Connect with us

LATEST NEWS

ಮಂಗಳೂರು: ಮೇ 19ರಂದು ಮಸ್ಕತ್ ಒಮಾನ್ ನಲ್ಲಿ ‘ಸ್ವಾಮಿ ಕೊರಗಜ್ಜ’ ಹಾಗೂ ‘ಶ್ರೀ ಶನೀಶ್ವರ ಮಹಾತ್ಮೆ’ ತುಳು ಯಕ್ಷಗಾನ ತಾಳ ಮದ್ದಳೆ

Published

on

ಬಿರುವ ಜವನೆರ್ ಮಸ್ಕತ್ ಇವರು ಮೇ 19 ಶುಕ್ರವಾರದಂದು ಮಸ್ಕತ್ ಒಮಾನ್ ನಲ್ಲಿ “ಸ್ವಾಮಿ ಕೊರಗಜ್ಜ” ಹಾಗೂ “ಶ್ರೀ ಶನೀಶ್ವರ ಮಹಾತ್ಮೆ” ತುಳು ಯಕ್ಷಗಾನ ತಾಳ ಮದ್ದಳೆಯನ್ನು ಆಯೋಜಿಸಿದ್ದಾರೆ.

ಮಂಗಳೂರು: ಬಿರುವ ಜವನೆರ್ ಮಸ್ಕತ್ ಇವರು ಮೇ 19 ಶುಕ್ರವಾರದಂದು ಮಸ್ಕತ್ ಒಮಾನ್ ನಲ್ಲಿ “ಸ್ವಾಮಿ ಕೊರಗಜ್ಜ” ಹಾಗೂ “ಶ್ರೀ ಶನೀಶ್ವರ ಮಹಾತ್ಮೆ” ತುಳು ಯಕ್ಷಗಾನ ತಾಳ ಮದ್ದಳೆಯನ್ನು ಆಯೋಜಿಸಿದ್ದಾರೆ.ದಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನ ದಲ್ಲಿ ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಮಂಗಳೂರು ಇವರಿಂದ ನವರಸ ಭರಿತ ಎರಡು ತುಳು ಯಕ್ಷಗಾನ ಪ್ರಸಂಗಗಳು ಒಂದೇ ದಿನ ಪ್ರದರ್ಶನ ಕಾಣಲಿದೆ ಎಂದು ಬಿರುವ ಜವನೆರ್ ಸಂಘಟನೆಯ  ಮಾಧುರಿ ಸುವರ್ಣ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಮಸ್ಕತ್ ನ ಬಿರುವ ಜವನೆರ್ ಸಂಘಟನೆಯು ಕಳೆದ ಒಂದು ದಶಕ ದಿಂದ ಮಸ್ಕತ್ ನಲ್ಲಿ ಸಾಮಾಜಿಕ, ಧಾರ್ಮಿಕ, ಸೇವಾ ಚಟುವಟಿಕೆ ಗಳನ್ನು ನಡೆಸಿಕೊಂಡು ಬಂದಿದ್ದು, ಈ ಮೊದಲು ಇದೇ ತಂಡವನ್ನು ಆಹ್ವಾನಿಸಿ ಒಮಾನ್ ರಾಷ್ಟ್ರದಲ್ಲಿ ಪ್ರಪ್ರಥಮ ಪೂಜಾ ಸಹಿತ “ಶನೀಶ್ವರ ಮಹಾತ್ಮೆ” ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸಿದ ಕೀರ್ತಿಗೆ ಭಾಜನವಾಗಿದೆ.

ಒಮಾನ್ ಬಿಲ್ಲವಾಸ್, ಬಂಟ್ಸ್ ಓಮನ್, ವಿಶ್ವಕರ್ಮ, ಗೌಡ ಸಾರಸ್ವತ ಬ್ರಾಹ್ಮಣ, ಮೊಗವೀರ ಒಮಾನ್ ಹಾಗೂ ತುಳು ಭಾಷಾ ಸಂಘಟನೆಗಳ ಸಹಕಾರ, ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ.

ಮೇ 19 ರಂದು ಬೆಳಿಗ್ಗೆ 8.30 ರಿಂದ 12.30 ರ ತನಕ ಹರೀಶ್ ಶೆಟ್ಟಿ ಸೂಡಾ ರಚನೆಯ “ಅಜ್ಜ ಕೊರಗಜ್ಜ” ತುಳು ತಾಳಮದ್ದಳೆ, ನಂತರ ಪ್ರಸಾದ ಭೋಜನ.

ಮಧ್ಯಾಹ್ನ 2.30 ರಿಂದ ಸಂಜೆ 7 ರ ತನಕ ಚಿನ್ಮಯ ದಾಸ ವಿರಚಿತ “ಶ್ರೀ ಶನೀಶ್ವರ ಮಹಾತ್ಮೆ” ವಿಕ್ರಮಾದಿತ್ಯ ಚರಿತ್ರೆ ಎಂಬ ಪುಣ್ಯ ಪ್ರಸಂಗ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ಸ್ವರೂಪದಲ್ಲಿ ನಡೆಯಲಿದೆ.

ಕಳೆದ ಮೂರು ದಶಕಗಳಿಂದ ಶನಿ ಪೂಜಾ ಸಹಿತ ತಾಳಮದ್ದಳೆಯನ್ನು ಮಸ್ಕತ್, ದುಬೈ, ಅಬುದಾಬಿ, ಮುಂಬಯಿ, ಸಾಂಗ್ಲಿ ಸೇರಿ ದೇಶ ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಕರಾವಳಿಯ ಪ್ರಸಿದ್ದ ಯಕ್ಷಗಾನ ತಂಡ ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಇದೀಗ ಎರಡನೇ ಬಾರಿ ಮಸ್ಕತ್ ನಲ್ಲಿ ಖ್ಯಾತ ಅರ್ಥಧಾರಿಗಳ ಸಮ್ಮಿಲನದೊಂದಿಗೆ ಕಾರ್ಯಕ್ರಮ ನೀಡಲು ಸನ್ನದ್ದವಾಗಿದೆ.

ತೆಂಕು ತಿಟ್ಟಿನ ಪ್ರಸಿದ್ದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರ ಭಾಗವತಿಕೆಯಲ್ಲಿ ಎರಡೂ ಪ್ರಸಂಗಗಳು ಮಿಂಚಲಿವೆ.

ಹಿಮ್ಮೆಳ ದಲ್ಲಿ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ಭಾಸ್ಕರ ಭಟ್ ಕಟೀಲು ಸಹಕರಿಸಲಿದ್ದಾರೆ. ತಂಡದ ಪ್ರಧಾನ ಸಂಚಾಲಕ ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್, ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ಶ್ರೀಪತಿ ಭಟ್ ಸಸಿಹಿತ್ಲು, ವಿಜಯ ಕುಮಾರ್ ಶೆಟ್ಟಿ ಮೊಯಿಲೊಟ್ಟು, ಸೀತಾರಾಮ್ ಕುಮಾರ್ ಕಟೀಲ್, ಸದಾಶಿವ ಆಳ್ವ ತಲಪಾಡಿ, ಕಾವಳಕಟ್ಟೆ ದಿನೇಶ್ ಶೆಟ್ಟಿ , ದಯಾನಂದ ಜಿ ಕತ್ತಲ್ ಸ್ಸಾರ್, ಪ್ರಸನ್ನ ಶೆಟ್ಟಿ ಅತ್ತೂರು, ಪುಷ್ಪರಾಜ ಕುಕ್ಕಾಜೆ, ರಾಮಚಂದ್ರ ಮುಕ್ಕ ಪಾಲ್ಗೊಳ್ಳಲಿದ್ದಾರೆ.

ಇದು ತುಳು ಭಾಷೆಯ ಸೊಗಡು, ಅಜ್ಜ ಕೊರಗಜ್ಜನ ಸಂದಿ ಪಾರ್ದನದ ತಿರುಳು, ಪುರಾಣ ಪುಣ್ಯ ಕಥಾನಕಕ್ಕೆ ಹೊಸ ಮೆರುಗು ನೀಡುವ ನವರಸ ಭರಿತ ಕಾರ್ಯಕ್ರಮವಾಗಿದೆ.

ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಕಲಾಸಕ್ತರು ಪಾಲ್ಗೊಂಡು ಸಹಕರಿಸಬೇಕಾಗಿ ಬಿರುವ ಜವನೆರ್ ಮಸ್ಕತ್ ವಿನಂತಿಸಿದ್ದಾರೆ.

ದಾಮೋದರ್ ಕುಂದರ್ ಮಸ್ಕತ್, ಸುಹಾನ್ ಸುವರ್ಣ ಮಸ್ಕತ್, ಕದ್ರಿ ನವನೀತ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

bengaluru

ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!

Published

on

ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.

ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending