LATEST NEWS
ಮಂಗಳೂರು: ಕಳವಾದ ಮೊಬೈಲ್ ಪತ್ತೆ ಹಚ್ಚಲು 8277949183ಗೆ ವಾಟ್ಸಪ್ ಮಾಡಿ
ಮಂಗಳೂರು: ಕಳವಾದ ಮೊಬೈಲ್ ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಪ್ರತ್ಯೇಕ ಪೋರ್ಟಲ್ (www.ceir.gov.in) ಅನ್ನು ಇತ್ತೀಚೆಗೆ ಆರಂಭಿಸಿದೆ. ಆದರೆ, ಅದರಲ್ಲಿ ವಿವರಗಳನ್ನು ತುಂಬಲು ಕೆಲವು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ.
ಈ ಪ್ರಕ್ರಿಯೆಯನ್ನು ಸರಳಗೊಳಿಸಲು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಟ್ಸ್ಆ್ಯಪ್ ಮೂಲಕ ದೂರು ನೀಡುವ ಚಾಟ್ಬೋಟ್ ಸೇವೆಯನ್ನು ಜಾರಿಗೊಳಿಸಲಾಗಿದೆ. ಇದನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಬಿಡುಗಡೆಗೊಳಿಸಿದರು.
ಮೊಬೈಲ್ ಕಳವಾದ ಬಗ್ಗೆ 8277949183 ವಾಟ್ಸ್ಆ್ಯಪ್ ಸಂಖ್ಯೆಗೆ ಹಾಯ್ ಎಂದು ಸಂದೇಶ ಕಳುಹಿಸಿದರೆ ಸಾಕು. ತಕ್ಷಣ ಹಾಯ್ ಕಳುಹಿಸಿದವರ ವಾಟ್ಸ್ಆ್ಯಪ್ಗೆ ಒಂದು ಲಿಂಕ್ ಬರುತ್ತದೆ. ಆ ಲಿಂಕ್ನಲ್ಲಿ ಕಳವಾದ ಮೊಬೈಲ್ನ ಐಎಂಇಐ ಸಂಖ್ಯೆಯೂ ಸೇರಿ ಕೆಲವು ವಿವರಗಳನ್ನು ಭರ್ತಿ ಮಾಡಿದರೆ ಆ ಮಾಹಿತಿಯನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಸಿಇಐಆರ್ ಪೋರ್ಟಲ್ನಲ್ಲಿ ತುಂಬಿಸಿ, ಮೊಬೈಲ್ ಪತ್ತೆಗೆ ನೆರವಾಗುತ್ತಾರೆ’ ಎಂದು ಕುಲ್ದೀಪ್ ಕುಮಾರ್ ಆರ್. ಜೈನ್ ತಿಳಿಸಿದರು.
ಸ್ಕ್ಯಾನ್ ಮಾಡಿ ಅಭಿಪ್ರಾಯ ತಿಳಿಸಿ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಸಾರ್ವಜನಿಕರಿಂದ ಇಲಾಖೆಯ ಸೇವೆಯ ಗುಣಮಟ್ಟದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪೊಲೀಸ್ ಇಲಾಖೆ ಮುಂದಾಗಿದೆ. ಇದಕ್ಕಾಗಿ ಕ್ಯೂ.ಆರ್.ಕೋಡ್ ಸ್ಕ್ಯಾನ್ ಮಾಡಿ ಪ್ರತಿಕ್ರಿಯೆ ಹಂಚಿಕೊಳ್ಳುವ ಸೇವೆಯನ್ನು ಆರಂಭಿಸಲಾಗಿದೆ.
ಪ್ರತಿ ಠಾಣೆಗಳಲ್ಲೂ ಕ್ಯೂ.ಆರ್.ಕೋಡ್ ಅನ್ನು ಪ್ರದರ್ಶಿಸಲಾಗುತ್ತದೆ. ಇದನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಬಿಡುಗಡೆಗೊಳಿಸಿದರು.
ಠಾಣೆಗಳಿಗೆ ಭೇಟಿ ನೀಡುವ ಸಾರ್ವಜನಿಕರಿಂದ ಅಲ್ಲಿನ ಸೇವೆಯ ಬಗ್ಗೆ ನೇರವಾಗಿ ಮಾಹಿತಿ ಪಡೆಯಲು ಕ್ರಮ ಕೈಗೊಂಡಿದ್ದೇವೆ. ಠಾಣೆಗಳ್ಲಲಿ ಅಳವಡಿಸಿರುವ ಕ್ಯೂ.ಆರ್. ಕೋಡ್ ಸ್ಕ್ಯಾನ್ ಮಾಡಿ, ಅದರಲ್ಲಿ ಆಯಾ ಠಾಣೆಯನ್ನು ಆಯ್ಕೆ ಮಾಡಿ, ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ತುಂಬುವ ಮೂಲಕ ಪ್ರತಿಕ್ರಿಯೆಯನ್ನು ನೀಡಬಹುದು’ ಎಂದರು. ಠಾಣೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ಆ ಬಗ್ಗೆಯೂ ದೂರನ್ನೂ ನೀಡಬಹುದು’ ಎಂದರು.
ಸದ್ಯ ಇಂಗ್ಲಿಷ್ನಲ್ಲಿ ಮಾತ್ರ ಈ ಸೇವೆ ಲಭ್ಯ ಇದೆ. ಶೀಘ್ರವೇ ಕನ್ನಡದಲ್ಲೂ ಸೇವೆ ಒದಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದರು.
LATEST NEWS
ವಾರಣಾಸಿಯಿಂದ ನಾಮ ಪತ್ರ ಸಲ್ಲಿಸಿದ ಪ್ರಧಾನಿ ಮೋದಿ; ಜೊತೆಗಿದ್ದ ಆ ವ್ಯಕ್ತಿ ಯಾರು?
ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದರು. ಅವರು ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದಕ್ಕೂ ಮೊದಲು ದಶಾಶ್ವಮೇಧ ಘಾಟ್ನಲ್ಲಿ ಗಂಗಾ ನದಿಗೆ ಗಂಗಾ ಆರತಿ ಮಾಡಿದರು. ನಂತರ ವಾರಣಾಸಿ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಜೊತೆಗಿದ್ದ ಗಡ್ಡಧಾರಿ ಯಾರು?
ನಾಮಪತ್ರ ಸಲ್ಲಿಕೆ ವೇಳೆ ಮೋದಿ ಪಕ್ಕದಲ್ಲಿ ಒಬ್ಬ ಗಡ್ಡಧಾರಿಯೊಬ್ಬರು ಕಾಣಿಸಿಕೊಂಡರು. ಅವರ ಪಕ್ಕದಲ್ಲಿ ಕುಳಿತವರು ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು. ಅವರು ಖ್ಯಾತ ಜ್ಯೋತಿಷಿ ಮತ್ತು ಅಂಕಗಣಿತ ತಜ್ಞ ಗಣೇಶ್ವರ ಶಾಸ್ತ್ರಿ ದ್ರಾವಿಡ್.
ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲೂ ಇವರ ಹೆಸರು ಕೇಳಿ ಬಂದಿತ್ತು. ಅವರೇ ರಾಮ ಮಂದಿರದ ಭೂಮಿ ಪೂಜೆ ಮತ್ತು ಶಿಲಾ ಪೂಜೆಯ ಜೊತೆಗೆ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದ್ದರು.
ಇದನ್ನೂ ಓದಿ : ಪರಪ್ಪನ ಅಗ್ರಹಾರದಿಂದ ಹೊರಬಂದ ಹೆಚ್.ಡಿ.ರೇವಣ್ಣ
ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿಯವರು ತಮ್ಮ ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದ ನಾಲ್ವರಲ್ಲಿ ಒಬ್ಬರು ಖ್ಯಾತ ಜ್ಯೋತಿಷಿ ಮತ್ತು ಗಣೇಶ್ವರ ಶಾಸ್ತ್ರಿ ದ್ರಾವಿಡ್ ಕೂಡ ಒಬ್ಬರು. ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಗಣೇಶ್ ಶಾಸ್ತ್ರಿ ದ್ರಾವಿಡ್ ಅವರು ಪ್ರಧಾನಿಯವರ ಪಕ್ಕದಲ್ಲಿಯೇ ಕಾಣಿಸಿಕೊಂಡರು. ಈ ಸಂದರ್ಭ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.
LATEST NEWS
ಪರಪ್ಪನ ಅಗ್ರಹಾರದಿಂದ ಹೊರಬಂದ ಹೆಚ್.ಡಿ.ರೇವಣ್ಣ
ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಲೈಂ*ಗಿಕ ದೌರ್ಜ*ನ್ಯ ನಡೆಸಿದ್ದಾರೆ ಎನ್ನಲಾಗಿರುವ ಅಶ್ಲೀ*ಲ ವಿಡಿಯೋದಲ್ಲಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ. ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹೆಚ್.ಡಿ.ರೇವಣ್ಣ ಅವರು ಬಿಡುಗಡೆಯಾಗುತ್ತಿರುವ ಸುದ್ದಿ ತಿಳಿದಿದ್ದ ಅವರ ಅಭಿಮಾನಿಗಳು ಜೈಲಿನ ಹೊರಗಡೆ ಜಮಾಯಿಸಿದ್ದರು. ರೇವಣ್ಣ ಹೊರಬರುತ್ತಿದ್ದಂತೆ ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ರೇವಣ್ಣ ಈ ವೇಳೆ ಕಣ್ಣೀರು ಹಾಕಿದರು. ಈ ಸಂದರ್ಭ ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.
ನಿವಾಸದತ್ತ ರೇವಣ್ಣ :
ಜೈಲಿಂದ ಹೊರಬಂದು ನೇರವಾಗಿ ದೇವೇಗೌಡರ ನಿವಾಸಕ್ಕೆ ತೆರಳಿದ ರೇವಣ್ಣ ತಂದೆ-ತಾಯಿ ಆಶೀರ್ವಾದ ಪಡೆದರು. ಮನೆಗೆ ಬಂದ ಅವರನ್ನು ಆರತಿ ಬೆಳಗಿ ಕುಟುಂಬ ಸದಸ್ಯರು ಸ್ವಾಗತಿಸಿದರು. ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ ಸೋಮವಾರ ಸಂಜೆ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಕ್ರಿಯೆಗಳೆಲ್ಲವೂ ಮುಗಿದು ಮಂಗಳವಾರ ಜೈಲಿನಿಂದ ಹೊರ ಬಂದರು.
ಇದನ್ನೂ ಓದಿ : ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ
ಮೇ 4 ರಂದು ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ದೇಔಏಗೌಡರ ನಿವಾಸದಲ್ಲಿಯೇ ಬಂಧಿಸಿದ್ದರು. ನಾಲ್ಕು ದಿನಗಳ ಕಾಲ ಎಸ್ ಐ ಟಿ ವಶಕ್ಕೆ ನೀಡಿದ್ದ ಕೋರ್ಟ್, ಬಳಿಕ ನ್ಯಾಯಾಂಗ ಬಂಧನಕ್ಕೊಪ್ಪಿಸಿತ್ತು. 12 ದಿನಗಳ ಬಳಿಕ ರೇವಣ್ಣ ಸೆರೆಮನೆಯಿಂದ ಹೊರಬಂದಿದ್ದಾರೆ.
FILM
ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ
‘ತ್ರಿನಯನಿ’ ಖ್ಯಾತಿಯ ಖ್ಯಾತ ನಟಿ ಪವಿತ್ರಾ ಜಯರಾಮ್ ಅಪ*ಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿದ್ದರು. ಈ ವೇಳೆ ಆಂಧ್ರ ಪ್ರದೇಶದ ಮೆಹಬೂಬ ನಗರದ ಬಳಿ ಭೀ*ಕರ ರಸ್ತೆ ಅಪ*ಘಾತದಲ್ಲಿ ಸ್ಥಳದಲ್ಲಿಯೇ ಮೃ*ತಪಟ್ಟಿದ್ದಾರೆ. ಪವಿತ್ರಾ ಮೂಲತಃ ಕರ್ನಾಟಕದವರು. ಮಂಡ್ಯ ತಾಲೂಕಿನ ಹನಕೆರೆಯವರು.
ಕಾರಿನಲ್ಲಿ ಪ್ರಯಾಣ ಮಾಡುವಾಗ ಅವರ ಜೊತೆ ಸಹನಟ ಚಂದ್ರಕಾಂತ್ ಕೂಡ ಇದ್ದರು. ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ದರ್ಶನ್ ಸಿನಿಮಾಕ್ಕೆ ಸಹಿ :
ಕಾರಿನಲ್ಲಿ ಬಂದಿದ್ದ ನಟಿ ಪವಿತ್ರಾ, ಅವರ ಜೊತೆಗೆ ಸಹನಟ ಚಂದ್ರಕಾಂತ್ ಕೂಡ ಇದ್ದರು. ಸೋದರ ಸಂಬಂಧಿಯೂ ಇದ್ದರು. ಅವರು ಬೆಂಗಳೂರಿಗೆ ಆಗಮಿಸಿ ವಾಪಾಸಾಗುತ್ತಿದ್ದರು. ಬೆಂಗಳೂರಿಗೆ ಬಂದ ಕಾರಣ ಬಿಚ್ಚಿಟ್ಟ ಚಂದ್ರಕಾಂತ್, ‘ದರ್ಶನ್ ಸರ್ ಸಿನಿಮಾಗೆ ಆಫರ್ ಬಂದಿತ್ತು. ಅದಕ್ಕೆ ಸಹಿ ಹಾಕೋಕೆ ಬೆಂಗಳೂರಿಗೆ ಬಂದಿದ್ದೆವು. ಅಗ್ರಿಮೆಂಟ್ಗೆ ಸಹಿ ಹಾಕಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದಿದ್ದೆವು. ಪವಿತ್ರಾ ಅವರಿಗೆ ಜೆಮಿನಿ ಟಿವಿಯಿಂದ ಆಫರ್ ಬಂತು. ಹೀಗಾಗಿ, ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದೆವು’ ಎಂದಿದ್ದಾರೆ.
ಅಪಘಾ*ತ ಹೇಗಾಯ್ತು?
ಪವಿತ್ರಾ ಕಾರು ಅಪ*ಘಾತದಿಂದ ಮೃ*ತಪಟ್ಟಿಲ್ಲ ಎಂದು ಚಂದ್ರಕಾಂತ್ ಹೇಳಿದ್ದಾರೆ. ಘಟನೆ ಬಗ್ಗೆ ವಿವರಿಸಿದ ಚಂದ್ರಕಾಂತ್, ಕಾರಿನಲ್ಲಿ ಡ್ರೈವರ್ ಸೇರಿ ನಾವು 4 ಮಂದಿ ಇದ್ದೆವು. ನಾವು ಬೆಂಗಳೂರಿನಿಂದ ಹೈದರಾಬಾದ್ ಗೆ ಟ್ರಾವೆಲ್ ಮಾಡುತ್ತಿದ್ದೆವು. ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟೆವು. ಸಂಜೆ 6:30ಕ್ಕೆ ಮಳೆ ಶುರುವಾಯ್ತು. ಈ ವೇಳೆ ಟ್ರಾಫಿಕ್ ಜಾಮ್ ಆಯಿತು. ಮೂರು ಗಂಟೆ ಜಾಮ್ ಆಗಿತ್ತು. 80 ಫೀಟ್ ರೋಡ್ ನಲ್ಲಿ ಸಾಗುತ್ತಿದ್ದಂತೆ ಕೆಎಸ್ಆರ್ ಟಿಸಿ ಬಸ್ ಒಂದು ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಮಾಡಿದೆ.
ಡ್ರೈವರ್ ಈ ವೇಳೆ ಗಾಬರಿಗೊಂಡು ಸ್ಟೇರಿಂಗ್ ನ ಉಲ್ಟಾ ತಿರುಗಿಸಿದ್ದಾನೆ. ಇದ್ರಿಂದ ಕಾರು ಪಕ್ಕದ ರಸ್ತೆಗೆ ಹೋಗಿದೆ. ಎದುರಿನಿಂದ ಬಸ್ ಬರುತ್ತಿತ್ತು. ಆ ಬಸ್ ಕೂಡ ಡಿ*ಕ್ಕಿ ಹೊಡೆದಿದೆ. ಪರಿಣಾಮ ಬ್ಲಾಸ್ಟ್ ಆಯ್ತು ಎಂದು ನಟ ಚಂದ್ರಕಾಂತ್ ವಿವರಿಸಿದ್ದಾರೆ.
ಇದನ್ನೂ ಓದಿ : PHOTOS : ಆಸ್ಟ್ರೇಲಿಯಾದಲ್ಲಿ ರಶ್ಮಿಕಾ ಮಂದಣ್ಣ; ಹಾಟ್ ಫೋಟೋಗಳು ವೈರಲ್
ಪೆಟ್ಟಾಗಿ ಸ*ತ್ತಿಲ್ಲ:
ಡ್ರೈವರ್ ಹಾಗೂ ಪವಿತ್ರಾ ಅಕ್ಕನ ಮಗಳು ಮುಂದೆ ಇದ್ದರು. ಅವರಿಗೆ ಏನು ಆಗಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಗಿತ್ತು. ಇದನ್ನು ನೋಡಿ ಪವಿತ್ರಾ ಶಾಕ್ ಆದರು. ಜೋರಾಗಿ ಉಸಿರು ಎಳೆದ್ರು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗೆ ಸೇರಿಸಲು ಸರಿಯಾದ ಸಮಯಕ್ಕೆ ಆ್ಯಂ*ಬುಲೆನ್ಸ್ ಕೂಡ ಸಿಗಲಿಲ್ಲ. 1 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೊದರು. 3 ಗಂಟೆಗೆ ಎಚ್ಚರವಾಯಿತು ಎಂದು ಚಂದ್ರಕಾಂತ್ ವಿವರಿಸಿದ್ದಾರೆ.
ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಕನ್ನಡದ ಧಾರಾವಾಹಿಗಳಲ್ಲಿ ಪಾತ್ರವಾಗಿದ್ದ ನಟಿ ಪವಿತ್ರಾ ಜಯರಾಮ್, ತೆಲುಗು ‘ತ್ರಿನಯನಿ’ ಸೀರಿಯಲ್ನ ತಿಲೋತ್ತಮ ಪಾತ್ರದ ಮೂಲಕ ಜನಮನ ಗೆದ್ದಿದ್ದರು.
- FILM5 days ago
“ನಿವೇದಿತಾಜೈನ್”ಗೆ ಸಾ*ವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?
- DAKSHINA KANNADA6 days ago
PUTTUR : ಮದುವೆ ಸಮಾರಂಭದಲ್ಲಿ ಹುಡುಗಿಯರ ಫೋಟೋ ತೆಗೆದವರಿಗೆ ಬಿತ್ತು ಧರ್ಮದೇಟು!
- FILM6 days ago
ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?
- DAKSHINA KANNADA5 days ago
ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್