Connect with us

  LATEST NEWS

  ‘ಮಂಗಳೂರು ಸಿಟಿ ಪೊಲೀಸ್‌’ ವೆಬ್‌ಸೈಟ್‌ ನಾಪತ್ತೆಯಾಗಿದೆ ಹುಡುಕಿ ಕೊಡಿ

  Published

  on

  ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಬಗ್ಗೆ ಮಾಧ್ಯಮಕ್ಕೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಂಗಳೂರು ಸಿಟಿ ಪೊಲೀಸ್‌ ಎಂಬ ವೆಬ್‌ಸೈಟ್‌ ಇತ್ತು.

  ಅದು ಕೆಲ ತಿಂಗಳಿಂದ ನಿಷ್ಕ್ರಿಯಗೊಂಡು ಇದೀಗ ಗೂಗಲ್‌ ಸರ್ಚ್‌ ಇಂಜಿನ್‌ನಿಂದಲೇ ನಾಪತ್ತೆಯಾಗಿದೆ. ಮಂಗಳೂರು ಕಮೀಷನರೇಟ್‌ ವ್ಯಾಪ್ತಿಗೆ ಹೋಲಿಸಿದರೆ ಉಡುಪಿ ಜಿಲ್ಲಾ ಪೊಲೀಸ್‌ ಪ್ರತಿನಿತ್ಯ ಎರಡು ಸಮಯದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಅಪರಾಧ, ನಾಪತ್ತೆ, ಅಪಘಾತ ಸೇರಿದಂತೆ ಪ್ರಕರಣ ದಾಖಲಾದ ಮಾಹಿತಿಯನ್ನು ನೀಡುತ್ತಿದೆ.

  ಉಡುಪಿ ಜಿಲ್ಲಾ ಪೊಲೀಸ್‌ ವೆಬ್‌ಸೈಟ್‌ ಪ್ರತಿನಿತ್ಯ ಅಪರಾಹ್ನ ಹಾಗೂ ಮಧ್ಯಾಹ್ನ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತದೆ.


  ಉಡುಪಿ ಜಿಲ್ಲೆಯು ಎಸ್‌ಪಿ ವ್ಯಾಪ್ತಿಯನ್ನು ಹೊಂದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯು ಎಸ್‌ಪಿ ವ್ಯಾಪ್ತಿ ಸೇರಿ ನಗರ ಕಮೀಷನರೇಟ್‌ ವ್ಯಾಪ್ತಿ ಹೊಂದಿದೆ. ಇಲ್ಲಿ ಅಪರಾಧ ಪ್ರಕರಣಗಳು ಹೆಚ್ಚು. ಉಡುಪಿ ಜಿಲ್ಲೆಗೆ ಹೋಲಿಸಿದರೆ ದ.ಕ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳ ಸಂಖ್ಯೆ ಹೆಚ್ಚಿದೆ.

  ಜೊತೆಗೆ ಅಪರಾಧ, ಸೈಬರ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿ ಹೊಂದಿರುವವರು ಇದ್ದಾರೆ. ಆದರೂ ಒಂದು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಿರ್ಮಿತವಾದ ಪೊಲೀಸ್‌ ವೆಬ್‌ಸೈಟ್‌ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ನೀರಿನಲ್ಲಿ ಇಟ್ಟ ಹೋಮದಂತೆ ಆಗಿದೆ.


  ಈ ಹಿಂದೆ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಎಫ್‌ಐಆರ್‌ ಸಾರಾಂಶವನ್ನು ಆ ದಿನವೇ ಸಂಜೆಯೊಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದ್ದರು. ಜೊತೆಗೆ ಪೊಲೀಸ್‌ ಆಯುಕ್ತರ ಕಛೇರಿಯಲ್ಲಿ ನಡೆಯುವ ಸಭೆಗಳ ಮಾಹಿತಿ, ಪತ್ರಿಕಾ ಪ್ರಕಟಣೆಗಳನ್ನು ಇದರಲ್ಲಿ ಪ್ರಕಟಿಸಲಾಗುತ್ತಿತ್ತು.

  ಈ ಹಿಂದೆ ಜನಸಾಮಾನ್ಯರಿಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ, ಕಮಿಷನರೇಟ್‌ ವ್ಯಾಪ್ತಿಯ ಠಾಣೆಗಳ, ಸಂಚಾರಿ ಠಾಣೆಯ ದೂರವಾಣಿ ಸಂಖ್ಯೆ ಸಿಗುತಿತ್ತು. ಈ ಮೂಲಕ ಸಂಬಂಧಪಟ್ಟವರನ್ನು ನೇರವಾಗಿ ಸಂಪರ್ಕಿಸಬಹುದಿತ್ತು.

  ಆದರೆ ಈಗ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ವೆಬ್ಸೈಟ್‌ ನಾಪತ್ತೆಯಾಗುವುದರೊಂದಿಗೆ ಪೊಲೀಸ್‌ ಇಲಾಖೆ ಜನರಿಂದ ದೂರವಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
  ಠಾಣೆಗಳಲ್ಲಿ ಘಟನೆ ನಡೆದ ಬಗ್ಗೆ ಮಾಹಿತಿಯೇ ಇಲ್ಲ ಅನ್ನುತ್ತಾರೆ?
  ಮಂಗಳೂರು ಕಮಿಷನರೇಟ್‌ ವ್ಯಾಪ್ತಿ ದ.ಕ ಜಿಲ್ಲಾ ಕೇಂದ್ರ ಪ್ರದೇಶವಾಗಿದ್ದು, ಇಲ್ಲಿ ರಾಜ್ಯ ರಾಷ್ಟ್ರಮಟ್ಟದ ಮಾಧ್ಯಮಗಳ ವರದಿಗಾರರಿದ್ದಾರೆ. ಆದ್ದರಿಂದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕೆಲವು ಅಪರಾಧ ಪ್ರಕರಣಗಳ ಬಗ್ಗೆ ಕೆಲವು ಮಾಧ್ಯಮ ವರದಿಗಾರರು ಪೊಲೀಸ್‌ ಠಾಣೆಗಳಲ್ಲಿ ನಿಖರತೆಯನ್ನು ತಿಳಿಯಲು ಮಾಹಿತಿ ಕೇಳಿದರೆ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಜೊತೆಗೆ ಕೆಲವು ಮಾಧ್ಯಮಗಳಿಗೆ ಕೆಲವು ಪ್ರಕರಣಗಳ ಮಾಹಿತಿ ದೊರೆಯುತ್ತದೆ. ಅದೇ ಮಾಹಿತಿಯನ್ನು ಕೆಲವರು ಎರವಲು ಪಡೆಯುತ್ತಾರೆ.ಈ ವೇಳೆ ಗೊಂದಲಗಳು ಉಂಟಾಗುತ್ತದೆ. ಕೆಲವೇ ಕೆಲವು ಆಯ್ದ ಪ್ರಕರಣಗಳ ಬಗ್ಗೆ ಮಂಗಳೂರು ಪೊಲೀಸ್‌ ಆಯುಕ್ತರು, ಅಥವಾ ಡಿಸಿಪಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡುತ್ತಾರೆ.
  ಮಾಹಿತಿ ಎಡವಟ್ಟಿನಿಂದ ವರದಿಗಳೂ ಎಡವಟ್ಟು
  ಸಣ್ಣಪುಟ್ಟ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಹಿಂದಿನ ಪೊಲೀಸ್‌ ಆಯುಕ್ತರು ಹುದ್ದೆಯಲ್ಲಿದ್ದಾಗ ವೆಬ್‌ಸೈಟ್‌ ನಿರ್ವಹಣೆಗೆ ಪರಿಣಿತ ಸಿಬ್ಬಂದಿ ನೇಮಕ ಮಾಡಿ ಪ್ರತಿದಿನದ ಆಗುಹೋಗುಗಳ ಬಗ್ಗೆ ಮಾಹಿತಿಗಳು ಇಲಾಖಾ ವೆಬ್‌ಸೈಟ್‌ನಲ್ಲಿ ಅಪ್ಡೇಡ್‌ ಆಗುತಿತ್ತು.

  ಆದ್ದರಿಂದ ಮಾಧ್ಯಮಗಳ ವರದಿಯಿಂದ ಓದುಗರು ಗೊಂದಲಕ್ಕೀಡಾಗುತ್ತಿರಲಿಲ್ಲ. ಈಗ ಒಬ್ಬೊಬ್ಬ ವರದಿಗಾರರಿಗೆ ತಪ್ಪು ತಪ್ಪು ಮಾಹಿತಿ ಸಿಗುವುದರಿಂದ ಓದುಗರು ಅಥವಾ ಕೇಳುಗರು ಪ್ರಕರಣದ ಅದೇ ತಪ್ಪು ವರದಿಯನ್ನು ಓದುತ್ತಾರೆ.
  ಬೆಂಗಳೂರು ಕಮೀನರೇಟ್‌ ವ್ಯಾಪ್ತಿಯಲ್ಲಿ ಟ್ರಾಫಿಕ್‌ ಪೊಲೀಸ್‌ ಅವರು ಒಂದು ಟ್ವೀಟ್‌ ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಜೊತೆಗೆ ಪ್ರತಿನಿತ್ಯದ ಆಗುಹೋಗುಗಳನ್ನು ಟ್ವಿಟ್ಟರ್‌, ಫೇಸ್‌ಬುಕ್‌, ಪೊಲೀಸ್‌ ವೆಬ್‌ಸೈಟ್‌ ಮುಂತಾದ ಜಾಲತಾಣದ ಮುಖಾಂತರ ಜನರಿಗೆ ಹತ್ತಿರವಾಗಿದ್ದಾರೆ.

  ಆದರೆ ರಾಜ್ಯದ ವಾಣಿಜ್ಯ ನಗರದ ಮಂಗಳೂರು ಪೊಲೀಸರು ಮಾತ್ರ ಓಬಿರಾಯನ ಕಾಲದಲ್ಲೇ ಇರುವುದು ದುರಂತವೇ ಸರಿ.
  ಈ ಬಗ್ಗೆ ಈಗಲಾದರೂ ಮಂಗಳೂರು ನಗರ ಪೊಲೀಸ್‌ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರಿಗೆ ಪೊಲೀಸ್‌ ಇಲಾಖೆಯ ಮಾಹಿತಿ, ಅಧಿಕಾರಿಗಳ ಸಂಪರ್ಕ ಸಂಖ್ಯೆ, ಪೊಲೀಸ್‌ ಠಾಣಾ ಮಾಹಿತಿ ಸೇರಿ ಪ್ರತಿನಿತ್ಯ ಅಪರಾಧ ಪ್ರಕರಣ, ಇಲಾಖೆಯ ಪತ್ರಿಕಾ ಪ್ರಕಟಣೆಗಳ ಬಗ್ಗೆ ಗೊಂದಲಗಳು ಉಂಟಾಗಲಿದೆ.
  ಆಯ್ದ ಪತ್ರಕರ್ತರಿಗೆ ಮಾತ್ರ ಮಾಹಿತಿ
  ನಗರ ಪೊಲೀಸ್‌ ಕಮೀಷನರ್‌ ಕೆಲವು ಆಯ್ದ ಪತ್ರಕರ್ತರಿಗೆ ಮಾತ್ರ ಮಾಹಿತಿ ನೀಡುತ್ತಾರೆ ಎಂಬ ಆರೋಪ ಪತ್ರಕರ್ತರೇ ಮಾಡುತ್ತಿದ್ದಾರೆ. ಇದರಿಂದ ಎಲ್ಲಾ ಮಾಧ್ಯಮದವರಿಗೆ ಮಾಹಿತಿ ಸಿಗದೇ ಓದುಗರಿಗೂ ತಪ್ಪು ಮಾಹಿತಿ ರವಾನೆಯಾಗುತ್ತದೆ.

  ಈ ತಪ್ಪು ಮಾಹಿತಿ ರವಾನೆಯನ್ನು ತಪ್ಪಿಸುವ ಉದ್ದೇಶದಿಂದ ಹಲವು ಬಾರಿ ಪೊಲೀಸ್‌ ವೆಬ್‌ಸೈಟ್‌ ಅನ್ನು ಮೊದಲಿನಂತೆ ಸಕ್ರಿಯಗೊಳಿಸುವಂತೆ ಹಲವು ಪತ್ರಕರ್ತರು ಮತ್ತೆ ಮತ್ತೆ ಮನವಿ ಮಾಡಿದರೂ ಪೊಲೀಸ್‌ ಇಲಾಖೆ ಹಾಗೂ ಪೊಲೀಸ್‌ ಕಮೀಷನರ್‌ ಕ್ಯಾರೇ ಅನ್ನುತ್ತಿಲ್ಲ ಏಕೆ ಎಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ.

  DAKSHINA KANNADA

  ಕಪ್ಪೆಗಳ ಅಕ್ರಮ ಸಾಗಾಟ..! ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ..!

  Published

  on

  ಮಂಗಳೂರು (ಕಾರವಾರ): ಬಸ್‌ನಲ್ಲಿ ಗೋವಾಕ್ಕೆ ಸಾಗಾಟ ಮಾಡುತ್ತಿದ್ದ 41 ಬುಲ್‌ ಫ್ರಾಗ್‌ಗಳನ್ನು ಕಾರವಾರದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಬುಲ್ ಫ್ರಾಗ್ ಸಾಗಾಟ ಮಾಡುತ್ತಿದ್ದ ಇಬ್ಬರು ಗೋವಾ ಮೂಲದ ವ್ಯಕ್ತಿಗಳನ್ನು ಬಂಧಿಸಿ ಬಸ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ಬ್ರಿಡ್ಜ್‌ ಬಳಿ ಕಪ್ಪೆಗಳ ರಕ್ಷಣೆ ಮಾಡಲಾಗಿದೆ. ಗೋವಾ ಮೂಲದ ಕಾಣಕೋಣ ನಿವಾಸಿ ಸಿದ್ದೇಶ್ ದೇಸಾಯಿ ಬಸ್ ಚಾಲಕನಾಗಿದ್ದು, ನಿರ್ವಾಹಕ ಜಾನ್‌ ಲೂಲಿಮ್‌ ಬಂಧಿತರು.

  ಕಪ್ಪೆ ಅಕ್ರಮ ಸಾಗಾಣಿಕೆ ಹಿಂದಿರುವ ರಹಸ್ಯ..!

  ಬುಲ್‌ ಫ್ರಾಗ್‌ಗಳು ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇದರಿಂದ ತಯಾರಾಗುವ ಖಾದ್ಯಕ್ಕೆ ಗೋವಾದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಪ್ಪೆಗಳ ಕಾಲುಗಳನ್ನು ಕಡಿದು ಮಾಡುವ ಫ್ರೈ ಹಾಗೂ ಕಪ್ಪೆಗಳ ಚರ್ಮ ತೆಗೆದು ಮಾಡುವ ಫ್ರೈಗೆ ಇಲ್ಲಿ ಜಂಪಿಂಗ್ ಚಿಕನ್ ಎಂದು ಹೆಸರಿದೆ. ಗೋವಾದ ಜನರು ಹಾಗೂ ವಿದೇಶಿಗರು ಈ ಜಂಪಿಂಗ್ ಚಿಕನ್ ಗಿರಾಕಿಗಳಾಗಿದ್ದು, ಒಂದು ಪ್ಲೇಟ್‌ಗೆ 1500 ರೂಪಾಯಿಗೆ ಮಾರಾಟವಾಗುತ್ತದೆ. ಗೋವಾದಲ್ಲಿ ಈ ಕಪ್ಪೆಗಳು ಸಿಗದ ಕಾರಣ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಅಕ್ರಮ ರವಾನೆಯಾಗುತ್ತಿದೆ. ಕಾರಾವಾರ, ಅಂಕೋಲ ಸೇರಿದಂತೆ ಹಲವು ಜಾಗದಿಂದ ಈ ಕಪ್ಪೆಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಒಂದು ಕಪ್ಪೆಗೆ 500 ರೂಪಾಯಿಗಳ ಬೆಲೆ ಇದ್ದು, ಜೀವಂತವಾಗಿ ಈ ಕಪ್ಪೆಗಳ ಸಾಗಾಟ ಮಾಡಲಾಗುತ್ತದೆ.

  Continue Reading

  LATEST NEWS

  ಕೊತ ಕೊತ ಅಂತ ಕುದಿಯುತ್ತೆ ಈ ನದಿ! ಇದರ ಹಿಂದಿನ ರಹಸ್ಯ ಇಲ್ಲಿದೆ

  Published

  on

  ಶನಾಯ್-ಟಿಂಪಿಷ್ಕಾ ನದಿ ಇನ್ನಿತರ ನದಿಗಳಿಗಿಂತ ಭಿನ್ನವಾಗಿದ್ದು ಈ ನದಿಯ ನೀರು ಕುದಿಯುತ್ತಿರುತ್ತದೆ. ಏಕೈಕ ಕುದಿಯುವ ನದಿಯಾಗಿರುವ ಶನಾಯ್-ಟಿಂಪಿಷ್ಕಾ ಪೆರುವಿನ ಅಮೆಜಾನ್‌ನಲ್ಲಿದೆ. ಪೆರುವಿನಲ್ಲಿರುವ ಅಮೆಜಾನ್ ಮಳೆಕಾಡಿನ ಮಧ್ಯಭಾಗದಲ್ಲಿ ಹರಿಯುವ ಶನಾಯ್ ನದಿ, ನೈಸರ್ಗಿಕ ವಿಸ್ಮಯ ಎಂದೆನಿಸಿದ್ದು, ವಿಜ್ಞಾನಿಗಳನ್ನು, ಪರಿಶೋಧಕರನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

  ವಿಶ್ವದ ಏಕೈಕ ಕುದಿಯುವ ನದಿ

  ಅಮೆಜಾನ್ ನದಿಯ ಈ ಗಮನಾರ್ಹ ಉಪನದಿಯು 6.4 ಕಿಲೋಮೀಟರ್ (4.0 ಮೈಲುಗಳು) ಉದ್ದವನ್ನು ವ್ಯಾಪಿಸಿದೆ. ಇದು ವಿಶ್ವದ ಏಕೈಕ ಕುದಿಯುವ ನದಿ ಎಂದು ಹೆಸರುವಾಸಿಯಾಗಿದೆ. ನದಿಯ ನೀರು 45 ಡಿಗ್ರಿ ಸೆಲ್ಸಿಯಸ್‌ನಿಂದ 100 ಡಿಗ್ರಿ ಸೆಲ್ಸಿಯಸ್‌ವರೆಗೆ ಸುಡುವ ತಾಪಮಾನವನ್ನು ಹೊಂದಿದೆ. ಸೂರ್ಯನ ಶಾಖದಿಂದ ಕುದಿಯುವ ನೀರು ಎಂಬ ಅರ್ಥವನ್ನು ಶನಯ್-ಟಿಂಪಿಷ್ಕಾ ಹೆಸರು ಒಳಗೊಂಡಿದೆ.

  ಕೆಲವು ಭಾಗ ಬಿಸಿಯಾಗಿದೆ

  ಇನ್ನು ಈ ನೀರಿನಲ್ಲಿ ಇಳಿದು ಸ್ನಾನ ಮಾಡುವುದೇ ಅಸಂಭವ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ನಿಮ್ಮ ಅನಿಸಿಕೆ ತಪ್ಪು ಏಕೆಂದರೆ ಸಂಪೂರ್ಣ ನದಿಯ ನೀರು ಕುದಿಯುತ್ತಿಲ್ಲ ಕೆಲವು ಭಾಗ ಮಾತ್ರವೇ ಬಿಸಿ ನೀರನ್ನೊಳಗೊಂಡಿದೆ ಆದರೆ ಮುಳುಗು ಹಾಕಲು ಈ ನದಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ನದಿಯ ಬಿಸಿಯಿಂದ ಬೆಚ್ಚಗಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ಅನುಭವ ನಿಮಗುಂಟಾಗುತ್ತದೆ. ನೀರು ಕುದಿಯುತ್ತಿರುವ ಅನಿಸಿಕೆ ನಿಮಗುಂಟಾಗುತ್ತದೆ. ಇನ್ನು ಇಲ್ಲಿ ಯಾವುದೇ ಜಲಚರಗಳು ವಾಸಿಸುತ್ತಿಲ್ಲ ಏಕೆಂದರೆ ನದಿಯ ನೀರು ಕುದಿಯುತ್ತಿರುವ ಕಾರಣ ಯಾವುದೇ ಜೀವಿಗಳು ನೀರನಲ್ಲಿ ವಾಸಿಸುತ್ತಿಲ್ಲ.

  ವೈಜ್ಞಾನಿಕ ಸತ್ಯವೇನು?

  ವೈಜ್ಞಾನಿಕವಾಗಿ, ಮಳೆನೀರು ಅಮೆಜಾನ್ ಮಳೆಕಾಡಿನ ಮೇಲ್ಮೈಗೆ ನುಸುಳಿದಂತೆ, ಅದು ಭೂಮಿಯ ಹೊರಪದರದಲ್ಲಿ ಆಳದಲ್ಲಿ ಅನುಸರಿಸುತ್ತದೆ ಭೂಶಾಖದ ಗ್ರೇಡಿಯಂಟ್ ಕಾರಣದಿಂದಾಗಿ ನೀರನ್ನು ಗಮನಾರ್ಹವಾಗಿ ಬಿಸಿಮಾಡಲಾಗುತ್ತದೆ.

  Continue Reading

  FILM

  ದರ್ಶನ್ ಸರ್ ನನಗೆ ಗುರು ಸಮಾನರು…ಧರ್ಮೋ ರಕ್ಷತಿ ರಕ್ಷಿತಃ… ಎಂದ ನಟಿ ರಚಿತಾ ರಾಮ್; ಹೇಳಿದ್ದೇನು?

  Published

  on

  ಬೆಂಗಳೂರು : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಬಂಧನವಾಗಿದೆ. ಇತ್ತ ನಟ, ನಟಿಯರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇದೀಗ ರಚಿತಾ ರಾಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  “ಧರ್ಮೋ ರಕ್ಷತಿ ರಕ್ಷಿತಃ” ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನಮಸ್ಕಾರ..ಈ ನೋಟ್‌ನ ನಾನು ನಟಿಯಾಗಿ ಅಲ್ಲ ಸಾಮನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು..! ಎಂದಿದ್ದಾರೆ.

  ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು.

  ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ.

  ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ : ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

  ದರ್ಶನ್ ಹಾಗೂ ರಚಿತಾ ರಾಮ್ ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ತನ್ನ ಸಿನಿ ಜರ್ನಿ ಆರಂಭಿಸಿದ್ದೇ ದರ್ಶನ್ ಜೊತೆಗೆ, ಅದೂ ‘ಬುಲ್ ಬುಲ್’ ಚಿತ್ರದ ಮೂಲಕ. ಅಂಬರೀಶ, ಜಗ್ಗುದಾದಾ, ಕ್ರಾಂತಿ ಚಿತ್ರಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು.

  Continue Reading

  LATEST NEWS

  Trending