Connect with us

  LATEST NEWS

  ಮಂಗಳೂರು ಮಹಾನಗರಪಾಲಿಕೆಯ ಬಜೆಟ್‌ 2022-23: ಹೀಗಿದೆ ಡಿಟೇಲ್ಸ್‌

  Published

  on

  ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ಸವಾರ್ಂಗೀಣ ಅಭಿವೃದ್ಧಿ ದೃಷ್ಟಿಯಿಂದ ತಯಾರಿಸಲಾದ 2021-22ನೇ ಸಾಲಿನ ಪರಿಷ್ಕತ ಆಯವ್ಯಯವನ್ನು ಹಾಗೂ 2022-23ನೇ

  ಸಾಲಿನ ಅಂದಾಜು ಆಯವ್ಯಯವನ್ನು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್ ಮಂಡಿಸಿದರು.

  2022-23 ನೇಸಾಲಿನ ಆಯವ್ಯಯ ಅಂದಾಜು:
  • 2022-23 ನೇ ಸಾಲಿನ ಪ್ರಾರಂಭಿಕ ಶಿಲ್ಕು ರೂ. 327.81 ಕೋಟಿ ಮತ್ತು ಆದಾಯ ರೂ.578.65 ಕೋಟಿ. ಒಟ್ಟು ವೆಚ್ಚ ರೂ. 561.35 ಕೋಟಿ ಅಂದಾಜಿಸಿದ್ದು, ಅಂತಿಮ ಶಿಲ್ಕು ರೂ. 345.11 ಕೋಟಿ ನಿರೀಕ್ಷಿಸಲಾಗಿದೆ.
  • 2022-23 ನೇ ಸಾಲಿನ ಆಯವ್ಯಯದ ದೃಷ್ಟಿಕೋನ.
  • ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚು ಆದ್ಯತೆ.
  • ಸ್ವಚ್ಛತೆ ಮತ್ತು ಶುಚಿಗೆ ಹೆಚ್ಚು ಒತ್ತು.
  • ಕಲ್ಯಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ.
  • ಪ್ರಗತಿಯಲ್ಲಿ ಇರುವ ಕಾಮಗಾರಿಗಳ ಪೂರ್ಣಗೊಳಿಸಲು ಆದ್ಯತೆ
  • ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ.
  2022-23ನೇ ಸಾಲಿನ ಆಯವ್ಯಯದ ವಿವರಗಳು
  1) ಆಡಳಿತ ಸುಧಾರಣೆ :
  ಪಾಲಿಕೆಯ ಎಲ್ಲಾ ವಿಭಾಗದ ಅಧಿಕಾರಿ ಸಿಬ್ಬಂದಿಗಳಿಗೆ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಪರಿಪೂರ್ಣತೆ ಹೊಂದಲು ವೃತ್ತಿಪರ ಮತ್ತು ಮಾನಸಿಕ ಒತ್ತಡಗಳಿಂದ ಮುಕ್ತಿಹೊಂದಲು ಯೋಗ ಮತ್ತು ಕೌಶಲ್ಯ ತರಬೇತಿಗೆ ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಮೈಸೂರಿನ ಶಿಬಿರಗಳಿಗೆ ನಿಯೋಜಿಸಲಾಗುತ್ತದೆ ಎಂದು ಹೇಳಿದರು.
  ಕಡತಗಳ ಶೀಘ್ರ ವಿಲೇವಾರಿಗಾಗಿ ಆನ್-ಲೈನ್ (Pಚಿಠಿeಡಿ ಐess ಔಜಿಜಿiಛಿe-Pಐಔ) ಕೇಂದ್ರ ಕಚೇರಿಯಲ್ಲಿ ಜಾರಿಗೆ ತರಲಾಗಿದ್ದು ಇದನ್ನು ಪಾಲಿಕೆ ವ್ಯಾಪ್ತಿಯ ಎಲ್ಲಾ ಕಚೇರಿಗಳಿಗೆ ವಿಸ್ತರಿಸಲು ಹಿಂದಿನ ಬಜೆಟ್ ಭಾಷಣದಲ್ಲಿ ಹೇಳಲಾಗಿತ್ತು ಅದರಂತೆ, ಪ್ರಸ್ತುತ ಪಾಲಿಕೆಯಾಗಿ ಎಲ್ಲಾ ಕಡತಗಳನ್ನು ಪಿ.ಎಲ್.ಒ ಮುಖಾಂತರ ನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಎಲ್ಲಾ ಸೇವೆಗಳ ಕಡತವನ್ನು ಆನ್-ಲೈನ್ ಮುಖಾಂತರ ವೀಕ್ಷಿಸಲು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
  ಸುರತ್ಕಲ್ ವಲಯ ಕಚೇರಿ ನಿರ್ಮಾಣಕ್ಕೆ ರೂ. 2.00 ಕೋಟಿಗಳ ಅನುದಾನವನ್ನು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ನಿರ್ಮಿಸಲು ಸರಕಾರದಿಂದ ಈಗಾಗಲೇ ಅನುಮೋದನೆ ಪಡೆಯಲಾಗಿದ್ದು ಪ್ರಸ್ತುತ ಕಾರ್ಯಾದೇಶ ನೀಡುವ ಹಂತದಲ್ಲಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ಪಾಲಿಕೆ ಕಟ್ಟಡ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಸಾರ್ವಜನಿಕ ಸೇವೆಗೆ ಹಾಗೂ ಆಡಳಿತಕ್ಕೆ ಚುರುಕು ಮುಟ್ಟಿಸಬಹುದಾಗಿದೆ ಎಂದರು.
  ಪಾಲಿಕೆಯ ಖಾಯಂ ನೌಕರರಿಗೆ ಜಪ್ಪು ವಸತಿ ಗೃಹದಲ್ಲಿ ನೂತನ ವಸತಿ ಸಂಕೀರ್ಣವನ್ನು ನಿರ್ಮಿಸಲು ಯೋಜನ ವರದಿಯನ್ನು ತಯಾರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪರಿಷತ್ ಅನುಮೋದನೆ ಪಡೆದು ನಿರ್ಮಿಸಲಾಗುವುದು ಎಂದರು.
  2) ತೆರಿಗೆ ಆದಾಯ:
  ಆಸ್ತಿ ತೆರಿಗೆಯು ಆದಾಯದ ಪ್ರಮುಖವಾದ ಮೂಲವಾಗಿದ್ದು ಅಂದಾಜು 2,05,003 ಹೆಚ್ಚು ಆಸ್ತಿಗಳನ್ನು ಗುರುತಿಸಲಾಗಿದ್ದು, ಇನ್ನೂ ಕೈ ತಪ್ಪಿರುವ ಆಸ್ತಿಗಳನ್ನು ಗುರುತಿಸಿ ಆಸ್ತಿ ಜಾಗದ ವ್ಯಾಪ್ತಿಗೆ ಒಳಪಡಿಸಿ ಸಂಪನ್ಮೂಲಗಳನ್ನು ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಈಗಾಗಲೇ ಆಸ್ತಿ ಸಮೀಕ್ಷೆ ಪ್ರಾರಂಭವಾಗಿದ್ದು, ಹಿಂದಿನ ಬಜೆಟ್ ಭಾಷಣದಲ್ಲಿ 2021-22 ನೇ ಸಾಲಿನಿಂದ ಆನ್-ಲೈನ್ ಸೇವೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು, ಅದರಂತೆ ಪ್ರಸ್ತುತ ಆನ್-ಲೈನ್ ಮುಖಾಂತರವೇ ಪಾವತಿಗೆ ಕ್ರಮ ವಹಿಸಲಾಗಿರುತ್ತದೆ. ಇದು ನಮ್ಮ ಮಂಗಳೂರು ನಾಗರಿಕರಿಗೆ ಹರ್ಷ ತರುವ ವಿಚಾರವಾಗಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ ರೂ.80.00 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
  ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದರು.
  ಉಪ- ಆಯುಕ್ತರು (ಕಂದಾಯ) ರವರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತ ದಳ ಸ್ಥಾಪಿಸಿ ಪಾಲಿಕೆಯ ಸಂಪನ್ಮೂಲ ಸೋರಿಕೆಯ ಪ್ರಕರಣಗಳನ್ನು ಪತ್ತೆ ಹಚ್ಚುವುದರ ಮೂಲಕ ತೆರಿಗೆ ಮತ್ತು ತೆರಿಗೇತರ ಆದಾಯವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
  3) ಜಾಹೀರಾತು ತೆರಿಗೆ:
  ಖಾಸಗಿ ಅನಧಿಕೃತ ಜಾಹೀರಾತು ಮತ್ತು ಇತರ ಫಲಕಗಳ ನಿಯಂತ್ರಣಕ್ಕಾಗಿ ಹೊಸನಿಯಮಗಳನ್ನು ಸಿದ್ದಪಡಿಸಿ ಜಾಹೀರಾತು ಬೈಲಾ ತಯಾರಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. 2022-23ನೇ ಸಾಲಿನ ಆಯವ್ಯಯದಲ್ಲಿ ರೂ.7.00 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
  ಮಹಾನಗರ ಸೌಂದರ್ಯವನ್ನು ರಕ್ಷಿಸಲು ಅನಧಿಕೃತ ಜಾಹೀರಾತು ಫಲಕ, ನಾಮ ಫಲಕ ಮತ್ತು ಹೋಡಿರ್ಂಗ್ಸ್ ಗಳ ಮೇಲೆ ದಂಡ ವಿಧಿಸಿ ತೆರವುಗೊಳಿಸಲಾಗುವುದು.
  4) ತೆರಿಗೆಯೇತರ ಆದಾಯ:
  ಅಧಿಬಾರಶುಲ್ಕ: ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ವರ್ಗಾವಣೆ ಸಮಯದಲ್ಲಿ ಮುದ್ರಾಂಕ ಶುಲ್ಕದ ಶೇ.2 ರಷ್ಟು ಅಧಿಬಾರ ಶುಲ್ಕವನ್ನು ಸಂಗ್ರಹಿಸಿ ಸರ್ಕಾರದಿಂದ 2022-23 ನೇ ಸಾಲಿನ ಆಯವ್ಯಯದಲ್ಲಿ ರೂ.4.00 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
  5) ಕಟ್ಟಡ ಪರವಾನಿಗೆ ಶುಲ್ಕ:
  ಸಾರ್ವಜನಿಕ ಸಮಾಲೋಚನ ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಂತೆ 1992 ರಿಂದ 20 ಪೈಸೆಗಳ ದರದಲ್ಲಿ ವಸೂಲಿ ಮಾಡುತ್ತಿರುವ ಕಟ್ಟಡ ಪರವಾನಿಗೆ ಶುಲ್ಕವನ್ನು ಪರಿಷ್ಕರಿಸುವಂತೆ ಸಲಹೆಯನ್ನು ನೀಡಲಾಗಿರುತ್ತದೆ. ಅದರಂತೆ ಪಾಲಿಕೆ ವ್ಯಾಪ್ತಿಯ ಯಾವುದೇ ಬಡಜನರಿಗೆ ತೊಂದರೆಯಾಗದ ರೀತಿಯಲ್ಲಿ ಪರಿಷ್ಕರಿಸಲು ತೆರಿಗೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿಯಿಂದ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಪರಿಷ್ಕರಿಸಲು ತೀರ್ಮಾನಿಸಲಾಗಿರುತ್ತದೆ. 2022-23 ನೇ ಸಾಲಿನ ಆಯವ್ಯಯದಲ್ಲಿ ಕಟ್ಟಡ ಪರವಾನಿಗೆಯ ಮೂಲಕ ರೂ. 4.00 ಕೋಟಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.
  6) ಇತರೆ ಸ್ವಂತ ಆದಾಯ :
  2022-23 ನೇ ಸಾಲಿನ ಪಾಲಿಕೆಯಿಂದ ನಿರೀಕ್ಷಿಸಿರುವ ಇತರೆ ಸ್ವಂತ ಆದಾಯ ವಿವರ. ರೂ. ಲಕ್ಷಗಳಲ್ಲಿ
  1 ನೀರಿನ ತೆರಿಗೆ 6500.00
  2 ಉದ್ಧಿಮೆ ಪರವಾನಿಗೆ 500.00
  3 ಎಸ್ ಡಬ್ಲ್ಯೂ ಎಂ ಶುಲ್ಕ 2500.00
  4 ರಸ್ತೆ ಕಡಿತ 2330.00
  5 ಒಳಚರಂಡಿ ಶುಲ್ಕ 420.00
  6 ಮಾರುಕಟ್ಟೆ / ಬಾಡಿಗೆ ಶುಲ್ಕ 419.00
  7 ಖಾತಾ ವರ್ಗಾವಣೆ 275.00
  8 ಪ್ರೀಮಿಯಂ ಎಫ್ ಎ ಆರ್ 800.00
  7) ಸರ್ಕಾರದ ಅನುದಾನಗಳು :
  2022-23ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಂಗಳೂರು ಮಹಾನಗರ ಪಾಲಿಕೆಗೆ ವಿವಿಧ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಈ ಕೆಳಕಂಡಂತೆ ಒಟ್ಟು ರೂ.182.85 ಕೋಟಿ ಅನುದಾನ ನಿರೀಕ್ಷಿಸಲಾಗಿದ್ದು ವಿವರ ರೂ. ಕೋಟಿಗಳಲ್ಲಿ ಇಂತಿವೆ:
  ಕೇಂದ್ರ ಸರ್ಕಾರದ ಅನುದಾನಗಳು – ಮೊತ್ತ
  1 15 ನೇ ಹಣಕಾಸು ಆಯೋಗದ ಅನುದಾನ 19.00
  2 ನಲ್ಮ್ ಅನುದಾನ 0.25
  = ಒಟ್ಟು ಅನುದಾನ ರೂ. 19.25 ರೂ. ಕೋಟಿಗಳಲ್ಲಿ

  ರಾಜ್ಯ ಸರ್ಕಾರದ ಅನುದಾನಗಳು ಮೊತ್ತ
  1 ಎಸ್ ಎಫ್ ಸಿ – ವೇತನ 30.00
  2 ಎಸ್ ಎಫ್ ಸಿ – ಮುಕ್ತನಿಧಿ 5.50
  3 ಎಸ್ ಎಫ್ ಸಿ – ವಿದ್ಯುತ್ 40.00
  4 ವಿಶೇಷ ಮೂಲಭೂತ ಸೌಕರ್ಯ ಯೋಜನೆ 22.00
  5 ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 35.00
  6 ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ 1.75
  ಒಟ್ಟು ಅನುದಾನ 134.25 ರೂ. ಕೋಟಿಗಳಲ್ಲಿ

  ಕೇಂದ್ರ ಪುರಸ್ಕøತ ಹಾಗೂ ಇತರೆ ಅನುದಾನ ಮೊತ್ತ
  1 ಸ್ವಚ್ಛ ಭಾರತ್ ಮಿಷನ್ ಅನುದಾನ 6.00
  2 ಹೌಸಿಂಗ್ ಫಾರ್ ಆಲ್ ಮತ್ತು ವಸತಿ 8.00
  3 ವಾಣಿಜ್ಯ ಸಂಕೀರ್ಣಗಳ ನಿರ್ಮಾಣ 15.00
  4 ಸಂಸತ್ / ವಿಧಾನ ಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನ 0.35
  ಒಟ್ಟು ಅನುದಾನ 29.35
  2022-23ನೇ ಸಾಲಿನಲ್ಲಿ ಕೈಗೊಳ್ಳಲು ಉದ್ಧೇಶಿಸಿರುವ ಜನಪರ ಕಲ್ಯಾಣ, ಆರೋಗ್ಯ ಕಾರ್ಯಕ್ರಮಗಳು, ಘನತ್ಯಾಜ್ಯ ನಿರ್ವಹಣೆ, ಪರಿಸರ ಮತ್ತು ಅಭಿವೃದ್ಧಿ ಕಾಮಗಾರಿಗಳ ಸಂಕ್ಷಿಪ್ತ ವಿವರ ಇಂತಿವೆ:
  1. ಕಲ್ಯಾಣ ಕಾರ್ಯಕ್ರಮಗಳು :
  ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ : “ ನಗರ ಸ್ವಚ್ಛತೆಯ ಸೇವಕ – ಪೌರಕಾರ್ಮಿಕ “
  ಪ್ರಸ್ತುತ ಹೊರಗುತ್ತಿಗೆ ಆಧಾರದಲ್ಲಿ ಒ/S ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈವೇಟ್ ಲಿಮಿಟೆಡ್ ರವರ ಗುತ್ತಿಗೆ ಅವಧಿಯ ಮುಕ್ತಾಯಗೊಳ್ಳುತ್ತಿರುವುದುರಿಂದ ಸರ್ಕಾರದ ನಿಯಮದಂತೆ ಪೌರಕಾರ್ಮಿಕ ವಿಶೇಷ ನೇಮಕಾತಿ ಮತ್ತು ನೇರಪಾವತಿ ಮುಖಾಂತರವಾಗಿ ಪೌರಕಾರ್ಮಿಕರನ್ನು 700:1 ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ 190 ಪೌರಕಾರ್ಮಿಕರ ಹುದ್ದೆಯನ್ನು ನೇರ ನೇಮಕಾತಿಯಲ್ಲಿ ತುಂಬುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿರುತ್ತದೆ, ಹಾಗೂ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳ ಪರಿಶೀಲನೆ ನಂತರ ನೇಮಕಾತಿ ಪ್ರಾಧಿಕಾರದಿಂದ ನೇಮಕಾತಿ ಆದೇಶವನ್ನು ನೀಡಲಾಗುವುದು. ಹಾಗೂ ನೇರಪಾವತಿ ಅಡಿ ಬಾಕಿ ಉಳಿದ ಹುದ್ದೆಗಳಿಗೆ ಪಾಲಿಕೆ ವತಿಯಿಂದಲೇ ವೇತನ ಪಾವತಿ ಮಾಡಲಾಗುವುದು ಎಂದರು.
  • ಶೇ.24.10 ಯೋಜನೆಯಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕೆ 1.70 ಕೋಟಿಗಳನ್ನು ವಿನಿಯೋಗಿಸುತ್ತಿದ್ದು ಇದರಲ್ಲಿ ಆರೋಗ್ಯ ವಿಮೆ, ಸುರಕ್ಷಿತ ಸಾಧನ ಕಿಟ್ ಗಳು, ನಿವೇಶನ ಖರೀದಿ ಮತ್ತು ಮನೆ ನಿರ್ಮಾಣ, ಪೌರಕಾರ್ಮಿಕರ ದಿನಾಚರಣೆಗೆ ನಿಗದಿಪಡಿಸಲಾಗಿದೆ ಹಾಗೂ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಃಐಅ ಫಲಾನುಭವಿಗಳಿಗೆ ವ್ಯಯ ಮಾಡಲಾಗುವುದು.
  • ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಲ್ಲಿ ಉ+3 ಮಾದರಿಯ ಮೊದಲನೆ ಹಂತದ ವಸತಿ ಗೃಹವನ್ನು ಜಪ್ಪು ಮಹಾಕಾಳಿ ಪಡ್ಪುವಿನಲ್ಲಿ ರೂ 2.32 ಕೋಟಿ ಖರ್ಚು ಮಾಡಿ ನಿರ್ಮಿಸಲಾಗಿದ್ದು ಅದಕ್ಕೆ 32 ಫಲಾನುಭವಿಗಳ ಪೈಕಿ 18 ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದೆ, ಉಳಿದ 14 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಬಗ್ಗೆ ಮಂಜೂರಾತಿಗಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಅನುಮೋದನೆಗೆ ಸಲ್ಲಿಸಿದೆ. ಎರಡನೇ ಮತ್ತು ಮೂರನೇ ಹಂತದ ವಸತಿ ಗೃಹವನ್ನು ನಿರ್ಮಾಣ ಕಾಮಗಾರಿಗೆ 7.38 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಕರೆಯಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಿ ಸಂಬಂಧಪಟ್ಟ ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ಬಗ್ಗೆ ನಿರೀಕ್ಷಿಸಲಾಗಿದೆ. ಗೃಹ ಭಾಗ್ಯ ಯೋಜನೆ 21 ಃಐಅ ಫಲಾನುಭವಿಗಳ ಪೈಕಿ 12 ಮಂದಿ ಫಲಾನುಭವಿಗಳು ಮನೆ ನಿರ್ಮಾಣವನ್ನು ಪೂರ್ಣಗೊಳಿಸಿ ಸ್ವಂತ ಗೃಹದಲ್ಲಿ ವಾಸ್ತವ್ಯವನ್ನು ಹೂಡಿರುತ್ತಾರೆ, ಬಾಕಿ ಉಳಿದ ಒಂಬತ್ತು ಫಲಾನುಭವಿಗಳಿಗೆ ಈಗಾಗಲೇ ಮೊದಲನೇ ಮತ್ತು ಎರಡನೇ ಕಂತಿನ ಸಹಾಯಧನವನ್ನು ಪಾವತಿ ಮಾಡಲಾಗಿದೆ ಮುಂದಿನ ಆರ್ಥಿಕ ವರ್ಷದಲ್ಲಿ ಅಂತಿಮ ಕಂತಿನ ಅನುದಾನವನ್ನು ಬಿಡುಗಡೆಗೊಳಿಸಿ ಮನೆ ನಿರ್ಮಾಣ ಪೂರ್ಣಗೊಳಿಸಲಾಗುವುದು
  • ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಪಾಲಿಕೆ ವ್ಯಾಪ್ತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳ ಅಭಿವೃದ್ಧಿಗೆ ರೂ. 20.24 ಕೋಟಿಗಳ ಕ್ರಿಯಾ ಯೋಜನೆ ಸರ್ಕಾರದಿಂದ ಅನುಮೋದನೆಯಾಗಿರುವ ವಿಚಾರವನ್ನು ಈ ಸಭೆಯಲ್ಲಿ ಮಂಡಿಸಲು ಹರ್ಷಿಸುತ್ತೇನೆ.
  • ಶೇ. 24.10 ಯೋಜನೆಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸರ್ಕಾರವು ನೀಡಿರುವ ಸುತ್ತೋಲೆಯಂತೆ ರೂ. 5.50 ಕೋಟಿಗಳನ್ನು ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ಧೇಶಿಸಿದೆ ಹಾಗೂ ಪೂಜ್ಯ ಮಹಾಪೌರರು ಘೋಷಿಸಿದಂತೆ ತಾಳಿಭಾಗ್ಯ ಯೋಜನೆಗೆ ಅನುದಾನವನ್ನು ಕಾಯ್ದಿರಿಸಲಾಗಿದೆ.
  * ಪಕ್ಕಾ ಮನೆ ನಿರ್ಮಾಣ
  * ಮನೆ ದುರಸ್ಥಿ
  * ಶಿಕ್ಷಣ
  * ಸಣ್ಣ ಉದ್ದಿಮೆದಾರರಿಗೆ ಸಹಾಯ ಧನ
  * ಅಡುಗೆ ಅನಿಲ ಸಂಪರ್ಕ
  * ವೈದ್ಯಕೀಯ ವೆಚ್ಚ ಧನಸಹಾಯ
  * ಸಮುದಾಯಗಳ ಮೂಲಭೂತಸೌಕರ್ಯಗಳ ಅಭಿವೃದ್ದಿ.
  * ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ರೂ.80.00 ಲಕ್ಷಗಳನ್ನು ಸರ್ಕಾರಿ ಸುತ್ತೋಲೆಯಂತೆ ವ್ಯಯ ಮಾಡಲು ಉದ್ದೇಶಿಸಲಾಗಿರುತ್ತದೆ.
  * ದಿವ್ಯಂಗರ ಕಾರ್ಯಕ್ರಮ ಪಾಲಿಕೆ ವ್ಯಾಪ್ತಿಯಲ್ಲಿರುವ ದಿವ್ಯಂಗರ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ರೂ.70.00 ಲಕ್ಷಗಳನ್ನು ಮೀಸಲಿರಿಸಲಾಗಿರುತ್ತದೆ.

  2. ಸಂಸ್ಕೃತಿ ಮತ್ತು ಕ್ರೀಡೆ: ಮಂಗಳೂರು ನಗರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಉತ್ತೇಜಿಸುವ ಅಂಗವಾಗಿ ಯಕ್ಷಗಾನ, ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಪೆÇ್ರೀತ್ಸಾಹಿಸಲು ರೂ.15.00 ಲಕ್ಷಗಳನ್ನು ಹಾಗೂ ವಿವಿಧ ರಂಗದ ಕ್ರೀಡೆಗಳಿಗೆ ಪೆÇ್ರೀತ್ಸಾಹಿಸಲು ರೂ.25.00 ಲಕ್ಷಗಳನ್ನು ಈ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ.
  3. ಪಾಲಿಕೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭಿವೃದ್ದಿಗೆ ಪ್ರಸಕ್ತ ಸಾಲಿನಲ್ಲಿ ಕುಟೀರ ಭಾಗ್ಯ ಯೋಜನೆ ಅಡಿಯಲ್ಲಿ ಮನೆ ದುರಸ್ಥಿಗೆ 25,000 ರೂ.ಸಹಾಯ ಧನದಿಂದ ರೂ.30,000 ಗಳಿಗೆ ಹೆಚ್ಚಿಸಲಾಗಿದೆ.
  4.ಘನತ್ಯಾಜ್ಯ ನಿರ್ವಹಣೆ: ಘನತ್ಯಾಜ್ಯ ವಸ್ತುಗಳ ನಿಯಮ 2016 ರನ್ನು ಅನುμÁ್ಠನಗೊಳಿಸಲು ಪ್ರತಿ ಮನೆಗಳಲ್ಲಿ ಅಪಾರ್ಟ್ ಮೆಂಟ್ ಗಳಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರು ಹಾಗೂ ಇತರರು ತಮ್ಮ ಹಂತದಲ್ಲಿಯೇ ಹಸಿಕಸವನ್ನು ವಿಂಗಡಿಸಿ ಸಂಸ್ಕರಣೆ ಮಾಡಿದಲ್ಲಿ ಆಸ್ತಿತೆರಿಗೆಯ ಹಾಗೂ ಉದ್ದಿಮೆ ಪರವಾನಿಗೆಯ ಘನತ್ಯಾಜ್ಯ ಸೇವಾ ಶುಲ್ಕದಲ್ಲಿ ಶೇ.50% ರಷ್ಷು ರಿಯಾಯಿತಿಯನ್ನು ನೀಡಲಾಗಿರುತ್ತದೆ. ಈಗಾಗಲೇ 15ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಗಳಿಗೆ ಘನತ್ಯಾಜ್ಯ ಸೇವಾ ಶುಲ್ಕದಲ್ಲಿ ಶೇ. 50% ರಷ್ಟು ರಿಯಾಯಿತಿಯನ್ನು ನೀಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ನಾಗರೀಕರು ಹಾಗೂ ಮನಪಾ ಸದಸ್ಯರನ್ನೊಳಗೊಂಡು ವಾರ್ಡು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚು ಮನೆಗಳಲ್ಲಿ ಹಸಿಕಸವನ್ನು ಸಂಸ್ಕರಿಸಲು ಪೆÇ್ರೀತ್ಸಾಹಿಸಲಾಗವುದು ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016 ನ್ನು ಶೇ, 100 ರಷ್ಟು ಅನುμÁ್ಠನಗೊಳಿಸಲು ಕ್ರಮವಹಿಸಲಾಗುವುದು. ತ್ಯಾಜ್ಯ ವಿಂಗಡಣೆ ಕುರಿತಂತೆ ಮೇ 2021 ರಿಂದ ಕಟ್ಟುನಿಟ್ಟಾಗಿ ಕ್ರಮ ವಹಿಸಲಾಗುತ್ತಿರುವ ಕಾರಣ, ಶೇ. 70-75 ರಷ್ಟು ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ವಿಂಗಡಣೆಯಾಗಿ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ.
  ಒ/s ಇಟಿಣo Pಡಿoಣeiಟಿ Pvಣ ಐಣಜ. ಮಂಗಳೂರು ಎಂಬ ಸಂಸ್ಥೆಗೆ ಪಚ್ಚನಾಡಿ ಘನತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಪ್ರಯೋಗಿಕವಾಗಿ ಹಸಿ ತ್ಯಾಜ್ಯವನ್ನು ಊeಡಿmiಛಿuಟಣuಡಿe (ಃಟಚಿಛಿಞ Soಟಜieಡಿ ಈಟಥಿ (ಃSಈ)) ಬಳಸುವ ತಂತ್ರಜ್ಞಾನದೊಂದಿಗೆ ಸಂಸ್ಕರಣೆ ಮಾಡಲು ಅನುಮತಿ ನೀಡಲಾಗಿರುತ್ತದೆ.
  ಒಣ ತ್ಯಾಜ್ಯವನ್ನು ಪ್ರಸ್ತುತ 2 ಸಂಖ್ಯೆ ಬೇಲಿಂಗ್ ಯಂತ್ರ ಮತ್ತು ಅoಟಿveಥಿoಡಿ beಟಣ ಮುಖಾಂತರ ಸಂಸ್ಕರಣೆ ಮಾಡಿ ಅನುಪಯುಕ್ತ ಒಣ ತ್ಯಾಜ್ಯವನ್ನು ಬೇಲ್ ಮಾಡಲಾಗುತ್ತಿದೆ. ವಾರ್ಷಿಕ ನಿರ್ವಹಣೆಗಾಗಿ 2022-23ನೇ ಸಾಲಿನ ಆಯವ್ಯಯದಲ್ಲಿ ರೂ. 44.55 ಕೋಟಿಗಳನ್ನು ಮೀಸಲಿರಿಸಲಾಗಿರುತ್ತದೆ.
  5. ಬೀದಿ ದೀಪಗಳ ನಿರ್ವಹಣೆ:
  ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಗಾಗಿ PPP ಮಾದರಿಯಲ್ಲಿ ನಿರ್ವಹಿಸುವ ಈಗಾಗಲೇ ಕಾರ್ಯದೇಶವನ್ನು ನೀಡಲಾಗಿದ್ದು ಪ್ರಸ್ತುತ ಸರ್ವೆ ನಡೆಸಿ ಎಲ್ಲಾ ದಾರಿ ದೀಪ ಗಳನ್ನು ಐಇಆ ದೀಪಗಳನ್ನು ಡಿ ಪಿ ಆರ್ ನಲ್ಲಿ ಸೂಚಿಸಿರುವ ತಾಂತ್ರಿಕ ವರದಿಯಂತೆ ಬದಲಾವಣೆ ಮಾಡಲಾಗುತ್ತಿದೆ. ಪ್ರಗತಿಯನ್ನು ನಿಗದಿತ ಸಮಯದಲ್ಲಿ ಸಾಧಿಸಲು ಛಿoಟಿಛಿessioಟಿeಡಿ ಮತ್ತು ಪಾಲಿಕೆ ಸದಸ್ಯರೊಂದಿಗೆ ಸಮನ್ವಯದ ಸಭೆಯನ್ನು ಸಹ ನಡೆಸಲಾಗಿರುತ್ತದೆ. ಪ್ರಸ್ತುತ ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ ಇಔಖಿ ಯನ್ನು ನೀಡಲಾಗಿರುತ್ತದೆ. ಆದುದರಿಂದ 2022-23ನೇ ಸಾಲಿನ ಆಯವ್ಯಯದಲ್ಲಿ ರೂ. 4.00 ಕೋಟಿಗಳನ್ನು ಮೀಸಲಿರಿಸಲಾಗಿರುತ್ತದೆ.
  6. ರಸ್ತೆ ದುರಸ್ತಿ ಹಾಗೂ ರಾಜಕಾಲುವೆಗಳ ನಿರ್ವಹಣೆ:
  ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ, ತೇಪೆ ಕಾಮಗಾರಿ ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿಗಾಗಿ ರೂ. 6.00 ಕೋಟಿಗಳನ್ನು ಹಾಗೂ ಅಭಿವೃದ್ಧಿಗಾಗಿ 8.00 ಕೋಟಿಗಳನ್ನು ಮೀಸಲಿರಿಸಲಾಗಿರುತ್ತದೆ.
  ಮಳೆಗಾಲದ ವಿಶೇಷ ಗ್ಯಾಂಗ್ ಮೂಲಕ ಕಾರ್ಯಾಚರಣೆಯನ್ನು ನಡೆಸಲುರೂ. 2.20 ಕೋಟಿಗಳನ್ನು ಮೀಸಲಿರಿಸಲಾಗಿರುತ್ತದೆ.
  ರಾಜಕಾಲುವೆಗಳಲ್ಲಿ ಹೂಳು ಎತ್ತುವ ಕಾಮಗಾರಿಗಳ ನಿರ್ವಹಿಸಲು ರೂ. 2.00 ಕೋಟಿಗಳನ್ನು ಮೀಸಲಿರಿಸಲಾಗಿರುತ್ತದೆ.
  7. ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣೆ
  ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಂಪ್ ಹೌಸ್ ಹಾಗೂ ತುಂಬೆರೇಚಕ ಸ್ಥಾವರಗಳ ನವೀಕರಣ, ಓವರ್ ಹೆಡ್ ಟ್ಯಾಂಕ್ ಗಳ ಸ್ವಚ್ಛತೆ ಮತ್ತು ನೀರು ಕೊಳವೆ ಮಾರ್ಗಗಳ ಸೋರಿಕೆ ದುರಸ್ತಿ ನಿರ್ವಹಣೆಗಾಗಿ, ಬೇಸಿಗೆ ಗಾಲದಲ್ಲಿ ಟ್ಯಾಂಕ್ ಮುಖಾಂತರ ನೀರು ಸರಬರಾಜು ನಿರ್ವಹಣೆಗಾಗಿ, ನೀರಿನ ಶುದ್ಧೀಕರಣಕ್ಕಾಗಿ ಬೇಕಾಗಿರುವ ರಾಸಾಯನಿಕಗಳ ಖರೀದಿಗಾಗಿ ಒಟ್ಟು ರೂ. 17.25 ಕೋಟಿಗಳನ್ನು ಮೀಸಲಿರಿಸಲಾಗಿರುತ್ತದೆ.
  ಒಳಚರಂಡಿ ವಿಭಾಗ
  • ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೆಟ್ ವೆಲ್ ಗಳಲ್ಲಿ ಒಳಚರಂಡಿ ನೌಕರರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗುವುದು.
  • ಒಳ ಚರಂಡಿ ನೌಕರರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಗಮನ ನೀಡಲು “ಸುರಕ್ಷಿತ ಸಾಧನಗಳ ಕಿಟ್” ನೀಡಲಾಗುವುದು.
  • ಹಸಿರೇ ನಮ್ಮ ಉಸಿರು” ವೆಟ್ ವೆಲ್/ ಎಸ್.ಟಿ.ಪಿ ಗನ್ನು ಪರಿಸರ ಸ್ನೇಹಿ ಮಾಡುವ ಉದ್ಧೇಶದಿಂದ ಪ್ರತಿ ವೆಟ್ ವೆಲ್ ಮತ್ತು ಎಸ್.ಟಿ.ಪಿ ಗಳಲ್ಲಿ 30 ಗಿಡಗಳನ್ನು ಟ್ರೀಗಾರ್ಡ್ ಸಹಿತ ನೆಟ್ಟು ಅದರ ನಿರ್ವಹಣೆ ಮಾಡಲಾಗುವುದು.
  • ಖಾಸಗಿ ಕಟ್ಟಡಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಗಳನ್ನು ಅಳವಡಿಸಿಕೊಳ್ಳುವ ಕಟ್ಟಡದ ಮಾಲೀಕರಿಗೆ “ಸ್ವಚ್ಛತೆಯ ಸೈನಿಕ” ಎಂಬ ಹೆಸರಿನ ಅಭಿನಂದನಾ ಪತ್ರ ನೀಡಲಾಗುವುದು.
  • 2021-22ನೇ ಸಾಲಿನ ಆಯವ್ಯಯದಲ್ಲಿ ರೂ. 14.50 ಕೊಟಿಗಳನ್ನು ಒಳಚರಂಡಿ ನಿರ್ವಹಣೆಗಾಗಿ ಮೀಸಲಿರಿಸಲಾಗಿರುತ್ತದೆ.
  ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಮೂಲಭೂತ ಸೌಕರ್ಯಗಳ ವಿವರ
  ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ: ಈ ಯೋಜನೆಯಲ್ಲಿ ಮಹಾನಗರಪಾಲಿಕೆಗೆ ಒಟ್ಟು ರೂ 105.00 ಕೋಟಿಗಳ ಅನುದಾನ ಮಂಜೂರಾಗಿರುತ್ತದೆ ಹಾಗೂ ಸರಕಾರದಿಂದ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿರುತ್ತದೆ. 2021-22 ನೇ ಸಾಲಿಗೆ 10.00 ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ಮೊತ್ತವನ್ನು ಕೇಂದ್ರ ಪುರಸ್ಕೃತ ಯೋಜನೆಯ ಅಮೃತ್ ಯೋಜನೆಯ ನಗರ ಸ್ಥಳೀಯ ಸಂಸ್ಥೆ ವಂತಿಕೆ ಯನ್ನಾಗಿ ಬಳಸಲಾಗಿರುತ್ತದೆ. ಈ ಯೋಜನೆಯ ಮಾರ್ಗಸೂಚಿಯಂತೆ ಒಟ್ಟು 17 ಪ್ಯಾಕೇಜ್ ಟೆಂಡರ್ ಆಹ್ವಾನಿಸಲಾಗಿದೆ ಇದರಲ್ಲಿ 3 ಪ್ಯಾಕೇಜುಗಳ ಆರ್ಥಿಕ ಬಿಡ್ಡು ಅನುಮೋದನೆಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ, 13 ಪ್ಯಾಕೇಜು ಟೆಂಡರ್ ಮೌಲ್ಯಮಾಪನದಲ್ಲಿ ಇರುತ್ತದೆ. 2022-23 ನೇ ಸಾಲಿನ ಆಯವ್ಯಯದಲ್ಲಿ ರೂ, 30.00 ಕೋಟಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನಿರೀಕ್ಷಣೆ ಮಾಡಲಾಗಿರುತ್ತದೆ.
  15 ನೇ ಹಣಕಾಸು ಯೋಜನೆ: ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನಂತೆ 2022-23ನೇ ಸಾಲಿನಲ್ಲಿ 20.00 ಕೋಟಿಗಳ ಕಾಮಗಾರಿಯನ್ನು ನಿರೀಕ್ಷಣೆ ಮಾಡಲಾಗಿರುತ್ತದೆ. ಈ ಯೋಜನೆಯ ಮಾರ್ಗಸೂಚಿಯಂತೆ ಮಳೆ ನೀರು ಕೊಯ್ಲು, ನೀರಿನ ಮರುಬಳಕೆ, ಕುಡಿಯುವ ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಮತ್ತು ಶೌಚಾಲಯಗಳ ನಿರ್ವಹಣೆ, ಒಳಚರಂಡಿ, ಮಳೆ ನೀರು ಚರಂಡಿ, ರಸ್ತೆ ಮತ್ತು ಪಾದಾಚಾರಿ ಮಾರ್ಗಗಳ ಅಭಿವೃದ್ಧಿ, ಬೀದಿ ದೀಪ, ಉದ್ಯಾನವನ ಅಭಿವೃದ್ಧಿ, ಕೊಳಗೇರಿ ಸುಧಾರಣೆ, ನಗರ ಯೋಜನೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆ, ಸ್ಮಶಾನಗಳ ಅಭಿವೃದ್ಧಿ ಪಡಿಸಲಾಗುವುದು.
  ಎಸ್ ಎಫ್ ಸಿ ವಿಶೇಷ ಅನುದಾನ: ಮಂಗಳೂರು ಉತ್ತರ ಹಾಗೂ ದಕ್ಷಿಣ ವಿಧಾನ ಸಭಾ ಕ್ಷೇತ್ರಗಳ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿಗಳ ವಿವೇಚನೆಯಂತೆ ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ 2022-23 ನೇ ಸಾಲಿನ ಆಯವ್ಯಯದಲ್ಲಿ ರೂ. 1500.00 ಲಕ್ಷಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷಣೆ ಮಾಡಲಾಗಿರುತ್ತದೆ ಹಾಗೂ ಸುರತ್ಕಲ್ ವಾಣಿಜ್ಯ ಸಂಕೀರ್ಣ ಕಾಮಗಾರಿಯ ಹೆಚ್ಚುವರಿ ಆರ್ಥಿಕ ಪ್ರಸ್ತಾವನೆ ಸರಕಾರದ ಅನುಮೋದನೆಗೆ ಸಲ್ಲಿಸಲಾಗಿದ್ದು ರೂ. 20.00 ಕೋಟಿಗಳನ್ನು ವ್ಯಯ ಮಾಡಲಾಗುವುದು.
  ಪ್ರೀಮಿಯಂ ಎಫ್.ಎ.ಆರ್: ಪರಿಷತ್ ನಲ್ಲಿ ಅನುಮೋದನೆಗೊಂಡಿರುವ ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿ ಹಾಗೂ ವೃತ್ತ ಅಭಿವೃದ್ಧಿ ಕಾಮಗಾರಿಗಳಿಗೆ ರೂ, 35.00 ಕೋಟಿಗಳ ವ್ಯಯ ಮಾಡಲು ನಿರೀಕ್ಷಿಸಲಾಗಿದೆ.
  ಮಾರುಕಟ್ಟೆಗಳ ಅಭಿವೃದ್ಧಿ: ಸುರತ್ಕಲ್ ವ್ಯಾಪ್ತಿಯ ಕೃμÁ್ಣಪುರ ಮಾರುಕಟ್ಟೆ ಕಾಮಗಾರಿಗೆ ಹಿಂದಿನ ಬಜೆಟ್ ಭಾಷಣದಲ್ಲಿ ಘೋಷಿಸಿರುವಂತೆ ಪಾಲಿಕೆಯ ಉದ್ಧಿಮೆ ನಿಧಿ ಅಡಿಯಲ್ಲಿ ರೂ. 1.75 ಕೋಟಿಗಳಿಗೆ ಟೆಂಡರ್ ಕರೆಯಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಂಪೂರ್ಣಗೊಳಿಸಿ ಮಾಸಿಕ ಬಾಡಿಗೆ ವಸೂಲಿಗೆ ಕ್ರಮ ವಹಿಸಲಾಗುವುದು.
  ನಿರ್ಮಾಣದ ಹಂತದಲ್ಲಿರುವ ಕದ್ರಿ ವಾಣಿಜ್ಯ ಸಂಕೀರ್ಣ ಕಾಮಗಾರಿಗೆ ಈಗಾಗಲೇ 5.04 ಕೋಟಿಗಳ ಬಿಲ್ಲು ಪಾವತಿ ಮಾಡಲಾಗಿದ್ದು. ಕಂಕನಾಡಿ ಮಾರುಕಟ್ಟೆ ನಿರ್ಮಾಣಕ್ಕೆ ರೂ. 12.13 ಕೊಟಿಗಳ ಬಿಲ್ಲು ಪಾವತಿ ಮಾಡಲಾಗಿದ್ದು ಈ ಎರಡು ಮಾರುಕಟ್ಟೆಗಳಿಗೆ ಏUIಆಈಅ ಮೂಲಕ ಸಾಫ್ಟ್ ಲೋನ್ ಪಡೆಯಲಾಗಿದ್ದು ಸಾಲದ ಒಡಂಬಡಿಕೆಯಂತೆ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಸ್ವೀಕರಿಸಿದ ಸಾಲದ ಮೇಲೆ ಬಡ್ಡಿಪಾವತಿ ಮಾಡಲಾಗುತ್ತಿದೆ. ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಸಂಪೂರ್ಣಗೊಳಿಸಲು ರೂ. 12.00 ಕೋಟಿ ಗಳನ್ನು ವ್ಯಯ ಮಾಡಲಾಗುವುದು.
  ಉದ್ಯಾನವನಗಳ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಸ್ಮಶಾನ ಚಿತಗಾರಗಳ ಅಭಿವೃದ್ಧಿ ಮತ್ತು ಕೊಳಗೇರಿ ಅಭಿವೃದ್ಧಿ.
  ಮಹಾನಗರ ಪಾಲಿಕೆವತಿಯಿಂದ ಕಟ್ಟಡಪರವಾನಿಗೆ ಮೂಲಕ ವಸೂಲಿ ಮಾಡುತ್ತಿರುವ ಗ್ರೀನರಿ ಶುಲ್ಕದಿಂದ ರೂ. 40.00 ಲಕ್ಷಗಳನ್ನು ಹಾಗೂ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ರೂ. 1.50 ಕೋಟಿ. ಅನುದಾನವನ್ನು ಉದ್ಯಾನವನಗಳ ಅಭಿವೃದ್ದಿಗೆ ನಿಗದಿಪಡಿಸಲಾಗಿರುತ್ತದೆ. ಹಾಗೂ ಸ್ಮಶಾನ / ಚಿತಗಾರಗಳ ಅಭಿವೃದ್ದಿಗೆ ರೂ. 2.00 ಕೋಟಿ ಅನುದಾನವನ್ನು ನಿಗದಿ ಪಡಿಸಲಾಗಿರುತ್ತದೆ.
  ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗಾಗಿ ಪಾಲಿಕೆ ಹಾಗೂ ಸಿಎಸ್‍ಆರ್ ನಿಧಿಗಳಲ್ಲಿ ನಿರ್ವಹಿಸಲಾಗುವುದು, ಮುಂದಿನ ಆರ್ಥಿಕ ವರ್ಷದಲ್ಲಿ ರೂ. 15.00 ಲಕ್ಷಗಳನ್ನು ಪಾಲಿಕೆ ನಿಧಿಯಿಂದ ಖರ್ಚು ಮಾಡಲಾಗುವುದು.
  ಮಹಾನಗರ ಪಾಲಿಕೆ ವ್ಯಾಪ್ತಿಯ 8 ಕೊಳಗೇರಿ ಪ್ರದೇಶಗಳಲ್ಲಿ ಪ್ರತೀ ಮುಂದಿನ ಆರ್ಥಿಕ ವರ್ಷದಲ್ಲಿ ಒಂದು ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸಲು ರೂ. 25.00 ಲಕ್ಷಗಳನ್ನು 15ನೇ ಹಣಕಾಸು ಯೋಜನೆಯಡಿಯಲ್ಲಿ ಕಾಯ್ದಿರಿಸಲು ಕ್ರಮವಹಿಸಲಾಗುವುದು.
  ಪರಿ ಸಮಾಪ್ತಿ: ಮಂಗಳೂರು ಮಹಾನಗರದ ನಾಗರಿಕರಿಗೆ ಉತ್ತಮ ಸೇವೆಯನ್ನು ಹಾಗೂ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಕಲ್ಯಾಣ ಕಾರ್ಯಕ್ರಮಗಳು, ನಿರ್ವಹಣಾ ಕಾಮಗಾರಿಗಳು ಹಾಗೂ ಅಗತ್ಯಕ್ಕೆ ತಕ್ಕಂತೆ ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಅನುದಾನದ ಆದ್ಯತೆಯನ್ನು ನೀಡಿರುತ್ತೇವೆ. ಅವಶ್ಯಕವಾದ ಮತ್ತು ಅನಿವಾರ್ಯದ ವೆಚ್ಚಗಳಿಗೆ ಆಯವ್ಯಯದಲ್ಲಿ ಅನುದಾನವನ್ನು ಆದ್ಯತೆ ಮೇರೆಗೆ ಒದಗಿಸಿ ಆಯವ್ಯಯವನ್ನು ಮಂಡಿಸಿರುತ್ತೇನೆ.
  ಈ ಆಯವ್ಯಯ ತಯಾರಿಕೆಗೆ ಮತ್ತು ಮಂಡನೆಗೆ ಸಹಕಾರ ನೀಡಿದ ಪೂಜ್ಯಮಹಾಪೌರರು, ಉಪ-ಮಹಾಪೌರರು, ಮುಖ್ಯಸಚೇತಕರು, ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಮಂಗಳೂರು ನಗರದ ಮಾನ್ಯ ಲೋಕ ಸಭಾ ಸದಸ್ಯರಿಗೂ, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರಿಗೂ ಹಾಗೂ ಪಾಲಿಕೆಯ ಎಲ್ಲಾ ಸದಸ್ಯ ಮಿತ್ರರಿಗೂ ಮತ್ತು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರುಗಳಿಗೆ ಹಾಗೂ ಪಾಲಿಕೆ ಅಧಿಕಾರಿ ವೃಂದದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
  2021-22 ನೇ ಸಾಲಿನ ಪರಿಷ್ಕೃತ ಆಯವ್ಯಯ ಮತ್ತು 2022-23 ನೇ ಸಾಲಿನ ಆಯವ್ಯಯ ಅಂದಾಜುಗಳಿಗೆ ಪಾಲಿಕೆ ಪರಿಷತ್ ಸಭೆಯ ಅನುಮೋದನೆ ನೀಡಬೇಕೆಂದು ಕೋರುತ್ತೇನೆ ಎಂದು ಹೇಳಿದರು.

  DAKSHINA KANNADA

  ಮಳೆಗಾಲದ ಸವಾಲು ಎದುರಿಸಲು ಮೆಸ್ಕಾಂನಿಂದ ವಿಶೇಷ ಕಾರ್ಯಪಡೆ; 800 ಸಿಬ್ಬಂದಿ, 53 ವಾಹನಗಳ ನಿಯೋಜನೆ

  Published

  on

  ಮ೦ಗಳೂರು: ವಿದ್ಯುತ್‌ ಪೂರೈಕೆಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ದವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿದ್ಯಚ್ಛಕ್ತಿ ಸಬರಾಜು ಕಂಪನಿ (ಮೆಸ್ಕಾಂ) ವ್ಯವಸ್ಥಾಪಕ ನಿದೇ೯ಶಕರಾದ ಡಿ.ಪದ್ಮಾವತಿ ಅವರು ತಿಳಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳಿಗೆ ಒಟ್ಟು 800 ಮ೦ದಿಯನ್ನೊಳಗೊಂಡ ವಿಶೇಷ ಕಾಯ೯ಪಡೆ ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಒಟ್ಟು 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

  ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾಗ೯ದಲ್ಲಿ ಅಪಾಯ, ಅವಘಡಗಳಾದಲ್ಲಿ ಸ೦ಪಕಿ೯ಸಬೇಕಾದ ದೂರವಾಣಿ ಸ೦ಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾ೦ ಸಹಾಯವಾಣಿ 1912 ಅನ್ನು ಕೂಡಾ ಸ೦ಪಕಿ೯ಸಬಹುದಾಗಿದೆ ಎ೦ದು ತಿಳಿಸಿದ್ದಾರೆ.

  ವಿದ್ಯುತ್‌ ಸ೦ಪಕ೯ ಹಾಗೂ ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮವಹಿಸುವ೦ತೆ ಮೆಸ್ಕಾ೦ ಎಲ್ಲಾ ಮುಖ್ಯ ಇಂಜಿನಿಯರ್‌ (ವಿ), ಅಧೀಕ್ಷಕ ಇಂಜಿನಿಯರ್‌ರವರುಗಳು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಈಗಾಗಲೇ ಮಾಡಲಾಗಿದೆ.ಮಳೆಗಾಲದ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಸಲಕರಣೆಗಳನ್ನು ಮೆಸ್ಕಾ೦ನ ಎಲ್ಲಾ ವಿಭಾಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎ೦ದು ಅವರು ವಿವರಿಸಿದ್ದಾರೆ.

  ವಿಶೇಷ ಕಾರ್ಯಪಡೆ ಹಾಗೂ ವಾಹನಗಳು

  – ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ, ಅತ್ತಾವರ- 40 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕಾವೂರು- 71 ಮ೦ದಿಯ ಕಾರ್ಯಪಡೆ, 6 ವಾಹನಗಳು; ಪುತ್ತೂರು- 95 ಮ೦ದಿಯ ಕಾಯ೯ಪಡೆ,
  5 ವಾಹನಗಳು; ಬಂಟ್ವಾಳ- 113 ಮ೦ದಿಯ ಕಾಯ೯ಪಡೆ, 6 ವಾಹನಗಳು.
  – ಉಡುಪಿ ಜಿಲ್ಲೆಗೆ ಸ೦ಭವಿಸಿದ೦ತೆ ಉಡುಪಿ-65 ಮ೦ದಿಯ ಕಾಯ೯ಪಡೆ,  5 ವಾಹನಗಳು; ಕಾರ್ಕಳ-48 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕುಂದಾಪುರ- 76 ಮ೦ದಿಯ ಕಾಯ೯ಪಡೆ, 2 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
  – ಶಿವಮೊಗ್ಗಕ್ಕೆ ಜಿಲ್ಲೆಗೆ ಸ೦ಭವಿಸಿದ೦ತೆ, ಶಿವಮೊಗ್ಗ- 42 ಮ೦ದಿಯ ಕಾಯ೯ಪಡೆ, 2 ವಾಹನಗಳು; ಶಿಕಾರಿಪುರ- 21 ಮ೦ದಿಯ ಕಾಯ೯ಪಡೆ,  2 ವಾಹನಗಳು; ಭದ್ರಾವತಿ- 12ಮ೦ದಿಯ ಕಾಯ೯ಪಡೆ,  1  ವಾಹನ, ಸಾಗರ- 67 ಮ೦ದಿಯ ಕಾಯ೯ಪಡೆ,  6 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
  – ಚಿಕ್ಕಮಗಳೂರು ಜಿಲ್ಲೆಗೆ ಸ೦ಭವಿಸಿದ೦ತೆ, ಚಿಕ್ಕಮಗಳೂರು- 80 ಮ೦ದಿಯ ಕಾಯ೯ಪಡೆ,  4 ವಾಹನಗಳು; ಕೊಪ್ಪ- 51 ಮ೦ದಿಯ ಕಾಯ೯ಪಡೆ, 3 ವಾಹನಗಳು; ಕಡೂರು 19 ಮ೦ದಿಯ ಕಾಯ೯ಪಡೆ, ಹಾಗೂ  3 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.

  ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾ೦ ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸ೦ಭವಿಸಿದ್ದು, ಇವುಗಳನ್ನು ಸರಿಪಡಿಸುವ ಕಾಯ೯ ಸಮರೋಪಾದಿಯಲ್ಲಿ ನಡೆದಿದೆ. ಇದರ ಜತೆ ಜತೆಗೆ ಮುಂಗಾರು ಅವಧಿಯ ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
  – ಡಿ.ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

  Continue Reading

  DAKSHINA KANNADA

  ಕುಟುಂಬ ರಾಜಕಾರಣದ ಬಗ್ಗೆ ಮತ್ತೆ ಕಿಡಿಕಾರಿದ ಕೆಎಸ್ ಈಶ್ವರಪ್ಪ

  Published

  on

  ಮಂಗಳೂರು: ಕರ್ನಾಟಕದಲ್ಲಿ ಅಪ್ಪ ಮಕ್ಕಳನ್ನು ಪಕ್ಷದಿಂದ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಪಕ್ಷದ ಶುದ್ಧೀಕರಣ ಆಗಬೇಕು. ಖಂಡಿತಾ ಆಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

   

   

  ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ರಘುಪತಿ ಭಟ್ ಪರ ಅವರು ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸಂಸ್ಕೃತಿ ಕರ್ನಾಟಕ ಬಿಜೆಪಿಯಲ್ಲಿ ಬಂದಿರೋದು ನೋವು ತಂದಿದೆ ಎಂದರು.

  ಕರ್ನಾಟಕದಲ್ಲಿ ಹಿಂದುತ್ವ ಹಿಂದೆ ಸರಿದು ಜಾತೀಯತೆಗೆ ಸರಿಯುತ್ತಿರುವ ಸಂದರ್ಭ, ಪಕ್ಷ, ಹಿಂದುತ್ವ ಎಂದು ಬಯಸುವ ಎಲ್ಲ ಕಾರ್ಯಕರ್ತರು ರಘುಪತಿ ಭಟ್ ಪರ ಕೆಲಸ ಮಾಡಬೇಕು. ಬಿಜೆಪಿ ಶುದ್ಧೀಕರಣ ಆಗಬೇಕು. ರಘುಪತಿ ಗೆಲ್ಲುತ್ತಾರೆ. ಹಿಂದುತ್ವಕ್ಕೆ ಆಗುತ್ತಿರುವ ಅವಮಾನ, ರಘುಪತಿ ಭಟ್ ಹಾಗೂ ನನಗೆ ಆಗಿರುವ ಅನ್ಯಾಯ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಬಂದ ಅಭ್ಯರ್ಥಿ ಗೆ ಟಿಕೆಟ್ ನೀಡಿರುವುದಕ್ಕೆ ಅರ್ಥವೇ ಇಲ್ಲ. ಹಿಂದುತ್ವದ ನೆಲೆ ಸ್ವಾರ್ಥಿಗಳ ಕೈ ಸೇರಿದೆ. ಇದನ್ನು ಮತ್ತೆ ಪಡೆಯಲು ಎಲ್ಲರೂ ಕೆಲಸ ಮಾಡಬೇಕು ಎಂದರು.

  ಇದು ವಿಶೇಷವಾದ ಚುನಾವಣೆ. ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತದಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದರೆ ರಾಜ್ಯದಲ್ಲಿ ಅದಕ್ಕೆ ತಿಲಾಂಜಲಿ ಇಟ್ಟು ಕಾರ್ಯ ನಿರ್ವಹಿಸುತ್ತಿದೆ. ಜನತಾ ಪಕ್ಷ ಕಟ್ಟಿದ್ದು ಇತಿಹಾಸ. ವಿಶ್ವವನ್ನು ಒಂದು ಗೂಡಿ ಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕೀಯದ ವಿರುದ್ಧ ಕೆಲಸ ಆಗುತ್ತಿದ್ದರೆ, ಕರ್ನಾಟಕದಲ್ಲಿ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ಇದರ ನೋವಲ್ಲಿ ಕಾರ್ಯಕರ್ತರಿದ್ದಾರೆ ಎಂದರು.

  ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ವಿಧಾನಸಭಾ ಚುನಾವಣೆಯ ವೇಳೆಯೂ 45 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ಉಡುಪಿಯ ರಘುಪತಿ ಭಟ್ ಗೆ ನೋವಾಗಿದೆ. ನನಗಾದರೂ ದೆಹಲಿಯಿಂದ ಕರೆ ಬಂದಿತ್ತು. ರಘುಪತಿ ಭಟ್ ಗೆ ಅದೂ ಬಂದಿಲ್ಲ. ಅವರು ಪಕ್ಷ ನಿಷ್ಠೆ ಬಿಟ್ಟಿಲ್ಲ. ಈ ಚುನಾವಣೆಯಲ್ಲಿ ಮತ್ತೆ ಅನ್ಯಾಯವಾಗಿದೆ ಎಂದರು.

  Continue Reading

  LATEST NEWS

  ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ : ಇಬ್ಬರು ಎಸ್‌ಐಟಿ ವಶಕ್ಕೆ

  Published

  on

  ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಶ್ಲೀಲ ವಿಡಿಯೋ ಹರಿಬಿಟ್ಟವರನ್ನು ಎಸ್​ಐಟಿ ಬಂಧಿಸಿದೆ. ಹೈಕೋರ್ಟ್​​ಗೆ ಬಂದಿದ್ದ ನವೀನ್ ಗೌಡ, ಚೇತನ್​ನನ್ನು ಎಸ್​ಐಟಿ ಮಂಗಳವಾರ (ಮೇ 28) ಬಂಧಿಸಿದೆ.
  ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ನವೀನ್ ಗೌಡ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದು ಭಾರೀ ಚರ್ಚೆಗೆ ಹುಟ್ಟು ಹಾಕಿತ್ತು.


  ಆತ ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಫೇಸ್​ಬುಕ್​ನಲ್ಲಿ ಮೊದಲ ಪೋಸ್ಟ್ ಮಾಡಿದ್ದ. ನಂತರ ಸ್ವಲ್ಪ ಹೊತ್ತಿನಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಬಿಡುಗಡೆಗೆ ಕ್ಷಣ ಗಣನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್, ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು.

  ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್​ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದ. ಈ ಸಂಬಂಧ ಎಸ್​ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದ್ರೆ, ನವೀನ್​ ಗೌಡ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
  ಈ ಇಬ್ಬರು ಆರೋಪಿಗಳು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಕಡೆ ಬಂದಿದ್ದ ವೇಳೆಯೇ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

  ಇನ್ನು ಪ್ರಕರಣದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿದೇಶ ಸೇರಿದ್ದಾರೆ. ಸೋಮವಾರ(ಮೇ 27) ವೀಡಿಯೋ ಹರಿಬಿಟ್ಟು, ಮೇ 31 ರಂದು ಎಸ್ ಐ ಟಿ ಮುಂದೆ ಹಾಜಾರಾಗುವುದಾಗಿ ತಿಳಿಸಿದ್ದರು.

  Continue Reading

  LATEST NEWS

  Trending