Connect with us

  DAKSHINA KANNADA

  ಮಂಗಳೂರು : ಪೆಟ್ರೋಲ್‌- ಎಲೆಕ್ಟ್ರಿಕಲ್‌ ಆಟೋ ಚಾಲಕರ ನಡುವೆ ಪಾರ್ಕಿಂಗ್ ವಿಷಯದಲ್ಲಿ ಸಂಘರ್ಷ..!

  Published

  on

  ಮಂಗಳೂರು : ನಿಗದಿತ ಬಣ್ಣವನ್ನು ಬಳಿಯದ ಮತ್ತು ವಲಯ ಸಂಖ್ಯೆಯನ್ನು ನಮೂದಿಸದಿರುವ ಇ-  ಆಟೋ ರಿಕ್ಷಾಗಳಿಗೆ ರಿಕ್ಷಾ ತಂಗುದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡ ಬಾರದೆಂದು ಪೆಟ್ರೋಲ್‌ ಚಾಲಿತ ಆಟೋ ರಿಕ್ಷಾ ಚಾಲಕರು ಮಂಗಳೂರಿನ ಕೆಲವು ಪ್ರಮುಖ ರಿಕ್ಷಾ ಪಾರ್ಕ್ ಗಳಲ್ಲಿ ಫಲಕವನ್ನು ಹಾಕಿದ್ದು, ಇದು ಇ-  ಆಟೋ ರಿಕ್ಷಾ ಚಾಲಕರು ಮತ್ತು ಪೆಟ್ರೋಲ್‌ ಚಾಲಿತ ರಿಕ್ಷಾ ಚಾಲಕರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. 

  ಇಂದು ಇ-  ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕ್‌ ಗಳಿಗೆ ಕೊಂಡೊಯ್ದಾಗ ಅಲ್ಲಿದ್ದ ಪೆಟ್ರೋಲ್‌ ಚಾಲಿತ ರಿಕ್ಷಾ ಚಾಲಕರು ಪಾರ್ಕಿಂಗ್‌ ಮಾಡಲು ನಿರಾಕರಿಸಿದ್ದು, ಇದು ಚಾಲಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

  ಬಳಿಕ ಇ- ಆಟೋ ಚಾಲಕರು ಆರ್‌ಟಿಒ ಕಚೇರಿ ಬಳಿ ಒಟ್ಟು ಸೇರಿ ಚರ್ಚಿಸಿ ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿದರು.

  ನಾವು ರಿಕ್ಷಾಗಳಿಗೆ ವಲಯ ಸಂಖ್ಯೆ ನಮೂದಿಸಲು ಸಿದ್ಧರಿದ್ದೇವೆ. ಆದರೆ ಅದನ್ನು ಬರೆಯುವವರು ಯಾರು? ಪೊಲೀಸರೇ ಬರೆಯುವ ವ್ಯವಸ್ಥೆ ಮಾಡ ಬೇಕು ಎಂದು ಇ-  ಆಟೋ ರಿಕ್ಷಾ ಚಾಲಕ ಪ್ರಕಾಶ್‌ ವಿ.ಎನ್‌. ತಿಳಿಸಿದರು.

  ಕೇಂದ್ರ ಸರಕಾರ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಇ-  ಆಟೋ ರಿಕ್ಷಾಗಳಿಗೆ ಪ್ರೋತ್ಸಾಹ ನೀಡಿದೆ.

  ಸಾಲ ಪಡೆದು ನಾವು ಇ-  ಆಟೋ ರಿಕ್ಷಾ ಖರಿಸಿದ್ದೇವೆ. ನಮಗೆ ದುಡಿಯಲು ಅವಕಾಶ ಮಾಡಿ ಕೊಡಿ ಎಂದು ಗೌರವಾಧ್ಯಕ್ಷ ಅವಿಲ್‌ ಮನವಿ ಮಾಡಿದರು.

  ಮಂಗಳೂರು ನಗರದಲ್ಲಿ ಸುಮಾರು 700 ಇ-  ಆಟೋ ರಿಕ್ಷಾ ಮತ್ತು 7 ಸಾವಿರ ಪೆಟ್ರೋಲ್‌ ಚಾಲಿತ ರಿಕ್ಷಾಗಳಿವೆ.

  ಎಲ್ಲಾ  ಆಟೋ ರಿಕ್ಷಾಗಳಿಗೆ ಕಪ್ಪು ಹಳದಿ ಬಣ್ಣ ಬಳಿಯುವ ಹಾಗೂ ವಲಯ ಸಂಖ್ಯೆಯನ್ನು ನಮೂದಿಸುವ ಪ್ರಕ್ರಿಯೆಯನ್ನು 2022 ನವೆಂಬರ್‌ 25 ರೊಳಗೆ ಪೂರ್ತಿಗೊಳಿಸುವಂತೆ 2022 ಅಕ್ಟೋಬರ್‌ 27ರಂದು ನಡೆದ ಆರ್‌ಟಿಎ ಸಭೆಯಲ್ಲಿ ಸೂಚಿಸಲಾಗಿತ್ತು ಆದ್ರೆ ಅದನ್ನು ಜಾರಿಗೆ ತರದ ಕಾರಣ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

  ಇತ್ತಂಡಗಳ ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಗೊಂದಲ ಪರಿಹರಿಸುವ ಕಾರ್ಯ ಮಾಡಿದರು.

  ಮಂಗಳೂರು ಪೊಲೀಸ್‌ ಅಯುಕ್ತರ ಕಚೇರಿಯಲ್ಲಿ ಇಂದು ನಡೆದ ಮಾತುಕತೆಯ ವೇಳೆ ಈ ಕುರಿತು ನಿರ್ಣಯಿಸಲಾಯಿತು.

  ನಗರದಲ್ಲಿನ ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳಿಗೆ ವಲಯ ಸಂಖ್ಯೆಯನ್ನು ನಮೂದಿಸುವ ಪ್ರಕ್ರಿಯೆ ಇನ್ನು ಒಂದು ವಾರದೊಳಗೆ ನೆರವೇರಲಿದೆ.

  ಉಪ ಪೊಲೀಸ್‌ ಆಯುಕ್ತರ ಉಪಸ್ಥಿತಿಯಲ್ಲಿ ಮಾತುಕತೆ ನಡೆದು 2022 ನವೆಂಬರ್‌ 25 ರ ವರೆಗೆ ನೋಂದಣಿಯಾದ ಇ-  ಆಟೋ ರಿಕ್ಷಾಗಳಿಗೆ ವಲಯ 1 ಸಂಖ್ಯೆಯನ್ನು ನಮೂದಿಸುವ ನಿರ್ಧಾರಕ್ಕೆ ಬರಲಾಯಿತು.

  DAKSHINA KANNADA

  ಮಳೆ ಬಂದು ತುಂಬಿ ತುಳುಕಿದ ಡ್ಯಾಂ.. ಮಂಗಳೂರಿನಲ್ಲಿ ನೀರಿನ ರೇಶನಿಂಗ್ ಸಿಸ್ಟಂ ರದ್ದು

  Published

  on

  ಮಂಗಳೂರು: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಮಂಗಳವಾರ ನೀರಿನ ಮಟ್ಟ 5.5 ಮೀಟರ್‌ಗೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದ್ದ ನೀರಿನ ರೇಶನಿಂಗ್ ಸಿಸ್ಟಂ ರದ್ದು ಮಾಡಲು ನಿರ್ಧರಿಸಲಾಗಿದೆ.

  dam

  ನೀರು ತುಂಬಿರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಏರಿಕೆಯಾದ ಕಾರಣ ಬಂಟ್ವಾಳದ ಶಂಭೂರಿನಲ್ಲಿರುವ ಎಎಂಆರ್‌ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ತುಂಬೆ ಅಣೆಕಟ್ಟಿಗೆ ಸೋಮವಾರ(ಮೇ.20) ಹರಿಸಲಾಗಿದೆ. ತುಂಬೆ ಅಣೆಕಟ್ಟಿನಲ್ಲಿ ಗರಿಷ್ಠ ಎತ್ತರ 6 ಮೀಟರ್ ಆಗಿದ್ದು, ಸೋಮವಾರ 3.42 ಮೀಟರ್ ಮತ್ತು ಮಂಗಳವಾರ ಬೆಳಗ್ಗೆವರೆಗೆ 3.68 ಮೀಟರ್‌ ಮಾತ್ರ ನೀರು ಲಭ್ಯವಿತ್ತು. ಬಳಿಕ ದಿಢೀರ್‌ ಏರಿಕೆ ಕಂಡಿದ್ದು, ಸಂಜೆ ವೇಳೆಗೆ 5.5 ಮೀಟರ್‌ ನೀರು ನಿಲ್ಲಿಸಲಾಗಿತ್ತು. ಅಣೆಕಟ್ಟಿನಲ್ಲಿ ಸಾಮಾನ್ಯವಾಗಿ ಜೂನ್‌ನಲ್ಲಿ ನೀರು ತುಂಬಿದ ಬಳಿಕ ಗೇಟ್‌ ತೆರೆಯಲಾಗುತ್ತದೆ.

  ಆದರೆ ಕಳೆದ 2 ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಣೆಕಟ್ಟು ತುಂಬಿದೆ. ಕಳೆದ ವರ್ಷ ಮೇ 21ಕ್ಕೆ ನೀರಿನ ಮಟ್ಟ ಗಣನೀಯ ಇಳಿಕೆ ಕಂಡು 3.20 ಮೀಟರ್‌ ಇತ್ತು. ತುಂಬೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ನೀರಿನ ರೇಶನಿಂಗ್‌ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

  Read More..; ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

  ಕುಡಿಯುವ ನೀರಿನ ಹಾಹಾಕಾರ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಏಪ್ರಿಲ್ 4ರಿಂದ ನೀರಿನ ರೇಶನಿಂಗ್‌ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದರಿಂದಾಗಿ ನಗರಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿತ್ತು. 3 ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಉಡುಪಿಯ ಸ್ವರ್ಣಾ ನದಿಯಲ್ಲಿ ಒಳ ಹರಿವು ಆರಂಭಗೊಳ್ಳುವ ನಿರೀಕ್ಷೆ ಇದೆ. ಬಳಿಕ ಇಲ್ಲೂ ರೇಶನಿಂಗ್‌ ಸ್ಥಗಿತವಾಗುವ ನಿರೀಕ್ಷೆ ಹೊಂದಲಾಗಿದೆ.

  Continue Reading

  DAKSHINA KANNADA

  ಮಂಗಳೂರು : ಭಾರಿ ಮಳೆಗೆ ಧರೆಗುರುಳಿದ ಮರ

  Published

  on

  ಮಂಗಳೂರು : ಬಿರುಬಿಸಿಲಿನಿಂದ ಕಂಗಾಲಾಗಿದ್ದ ಕರಾವಳಿಗರ ಮೇಲೆ ವರುಣ ಕೃಪೆ ತೋರಿದ್ದು, ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು(ಮೇ 21) ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ.

   

  ಸಂಜೆಯಿಂದ ಶುರುವಾದ ಮಳೆಗೆ ಮಂಗಳೂರು ನಗರದ ಕರಂಗಲ್ಪಾಡಿ ಬಳಿ ಇರುವ ರಾಧಾ ಮೆಡಿಕಲ್ಸ್ ಎದುರುಗಡೆ ಭಾರಿ ಗಾತ್ರದ ಮರವೊಂದು ಧರೆಗುರುಳಿದ್ದು, ವಾಹನಗಳು ಜಖಂ ಗೊಂಡಿವೆ.

  ಘಟನೆಯಿಂದ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮರದ ಕೊಂಬೆಗಳನ್ನು ಸ್ವಲ್ಪ ಮಟ್ಟಿಗೆ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ಲಭಿಸಿದೆ.

  Continue Reading

  DAKSHINA KANNADA

  ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

  Published

  on

  ಮಂಗಳೂರು: ಹೊಸ ಹೊಸ ಮೊಬೈಲ್ ಅಪ್ಲಿಕೇಶನ್ ಬಂದಂತೆ ನಾವು ಮೊಬೈಲ್ ಗೆ ಹೆಚ್ಚೆಚ್ಚು ಎಡಿಕ್ಟ್ ಆಗುತ್ತಿದ್ದೇವೆ. ಅದರ ಜೊತೆಗೆ ನೆಟ್ ಪ್ಯಾಕ್ ಕೂಡಾ ಇದೀಗ ದುಬಾರಿಯಾಗಿಬಿಟ್ಟಿದೆ. ಮೊಬೈಲ್​ನಲ್ಲಿ ಡೇಟಾ ಪ್ಯಾಕ್ ಹಾಕಿಸಿದ್ದರೂ, ಇಂಟರ್​ನೆಟ್ ಬೇಗ ಖಾಲಿ ಆಗ್ತಾ ಇದ್ಯಾ? ಅದಕ್ಕೆ ಕಾರಣವೇನು? ದಿನಕ್ಕೆ 2 ಜಿಬಿ ಡೇಟಾ ಇದ್ದರೂ ಸಾಕಾಗುತ್ತಿಲ್ಲವೇ? ರೀಲ್ಸ್ ನೋಡುತ್ತಲೇ ಡೇಟಾ ಖಾಲಿ ಆಗುತ್ತಿರುವ ಬಗ್ಗೆ ಮೆಸೇಜ್ ಬರುತ್ತಿದೆಯಾ? ಹಾಗಾದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೆಟ್​ ಬೇಗ ಖಾಲಿ ಆಗದಿರಲು ಏನು ಮಾಡಬೇಕು? ಡೇಟಾ ಪ್ಯಾಕ್ ಹೆಚ್ಚು ಇರುವಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.

  • ಸ್ಮಾರ್ಟ್ಫೋನ್ ಗಳಲ್ಲಿ ಕೆಲವು ಆ್ಯಪ್ ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ. ಆಗ ನೆಟ್ ಬೇಗ ಖಾಲಿಯಾಗುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ ಗೆ ಹೋಗಿ ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಮಾತ್ರ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡೋದು ಒಳಿತು.
  • ಆಂಡ್ರಾಯ್ಡ್ ಫೋನ್ ಗಳು ಡೇಟಾ ಉಳಿತಾಯ ಮೋಡ್ ಎಂಬ ಆಯ್ಕೆಯನ್ನು ಹೊಂದಿದೆ. ಈ ಆಯ್ಕೆ ನಿಮ್ಮ ಮೊಬೈಲ್ ನಲ್ಲಿದ್ದು ಅದನ್ನು ಸಕ್ರಿಯಗೊಳಿಸಿದ್ರೆ ಡೇಟಾ ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ನಿಮ್ಮ ಫೋನ್ ನಲ್ಲಿ ಅನಗತ್ಯ ಡೇಟಾ ಪೋಲು ಆಗುವುದನ್ನು ತಡೆಯುತ್ತದೆ. ಇದರಿಂದ ನಿಮಗೆ ಬಳಕೆಗೆ ಡೇಟಾ ಹೆಚ್ಚು ಲಭ್ಯ ಆಗುತ್ತದೆ.
  • ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಆ್ಯಪ್ ಬಳಸೋದು ಹೆಚ್ಚಾಗಿದೆ. ಇದು ಅತ್ಯಂತ ಹೆಚ್ಚು ಡೇಟಾವನ್ನು ಬಳಸಿಕೊಳ್ಳುತ್ತೆ‌. ಹಾಗಿರುವಾಗ ಇಂತಹ ಆ್ಯಪ್ ಗಳನ್ನು ಆಫ್ ಲೈನ್ ನಲ್ಲಿ ಉಪಯೋಗಿಸಬೇಕೇ ಹೊರತು ಆನ್ಲೈನ್ ನಲ್ಲಲ್ಲ. ಈ ಆ್ಯಪ್ ನ ಅಪ್ಡೇಟ್ ನ್ನು ಕೂಡಾ ವೈಫೈನಲ್ಲೇ ಮಾಡೋದು ಉತ್ತಮ.‌
  • ನಾವು ಎಲ್ಲಿಯಾದರೂ ಸಂಚರಿಸುತ್ತಿದ್ದರೆ ಯೂಟ್ಯೂಬ್ ವೀಡಿಯೋಗಳನ್ನು ಅಥವಾ ಇನ್ನಾವುದೋ ಆ್ಯಪ್ ಬಳಸೋದು ಹೆಚ್ಚು. ಸಂಚಾರದ ಸಂದರ್ಭದಲ್ಲಿ ವೈಫೈ ಅನುಕೂಲತೆ ಇದ್ದರೆ ವೀಡಿಯೋ ಆಗಲೇ ಡೌನ್ಲೋಡ್ ಮಾಡಿಡುವುದು ಉತ್ತಮ. ನಂತರ ಆಫ್ಲೈನಲ್ಲೇ ಅದನ್ನು ವೀಕ್ಷಿಸಬಹುದು.
  • ವೀಡಿಯೋ ಮತ್ತು ಫೋಟೋಗಳನ್ನು ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನಿಂದ ತೆಗೆಯಿರಿ. ಆಗ ಡೇಟಾ ಉಳಿತಾಯವಾಗುತ್ತದೆ.
  Continue Reading

  LATEST NEWS

  Trending