Connect with us

    DAKSHINA KANNADA

    ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು

    Published

    on

    ಮಂಗಳೂರು; ಕೌನ್ ಬನೇಗಾ ಕರೋಡ್ಪತಿಯಲ್ಲಿ ಭಾಗವಹಿಸಬೇಕೆಂದು ಎರಡು ವರ್ಷದಿಂದ ಮಾಡುತ್ತಿದ್ದ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದಂತಾಗಿದೆ. ಕಳೆದ ಬಾರಿ 0.03 ಸೆಕೆಂಡ್ ಅಂತರದಿಂದ ಜಸ್ಟ್ ಮಿಸ್ ಆಗಿದ್ದು, ಈ ವರ್ಷ ಆ ಸುವರ್ಣಾವಕಾಶ ದೊರೆತು ತಂದೆಯ ಆಸೆಯೂ ನೆರವೇರಿದಂತಾಗಿದೆ.

    ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕೆಬಿಸಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ 11 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದ ಪಂಪ್‌ವೆಲ್ ನಿವಾಸಿ ಅಪೂರ್ವ ಶೆಟ್ಟಿ.
    ನಿನ್ನೆ (ಸೆ.27) ಅವರ ಕಾರ್ಯಕ್ರಮವು ಪ್ರಸಾರಗೊಂಡಿದ್ದು, ಅಪೂರ್ವ ಶೆಟ್ಟಿಯವರು ಖುಷಿಯಿಂದ ತೇಲಾಡುತ್ತಿದ್ದಾರೆ. ತಾನು ಕೆಬಿಸಿ 16 ರಲ್ಲಿ 11 ಪ್ರಶ್ನೆಗಳಿಗಾದರೂ ಉತ್ತರಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
    ಪಧವೀದರರಾಗಿರುವ ಅಪೂರ್ವ ಶೆಟ್ಟಿ ಸದ್ಯ ಯುಪಿಎಸ್ಸಿ ತಯಾರಿಯಲ್ಲಿದ್ದಾರೆ.

    DAKSHINA KANNADA

    ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ ಆರೋಪ: ಜೈ ತುಳುನಾಡು ಸಂಘಟನೆಯಿಂದ ದೂರು

    Published

    on

    ಇತ್ತೀಚೆಗೆ ಸಾರ್ವಜನಿಕವಾಗಿ ತುಳುನಾಡ ದೈವಗಳ ಅವಹೇಳನ ನಡೆಯುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಕೆಲ ದಿನಗಳ ಹಿಂದೆ ಬೆಂಗಳೂರಿನ ಡ್ಯಾನ್ಸ್ ಅಕಾಡೆಮಿಯೊಂದರಲ್ಲಿ ಪಂಜುರ್ಲಿ ದೈವದ ವೇಷ ಹಾಕಿ ನರ್ತಿಸಿದ್ದೂ ಅಲ್ಲದೆ ಆಕ್ಷೇಪ ವ್ಯಕ್ತಪಡಿಸಿದ್ದ ಕರಾವಳಿ ಯುವಕರನ್ನ ಸಭಾಂಗಣದಿಂದ ಹೊರ ಹಾಕಲಾಗಿತ್ತು. ಇದಾದ ಬಳಿಕ ಗಣೇಶೋತ್ಸವದಲ್ಲೂ ಇಂತಹದೇ ಘಟನೆ ಮರುಕಳಿಸಿತ್ತು. ಮತ್ತಿಕೆರೆ ಯಲ್ಲಮ್ಮ ದೇವಸ್ಥಾನದ ಅರ್ಚಕ ವೆಂಕಟೇಶ್ ಎಂಬವರು ದೈವದ ವೇಷ ಧರಿಸಿ ಅಸಭ್ಯವಾಗಿ ನೃತ್ಯ ಮಾಡಿದ್ದರು. ಇದಕ್ಕೂ ಕೂಡಾ ಸ್ಥಳೀಯವಾಗಿದ್ದ ಕರಾವಳಿಯ ಯುವಕರ ವಿರೋಧ ವ್ಯಕ್ತಪಡಿಸಿದ್ದರು.

    ಇದೀಗ ಜೈ ತುಳುನಾಡು ಎಂಬ ಸಂಘಟನೆ ಯಶವಂತರ ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದೆ. ಮತ್ತಿಕೆರೆ ಯಲ್ಲಮ್ಮ ದೇವಸ್ಥಾನದ ಅರ್ಚಕರು ಉದ್ದೇಶ ಪೂರ್ವಕವಾಗಿ ತುಳುನಾಡ ದೈವಗಳಿಗೆ ಅಪಚಾರ ಮಾಡಿದ್ದು, ದೈವಾರಾಧಕರಾದ ನಮ್ಮ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಮುಂದೆ ಇಂತಹ ದೈವದ ಅವಹೇಳನ ಪುನಾರಾವರ್ತನೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    Continue Reading

    DAKSHINA KANNADA

    ಕೊ*ಲೆ ಮಾಡಿ ತಲೆಮರೆಸಿದ್ದ ಆ*ರೋಪಿ; ಎರಡು ವರ್ಷದ ಬಳಿಕ ಬಂಧನ

    Published

    on

    ಮಂಗಳೂರು: ಕೊಡಗು ಜಿಲ್ಲೆಯ ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ 2022ರ ಫೆಬ್ರವರಿ ತಿಂಗಳಿನಲ್ಲಿ ನಡೆದ ಮಹಿಳೆಯ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆ*ರೋಪಿಯನ್ನು ಕೊಡಗು ಪೊಲೀಸರು ಸುಮಾರು ಎರಡು ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಿದ್ದಾರೆ.

    ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜೇಶ್‌ (42) ಬಂಧಿತ ಆ*ರೋಪಿ. ಅದೇ ಗ್ರಾಮದ ನಿವಾಸಿ ಪ್ರೇಮಾ ಎಂಬಾಕೆಯನ್ನು ಕ*ತ್ತಿಯಿಂದ ಕ*ಡಿದು ಕೊ*ಲೆ ಮಾಡಿದ್ದಲ್ಲದೆ ಜತೆಗಿದ್ದ ಪ್ರೇಮಾ ಅವರ ಸಹೋದರಿ ವೀಣಾ ಅವರ ಮೇಲೂ ಹ*ಲ್ಲೆ ಮಾಡಿ ಗಂ*ಭೀರವಾಗಿ ಗಾಯಗೊಳಿಸಿದ್ದ ಆರೋಪ ರಾಜೇಶ್‌ ಮೇಲಿತ್ತು. ಆ*ರೋಪಿ ರಾಜೇಶ್‌ ಮೊದಲಿಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಪ್ರೇಮಾ ಅವರನ್ನು ಕೊ*ಲೆ ಮಾಡಲು ಯತ್ನಿಸಿದ್ದ. ಈ ಪ್ರಯತ್ನ ವಿಫ‌ಲವಾದಾಗ ಪ್ರೇಮಾ ಅವರು ಟಿ. ಶೆಟ್ಟಿಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಅನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದ. ಬಳಿಕ ಪ್ರೇಮಾ ಹಾಗೂ ಅವರ ಸಹೋದರಿ ವೀಣಾ ಅವರು ಬಸ್‌ನಿಂದ ಇಳಿದು ಹೋಗುತ್ತಿದ್ದಾಗ ರಾಜೇಶ್‌ ಹಿಂಬಾಲಿಸಿದ್ದ. ‘ನನ್ನ ಮಾವನನ್ನು ಯಾಕೆ ಕೊಂ*ದೆ ಎಂದು ಪ್ರೇಮಾಳನ್ನು ಪ್ರಶ್ನಿಸಿ ಕತ್ತಿ*ಯಿಂದ ಕ*ಡಿದ ಆ*ರೋಪಿ, ವೀಣಾ ಅವರಿಗೆ ಮಾರ*ಣಾಂತಿಕವಾಗಿ ಹ*ಲ್ಲೆ ಮಾಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಘಟನೆಯ ಬಳಿಕ ರಾಜೇಶ್‌ ತಲೆಮರೆಸಿಕೊಂಡಿದ್ದನು.

    Continue Reading

    DAKSHINA KANNADA

    ಕೊ*ಲೆಯಲ್ಲಿ ಅಂ*ತ್ಯವಾಯಿತು ಸ್ನೇಹಿತರಿಬ್ಬರ ಜಗಳ; ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆ*ರೋಪಿ ಅರೆಸ್ಟ್

    Published

    on

    ಮಂಗಳೂರು: ಮಂಗಳೂರಿನ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಸಮೀಪ ಸೆಪ್ಟಂಬರ್ 21 ರಂದು ನಡೆದಿದ್ದ ಕೊ*ಲೆ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಬಾಗಲಕೋಟೆ ಮೂಲದ 39 ವರ್ಷದ ಬಸವರಾಜ ವಡ್ಡರ್ ಎಂಬಾತನ ಕೊ*ಲೆ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ತೋಟಾಬೆಂಗ್ರೆಯ ನಿವಾಸಿಯಾಗಿರುವ ಧರ್ಮರಾಜ್ ಸುವರ್ಣ ಎಂಬಾತನನ್ನು ಬಂಧಿಸಿದ್ದಾರೆ. ಕೊ*ಲೆ ನಡೆಸಿ ಪರಾರಿಯಾಗಿ ಕೇರಳದ ಕೊಝಿಕೋಡ್‌ ಜಿಲ್ಲೆಯ ಚೊಂಬಾಳ ಎಂಬಲ್ಲಿ ಆರೋಪಿ ಅಡಗಿಕೊಂಡಿದ್ದ.

    ಆರೋಪಿ ಹಾಗೂ ಕೊಲೆಯಾದ ಬಸವರಾಜ್ ವಡ್ಡರ್‌ ಕೆಲ ಸಮಯದಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಆರೋಪಿ ಧರ್ಮರಾಜ್ ಖರೀದಿ ಮಾಡಿದ್ದ ಮೊಬೈಲ್‌ ಫೋನ್‌ ಪಡೆದುಕೊಂಡಿದ್ದ ಬಸವರಾಜ್‌ ವಡ್ಡರ್‌ ಅದನ್ನು ಹಿಂತಿರುಗಿಸಿರಲಿಲ್ಲ. ಅಷ್ಟೇ ಅಲ್ಲದೆ ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಆರೋಪಿಯು ಮರದ ಸಲಾಕೆಯಿಂದ ಬಸವರಾಜ್ ಮೇಲೆ ಹ*ಲ್ಲೆ ನಡೆಸಿದಾಗ ಆತ ಮೃ*ತ ಪಟ್ಟಿದ್ದ.

    Continue Reading

    LATEST NEWS

    Trending