Monday, August 15, 2022

ಬಂಟ್ವಾಳ: ತಂದೆಗೆ ದೊಣ್ಣೆಯಿಂದ ಹೊಡೆದು ಮಗನಿಂದ ಹಲ್ಲೆ

ಬಂಟ್ವಾಳ: ಪದವಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಮಗನನ್ನು ‘ಉದ್ಯೋಗ ಮಾಡು’ ಎಂದು ಸಲಹೆ ನೀಡಿದ್ದ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಯಿಂದ ಹೊಡೆದ ಘಟನೆ ಬಂಟ್ವಾಳದ ಬಾಳ್ತಿಲ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಗೊಂಡವರನ್ನು ವಿಶ್ವನಾಥ (56) ಎಂದು ಗುರುತಿಸಲಾಗಿದೆ.

ತನ್ನ ಮಗನಾದ ಹಾರ್ದಿಕ್ ಪದವಿ ವಿದ್ಯಾಭ್ಯಾಸ್ ಮುಗಿಸಿ ಮನೆಯಲ್ಲಿ ಇದ್ದು, ಫೆ.28 ರಂದು ಬೆಳಿಗ್ಗೆ ತಂದೆ ಯಾವುದಾದರೂ ಉದ್ಯೋಗ ಮಾಡು ಎಂದು ಸಲಹೆ ನೀಡಿದ್ದರು.

ಈ ವೇಳೆ ಏಕಾಏಕಿ ಮನೆಯಿಂದ ಹೊರಗೆ ಹೋದವನು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಗೆ ಬಂದು ದೊಣ್ಣೆ ಹಿಡಿದು ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು, ಎಡಕಾಲಿಗೆ, ಎಡತೋಳಿಗೆ ಹೊಡೆದು ಗಾಯವನ್ನು ಉಂಟು ಮಾಡಿದಲ್ಲದೆ ಕೈಯಿಂದ ಬೆನ್ನಿಗೆ ಹೊಡೆದು ಮನೆಯಿಂದ ಹೊರಗೆ ಹೋಗಿದ್ದಾನೆ.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಅಬ್ಬಕ್ಕನ ನಾಡಿನಲ್ಲಿ ಅತೀ ಎತ್ತರದಲ್ಲಿ ಶಾಶ್ವತವಾಗಿ ಅರಳಿದ ತಿರಂಗಾ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ಹೊರವಲಯದ ಅತ್ಯಂತ ಎತ್ತರ ಧ್ವಜಸ್ತಂಭದಲ್ಲಿ ಇಂದು ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು.ತೊಕ್ಕೊಟ್ಟುವಿನ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಧ್ವಜಾರೋಹಣ...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...

ಮಂಗಳೂರು: ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರು ನಗರ ಹೊರವಲಯದ ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಫ್ರೆಂಡ್ಸ್ ಕ್ಲಬ್ ಅಡ್ಡೂರು ಇದರ ವತಿಯಿಂದ ಧ್ವಜಾರೋಹಣ ನಡೆಯಿತು.ಮೊದಲಿಗೆ ಅಡ್ಡೂರು ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ಧ್ವಜಸ್ತoಭವನ್ನು ನಿಕಟಪೂರ್ವ...