Connect with us

    LATEST NEWS

    ಮಾದಕ ವಸ್ತು ಮಾರಾಟ ಜಾಲ ಬೇಧಿಸಿದ ಸಿಸಿಬಿ ಪೊಲೀಸರು..!

    Published

    on

    ನಿಷೇಧಿತ ಮಾದಕ ವಸ್ತು MDMA ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 70 ಗ್ರಾಂ MDMA ಸಹಿತ 4 ಲಕ್ಷದ 25 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನಿಷೇಧಿತ MDMA ಯನ್ನು ಸಾರ್ವಜನಿಕರಿಕೆ ಅಥವಾ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಮೂಲತಃ ಮಂಜೇಶ್ವರದ ನಿವಾಸಿಯಾಗಿದ್ದು, ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಟಿಪ್ಪುನಗರದಲ್ಲಿ ವಾಸವಾಗಿರುವ ಅಬ್ದುಲ್ ಶಾಕೀರ್(24), ಕುಂಜತ್ತೂರು ಉದ್ಯಾವರದ ಹಸನ್ ಆಶೀರ್(34), ಕಣ್ಣೂರು ಜಿಲ್ಲೆಯ ಪಯ್ಯನೂರಿನ ರಿಯಾಝ್‌,ಎ.ಕೆ(31), ವರ್ಕಾಡಿ ಪಾವೂರಿನ ನೌಷಾದ್‌(22), ಹಾಗೂ ಕುಂಜತ್ತೂರಿನ ಯಾಸೀನ್ ಇಮ್ರಾಜ್ ಯಾನೆ ಇಂಬು(35) ಬಂಧಿತ ಆರೋಪಿಗಳಾಗಿದ್ದಾರೆ.

    ಆರೋಪಿಗಳು ಬೆಂಗಳೂರು ಹಾಗೂ ಮತ್ತಿತರ ಕಡೆಯಿಂದ MDMA ಖರೀದಿಸಿ ಕರ್ನಾಟಕ ಹಾಗೂ ಕೇರಳದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಈ ಜಾಲದಲ್ಲಿ ಇವರಲ್ಲದೆ ಇನ್ನೂ ಅನೇಕರು ಭಾಗಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    LATEST NEWS

    ಹೆಲಿಕಾಪ್ಟರ್‌ ಪತನ; ಪೈಲಟ್ ಸಹಿತ ಮೂವರ ದುರ್ಮರಣ

    Published

    on

    ಪುಣೆ: ಪುಣೆ ಸಮೀಪದ ಬವ್ಧಾನ್‌ನ ಗುಡ್ಡೆಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೂವರು ಇಂದು (ಅ.2) ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


    ಬೆಳಗ್ಗೆ 6.45ರ ಸುಮಾರಿಗೆ ಗುಡ್ಡೆಗಾಡು ಪ್ರದೇಶದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಇಬ್ಬರು ಪೈಲಟ್ ಮತ್ತು ಇಂಜಿನಿಯರ್ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


    ಇನ್ಸ್ಪೆಕ್ಟರ್ ಕನ್ಹಯ್ಯಾ ಥೋರಟ್ ಪ್ರಕರಣ ಕುರಿತು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಹೆಲಿಕಾಪ್ಟರ್ ಯಾರಿಗೆ ಸೇರಿದ್ದು ಎಂದು ಇನ್ನೂ ಖಚಿತವಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾ ನಡೆಯುತ್ತಿದೆ ಎಂದು ಹೇಳಿದ್ದಾರೆ.
    ದಟ್ಟವಾದ ಮಂಜಿನಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂಬ ವರದಿ ದಾಖಲಾಗಿದೆ.

    Continue Reading

    BIG BOSS

    ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ ಕೊಟ್ಟ ಬಿಗ್​ ಬಾಸ್! ಕಿತ್ತಾಡಿಕೊಂಡ ಜಗದೀಶ್​​-ಧನ್​ರಾಜ್​

    Published

    on

    ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಶುರುವಾಗಿ 4 ದಿನ ಕಳೆದಿದೆ. ಜೊತೆಗೆ ಮೊದಲ ವಾರದ ಅಂತ್ಯಕ್ಕೂ ಮುನ್ನವೇ ಬಿಗ್​ ಬಾಸ್​ನಲ್ಲಿ ನಾಮಿನೇಶನ್​ ಬಿಸಿ ಜೋರಾಗಿದೆ. ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್​ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.

    ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್​ ಆಗಿದ್ದಾರೆ. ಆದರೆ ನಾಮಿನೇಟ್​ ಆದ ಸ್ಪರ್ಧಿಗಳಿಗೆ ಬಿಗ್​ ಬಾಸ್​​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.

    ಧನ್​ರಾಜ್ ಆಚಾರ್​ ಟಾಸ್ಕ್​ ರೆಫ್ರಿಯಾಗಿದ್ದು, ನಾಮಿನೇಟ್​​ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್​ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್​ ಮತ್ತು ಯಮುನಾ ಟಾಸ್ಕ್​ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್​​ ರೆಫ್ರಿ ಮತ್ತು ಜಗದೀಶ್​ ನಡುವೆ ಜಗಳ ಶುರುವಾಗಿದೆ.

    ಧನ್​ರಾಜ್​ ಮತ್ತು ಜಗದೀಶ್​ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್​​ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್​ರಾಜ್​ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್​ರಾಜ್​ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಜವಾಗಿದ್ದು, ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ. ಜೊತೆಗೆ ಮಾತು, ಜಗಳ, ಆಟ, ಬಿಗ್​ ಬಾಸ್​ ಮನೆಯಲ್ಲಿ ಏನೇನಾಯ್ತು ಎಂಬುದನ್ನು ಕಾಣುವ ತವಕ ಎಲ್ಲರಲ್ಲೂ ಹೆಚ್ಚಾಗಿದೆ.

    Continue Reading

    LATEST NEWS

    ಚಲಿಸುತ್ತಿದ್ದ ರೈಲಿನಿಂದ ಉರುಳಿ ಕೆಳಗೆ ಗದ್ದೆಗೆ ಬಿದ್ದ ವ್ಯಕ್ತಿ ಗಂಭೀರ !!

    Published

    on

    ಕೋಟ: ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ (ಅ.1) ಮಧ್ಯಾಹ್ನ ಕುಂದಾಪುರ ತಾಲೂಕಿನ ಬೇಳೂರು ಕಂಬಳಗದ್ದೆ ಸಮೀಪ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದಿದೆ.


    ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕನೊಬ್ಬ ಆಯಾತಪ್ಪಿ ಗದ್ದೆಗೆ ಉರುಳಿ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಪ್ರಕರಣ ದಾಖಲಾಗಿದೆ.
    ಆತನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದ ಮಹಿಳೆಯು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಧಾವಿಸಿ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
    ಗಂಭೀರ ಗಾಯಗೊಂಡ ವ್ಯಕ್ತಿ ಉತ್ತರ ಭಾರತ ಮೂಲದವರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    Trending