Connect with us

  LATEST NEWS

  ಟಿಕ್‌ಟಾಕ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು – ಗಂಡನಿಂದಲೇ ನಡೆಯಿತು ಘೋರ ಕೃತ್ಯ..!

  Published

  on

  ಯೂಟ್ಯೂಬ್​ ಶಾರ್ಟ್ಸ್​ ಮತ್ತು ಇನ್​ಸ್ಟಾಗ್ರಾಂ ರೀಲ್ಸ್​ ಇಂದು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿಭೆಗೆ ಒಂದು ಉತ್ತಮ ವೇದಿಕೆಯಾದರೂ ಕೂಡ ಕೆಲವೊಮ್ಮೆ ಇದೇ ರೀಲ್ಸ್​ ಮತ್ತು ಶಾರ್ಟ್ಸ್​ ಪ್ರಾಣಕ್ಕೂ ಸಂಚಕಾರ ತರುತ್ತಿದೆ.

  ಮಂಡ್ಯ:ಯೂಟ್ಯೂಬ್​ ಶಾರ್ಟ್ಸ್​ ಮತ್ತು ಇನ್​ಸ್ಟಾಗ್ರಾಂ ರೀಲ್ಸ್​ ಇಂದು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿಭೆಗೆ ಒಂದು ಉತ್ತಮ ವೇದಿಕೆಯಾದರೂ ಕೂಡ ಕೆಲವೊಮ್ಮೆ ಇದೇ ರೀಲ್ಸ್​ ಮತ್ತು ಶಾರ್ಟ್ಸ್​ ಪ್ರಾಣಕ್ಕೂ ಸಂಚಕಾರ ತರುತ್ತಿದೆ.

  ಇದೀಗ ಇದೇ ರೀಲ್ಸ್​ ಯುವತಿಯೊಬ್ಬಳ ಪ್ರಾಣವನ್ನು ತೆಗೆದಿದೆ. ರೀಲ್ಸ್​ನಿಂದ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಯುವತಿ ತನ್ನ ಗಂಡನಿಂದಲೇ ಬರ್ಬರ ಹತ್ಯೆಯಾಗಿದ್ದಾಳೆ.

  ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲಿನಲ್ಲಿ ನಡೆದಿದೆ.

  ಮೃತ ಯುವತಿಯನ್ನು ಪೂಜಾ (26) ಎಂದು ಗುರುತಿಸಲಾಗಿದೆ. ತನ್ನ ಪತಿ ಶ್ರೀನಾಥ್​ (36)ನಿಂದ ಹತ್ಯೆಯಾಗಿದ್ದಾಳೆ.

  ಪೂಜಾ ಯಾವಾಗಲೂ ರೀಲ್ಸ್​ನಲ್ಲಿ ಬಿಜಿಯಾಗಿರುತ್ತಿದ್ದಳು. ಇಷ್ಟೇ ಅಲ್ಲದೆ, ಸ್ನೇಹಿತರೊಂದಿಗೂ ಚಾಟಿಂಗ್​ ಮಾಡುತ್ತಿದ್ದಳು.

  ಯಾವಾಗಲೂ ಮೊಬೈಲ್​ನಲ್ಲಿ ಮುಳುಗಿರುತ್ತಿದ್ದ ಪೂಜಾಳನ್ನು ನೋಡಿ ಗಂಡನಿಗೆ ಸಂಶಯ ಶುರುವಾಗಿತ್ತು.

  ಪರಪುರುಷನೊಂದಿಗೆ ತನ್ನ ಪತ್ನಿಗೆ ಅನೈತಿಕ ಸಂಬಂಧ ಇರಬಹುದೆಂಬ ಅನುಮಾನ ಬಲವಾಯಿತು.

  ಇದೇ ಅನುಮಾನ ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ. ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

  ಕೊಲೆ ಮಾಡಿದ 3 ದಿನ ಬಳಿಕ 102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

  ಪೂಜಾ ಹಾಗೂ ಶ್ರೀನಾಥ್, 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿಯೇ ಬದುಕುತ್ತಿದ್ದರು.

  ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಸಹ ಇದೆ. ಆದರೆ, ಕೆಲವು ವರ್ಷಗಳಿಂದ ಪೂಜಾಗೆ ರೀಲ್ಸ್​ ಮತ್ತು ಶಾರ್ಟ್ಸ್​ ಮೇಲಿನ ವ್ಯಾಮೋಹವನ್ನು ಬೆಳೆಸಿಕೊಂಡಿದ್ದಳು.

  ರೀಲ್ಸ್ ಮಾಡುವ ಜೊತೆಗೆ ಹೆಚ್ಚೆಚ್ಚು ಫೋನ್ ಬಳಸುತ್ತಿದ್ದಳು. ಅತಿಯಾದ ಫೋನ್ ಬಳಕೆಯಿಂದಾಗಿ ದಾಂಪತ್ಯದಲ್ಲಿ ಬಿರುಕು ಮೂಡಿ ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

  ಪರಪುರುಷರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತ ಅನುಮಾನ ವ್ಯಕ್ತಪಡಿಸಿ ಶ್ರೀನಾಥ್ ಜಗಳ ಆಡುತ್ತಿದ್ದ. ಇದೇ ಜಗಳ ಮೂರು ದಿನಗಳ ಹಿಂದೆ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಶ್ರೀನಾಥ್​, ವೇಲ್​ನಿಂದ ಪೂಜಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

  ಕೊಲೆ ಮಾಡಿದ ಬಳಿಕ ಶವ ಸಾಗಿಸಲು ಮಾವನೇ ಅಳಿಯನಿಗೆ ಸಾಥ್ ನೀಡಿದ್ದಾರೆ. ಅಳಿಯನೊಂದಿಗೆ ಸೇರಿ ತನ್ನ ಮಗಳ ಶವವನ್ನು ಕಾವೇರಿ ನದಿಗೆ ಎಸೆದು ಬಂದಿದ್ದರು.

  ಇದಕ್ಕು ಮುನ್ನ ಕೊಲೆಗೈದ ಬಳಿಕ ಶ್ರೀನಾಥ್​, ತನ್ನ ಮಾವ ಶೇಖರ್​ಗೆ ಕರೆ ಮಾಡಿ, ಕೊಲೆ ಮಾಡಿರುವುದನ್ನು ತಿಳಿಸಿದ್ದ.

  ಮಗಳ ಕೊಲೆ ಬಗ್ಗೆ ತಿಳಿದರೂ ಅದನ್ನು ಪೊಲೀಸರಿಗೆ ಹೇಳದೆ ಅಳಿಯನಿಗೆ ಶೇಖರ್​ ಸಾಥ್ ನೀಡಿದ್ದಾರೆ. ಮನೆಯಿಂದ ಬೈಕ್ ನಲ್ಲಿ ಶವ ಸಾಗಿಸಿ, ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದು ಬಂದಿದ್ದಾರೆ.

  ಕಳೆದ ಸೋಮವಾರ ಈ ಕೊಲೆ ನಡೆದಿದೆ. ಹತ್ಯೆಯ ಬಳಿಕವೂ ಮನೆಯಲ್ಲೇ ಇದ್ದ ಶ್ರೀನಾಥ್, ಮೂರು ದಿನಗಳ ಬಳಿಕ ನಿಮಿಷಾಂಭ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ್ದ.

  ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ. ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಅತ್ತ ಮಗಳ ಶವವನ್ನು ನದಿಗೆಸೆದು ಬಂದಿದ್ದ ಶೇಖರ್​, ಹೋಟೆಲ್ ಕೆಲಸದಲ್ಲಿ ತೊಡಗಿದ್ದ. ಇದೀಗ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಅರಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  LATEST NEWS

  ಜಮೀನಿಗಾಗಿ ಸ್ವಾಮೀಜಿಗಳ ಕಿತ್ತಾಟ..! ಹ*ಲ್ಲೆಗೆ ಓರ್ವ ಸ್ವಾಮೀಜಿ ಬ*ಲಿ

  Published

  on

  ಮಂಗಳೂರು ( ಕೋಲಾರ ) : ಎರಡು ಸ್ವಾಮೀಜಿಗಳ ಜಮೀನು ಗಲಾಟೆಯಲ್ಲಿ ನಡೆದ ಹೊಡೆದಾಟದಲ್ಲಿ ಓರ್ವ ಸ್ವಾಮೀಜಿ ಕೊ*ಲೆಯಾದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದ ‘ಆಚಾರ್ಯ ಚಿನ್ಮಯಾನಂದ’ (65) ಹ*ತ್ಯೆಯಾದ ಸ್ವಾಮೀಜಿ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಹ*ತ್ಯೆ ನಡೆದಿದೆ ಎನ್ನಲಾಗಿದೆ.

  ಆಶ್ರಮದ ಜಮೀನು ವಿಚಾರವಾಗಿ ಈ ಎರಡೂ ಸ್ವಾಮಿಗಳ ನಡುವೆ ಹಲವು ಸಮಯದಿಂದ ವಿವಾದ ನಡೆಯುತ್ತಿತ್ತು. ವಿವಾದ ಕೋರ್ಟ್‌ ಮೆಟ್ಟಿಲೇರಿದ್ರೂ ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಇಂದು ಕೋರ್ಟ್‌ಗೆ ದಾಖಲೆ ತೆಗೆದುಕೊಂಡು ಹೋಗುತ್ತಿದ್ದ ಆಚಾರ್ಯ ಚಿನ್ಮಯಾನಂದ ಸ್ವಾಮಿ ಮೇಲೆ ಆಚಾರ್ಯ ಧರ್ಮ ಪ್ರಾಣನಂದರ ಗುಂಪಿನಿಂದ ಹ*ಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡ ಚಿನ್ಮಾಯಾನಂದ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಚಿನ್ಮಯಾನಂದ ಸ್ವಾಮಿ ಅಸುನೀಗಿದ್ದಾರೆ. ಇದೀಗ ಆರೋಪಿ ಸ್ವಾಮಿ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

  Continue Reading

  LATEST NEWS

  ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

  Published

  on

  ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮಳೆಯು 5 ದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿಯಲಿದೆ. ಬಲವಾದ ಗಾಳಿ ಜೊತೆಗೆ ಮಳೆ ಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

  ಹೇಗಿರುತ್ತೆ ಮಳೆಯ ಆರ್ಭಟ..?

  22/06/2024: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಚದುರಿದ ಭಾರೀ ಮಳೆ ಆಗಲಿದೆ. ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳ ಕರ್ನಾಟಕದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಚದುರಿದ ಭಾರೀ ಮಳೆ ಆಗಲಿದೆ. ಗುಡುಗು ಸಹಿತ ಭಾರೀ ಗಾಳಿ ಕೂಡ ಬೀಸಲಿದ್ದು, 30-40 kmph ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

  23/06/2024: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಚದುರಿದ ಮಳೆ ಆಗಲಿದೆ. ಗುಡುಗು ಸಹಿತ ಭಾರೀ ಮಳೆ ಆಗಲಿದೆ. ದಕ್ಷಿಣ ಒಳ ಕರ್ನಾಟಕದ ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಚದುರಿದ ಭಾರೀ ಗಾಳಿ ಮಳೆ ಆಗಲಿದೆ. 30-40 kmph ವೇಗದಲ್ಲಿ ಗಾಳಿ ಬೀಸಲಿದೆ. ಉತ್ತರ ಒಳ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳ ಕರ್ನಾಟಕದ ದಾವಣಗೆರೆ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ.

  24/06/2024: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ಉತ್ತರ ಒಳ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗಲಿದೆ.

  25-26/06/2024: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

  Continue Reading

  LATEST NEWS

  ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ : ಉಳ್ಳಾಲ ಪೊಲೀಸ್

  Published

  on

  ಉಳ್ಳಾಲ: ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರು ಠಾಣಾ ವ್ಯಾಪ್ತಿಯ ಕೆಲವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ಮನೆಗಳಿಗೆ ತೆರಳುತ್ತಿರುವ ಬಗ್ಗೆ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಠಾಣಾ ವ್ಯಾಪ್ತಿಯ ಜನರು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು ಎಂದು ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.

  ಈ ಪ್ರದೇಶದಲ್ಲಿ ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ. ಮನೆ ಬಳಿ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು. ಅಪರಿಚಿತರು ಎಂದು ಕಂಡು ಬಂದಲ್ಲಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Continue Reading

  LATEST NEWS

  Trending