ಸಮಾವೇಶಗಳನ್ನು ಸ್ಥಗಿತಗೊಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಚುನಾವಣೆಯನ್ನು ಸುಸೂತ್ರವಾಗಿ ಹಾಗೂ ಯಾವುದೇ ಗೊಂದಲಗಳಿಲ್ಲದೇ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪ್ರತಿ ವಿಧಾನ ಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಓರ್ವ ಪಿಆರ್‌ಒ ಮತ್ತು ನಾಲ್ಕು ಮಂದಿ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ನಿಯೋಜಿಸಲಾಗುತ್ತದೆ.

ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ 224 ಮತಗಟ್ಟೆಗಳಿಗೆ ಅಗತ್ಯವಿರುವ ಸಿಬ್ಬಂದಿ ನಿಯೋಜನೆ ಮತ್ತು ಇತರ ಸಿದ್ಧತೆಗಳನ್ನು ಉರ್ವ ಕೆನರಾ ಹೈಸ್ಕೂಲ್ ಆವರಣದಲ್ಲಿ ಇಂದು ಮುಂಜಾನೆಯಿಂದ ಮಾಡಿಕೊಳ್ಳುತ್ತಿದೆ.

ಇಲ್ಲಿ ಸಿಬ್ಬಂದಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

15 ಬಸ್ಸುಗಳ ಮೂಲಕ ಬೇರೆ ಬೇರೆ ತಾಲೂಕುಗಳಿಂದ ಸಿಬ್ಬಂದಿ ಬರುತ್ತಿದ್ದಾರೆ.

ಈ ಕ್ಷೇತ್ರದ ಮತಗಟ್ಟೆಗಳಿಗೆ ಒಟ್ಟು 1272 ಜನಸಿಬ್ಬಂದಿಯ ಅಗತ್ಯವಿದ್ದು, ಹೆಚ್ಚುವರಿಯಾಗಿ 49 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆಂಪೇಗೌಡ ಅವರು ಪೂರ್ವ ಸಿದ್ಧತೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಸಿಬ್ಬಂದಿಯನ್ನು 23 ಸೆಕ್ಟರ್‌ಗಳಾಗಿ ವಿಂಗಡಿಸಿ ಸೂಕ್ಷ್ಮ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗಿದೆ.

ಅವರಿಗೆ ಇವಿಎಂ ಮೆಷಿನ್ ಸೇರಿದಂತೆ ಎಲ್ಲಾ ಮೆಟಿರೀಯಲ್ಸ್‌ ನೀಡಲಾಗುತ್ತಿದ್ದು, ಮಧ್ಯಾಹ್ನದ ಬಳಿಕ ಅಯಾ ಕ್ಷೇತ್ರಗಳ ಮತಗಟ್ಟೆಗಳಿಗೆ ಅವರು ಬಿಗು ಪೊಲೀಸ್ ಭದ್ರತೆಯಲ್ಲಿ ತೆರಳಲಿದ್ದಾರೆ.

ಮತದಾನ ಕೇಂದ್ರಕ್ಕೆ ನಿಯೋಜಿಸಲಾಗುವ ಸಿಬ್ಬಂದಿಗೆ ಮತ ಚಲಾಯಿಸಲು ಪ್ರತ್ಯೇಕವಾಗಿ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 3 ಜನ ಅಧಿಕಾರಿಗಳು ದೃಢೀಕರಣ ಮಾಡಿದ್ದಾರೆ.

ಅಂಚೆ ಮತದಾನದ ಬಳಿಕ ಸಿಬ್ಬಂದಿ ಮುಂದೆ ಅವರವರಿಗೆ ಮತಗಟ್ಟೆಗಳಿಗೆ ತಮಗೆ ವಹಿಸಿದ ಕೆಲಸವನ್ನು ನಿರ್ವಹಿಸಲು ತೆರಳಲಿದ್ದಾರೆ. ನಾಳೆ ಬೆಳಿಗ್ಗೆ 5.30ಕ್ಕೆ ಅವರು ಮತದಾನ ಪ್ರಕ್ರಿಯೆಯ ಕರ್ತವ್ಯ ನಿರ್ವಹಣೆ ಆರಂಭಿಸಲಿರುವರು. 69 ಪೋಲಿಂಗ್‌ ಸ್ಟೇಷನ್‌ಗಳಲ್ಲಿ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತೀ ಮತಗಟ್ಟೆಗೆ ಅಭ್ಯರ್ಥಿಗಳ ಪರವಾಗಿ ತಲಾ ಒಬ್ಬ ಏಜೆಂಟ್‌ ಬರಲು ಅವಕಾಶವಿದೆ ಎಂದು ಕೆಂಪೇಗೌಡ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

Published

on

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ ವತಿಯಿಂದ ನಡೆದ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ  ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

 

Continue Reading

DAKSHINA KANNADA

ಅಡ್ಯಾರ್ ಬೊಂಡ ಪ್ಯಾಕ್ಟರಿ ಎಳನೀರು ಪ್ರಕರಣ- ಆರೋಗ್ಯ ಇಲಾಖೆಯ ಕೈ ಸೇರಿದ ಪ್ರಯೋಗಾಲಯ ಪರೀಕ್ಷಾ ವರದಿ ಬಹಿರಂಗ..!

Published

on

ಮಂಗಳೂರು : ಇತ್ತೀಚೆಗೆ ಅಡ್ಯಾರ್ ನಲ್ಲಿರುವ ಬೊಂಡಾ ಪ್ಯಾಕ್ಟರಿಯಲ್ಲಿ ಎಳ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಸಹಜವಾಗಿತ್ತು ಎಳನೀರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಎಪ್ರಿಲ್ 9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಎಪ್ರಿಲ್ 22ರಂದು ಆರೋಗ್ಯ ಇಲಾಖೆಯ ಕೈ ಸೇರಿದೆ.

ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕೆಲವರ ದೇಹದಲ್ಲಿ ಇಕೊಲೈ ಬ್ಯಾಕ್ಟಿರಿಯಾ ಇರುವುದು ಪತ್ತೆಯಾಗಿದೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಅವುಗಳ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.ಅಡ್ಯಾರಿನಲ್ಲಿರುವ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ, ಕಾರ್‌ಸ್ಪೀಟ್ ಮತ್ತು ಕದ್ರಿಯಲ್ಲಿರುವ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಈಗಲೂ ಅವು ಬಂದ್ ಆಗಿಯೇ ಇವೆ.

ಫ್ಯಾಕ್ಟರಿಯವರು ಸ್ವಯಂ ಪ್ರೇರಿತರಾಗಿ ಎಳನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಅಡ್ಯಾರ್‌ನಲ್ಲಿ ಪಲ್ಟಿಂಗ್‌ ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಗ್ರಾಹಕರಿಗೆ ಆಹಾರ ನೀಡುವಾಗ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಕಟ್ಟುನಿಟ್ಟು ಪಾಲನೆಗೆ ಆಹಾರ ಸುರಕ್ಷಾ ಅಫಿದಾವಿತನ್ನು ಫ್ಯಾಕ್ಟರಿಯಿಂದ ಪಡೆಯಲು ಆಹಾರಸುರಕ್ಷಾ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

Continue Reading

DAKSHINA KANNADA

ವೈರಲ್ ವಿಡಿಯೋ: ಕಲ್ಲಂಗಡಿ ಚಿಕನ್ ಬಿರಿಯಾನಿ ತಿಂದಿದ್ದೀರಾ?

Published

on

ಮಂಗಳೂರು(ವೈರಲ್ ವಿಡಿಯೋ): ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುಜನರ ಬೇಡಿಕೆಯ ಖಾದ್ಯವಾದ ಬಿರಿಯಾನಿ ಹಲವು ಮಾದರಿಗಳಲ್ಲಿ ಸಿಗುತ್ತದೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಿನ್ನಲು ಜನರಂತೂ ದೂರ ಸರಿಯುದೇ ಇಲ್ಲ. ಆದರೆ ಈಗ ಬಿರಿಯಾನಿ ಹೊಸ ಹೊಸ ಮಾದರಿಯಲ್ಲಿ ತುಂಬಾ ವೈರಟಿ ಆಗಿ ಸಿಗುತ್ತಾ ಇದೆ. ಬಾರ್ಬಿ ಬಿರಿಯಾನಿ ವೈರಲ್ ಆದ ಬಳಿಕ ಇದೀಗ ಇನ್ನೊಂದು ಹೊಸ ಬಿರಿಯಾನಿ ವೈರಲ್ ಆಗ್ತಾ ಇದೆ.

ಕಲ್ಲಂಗಡಿ ಚಿಕನ್ ಬಿರಿಯಾನಿ

ಹೌದು, ಈ ಬಿರಿಯಾನಿಯ ಹೆಸರು ಕಲ್ಲಂಗಡಿ ಚಿಕನ್ ಬಿರಿಯಾನಿ. ಇದು ವಿಚಿತ್ರವಾದರೂ ಸತ್ಯ. ಕಲ್ಲಂಗಡಿ ಹಾಕಿ ಮಾಡಿರುವ ಈ ಚಿಕನ್ ಬಿರಿಯಾನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ. ಇನ್ಸ್ಟಾಗ್ರಾಮ್‌ನ villagefoodchannel_official ಪೇಜ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಈ ವಿಚಿತ್ರ ಬಿರಿಯಾನಿ ವೈರಲ್ ಆಗಿದೆ.

ಕಲ್ಲಂಗಡಿ ಬಿಕನ್ ಬಿರಿಯಾನಿ ತಯಾರಿಸುವ ವಿಧಾನ

ಮೊದಲಿಗೆ ಇಬ್ಬರು ಕಲ್ಲಂಗಡಿ ಹಣ್ಣನ್ನು ತುಂಡು ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಬಳಿಕ ಹಣ್ಣಿನ ತುಂಡುಗಳನ್ನು ದೊಡ್ಡ ಪಾತ್ರೆಗೆ ಹಾಕಿ ಅದರಲ್ಲಿ ಗುದ್ದಿ ರಸವನ್ನು ತೆಗೆಯುತ್ತಾರೆ. ಬಳಿಕ ಮತ್ತೊಂದು ಪಾತ್ರೆಯಲ್ಲಿ ಚಿಕನ್ ಬಿರಿಯಾನಿ ತಯಾರಿಸಲು ಪ್ರಾರಂಭಿಸುತ್ತಾರೆ.

ದೊಡ್ಡ ಪಾತ್ರೆಯನ್ನು ಇಟ್ಟು ಅದಕ್ಕೆ ಎಣ್ಣೆ, ನೀರುಳ್ಳಿ, ಬೆಳ್ಳುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮಸಾಲೆಗಳು, ಗರಂ ಮಸಾಲೆ ಹಾಕಿ ಮಸಾಲೆ ತಯಾರಿಸುತ್ತಾರೆ. ಬಳಿಕ ಅದಕ್ಕೆ ಶುಚಿಗೊಳಿಸಿದ ಕೋಳಿ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ ಬೇಯಿಸುತ್ತಾರೆ.

ಕೋಳಿ ಮಾಂಸ ಬೆಂದ ನಂತರ ಅದಕ್ಕೆ ಪ್ರಮುಖ ಅಂಶವಾದ ಕಲ್ಲಂಗಡಿ ಹಣ್ಣಿನ ರಸವನ್ನು ಸೇರಿಸುತ್ತಾರೆ. ನಂತರ ಅದಕ್ಕೆ ಬಾಸುಮತಿ ಅಕ್ಕಿ ಹಾಕಿ ಮತ್ತೆ ಬೇಯಿಸುತ್ತಾರೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಮೇಲಿಗೆ ಹಾಕಿ ಮುಚ್ಚಿಡುತ್ತಾರೆ. ಈ ರೀತಿ ಮಾಡಿದಾಗ ಕಲ್ಲಂಗಡಿ ಚಿಕನ್ ಬಿರಿಯಾನಿ ತಯಾರಾಗುತ್ತದೆ.

ಈ ವಿಡಿಯೋ ಬಾರಿ ವೈರಲ್ ಆಗಿದ್ದು, ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಹಾಗೆಯೇ 21 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಲ್ಲಂಗಡಿ ಚಿಕನ್ ಬಿರಿಯಾನಿಯ ಈ ವಿಶಿಷ್ಟ ಸಂಯೋಜನೆಯನ್ನು ವೀಕ್ಷಿಸಿದ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending