Connect with us

DAKSHINA KANNADA

ಮಂಗಳೂರು: ಚಿನ್ನಾಭರಣ ಮಳಿಗೆಗೆ ನುಗ್ಗಿ ಯುವ ಜೋಡಿಗೆ ಹಲ್ಲೆ ಪ್ರಕರಣ-ನಾಲ್ವರು ಅರೆಸ್ಟ್

Published

on

ಮಂಗಳೂರು: ಮಂಗಳೂರಿನ ಕಂಕನಾಡಿ ಚಿನ್ನದ ಮಳಿಗೆಯೊಂದಕ್ಕೆ ನುಗ್ಗಿ ಹಿಂದೂ ಮುಸ್ಲಿಂ ಜೋಡಿಗೆ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಸಂಘಟನೆಯೊಂದರ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.


ಚೇತನ್‌ ಕುಮಾರ್ ಕಂಕನಾಡಿ (39), ಪ್ರಕಾಶ್ ಕಂಕನಾಡಿ (34), ಗಣೇಶ್ ಅತ್ತಾವರ (35) ಮತ್ತು ಶಿಬಿನ್ ಪಡಿಕಲ್ (36) ಬಂಧಿತ ಆರೋಪಿಗಳು.

ಮಂಗಳೂರು ಕಂಕನಾಡಿ ಬಳಿಯ ಚಿನ್ನದ ಮಳಿಗೆಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಯುವಕ ಜತೆಯಾಗಿ ಕೆಲಸ ಮಾಡುತ್ತಿದ್ದು ಇಬ್ಬರು ಸಲುಗೆಯಿಂದ ಇರುವುದನ್ನು ಸಂಘಟನೆ ಕಾರ್ಯಕರ್ತರು ಗಮನಿಸಿದ್ದರು.

ಇದೇ ವಿಚಾರದಲ್ಲಿ ಡಿ.8ರಂದು ಸಂಘಟನೆ ಕಾರ್ಯಕರ್ತರು ಚಿನ್ನದ ಮಳಿಗೆಗೆ ಏಕಾಏಕಿ ನುಗ್ಗಿ ಯುವಜೋಡಿಗೆ ಹಲ್ಲೆ ನಡೆಸಿದ್ದರು.

DAKSHINA KANNADA

“ಸೆಕ್ಸ್‌” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್‌..!

Published

on

ಮಂಗಳೂರು ( ಪಶ್ಚಿಮ ಬಂಗಾಳ ) : ಮಾಜಿ  ಸಂಸದೆ ಮಹುವಾ ಮೋಯಿತ್ರಾ ( Mahua Moitra ) ವಿವಾದದ ಕಾರಣದಿಂದ ಸಂಸತ್‌ನಿಂದ ಉಚ್ಚಾಟಿತರಾಗಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದರು ಎಂಬ ಆರೋಪ ಅವರ ಮೇಲಿತ್ತು. ಈಗ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದು ಅವರ ಹೇಳಿಕೆ ಬಾರಿ ವೈರಲ್ ಆಗಿದೆ. ಕೃಷ್ಣ ನಗರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿರುವ ಅವರನ್ನ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದಾರೆ. ಈ ವೇಳೆ ಪತ್ರಕರ್ತ ನಿಮ್ಮ ಸಾಮಾರ್ಥ್ಯದ ರಹಸ್ಯ ಏನು ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೊಯಿತ್ರಾ ಅವರು “ಸೆಕ್ಸ್‌” ಎಂದು ಹೇಳಿರುವ ವಿಡಿಯೋವನ್ನು ಮೋದಿ ಕಾ ಪರಿವಾರ ವೈರಲ್ ಮಾಡಿದೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಂಸದೆಯಾಗಿ ಬಹಿರಂಗವಾಗಿ ಹೀಗೆ ಹೇಳುವುದು ತಪ್ಪು ಎಂದು ಖಂಡಿಸಿದ್ದಾರೆ.

ನ್ಯೂಸ್‌ ದಿ ಟ್ರುತ್‌ ಎಂಬ ಮಾದ್ಯಮ ಮಾಡಿದ ಸಂದರ್ಶನ

ಸ್ಪಷ್ಟನೆ ನೀಡಿದ ಸಂದರ್ಶನ ನೀಡಿದ ವರದಿಗಾರ..!

“ಮಹುವಾ ಮೊಯಿತ್ರಾ ಅವರನ್ನು ಸಂದರ್ಶನ ಮಾಡಿದ್ದು ನಾನೇ. ನಿಮ್ಮ ಸಾಮರ್ಥ್ಯದ ಗುಟ್ಟೇನು ಎಂಬುದಾಗಿ ಕೇಳಿದೆ. ಅದಕ್ಕೆ ಅವರು, ಎಗ್ಸ್‌ (ಮೊಟ್ಟೆಗಳು) ಎಂಬುದಾಗಿ ಎರಡು ಬಾರಿ ಉತ್ತರಿಸಿದರು. ಆದರೆ, ಭಕ್ತ ಮಂಡಳಿಯು ಎಗ್ಸ್‌ ಎಂಬುದನ್ನು ಸೆಕ್ಸ್‌ ಎಂಬುದಾಗಿ ತಿರುಚಿದೆ” ಎಂಬುದಾಗಿ ನ್ಯೂಸ್‌ ದಿ ಟ್ರುತ್‌ ಎಂಬ ಮಾಧ್ಯಮ ಸಂಸ್ಥೆ ವರದಿಗಾರ ತಮಲ್‌ ಸಾಹ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ವರದಿಗಾರ ಸ್ಪಷ್ಟನೆ ನೀಡುವ ಹೊತ್ತಿಗೆ ವಿಡಿಯೊ ಭಾರಿ ವೈರಲ್‌ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

 

Continue Reading

BELTHANGADY

ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..!

Published

on

ಬೆಳ್ತಂಗಡಿ : ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದೆಂದರೆ ಹೆಚ್ಚಿನವರಿಗೆ ಇಷ್ಟ. ಅದರಲ್ಲೂ ನಾಯಿ ಪ್ರಿಯರು ಅನೇಕ ಮಂದಿ ಇದ್ದಾರೆ. ತಮ್ಮ ಮನೆಗಳಲ್ಲಿ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಾರೆ. ಈ ನಾಯಿಗಳನ್ನು ಪ್ರೀತಿಸಿದಾಗ ಅವೂ ಅದಕ್ಕೆ ಪ್ರತಿಯಾಗಿ ಪ್ರೀತಿ ಕೊಡೋದು ಸಹಜ. ಆದರೆ, ಅದಕ್ಕೆ ವಿರುದ್ಧವಾದ ಘಟನೆಯೂ ನಡೆಯಬಹುದು ಎಂಬುದಕ್ಕೆ ಗುರುವಾರ(ಏ.18) ಬೆಳ್ತಂಗಡಿಯಲ್ಲಿ ನಡೆದ ಈ ಸುದ್ದಿ ನಿದರ್ಶನವಾಗಿದೆ.


ಮನೆ ಮಾಲಕಿ ತನ್ನ ಸಾಕು ನಾಯಿಯನ್ನು ಮುದ್ದಾಡುವಾಗ ಅದು ಏಕಾಏಕಿ ದಾ*ಳಿ ಮಾಡಿ, ತಲೆ ಭಾಗವನ್ನು ಸೀಳಿ ಹಾಕಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಮುಂಡಾಜೆ ಗ್ರಾಮ ನಿಡಿಕಲ್ ಓಂಕಾರ್ ನಿವಾಸಿ ದಿವಂಗತ ರಾಮ್ ದಾಸ್ ಎಂಬವರ ಪತ್ನಿ 49 ವರ್ಷದ ಪೂರ್ಣಿಮಾ ಗಂಭೀ*ರ ಗಾ*ಯಗೊಂಡ ಮಹಿಳೆ.

ಇದನ್ನೂ ಓದಿ : Viral Video; ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ

ಪೂರ್ಣಿಮಾ ತನ್ನ ಮನೆಯ ಸಾಕು ನಾಯಿಯನ್ನು ಎಂದಿನಂತೆ ಮುದ್ದಾಡುತ್ತಿದ್ದರು. ಈ ವೇಳೆ ಅವರು ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ, ಸಾಕು ನಾಯಿ ಪೂರ್ಣಿಮಾ ಮೇಲೆ ದಾ*ಳಿ ನಡೆಸಿದೆ. ತಲೆ ಭಾಗ ಸೀ*ಳಿ ಹಾಕಿದೆ. ಕೈ ಕಚ್ಚಿ ಗಂಭೀ*ರ ಗಾ*ಯಗೊಳಿಸಿದೆ. ಸದ್ಯ, ಪೂರ್ಣಿಮಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

DAKSHINA KANNADA

ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?

Published

on

ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಾರಾಧನೆ ವಿಶ್ವ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದ್ದು, ಸಾವಿರಾರು ಜನ ತುಳುನಾಡ ದೈವಗಳನ್ನು ನಂಬಲು ಆರಂಭಿಸಿದ್ದಾರೆ. ಆದ್ರೆ ದೈವಗಳನ್ನು ನಂಬುವ ಬಗೆ ಹೇಗೆ ಅನ್ನೋದು ಗೊತ್ತಿಲ್ಲದೆ ಇದ್ರೂ ಭಕ್ತಿಯಿಂದ ಕೈ ಮುಗಿದವರನ್ನು ದೈವಗಳು ಎಂದಿಗೂ ಕೈ ಬಿಟ್ಟಿಲ್ಲ. ಹೀಗಾಗಿ ಸೆಲೆಬ್ರೆಟಿಗಳೂ ಸೇರಿದಂತೆ ಪ್ರತಿನಿತ್ಯ ಹಲವಾರು ಜನ ದೈವ ಸಾನಿಧ್ಯಕ್ಕೆ ಬಂದು ಭಕ್ತಿಯಿಂದ ಕೈ ಮುಗಿಯುತ್ತಿದ್ದಾರೆ. ಅದರಲ್ಲೂ ಕುತ್ತಾರು ಕೊರಗಜ್ಜನ ಕ್ಷೇತ್ರವಂತೂ ನಿತ್ಯ ಹೊರ ಜಿಲ್ಲೆಯ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

ದೈವಾರಾಧನೆಯೇ ಪ್ರಮುಖವಾಗಿರುವ ತುಳುನಾಡಿನಲ್ಲಿ ಜನ ದೇವರಿಗಿಂತ ಹೆಚ್ಚು ಭಯ ಪಡೋದು ದೈವಗಳಿಗೆ. ಪ್ರಕೃತಿಯ ಆರಾಧನೆಯ ಮೂಲಕ ಇಲ್ಲಿನ ನೆಲ, ಜಲ, ಹಾಗೂ ಪರಿಸರ ಎಲ್ಲದರಲ್ಲೂ ದೈವಗಳನ್ನು ಕಾಣುವ ಸಂಸ್ಕೃತಿ ತುಳುನಾಡಿನದ್ದು. ಸಾವಿರದ ಎರಡು ದೈವಗಳು ಇಲ್ಲಿ ಆರಾಧಿಸಲ್ಪಡುತ್ತದೆ ಅನ್ನೋದು ಇತ್ತೀಚಿನ ವರೆಗೆ ಸಂಶೋಧಕರು ಕಂಡು ಕೊಂಡಿರೋ ಸತ್ಯ ಕೂಡ.

ಕೊರಗಜ್ಜ ಯಾರು ಏನು ಅನ್ನೋದು ಇಲ್ಲಿ ಮುಖ್ಯವಾಗದೇ ಇದ್ರೂ ಕೊರಗಜ್ಜ ಸಮಸ್ಯೆಗಳಿಗೆ ಪರಿಹಾರ ನೀಡ್ತಾನೆ ಅನ್ನೋದು ನಂಬಿ ಬರುವ ಭಕ್ತರಿಗೆ ಇರುವ ಆಶಾಕಿರಣ. ಯಾವುದೇ ಮದ್ಯವರ್ತಿ ಇಲ್ಲದೆ ತಾವೇ ಕೊರಗಜ್ಜನಿಗೆ ಪೂಜೆ ಸಲ್ಲಿಸಿ ಅವರಿಗೆ ಇಷ್ಟವಾದುದನ್ನು ಕೊಟ್ಟು ಕೈ ಮುಗಿದು ಬೇಡಲು ಇಲ್ಲಿ ಅವಕಾಶ ಇದೆ. ಕೊರಗಜ್ಜನಿಗೆ ಮೇಲು ಕೀಳೆಂಬ ಭೇದ-ಭಾವ ಇಲ್ಲ. ಇನ್ನು ಕೊರಗಜ್ಜ ಶ್ರೀಮಂತನಿಂದಲೂ ಬಡವನಿಂದಲೂ ಕೇಳೋದು ಎಲೆ ಅಡಿಕೆ , ಚಕ್ಕುಲಿ, ಹಾಗೂ ಒಂದು ಸ್ವಲ್ಪ ಮದ್ಯ ಅಷ್ಟೇ…

ಕೇವಲ ಎಲೆ-ಅಡಿಕೆಗೆ ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹಾರ ಮಾಡೊ ದೈವ ಎಂದರೆ ಸ್ವಾಮಿ ಕೊರಗಜ್ಜ. ಅಜ್ಜನನ್ನು ಆರಾಧಿಸಬೇಕೆಂದರೆ ದೊಡ್ಡ ದೊಡ್ಡ ದೈವ ಸ್ಥಾನಗಳೇ ಬೇಕೆಂದಿಲ್ಲ. ಕೇವಲ ಮನಸಿನಲ್ಲೇ ಸ್ವಾಮಿ ಕೊರಗಜ್ಜ ಅಂತ ಕಷ್ಟದ ಸಮಯದಲ್ಲಿ ನೆನೆಸಿದ್ರೆ ಸಾಕು ಅದ್ಯಾವುದೋ ರೂಪದಲ್ಲಿ ಬಂದು ಕಷ್ಟ ಪರಿಹಾರ ಮಾಡ್ತಾರೆ ಅನ್ನೋ ನಂಬಿಕೆ ತುಳುನಾಡಿನ ಜನರಲ್ಲಿ ಇದೆ. ಇನ್ನು ಕೊರಗಜ್ಜನ ಹಲವು ಕ್ಷೇತ್ರಗಳು ತುಳುನಾಡಿನಲ್ಲಿದ್ದು ಅಲ್ಲಿಗೆ ಎಲೆ ಅಡಿಕೆ, ಚಕ್ಕುಲಿ, ಮದ್ಯದ ಹರಕೆ ಹೇಳಿಕೊಂಡ್ರೆ ಮುಗಿತು.

ಇನ್ನು ಕೊರಗಜ್ಜನಿಗೆ ಅಗೇಲು ನೀಡುವ ಸಂಪ್ರದಾಯವಿದ್ದು ಅಲ್ಲಿ ಕೊರಗಜ್ಜನಿಗೆ ಕೋಡೊದು ಅನ್ನ, ಬಸಳೆಯ ಸಾರು, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಬೇಯಿಸಿದ ಮೊಟ್ಟೆ, ನಿಂಬೆ ಹಣ್ಣಿನ ಉಪ್ಪಿನಕಾಯಿ ಹಾಗೂ ಮದ್ಯ ಮಾತ್ರ. ಇದಿಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವ ಕೊರಗಜ್ಜ “ಅಜ್ಜಾ ಕಾಪುಲೆ ನಮನ್.. ಈರೆಗ್ ಬಾಜೆಲ್ ಕೊರ್ಪೆ” ಅಂತ ಹೇಳಿದರೆ ಸಾಕು ಕ್ಷಣ ಮಾತ್ರದಲ್ಲಿ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾನೆ.

ನೀವು ಕೊರಗಜ್ಜನ ಫೋಟೊವನ್ನು ಮನೆಯಲ್ಲಿ ಇಡಬಹುದಾ.. ಎಂದು ನೋಡುವುದಾದರೆ ಅಜ್ಜನ ಫೋಟೋ ಮಾತ್ರವಲ್ಲ ಯಾವ ದೈವಗಳ ಫೋಟೋವನ್ನೂ ಮನೆಯಲ್ಲಿ ಇಟ್ಟು ಆರಾಧನೆ ಮಾಡುವ ಪದ್ಧತಿ ಅಷ್ಟು ಬಳಕೆಯಲ್ಲಿಲ್ಲ. ಫೋಟೋ ಇಟ್ಟು ಆರಾಧನೆ ಮಾಡಬೇಕೆಂದು ಎಲ್ಲೂ ಹೇಳಿಲ್ಲ. ತಿನ್ನುವಂತಹ ಆಹಾರದಲ್ಲಿ, ನಾವು ನೋಡುವಂತಹ ನೋಟದಲ್ಲಿ, ನಾವು ಮಾಡುವ ಒಳ್ಳೆಯ ಕೆಲಸದಲ್ಲಿ, ಅಜ್ಜನ ಪ್ರಸಾದದಲ್ಲಿ ಅಜ್ಜ ಇರುತ್ತಾನೆ. ಹೀಗಾಗಿ ಅಜ್ಜನ ಫೋಟೋ ಇಟ್ಟು ಪೂಜಿಸುವ ಕ್ರಮ ಇಲ್ಲ. ಪವಿತ್ರವಾದ ಹೃದಯದಲ್ಲಿ ನಾವು ಯಾವ ದೈವವನ್ನು ನಂಬುತ್ತೇವೊ ಆ ದೈವಕ್ಕೆ ನೆಲೆ ಕೊಟ್ಟರೆ ನಾವು ಎಲ್ಲಿ ನಿಂತು ಕೈ ಮುಗಿದರೂ ಕೂಡ ಕೊರಗಜ್ಜ ಆಗಲಿ ಅಥವಾ ಇನ್ನು ಯಾವೂದೇ ದೈವವಾಗಲಿ ಅಲ್ಲಿ ಬಂದು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆ.

Continue Reading

LATEST NEWS

Trending