Tuesday, July 5, 2022

ಮಂಗಳೂರು ಗೋಡೆ ಬರಹ ಪ್ರಕರಣ : ಇಬ್ಬರು ಆರೋಪಿಗಳ ಬಂಧನ..!

ಮಂಗಳೂರು ಗೋಡೆ ಬರಹ ಪ್ರಕರಣ : ಇಬ್ಬರು ಆರೋಪಿಗಳ ಬಂಧನ..!

ಮಂಗಳೂರು : ಮಂಗಳೂರು ನಗರದಲ್ಲಿ ಇತ್ತೀಚೆಗೆ ಎರಡು ಕಡೆಗಳಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣಕ್ಕೆ‌ ಸಂಬಂಧಿಸಿ  ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿ ನಿವಾಸಿಗಳಾದ 21 ವರ್ಷದ ಮುಹಮ್ಮದ್ ಶಾಹಿಕ್ , ಮಾಝ್ ಮುನೀರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ‌ಕುಮಾರ್, ಬಂಧಿತ ಇಬ್ಬರು ಆರೋಪಿಗಳು ಕೂಡಿಕೊಂಡು ಈ ಕೃತ್ಯ ನಡೆಸಿದ್ದಾರೆ.

ಎಲ್ಲರಿಗೂ ಕಾಣುವ ಪ್ರದೇಶದ ಗೋಡೆಯಲ್ಲಿ ಬರೆದಿದ್ದಾರೆ. ಪ್ರಚಾರಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಂಧಿತ ಆರೋಪಿ ಶಾಹಿಕ್ ಮತ್ತು ಮುನೀರ್ ಮೊದಲಿನಿಂದಲೂ ಸ್ನೇಹಿತರು.

ಶಾಹಿಕ್ ಓರ್ವ ಸೇಲ್ಸ್‌ ಮ್ಯಾನ್ ಆಗಿದ್ದು, ಮುನೀರ್ ನಗರದಲ್ಲೇ ಬಿ.ಟೆಕ್ ಇಂಜಿನಿಯರ್ ವಿದ್ಯಾರ್ಥಿ ಎಂದು ಕಮಿಷನರ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ಕುಲಶೇಖರದ ಬಜ್ಜೋಡಿ ಎಂಬಲ್ಲಿ ನಡೆದಿದೆ.ಭಾರೀ ಮಳೆ ಹಿನ್ನಲೆ ವರ್ಕ್ ಶಾಪ್...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...