Connect with us

    DAKSHINA KANNADA

    ಮಂಗಳೂರು : ಸಂಪೂರ್ಣ ಕುಸಿತಗೊಂಡ ರಾಜಕಾಲುವೆ ಪಕ್ಕದ ಸಂಪರ್ಕ ರಸ್ತೆ

    Published

    on

    ಮಂಗಳೂರು : ಕಳೆದ ವಾರ ಮಳೆಯಿಂದ ಕುಸಿಯುವ ಭೀತಿಯಲ್ಲಿದ್ದ ರಸ್ತೆಯೊಂದು ಇಂದು(ಜು.2) ಸಂಪೂರ್ಣ ಕುಸಿದು ಹೋಗಿದೆ. ಬಂಗ್ರ ಕೂಳೂರು ವಾರ್ಡ್‌ನ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ರಾಜಕಾಲುವೇ ಪಕ್ಕದ ರಸ್ತೆ ಈಗ ಸಂಪೂರ್ಣ ಕುಸಿದು ಹೋಗಿದೆ.


    ಸುಮಾರು ಹತ್ತು ಮನೆಗಳು ಈ ರಸ್ತೆಯನ್ನು ಅವಲಂಭಿಸಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುತ್ತಿದ್ದ ವಿದ್ಯುತ್ ಕಂಬಗಳನ್ನು ಶಿಫ್ಟ್‌ ಮಾಡಲಾಗಿತ್ತು. ಬಳಿಕ ಸ್ಯಾಂಡ್ ಬ್ಯಾಗ್ ಇರಿಸಿ ರಸ್ತೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.

    ರಾಜಕಾಲುವೆಗೆ ಕಟ್ಟಿದ್ದ ತಡೆಗೋಡಿ ಹಳೆಯದಾಗಿದ್ದ ಕಾರಣ, ಈ ರಸ್ತೆ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ. ಸದ್ಯ ಇಲ್ಲಿನ ನಿವಾಸಿಗಳಿಗೆ ಸಂಚರಿಸಲು ಪರ್ಯಾಯ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಮಳೆ ಜೋರಾಗಿ ಬಂದಲ್ಲಿ ಸಂಪೂರ್ಣ ರಸ್ತೆ ರಾಜಕಾಲುವೆ ಸೇರಿ ಕಾಲುವೆ ಬಂದ್ ಆಗಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಕೂಡಾ ಇದೆ.

    DAKSHINA KANNADA

    ಈ ಗಿಡ ನಿಮ್ಮ ಮನೆಯಲ್ಲಿದ್ದರೆ, ಜೇಬು ಫುಲ್ ಖಾಲಿ ಖಾಲಿ..!

    Published

    on

    ಕಳ್ಳಿ ಗಿಡ ಮುಳ್ಳುಗಳಿಂದ ಕೂಡಿದ್ದರೂ, ಬಹಳ ಆಕರ್ಷಕ ಮತ್ತು ಸುಂದರವಾಗಿರುತ್ತದೆ. ಹಾಗಾಗಿ ಜನರು ಮನೆಯಲ್ಲಿ ಕಳ್ಳಿ ಗಿಡ ಇಡಲು ಬಯಸುತ್ತಾರೆ. ಆದರೆ ಮನೆಯಲ್ಲಿ ಕಳ್ಳಿ ಗಿಡ ನೆಡುವುದು ಶುಭವಲ್ಲ. ಈ ಸಸ್ಯವನ್ನು ಎಂದಿಗೂ ಮಲಗುವ ಕೋಣೆ ಅಥವಾ ಪೂಜಾ ಕೋಣೆಯಲ್ಲಿ ಇಡಬಾರದು. ಮನೆಯಲ್ಲಿ ಕಳ್ಳಿ ಗಿಡಗಳನ್ನು ಹೆಚ್ಚು ನೆಡಬೇಡಿ. ಒಣಗಿದ ಕಳ್ಳಿ ಗಿಡವನ್ನು ಸಹ ಮನೆಯಲ್ಲಿ ಇಡಬಾರದು. ಕಳ್ಳಿ ಗಿಡವನ್ನು ಮನೆಯಲ್ಲಿ ಏಕೆ ನೆಡಬಾರದು ಎಂಬುದನ್ನು ತಿಳಿಯೋಣ.

    ನಕಾರಾತ್ಮಕ ಶಕ್ತಿ

    ಕಳ್ಳಿ ಗಿಡಗಳಲ್ಲಿನ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಮುಳ್ಳುಗಳನ್ನು ಅಡೆತಡೆ ಮತ್ತು ಸಂಘರ್ಷಗಳ ಪ್ರತೀಕವೆಂದು ಹೇಳಲಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಅಶಾಂತಿ ಮತ್ತು ಜಗಳ ಉಂಟಾಗುವ ಸಾಧ್ಯತೆಯಿದೆ.

    ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು

    ಮನೆಯಲ್ಲಿ ಕಳ್ಳಿ ಗಿಡಗಳನ್ನು ಇಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಳ್ಳಿ ಗಿಡದಲ್ಲಿನ ಮುಳ್ಳನ್ನು ಮುಟ್ಟುವುದರಿಂದ ಗಾಯವಾಗುವುದರ ಜೊತೆಗೆ ತಲೆನೋವು, ಆಯಾಸ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

    ಸಂಬಂಧಗಳಲ್ಲಿ ಒತ್ತಡ

    ಈ ಗಿಡದಿಂದ ಸಂಬಂಧಗಳಲ್ಲಿ ಒತ್ತಡ ಮತ್ತು ಮನಸ್ತಾಪ ಉಂಟಾಗಬಹುದು. ಮುಳ್ಳುಗಳನ್ನು ಕೋಪದ ಸಂಕೇತವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಸದಸ್ಯರ ನಡುವೆ ಉದ್ವಿಗ್ನತೆ ಸೃಷ್ಟಿಯಾಗುತ್ತದೆ.

    ಆರ್ಥಿಕ ಸಮಸ್ಯೆ

    ಮನೆಯಲ್ಲಿ ಕಳ್ಳಿ ಗಿಡವನ್ನು ನೆಡುವುದರಿಂದ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಮುಳ್ಳುಗಳನ್ನು ಅಡೆತಡೆಗಳ ಸಂಕೇತವೆಂದು ಹೇಳಲಾಗುತ್ತದೆ. ಇದರಿಂದಾಗಿ ನಿಮಗೆ ಧನ ಲಾಭವಾಗದೇ ಇರಬಹುದು. ಹಾಗಾಗಿ ನೀವು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು.

    Continue Reading

    DAKSHINA KANNADA

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಪ್ಪಿನಂಗಡಿ ಶಾಖೆ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    Published

    on

    ಮಂಗಳೂರು  : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ, ಜೆಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪಿನಂಗಡಿ,  ಜೆಸಿಐ ಉಪ್ಪಿನಂಗಡಿ ಇವರ ಸಹಯೋಗದೊಂದಿಗೆ ಹಲಸು ಹಬ್ಬ – 2024 ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಜುಲೈ 7 ರಂದು ರವಿವಾರ ಬೆಳಗ್ಗೆ ಸಮಯ 9.30 ರಿಂದ ಅಪರಾಹ್ನ 2 ಗಂಟೆಯ ವರೆಗೆ ಉಪ್ಪಿನಂಗಡಿ ಎಚ್. ಎಮ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.


    ಈ ವೈದ್ಯಕೀಯ ಶಿಬಿರದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆ ನಾಟೆಕಲ್ ದೇರಳಕಟ್ಟೆ ಇವರ ನುರಿತ ವೈದರ ತಂಡದವರಿಂದ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ಮಧುಮೇಹ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ , ಕೀಲು ಮತ್ತು ಗಂಟು ನೋವು ತಪಾಸಣೆ, ಮೂಲವ್ಯಾಧಿ ತಪಾಸಣೆ, ಸ್ತ್ರೀ ಮತ್ತು ಪ್ರಸೂತಿ ತಪಾಸಣೆ, ಉಚಿತ ಔಷಧಿ ವಿತರಣೆ, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ಹಾಗೂ ಇತರ ವೈದ್ಯಕೀಯ ಸೌಲಭ್ಯವಿರಲಿದೆ.

    ಇದನ್ನೂ ಓದಿ : ಅತಿಯಾದ ಕೆಲಸದ ಒತ್ತಡ..! ರೋಬೋಟ್ ಸೂಸೈ*ಡ್‌..?

    ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ  ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

     

    Continue Reading

    BANTWAL

    ಬಂಟ್ವಾಳ: ರಾಮಲ್‌ಕಟ್ಟೆಯಲ್ಲಿ ಡಿವೈಡರ್‌ಗೆ ಡಿ*ಕ್ಕಿಯಾದ ಖಾಸಗಿ ಬಸ್

    Published

    on

    ಬಂಟ್ವಾಳ: ರಾ.ಹೆ.75ರ ತುಂಬೆ ರಾಮಲ್‌ಕಟ್ಟೆ ಬಳಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈ*ಡರ್‌ಗೆ ಡಿಕ್ಕಿ*ಯಾದ ಘಟನೆ ನಡೆದಿದೆ. ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ.

    ಬಸ್‌ ಬಿ.ಸಿ.ರೋಡ್‌ ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದು, ಚಾಲಕನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

    ಘಟನೆಯಿಂದ ಕೆಲ ಹೊತ್ತು ಸಂಚಾರಕ್ಕೆ ತೊಡಕು ಉಂಟಾಗಿದ್ದು, ಬಳಿಕ ಬಸ್ ತೆರವು ಮಾಡಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending