Connect with us

    DAKSHINA KANNADA

    ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

    Published

    on

    ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಬಂಧನಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

    ಮಂಗಳೂರು: ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಬಂಧನಕ್ಕೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ, ಯುವಜನ ಜನಪರ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

    ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಕ್ಲಾಕ್‌ ಟವರ್‌ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್‌ ಬಜಾಲ್‌, ಎಚ್‌.ವಿ. ರಾವ್‌, ದೇವದಾಸ್‌ , ಪ್ರೊ. ನರೇಂದ್ರ ನಾಯಕ್‌ ಮುಂತಾದವರು ಮಾತನಾಡಿದರು.

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶಕ್ಕೆ ಘನತೆ ತಂದು ಕೊಟ್ಟ ಮಹಿಳಾ ಕುಸ್ತಿ ಪಟುಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

    ಲೈಂಗಿಕ ದೌರ್ಜನ್ಯ ಎಸಗಿದ ಉತ್ತರ ಪ್ರದೇಶದ ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಕೂಡಲೇ ಬಂಧಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳಿಗೆ ನ್ಯಾಯವನ್ನು ಕೊಡಿ ಎಂದು ಒತ್ತಾಯಿಸಿದರು.

    ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಓರ್ವ ಗೂಂಡಾ. ಆತನ ವಿರುದ್ಧ 90 ಕ್ಕೂ ಹೆಚ್ಚು ಪ್ರಕರಣಗಳಿವೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ 7 ಮಂದಿ ಕುಸ್ತಿ ಪಟುಗಳು ಅತನ ವಿರುದ್ಧ ಪ್ರಧಾನಿಗೆ ದೂರು ನೀಡಿದರೂ ಪ್ರಯೋಜನವಿಲ್ಲ.

    ಆವರನ್ನು ಬಂಧಿಸಲು ಪ್ರಧಾನಿಗೂ ಭಯವೇ ಎಂದು ಪ್ರಶ್ನಿಸಿ, ಅವರನ್ನು ಬಂಧಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದರು.

    ಪ್ರತಿಭಟನೆಗೆ ವಿದೇಶಿ ಹಣ ಬರುತ್ತದೆ ಎಂಬ ಬಿಜೆಪಿ ನಾಯಕರು ಆರೋಪದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಪ್ರೊ. ನರೇಂದ್ರ ನಾಯಕ್‌ ಯಾವ ವಿದೇಶಿ ಹಣ? ಸ್ವಿಸ್‌ ಬ್ಯಾಂಕ್‌ ಹಣವೇ ಎಂದು ಪ್ರಶ್ನಿಸಿದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    WATCH: ಕೆಪಿಟಿ ಬಳಿ ಭೀಕರ ಅಪಘಾ*ತ: ಲಾರಿಯಡಿ ಬಿದ್ದ ಬೈಕ್ ಸವಾರ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು : ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಗಂಭೀ*ರವಾಗಿ ಗಾ*ಯಗೊಂಡಿರುವ ಘಟನೆ ಮಂಗಳೂರಿನ ಕೆಪಿಟಿ ಬಳಿ ನಡೆದಿದೆ. ತಲಪಾಡಿ ಕಿನ್ಯಾ ಮೂಲದ ಅಶೋಕ್(44) ಗಂಭೀ*ರವಾಗಿ ಗಾಯಗೊಂಡವರು.

    ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್​ ಬಳಿಯ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಇಂಡೇನ್ ಗ್ಯಾಸ್ ತುಂಬಿದ್ದ ಗೂಡ್ಸ್ ಲಾರಿ ಬರುತ್ತಿತ್ತು. ಗೂಡ್ಸ್ ಲಾರಿಯ ಚಾಲಕ ಏಕಾಏಕಿ ಎಡಬದಿಗೆ ತಿರುಗಿಸಿದ್ದರಿಂದ ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.

    ಇದನ್ನೂ ಓದಿ : ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    ಪರಿಣಾಮ ಬೈಕ್ ಸವಾರ ಲಾರಿಯಡಿಗೆ ಸಿಲುಕಿ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.  ಅಪಘಾ*ತದ ದೃಶ್ಯ ಪೆಟ್ರೋಲ್‌ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    DAKSHINA KANNADA

    ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ

    Published

    on

    ಮೂಡುಬಿದಿರೆ : ಆತ ಒಬ್ಬ ಖತರ್ನಾಕ್‌ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್‌ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.

    ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.

    ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು

    ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್‌ ಖದೀಮ ಚೆಂಬುಗುಡ್ಡೆಯ ಹಬೀಬ್‌ ಹಸನ್‌ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.

    Continue Reading

    DAKSHINA KANNADA

    ಸೌದಿ ಅರೇಬಿಯಾದಲ್ಲಿ ಭೀಕರ ಕಾರು ಅ*ಪಘಾತ; ಉಳ್ಳಾಲದ ತಾಯಿ – ಮಗು ಮೃ*ತ್ಯು

    Published

    on

    ಉಳ್ಳಾಲ: ಸೌದಿ ಅರೇಬಿಯಾದ ಧಮಾಮ್ ಬಳಿ ಶುಕ್ರವಾರ(ಸೆ.20) ನಡೆದ ಭೀಕರ ರಸ್ತೆ ಅಪ*ಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ತಾಯಿ, ಮಗು ಸಾ*ವನ್ನಪ್ಪಿದ್ದಾರೆ.


    ಹೈದರ್ ಉಳ್ಳಾಲ್ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಎರಡೂವರೆ ವರ್ಷದ ಮೊಮ್ಮಗ ಮೃತ ದು*ರ್ದೈವಿಗಳು. ಶುಕ್ರವಾರ ಸಂಜೆ ವೇಳೆ ಮದೀನದಿಂದ ಕಾರಿನಲ್ಲಿ ಸಫಾ ಫಾತಿಮಾ ತನ್ನ ಪತಿ ಮಲಪುರಂ ಆರಿಕೋಡ್ನ ಸುಹೈಲ್ (35) ಮತ್ತು ಸಹೋದರ ಮುಹವಿಯ(23) ಜೊತೆಗೆ ದಮಾಮ್ ನಲ್ಲಿರುವ ಹೈದರ್ ಉಳ್ಳಾಲ್ ಅವರ ಮನೆಗೆ ತೆರಳುತ್ತಿದ್ದರು.
    ಈ ವೇಳೆ ಕಾರು ಅ*ಪಘಾತವಾಗಿದ್ದು, ಕಾರಿನಲ್ಲಿದ್ದ ಸುಹೈಲ್, ಮಕ್ಕಳಾದ ಅಬ್ದುಲ್ ಮಲಿಕ್ (7), ಅಬ್ದುಲ್ ರಹಿಮಾನ್ (6) ಹಾಗೂ ಅಹ್ಮದ್ (5) ತೀವ್ರ ಗಾ*ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ

    Continue Reading

    LATEST NEWS

    Trending