ಮಂಗಳೂರು ಬೋಟ್ ದುರಂತ : 5 ದಿನ ಕಳೆದರೂ ಸಿಗದ ಅನ್ವರ್ ಮೃತದೇಹ..!
ಮಂಗಳೂರು : ಮಂಗಳೂರು ಮೀನುಗಾರಿಕಾ ದೋಣಿ ದುರಂತ ಸಂಭವಿಸಿ 5 ದಿನಗಳಾಗಿದ್ದು ಶ್ರೀರಕ್ಷಾ ಬೋಟ್ ದುರಂತದಲ್ಲಿ ನಾಪತ್ತೆಯಾದ ಅನ್ವರ್ ಮೃತದೇಹ ಇನ್ನು ಕೂಡ ಪತ್ತೆಯಾಗಿಲ್ಲ.
5 ನೇ ದಿನವಾದ ಇಂದು ಕೂಡ ಅನ್ವರ್ ದೇಹಕ್ಕಾಗಿ ಶೋಧ ಕಾರ್ಯವನ್ನು ಮುಂದುವೆರೆಸಲಾಗಿದ್ದರೂ ಸ ಮೃತ ದೇಹ ಸಿಗುವ ಸಾದ್ಯತೆಗಳು ತೀರ ಕ್ಷೀಣಿಸಿವೆ ಎನ್ನಲಾಗಿದೆ.
ಸೋಮವಾರ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ಬೋಟ್ ಸಮುದ್ರದಲ್ಲಿ ದುರಂತಕ್ಕೀಡಾಗಿ ಆರು ಮಂದಿ ಸಮುದ್ರಪಾಲಾಗಿದ್ದರು.
ಇದರಲ್ಲಿ ಐದು ಮಂದಿಯ ಶವ ಪತ್ತೆಯಾಗಿತ್ತು. ಮೀನುಗಾರ ಅನ್ವರ್ ಮೃತದೇಹ ಪತ್ತೆ ಹಚ್ಚಿ ಮೇಲೆ ತರುವ ವೇಳೆ ಮುಳುಗು ತಜ್ಞರ ಕೈಜಾರಿ ಸಮುದ್ರದಾಳ ಸೇರಿತ್ತು. ಆ ಬಳಿಕ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ನಿನ್ನೆ ಕೂಡ ಎರಡು ಬೋಟ್ಗಳಲ್ಲಿ ತೆರಳಿದ್ದ ಮೀನುಗಾರರು, ಮುಳುಗು ತಜ್ಞರು ದಿನವಿಡೀ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಕೂಡ ಶೋಧ ಕಾರ್ಯ ಮುಂದುವರೆಯಲಿದೆ. ಜೊತೆಗೆ ಮೃತದೇಹ ಕಡಲ ತೀರಕ್ಕೆ ಬರುವ ಸಾಧ್ಯತೆಗಳು ಹೆಚ್ಚಿರುವುದರಿಂದ ತಟದಲ್ಲೂ ಗಸ್ತು ಹೆಚ್ಚಿಸಲಾಗಿದೆ.