Connect with us

    DAKSHINA KANNADA

    ಶಿರೂರು: ಅಂಕೋಲ ತಾಲೂಕಿನ ಉಳವರೆ ಗ್ರಾಮಕ್ಕೆ ಭೇಟಿ ನೀಡಿ ಮಾನವೀಯ ನೆರವು ಚಾಚಿದ ಮಂಗಳೂರಿನ ಪತ್ರಕರ್ತರು

    Published

    on

    ಶಿರೂರು: ಗುಡ್ಡ ಕುಸಿತದಿಂದ ಮನೆಮಠ ಕಳೆದುಕೊಂಡ ಅಂಕೋಲ ತಾಲೂಕಿನ ಉಳವರೆ ಗ್ರಾಮಕ್ಕೆ ಉಳ್ಳಾಲ ಪತ್ರಕರ್ತರ ಸಂಘ ಹಾಗೂ ಮಂಗಳೂರಿನ ಪತ್ರಕರ್ತರ ಚಾರಣ ಬಳಗದ ಸದಸ್ಯರು ಭೇಟಿ ಕೊಟ್ಟು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಮಾನವೀಯ ನೆರವು ಚಾಚಿದರು.

    ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಉಂಟಾದ ದುರಂತದ ಪರಿಣಾಮ ಗಂಗಾವಳಿ ನದಿ ತೀರದಲ್ಲಿರುವ ಉಳವರೆ ಗ್ರಾಮದ 27 ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದರೆ 6 ಮನೆಗಳು‌ ಸಂಪೂರ್ಣ ನಾಶವಾಗಿತ್ತು. ಸದ್ಯ ಉಳವರೆ ಗ್ರಾಮ‌ ನಿರ್ಜನವಾಗಿದ್ದು ನೀರವತೆ ಅಡಗಿದೆ. ಮನೆ ಕಳೆದುಕೊಂಡವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

    ಪತ್ರಕರ್ತರ ತಂಡ ದಾನಿಗಳ ಹಾಗೂ ಮಿತ್ರರ ನೆರವಿನಿಂದ ಸಂಗ್ರಹಿಸಿದ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಮೊದಲು ಉಳವರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತು. ಅಲ್ಲಿನ ಶಾಲಾ ಮಕ್ಕಳ ಜೊತೆ ಕೆಲಸಮಯ ಕಳೆದ ಪತ್ರಕರ್ತರು ಗುಡ್ಡ ಕುಸಿದ ಸಂದರ್ಭ ಕ್ಷಣಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದು ಅವರಲ್ಲಿ ಧೈರ್ಯ ತುಂಬಿದರು. ಮಕ್ಕಳನ್ನು ಹಲವು‌ ವಿನೋದಾವಳಿ ಹಾಡಿನ ಮೂಲಕ ರಂಜಿಸಿದರು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉದ್ಯಮಿ ಇಬ್ರಾಹಿಂ ಕಲ್ಲೂರು ಮಾತಾಡಿ, “ಪತ್ರಕರ್ತರು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದು ಮೆಚ್ಚತಕ್ಕ ವಿಚಾರ. ಗ್ರಾಮಸ್ಥರ ಜೊತೆ ನಾವೂ ಇದ್ದೇವೆ. ಬಡ ಜನರ ಜೊತೆ ಇದು ನಿಜಕ್ಕೂ ನಿಲ್ಲಬೇಕಾದ ಸಮಯವಾಗಿದೆ“ ಎಂದರು.

    ಉದ್ಯಮಿ ವಿಠಲ ನಾಯಕ್ ಮಾತನಾಡಿ, ”ಪತ್ರಕರ್ತ ಮಿತ್ರರು ದುರಂತ ಸಂಭವಿಸಿದಾಲೂ ಉಳವರೆ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲದೆ ವೃದ್ಧೆಯ ಶವಸಂಸ್ಕಾರಕ್ಕೆ ಹೆಗಲು ನೀಡುವ ಕೆಲಸ ಮಾಡಿದ್ದರು. ಇದೀಗ ಗ್ರಾಮಸ್ಥರಿಗೆ ಅಗತ್ಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ ಅವರಿಗೆ ಅಭಿನಂದನೆಗಳು“ ಎಂದರು.

    ಉಳ್ಳಾಲ ಪತ್ರರ್ಕತರ ಸಂಘದ ಅಧ್ಯಕ್ಷ ವಸಂತ್ ಎನ್.‌ಕೊಣಾಜೆ ಮಕ್ಕಳನ್ನುದ್ದೇಶಿಸಿ ಮಾತನಾಡಿ, “ಭೂಕುಸಿತ ಘಟನೆ ನಿಮ್ಮ ಮನಸ್ಸಲ್ಲಿ ಅತೀವ ದುಃಖ ತಂದಿರಬಹುದು. ದುಃಖವನ್ನು ಮರೆತು ಮುಂದೆ ಉತ್ತಮ ಪ್ರಜೆಗಳಾಗಿ” ಎಂದು ಕಿವಿಮಾತು ನುಡಿದರು.

    ಪತ್ರಕರ್ತ ಶಶಿ ಬೆಳ್ಳಾಯರು ಮಾತನಾಡಿ, “ನಾವು ದುರಂತ ಸಂಭವಿಸಿದ ಸಂದರ್ಭವೂ ಇಲ್ಲಿಗೆ ಬಂದಿದ್ದೆವು‌. ಇದೀಗ‌ ನಿಮಗೆ ಕಿಂಚಿತ್ ನೆರವು ನೀಡುವ ಉದ್ದೇಶದಿಂದ ಬಂದಿದ್ದೇವೆ. ಕಷ್ಟದ ಸಂದರ್ಭ ಒಬ್ಬರಿಗಿಬ್ಬರು ನೆರವಾಗುವುದು ಮನುಷ್ಯತ್ವ. ನಿಮ್ಮ ಜೀವನದಲ್ಲೂ ಇದನ್ನು ಅಳವಡಿಸಿಕೊಳ್ಳಿ“ ಎಂದರು.

    ಶಿಕ್ಷಕಿ ಸಂಧ್ಯಾ ವಿ. ನಾಯ್ಕ್ ಮಾತಾಡಿ, “ಅಷ್ಟು ದೂರದ ಮಂಗಳೂರಿನಿಂದ ಉಳವರೆ ಗ್ರಾಮಕ್ಕೆ ಬಂದು ಗ್ರಾಮಸ್ಥರ ಜೊತೆ ನಿಲ್ಲುವುದೆಂದರೆ ನಿಜಕ್ಕೂ ಪ್ರಶಂಸನೀಯ ಕಾರ್ಯ” ಎಂದರು. ನಂತರ ಶಾಲಾ ಮಕ್ಕಳಿಗೆ ಪುಸ್ತಕ, ಬಟ್ಟೆ, ಉಳವರೆ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಈ ವೇಳೆ ಗ್ರಾಮಸ್ಥರು ಹಾನಿಗೊಳಗಾದ ಮನೆ ತೋರಿಸಿ ಕಣ್ಣೀರು ಸುರಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಆರಿಫ್ ಯುಆರ್, ಶಿವಶಂಕರ್ ಎಂ., ಎಚ್‌ಟಿ ಶಿವಕುಮಾರ್, ಗಿರೀಶ್ ಮಳಲಿ, ಅಶ್ವಿನ್ ಕುತ್ತಾರ್ ಜೊತೆಗಿದ್ದರು.

    DAKSHINA KANNADA

    ಹೊಸ ಮುಖ ಪ್ರತಿಭೆ ; ಯಕ್ಷಗಾನ ಯುವ ಕಲಾವಿದ ‘ಅಕ್ಷಯ್ ಭಟ್ ಮೂಡುಬಿದ್ರೆ’

    Published

    on

    ಜೀವನದಲ್ಲಿ ಯಾವಾಗಲೂ ಉತ್ತಮ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳುವುದು ಸಾಮಾನ್ಯ. ಅದೇನೋ ಇಂತಹವರೇ ಆಗಬೇಕೆಂದಿಲ್ಲ , ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಶಕ್ತಿ ಇರುವುದನ್ನು ನಾವು ಕಾಣುತ್ತೇವೆ. ಅದ್ಯಾಕೋ ಗೊತ್ತಿಲ್ಲ ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅದು ‘ಅಕ್ಷಯ್ ಭಟ್ ಮೂಡುಬಿದ್ರೆ’.

    ಹುಟ್ಟಿದ್ದು 24.4.1997 ರಂದು ಮೂಡಬಿದ್ರೆಯಲ್ಲಿ. ತಿನ್ನುವುದಕ್ಕೂ ಕಷ್ಟವಿದ್ದ ಸಮಯದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಪದವಿ ಶಿಕ್ಷಣ ಮುಗಿಸಿದರು. ಯಕ್ಷಗಾನದಲ್ಲಿ ಆಸಕ್ತಿ ಹೆಚ್ಚಾಗಿ ಯಕ್ಷಗಾನ ಕಲೆಯತ್ತ ಸಾಗಿದರು. ನಿರಂತರ ಪರಿಶ್ರಮದಿಂದ 4 ಜನರಿಗೆ ಪರಿಚಯವಾಗುವಷ್ಟು ಬೆಳೆದಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ, ಪಿತ್ರಾರ್ಜಿತವಾದ ಯಾವುದೇ ಆಸ್ತಿಯು ದೊರಕದ ಕಾರಣ ತಾನೇ ಶಿರ್ತಾಡಿಯಲ್ಲಿ ಜಾಗ ತೆಗೆದು ಮನೆಯನ್ನು ಕಟ್ಟಿ ಸತತ 8 ತಿಂಗಳಿಂದ ತಂದೆ ತಾಯಿಯೊಂದಿಗೆ ಹೊಸ ಮನೆಯಲ್ಲಿ ವಾಸವಿದ್ದಾರೆ. ಇಂತಹ ಜೀವನ ದೊರಕುವುದಕ್ಕೆ ಮೂಲ ಕಾರಣ ಯಾವುದು ಎಂದು ಕೇಳಿದರೆ “ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಅನುಗ್ರಹ ಹಾಗೂ ತಂದೆ ತಾಯಿಯ ಆಶೀರ್ವಾದ ಮತ್ತು ಪ್ರೋತ್ಸಾಹ” ಎಂದು ಹೇಳುತ್ತಾರೆ.

    ಎಳವೆಯ ಪ್ರಾಯದಿಂದಲೂ ಕಷ್ಟದ ಜೀವನವನ್ನು ಸಾಗಿಸಿ. ತನ್ನನ್ನು ಹಾಗೂ ತನ್ನ ತಂದೆ ತಾಯಿಯನ್ನು ಆಡಿಕೊಂಡವರ ಬಾಯಲ್ಲಿ ಹೊಗಳಿಸಿಕೊಳ್ಳಬೇಕೆಂಬ ಹಠದಿಂದ ಪದವಿ ಶಿಕ್ಷಣ ಮುಗಿಸಿ ತದನಂತರ ಹನುಮಗಿರಿ ಮೇಳದಲ್ಲಿ 3 ವರ್ಷ ತಿರುಗಾಟ ಮಾಡಿ,  ಪ್ರಸ್ತುತ ಕಟೀಲು ಮೇಳದಲ್ಲಿ 8ನೇ ವರ್ಷದ ತಿರುಗಾಟದಲ್ಲಿದ್ದಾರೆ. ಆವತ್ತು ಯಾರೆಲ್ಲ ತಮ್ಮ ಪರಿಸ್ಥಿತಿಯನ್ನು ಕಂಡು ನಕ್ಕು ಅಪಹಾಸ್ಯ ಮಾಡುತ್ತಿದ್ದರೋ, ಈಗ ಅವರೇ ಹೊಗಳುತ್ತಿದ್ದಾರೆ.  . ಸಾಧನೆಗೆ ಕೊನೆ ಇಲ್ಲ ಹಾಗಾಗಿ ಸಾದಿಸಿದ್ದು ಏನು ಇಲ್ಲ ಇನ್ನಷ್ಟು ಸಾಧನೆಯನ್ನು ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಕಲಾವಿದನಾಗಿ ಬೆಳೆಯಬೇಕು ಎಂಬುವುದು ಅವರ ಆಲೋಚನೆ.


    ಯಾವ ಪಾತ್ರಕ್ಕೂ ಅಕ್ಷಯ್ ‘ಸೈ’ ಎಂಬಂತೆ ಬಹು ಕ್ರಿಯಾಶೀಲ , ಪ್ರತಿಭಾನ್ವಿತ ಗುಣ ಹೊಂಂದಿದ್ದು, ಅವರ ಮುಖದ ಲವಲವಿಕೆ , ಸದಾ ಉತ್ಸಾಹಿ ಭಾವವೇ ಬಹು ಆಕರ್ಷಣೀಯವಾಗಿಹುದು. ಅತೀ ಸಣ್ಣ ಪ್ರಾಯದಲ್ಲೇ ಯಕ್ಷಗಾನ ರಂಗದಲ್ಲಿ ತಮ್ಮ ಛಾಯಪ್ರಭಾವ ಬೀರುತ್ತಿದ್ದಾರೆ. ಯಾರ ಹಂಗೂ ಇಲ್ಲದೆ ಸ್ವತಂತ್ರ್ಯವಾಗಿ ತಮ್ಮ ಕುಟುಂಬದೊಂದಿಗೆ ದಿನ ಕಳೆಯುತ್ತಾ, ದುರ್ಗಾಮಾತೆ ಸೇವೆಯೊಡನೆ, ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಅಕ್ಷಯ್‌ನಂತ ಅನೇಕ ಕಲಾವಿದರು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಆದರೆ ಅವರನ್ನು ಗುರುತಿಸುವಲ್ಲಿ ನಾವು ಸೋತಿದ್ದೇವಷ್ಟೇ.

    ಬರಹ : ಅಶ್ವಿತಾ ಭಟ್

    Continue Reading

    DAKSHINA KANNADA

    ಮೌನದ ಪಯಣ

    Published

    on

    ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಹೊರಟಾಗ ಕಷ್ಟ, ಅನುಮಾನ , ಸೋಲು ಉಂಟಾಗುವುದು ಸಹಜ. ಹಾಗೆಂದು ಅದಕ್ಕೆ ಹೆದರಿ ನಾವು ಇಟ್ಟ ಹೆಜ್ಜೆಯ ಹಿಂದಿಡಬಾರದು. ಎದುರಾಗುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಿ ಗೆಲುವಿನ ಪತಾಕೆಯ ಎತ್ತಿ ಹಾರಿಸಬೇಕು.

    ಗೆಲುವು ದೊರೆತಾದ ಮೇಲೆ ನಾವು ಬಂದ ದಾರಿಯ ಮರೆಯಬಾರದು, ಜೊತೆಗೆ ಇದ್ದು ಸಹಕರಿಸಿದ ವ್ಯಕ್ತಿಯನ್ನು ಮರೆಯಬಾರದು. 99% ಪರಿಶ್ರಮದ ಮೇಲೆ 1% ಅದೃಷ್ಟ ಅವಲಂಬಿತವಾಗಿರುತ್ತದೆ. ಗೆದ್ದಾಗ ಅತಿಯಾಗಿ ಹಿಗ್ಗದೆ, ಸೋತಾಗ ಅತಿಯಾಗಿ ಕುಗ್ಗದೆ ಎರಡನ್ನೂ ಸಮ ಮನಸ್ಸಿನಿಂದ ಸ್ವೀಕರಿಸಬೇಕು. ಒಮ್ಮೆಲೇ ಗೆಲ್ಲುವು ಸಲ್ಲದು ಹಾಗೆಂದು ಪ್ರಯತ್ನ ಪಡದೆ ಸುಮ್ಮನೆ ಇರಬಾರದು. ಪ್ರತಿಯೊಂದರಿಂದಲೂ ಪಾಠ ಕಲಿತು ತಿದ್ದುತ್ತಾ ಸಾಗುತ್ತಿರಬೇಕು. ಜನರ ಮಾತಿಗೆ ಕಿವಿಗೊಡದೆ ನಮ್ಮ ಪಾಡಿಗೆ ನಮ್ಮ ಪಥದಿ ನಾವು ಸಾಗುತ್ತಿರಬೇಕು.

    ನೀನು ಏನೇ ಮಾಡಿದರೂ ಆಡಿಕೊಳ್ಳುವ ಸಮಾಜ ಇದು. ಜನರ ಬಾಯಿಗೆ ಸಿಗದೆ ಹೋಗುವುದು ಅಸಾಧ್ಯ ಹಾಗಾಗಿ ಆ ಕಡೆ ಲಕ್ಷ್ಯ ವಹಿಸದೆ ದೃಷ್ಟಿಯ ಕೇವಲ ಗುರಿ ಕಡೆ ಮಾತ್ರ ಇಡು. ಸಾಗುವ ದಾರಿಯಲ್ಲಿ ನೀ ಒಬ್ಬಂಟಿ ಎನಿಸಿದರೂ ಪರವಾಗಿಲ್ಲ ಮೌನದಿ ನಿನ್ನ ಪಯಣ ಬೆಳೆಸು.

     

    ಬರಹ : ಅಶ್ವಿತಾ ಭಟ್

    Continue Reading

    DAKSHINA KANNADA

    ಕೂಳೂರಿನ ಹಳೆ ಸೇತುವೆಯಲ್ಲಿ ಭೀಕರ ಅಪಘಾತ; ಓರ್ವ ಸಾ*ವು

    Published

    on

    ಮಂಗಳೂರು : ಕೂಳೂರಿನ ಹಳೆ ಸೇತುವೆಯಲ್ಲಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪ*ಘಾತ ಸಂಭವಿಸಿ ಓರ್ವ ವ್ಯಕ್ತಿ ಮೃ*ತ ಪಟ್ಟಿದ್ದಾನೆ. ಸ್ಕೂಟರ್‌ನಲ್ಲಿದ್ದ ಮತ್ತೋರ್ವ ಗಂಭೀ*ರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಲಾರಿ ಸ್ಕೂಟರ್‌ಗೆ ಡಿ*ಕ್ಕಿ ಹೊಡೆದಿದೆ ಎನ್ನಲಾಗಿದೆ. ಮೊದಲೇ ಶಿಥಿಲವಾಸ್ಥೆಯಲ್ಲಿ ಇರುವ ಈ ಸೇತುವೆಯಲ್ಲಿ ವೇಗವಾಗಿ ಲಾರಿ ಚಲಾಯಿಸಿದ ಕಾರಣ ಈ ಅಪಘಾ*ತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ : ಬೆಳ್ಳುಳ್ಳಿಯನ್ನು ಹೀಗೆ ಸಂಗ್ರಹಿಸಿಟ್ಟರೆ ತಿಂಗಳಾದ್ರೂ ತಾಜಾವಾಗಿರುತ್ತೆ

    ಅಪಘಾ*ತದಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃ*ತಪಟ್ಟ ಕಾರಣ ಕೆಲ ಕಾಲ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಮೃ*ತದೇಹವನ್ನು ಆಸ್ಪತ್ರೆಗೆ ರವಾನಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಕೂಟರ್ ಸವಾರರು ಯಾರು ಅನ್ನೋ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

    Continue Reading

    LATEST NEWS

    Trending