Connect with us

    LATEST NEWS

    ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಂದೂಡಿಕೆ

    Published

    on

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಹಾಗೂ 4 ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಇದೇ ಮಾರ್ಚ್ 2 ರಂದು ನಿಗಧಿಪಡಿಸಿ ತಿಳುವಳಿಕೆ ಪತ್ರವನ್ನು ಜಾರಿ ಮಾಡಲಾಗಿತ್ತು.


    ಆದರೆ ಈಗಾಗಲೇ ಮಾ.2ರಂದು ನಿಗದಿಯಾದ ಮೇಯರ್-ಉಪಮೇಯರ್ ಚುನಾವಣೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    BIG BOSS

    ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯಗೌಡ

    Published

    on

    ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡದ ಬಿಗ್​ಬಾಸ್​ ಸೀಸನ್​ 11 ಯಶಸ್ವಿಯಾಗಿ ಸಾಗುತ್ತಿದ್ದು 14ನೇ ವಾರಕ್ಕೆ ಎಂಟ್ರಿಕೊಟ್ಟಿದೆ. ಬಿಗ್​ಬಾಸ್​ ಕೊನೆ ಹಂತಕ್ಕೆ ಬರುವುದರಿಂದ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಕುದಿಯುತ್ತಿದ್ದು ತಮ್ಮನ್ನು ತಾವು ಎಚ್ಚರಿಸಿಕೊಳ್ಳಬೇಕಿದೆ. ಸೂಪರ್ ಸಂಡೇಯಲ್ಲಿ ಕಿಚ್ಚನಿಂದ ಭವ್ಯಗೌಡ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಭವ್ಯ ಟೀ ಚೆಲ್ಲಿದ್ದಾರೆ.

    ಬಿಗ್​ಬಾಸ್​ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.

    ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್​ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.

    ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ.

    Continue Reading

    LATEST NEWS

    ಏಕಾಏಕಿ ಗ್ಯಾ*ಸ್ ಸಿ*ಲಿಂಡರ್ ಸ್ಫೋ*ಟ; 9 ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂ*ಭೀರ

    Published

    on

    ಮಂಗಳೂರು/ಹುಬ್ಬಳಿ: ಏಕಾಏಕಿ ಗ್ಯಾ*ಸ್ ಸಿಲಿಂಡರ್ ಸ್ಫೋ*ಟಗೊಂಡ ಪರಿಣಾಮ 9 ಅಯ್ಯಪ್ಪ ಮಾಲಾಧಾರಿಗಳು ಗಂ*ಭೀರ ಗಾ*ಯಗೊಂಡಿರುವ ಘಟನೆ ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ 9 ಮಾಲಾಧಾರಿಗಳ ಸ್ಥಿತಿ ಚಿಂ*ತಾಜನಕವಾಗಿದೆ. ನಿನ್ನೆ (ಡಿ.22) ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಅಯ್ಯಪ್ಪ ಸ್ವಾಮಿಗಳು ಮಲಗಿದ್ದ ವೇಳೆ ಸಿಲಿಂಡರ್ ಸ್ಫೋ*ಟಗೊಂಡಿದೆ. ಗ್ಯಾ*ಸ್ ಲೀ*ಕ್ ಆಗಿ ದೀಪದ ಬೆಂ*ಕಿ ತಗುಲಿ ಬ್ಲಾ*ಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ.

     

    ಇದನ್ನು ಓದಿ : ಗ್ಯಾಸ್ ಸ್ಪೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ !

     

    ಈ ಅ*ವಘಡದಲ್ಲಿ ರಾಜು ಹರ್ಲಾಪುರ, ಬಾಲಕ ವಿನಾಯಕ ಬಾರಕೇರ, ಪ್ರಕಾಶ ಬಾರಕೇರ, ಶಂಕರ ರಾಯನಗುಂಡಿ, ಮಂಜು ತೋರದ, ಸಂಜಯ ಸವದತ್ತಿ, ಅಂಜು ಸ್ವಾಮಿ, ಪ್ರವೀಣ, ತೇಜಸ್ ರೆಡ್ಡಿ ಗಾ*ಯಾಳುಗಳು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಗಾ*ಯಾಳುಗಳನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ -ಧಾರವಾಡ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಫ್ಲೋರಿಡಾ ಕ್ರಿಸ್ಮಸ್ ಶೋನಲ್ಲಿ ಜನಸಂದಣಿಗೆ ಡ್ರೋನ್ ಡಿಕ್ಕಿ: ಹಲವರಿಗೆ ಗಾಯ

    Published

    on

    ಫ್ಲೋರಿಡಾ: ಕ್ರಿಸ್ಮಸ್ ಪ್ರದರ್ಶನದಲ್ಲಿ ಡ್ರೋನ್ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದ ನಂತರ ಮತ್ತು ಹೆಚ್ಚಿನ ವೇಗದಲ್ಲಿ ಕೆಳಗಿರುವ ಜನಸಮೂಹಕ್ಕೆ ಡಿಕ್ಕಿ ಹೊಡೆದ ನಂತರ ಎವೆರಾಲ್ ಜನರು ಗಾಯಗೊಂಡಿದ್ದಾರೆ.

    ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಒರ್ಲ್ಯಾಂಡೊ ಅಗ್ನಿಶಾಮಕ ಇಲಾಖೆ ನ್ಯೂಸ್ 6 ಗೆ ತಿಳಿಸಿದೆ. ಆದಾಗ್ಯೂ, ಇಬ್ಬರು ತಾಯಂದಿರು ತಮ್ಮ ಮಗ ರಾಕ್ಷಸ ಡ್ರೋನ್ನಿಂದ ಎದೆಗೆ ಹೊಡೆದ ನಂತರ “ಇಆರ್ನಲ್ಲಿ ತನ್ನ ಜೀವನಕ್ಕಾಗಿ ಹೋರಾಡುತ್ತಿದ್ದಾನೆ” ಎಂದು ಹೇಳಿದ್ದಾರೆ.

    ಘಟನೆಯ ವೀಡಿಯೊವು ಅಪಘಾತವನ್ನು ತೋರಿಸುತ್ತದೆ, ಪ್ರೇಕ್ಷಕರು ಉಸಿರುಗಟ್ಟುತ್ತಾರೆ ಮತ್ತು ಭಯಭೀತರಾದ ಮಕ್ಕಳು ಕಿರುಚುತ್ತಾರೆ. ಒರ್ಲ್ಯಾಂಡೊ ನಗರದ ಸಹಭಾಗಿತ್ವದಲ್ಲಿ ಸ್ಕೈ ಎಲಿಮೆಂಟ್ಸ್ ಡ್ರೋನ್ಗಳು ನಡೆಸುತ್ತಿರುವ ಸಂಜೆ 6:30 ರ ಪ್ರದರ್ಶನದ ಸಮಯದಲ್ಲಿ ನೂರಾರು ಕೆಂಪು ಮತ್ತು ಹಸಿರು ಡ್ರೋನ್ಗಳು ರಾತ್ರಿ ಆಕಾಶವನ್ನು ಬೆಳಗಿಸಿದವು. ಆದಾಗ್ಯೂ, ಮಾನವರಹಿತ ವಿಮಾನಗಳ ಸಮೂಹಗಳು ಇದ್ದಕ್ಕಿದ್ದಂತೆ ಶ್ರೇಣಿಗಳನ್ನು ಮುರಿಯಲು ಪ್ರಾರಂಭಿಸಿದವು, ಯಾವುದೇ ಮುನ್ಸೂಚನೆಯಿಲ್ಲದೆ ಭೂಮಿಗೆ ಇಳಿಯಲು ಪ್ರಾರಂಭಿಸಿದವು.

    ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾದ ಒಂದು ವೀಡಿಯೊದಲ್ಲಿ ಡ್ರೋನ್ಗಳು ನೆಲದ ಕಡೆಗೆ ಚಲಿಸುತ್ತಿರುವುದನ್ನು ತೋರಿಸುತ್ತದೆ, ಏಕೆಂದರೆ ನೆಲದಿಂದ “ಓಹ್” ಎಂಬ ಕೋರಸ್ ಕೇಳಬಹುದು. “ಏನಾಗುತ್ತಿದೆ?” ಎಂದು ಮಗು ಕೇಳುತ್ತಿರುವುದು ಕೇಳಿಸುತ್ತದೆ.

    ಅಪಘಾತದ ಹೊರತಾಗಿಯೂ ಪ್ರದರ್ಶನವು ಮುಂದುವರಿಯಿತು ಎಂದು ವರದಿಯಾಗಿದೆ. ಆದಾಗ್ಯೂ, ರಾತ್ರಿ 8 ಗಂಟೆಯ ಪ್ರದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಒರ್ಲ್ಯಾಂಡೊ ನಗರವು ಎಕ್ಸ್ ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.

    Continue Reading

    LATEST NEWS

    Trending