Connect with us

    LATEST NEWS

    ಬಾಲಕಿ ಮೇಲೆ ಲೈಂಗಿ*ಕ ದೌರ್ಜ*ನ್ಯ ಎಸಗಿ ಕೊ*ಲೆ ಮಾಡಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟ

    Published

    on

    ಮಂಗಳೂರು/ಬೆಳಗಾವಿ : ಮೂರು ವರ್ಷದ  ಬಾಲಕಿಯ ಮೇಲೆ ಕ್ರೌ*ರ್ಯ ಮೆರೆದಿದ್ದ ಕಾಮುಕನಿಗೆ ಗ*ಲ್ಲುಶಿಕ್ಷೆ ವಿಧಿಸಲಾಗಿದೆ. ಬೆಳಗಾವಿಯ ಪೋಕ್ಸೋ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಬಾಲಕಿಯ ಮೇಲೆ ದೌರ್ಜ*ನ್ಯ ಎಸಗಿದ್ದ ಕಾಮುಕನಿಗೆ ಗ*ಲ್ಲು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

    2017ರಲ್ಲಿ ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ(32) ಎಂಬಾತ ಬಾಲಕಿಯ ಮೇಲೆರಗಿ ಹ*ತ್ಯೆ ಮಾಡಿದ್ದ. ಈ ಘಟನೆ ಬಗ್ಗೆ ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಏನಿದು ಘಟನೆ?

    ಮನೆಯ ಮುಂದೆ ಆಟವಾಡ್ತಿದ್ದ  ಬಾಲಕಿಯನ್ನು ಚಾಕೊಲೇಟ್ ಕೊಡಿಸಿ ಆರೋಪಿ ಉದ್ದಪ್ಪ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿ*ಕ ದೌರ್ಜ*ನ್ಯ ಎಸಗಿದ್ದ. ನಂತರ ಬಾಲಕಿಯ ಕಣ್ಣು, ಮೂಗಿಗೆ ಮಣ್ಣು ಹಾಕಿ ಕೊ*ಲೆ ಮಾಡಿದ್ದ.

    ಇದನ್ನೂ ಓದಿ : ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದ ಮಂಗಳೂರಿಗರು..! ಬೃಹತ್ ಪ್ರತಿಭಟನೆ..!

    ಈ ಪ್ರಕರಣ ಸಂಬಂಧ ಕೂಲಂಕಷವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು 45 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.

    LATEST NEWS

    ಗರ್ಭಿಣಿ ನೇ*ಣು ಬಿಗಿದು ಆತ್ಮ*ಹ*ತ್ಯೆ – ಕಿರುಕುಳ ನೀಡುತ್ತಿದ್ದ ಗಂಡ ಅರೆಸ್ಟ್..!

    Published

    on

    ಕಾಸರಗೋಡು: ಮೂರು ತಿಂಗಳ ಗರ್ಭಿಣಿ ನೇ*ಣು ಬಿಗಿದು ಆತ್ಮ*ಹ*ತ್ಯೆ ಗೈದ ಪ್ರಕರಣಕ್ಕೆ ಸಂಬಂಭಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

    ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ ಆರೋಪಿ.

    ಹೆಂಡತಿ ಮಂಗಳೂರು ವಾಮಂಜೂರು ಪಿಲಿಕುಳದ ವಿಜೇತ (32) ಆಗಸ್ಟ್ 18 ರಂದು ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ನಡೆಸಿದ ತನಿಖೆಯಿಂದ ವಿಜೇತ ಆತ್ಮ*ಹ*ತ್ಯೆ ಕುರಿತು ಬರೆದಿಟ್ಟಿದ್ದ ಡೆ*ತ್ ನೋಟ್ ಲಭಿಸಿತ್ತು. ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಆತ್ಮ*ಹ*ತ್ಯೆ ಮಾಡಿಕೊಂಡಿರುವುದಾಗಿ ತನಿಖೆಯಿಂದ ಸ್ಪಷ್ಟಗೊಂಡಿತ್ತು.

    ವಿಜೇತರ ಸಾವಿಗೆ ಜನಾರ್ಧನನ ಕಿರುಕುಳ ಕಾರಣ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆರೋಪಿಯನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಬಂಧಿತನನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    Continue Reading

    LATEST NEWS

    ಟೆಸ್ಟ್ ಪಂದ್ಯ ಮೊದಲ ದಿನ ಅನಾಹುತ; ಅಸ್ವಸ್ಥಗೊಂಡ ಬಾಂಗ್ಲಾ ಹುಲಿ ರಾಬಿ

    Published

    on

    ಮಂಗಳೂರು/ಕಾನ್ಪುರ: ಟೆಸ್ಟ್ ಪಂದ್ಯದ ಮೊದಲ ದಿನವೇ ಗಲಾಟೆ ನಡಿದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.


    ಬಾಂಗ್ಲಾ ದೇಶದ ಹುಲಿ ವೇಷದಾರಿ ಟೈಗರ್‌ ರಾಬಿಗೆ ಕಾನ್ಪುರ ಪ್ರೇಕ್ಷಕರು ಥಳಿಸಿದ ಪರಿಣಾಮದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುವುದು ವರದಿಯಾಗಿತ್ತು. ಬಳಿಕ ಪೊಲೀಸರು “ರಾಬಿಗೆ ಪ್ರೇಕ್ಷಕರು ಹೊಡೆದಿಲ್ಲ. ನಿರ್ಜಲೀಕರಣದಿಂದ ಕುಸಿದು ಬಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ” ಎಂದರು.
    ಬಾಂಗ್ಲಾ ದೇಶದವರು ರಾಬಿಗೆ ಧ್ವಜ ಹಿಡಿದು ಉತ್ಸಾಹ ನೀಡುತ್ತಿದ್ದರು. ಆದರೆ ಅಲ್ಲಿ ಏನು ನಡೆದಿದೆ ಎನ್ನುವುದು ಖಚಿತವಾಗಿಲ್ಲ.
    ಒಮ್ಮೆಯೇ ಹೊಟ್ಟೆ ಹಿಡಿದು ನರಳುತ್ತಾ ರಾಬಿ ಹೊರಗೆ ಬಂದಾಗ ಅವನನ್ನು ಉಪಚರಿಸಿದ್ದು, ನಂತರ ಕುಸಿದು ಬಿದ್ದಾಗ ಆತನನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ ಎನ್ನಲಾಗಿದೆ.
    ಅಪಾಯದ ಕುರಿತಾಗಿ ರಾಬಿ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. “ಸಮಯಕ್ಕೆ ಸರಿಯಾಗಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಕಾರಣ ನಾನು ಆರೋಗ್ಯವಾಗಿದದ್ದೇನೆ” ಎಂದು ರಾಬಿ ಸ್ವತಃ ಹೇಳಿಕೆ ನೀಡಿದ್ದಾರೆ.

    Continue Reading

    LATEST NEWS

    ಮಂಗಳೂರು ವಿಮಾನ ನಿಲ್ಧಾಣದ ಭದ್ರತೆಯಿಂದ ಜೂಲಿ ನಿವೃತ್ತಿ

    Published

    on

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಶ್ವಾನ, ಲ್ಯಾಬ್ರಡಾರ್‌ ತಳಿಗೆ ಸೇರಿದ ಜ್ಯೂಲಿಗೆ ನಿವೃತ್ತಿ ಘೋಷಿಸಲಾಗಿದೆ.

    ಸಿಐಎಸ್‌ಎಫ್‌ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ನಿನ್ನೆ ನಡೆಯಿತು. ಜೂಲಿ 2013ರ ಮಾರ್ಚ್‌ 26ಕ್ಕೆ ಸೇವೆಗೆ ಸೇರಿದ್ದಳು. ಆಕೆಯ ಜಾಗಕ್ಕೆ ರಿಯೋನನ್ನು ಸೇರ್ಪಡೆ ಮಾಡಲಾಗಿದೆ. ನಿವೃತ್ತಳಾದ ಜೂಲಿಗೆ ಹೂಮಾಲೆ ಹಾಕಿ, ಕೇಕ್‌ ಕತ್ತರಿಸಿ ಪ್ರೀತಿ ತೋರಿದ ಸಿಐಎಸ್‌ಎಫ್‌ ಸಿಬಂದಿ, ಹೂಗಳಿಂದ ಅಲಂಕರಿಸಲಾದ ಪುಟ್ಟ ಟ್ರಾಲಿಯಲ್ಲಿ ಕೂರಿಸಿ, ಅದನ್ನು ಎಲ್ಲರೂ ಸೇರಿ ಎಳೆಯುವ ಮೂಲಕ ಗೌರವಿಸಿದರು.

    ಸುದೀರ್ಘ‌ ಕಾಲ ಸೇವೆ ಬಳಿಕ ಶ್ವಾನದಳ ಕೆಲಸದ ಒತ್ತಡದಿಂದ ತಮ್ಮ ಸೂಕ್ಷ್ಮತೆಯನ್ನು ನಿಧಾನವಾಗಿ ಕಳೆದುಕೊಳ್ಳುವುದರಿಂದ ಹಾಗೂ ಅವುಗಳ ಮೇಲೆ ಅಧಿಕ ಒತ್ತಡ ಹೇರದಿರುವ ಉದ್ದೇಶದಿಂದ ಅವುಗಳನ್ನು ನಿವೃತ್ತಿ ಮಾಡಲಾಗುತ್ತದೆ. ಇದೀಗ ಜೂಲಿಯನ್ನು ಅವಳ ಹ್ಯಾಂಡ್ಲರ್‌ ಆಗಿರುವ ಸಿಐಎಸ್‌ಎಫ್‌ ಯೋಧ ಕುಮಾರ್‌ ದತ್ತು ಸ್ವೀಕರಿಸಿದ್ದಾರೆ.

    ಪ್ರಸ್ತುತ 11 ತಿಂಗಳ ರಿಯೋ ಝಾರ್ಖಂಡ್‌ನ‌ ರಾಂಚಿಯ ಕೇಂದ್ರೀಯ ಸಶಸ್ತ್ರ ಬಲಗಳ ಡಾಗ್‌ಸ್ಕ್ವಾಡ್‌ ತರಬೇತಿ ಕೇಂದ್ರದಿಂದ ತರಬೇತಿ ಪಡೆದು ವಿಮಾನ ನಿಲ್ದಾಣದ ಸಿಐಎಸ್‌ಎಫ್‌ಗೆ ಸೇರ್ಪಡೆಗೊಂಡಿದೆ. ಪ್ರಸ್ತುತ ಇಲ್ಲಿ ಜೂಲಿ ನಿವೃತ್ತಿ ಬಳಿಕ ಲ್ಯಾಬ್‌ ತಳಿಯ ರಿಯೋ, ಗೋಲ್ಡನ್‌ ರಿಟ್ರೀವರ್‌ ತಳಿಯ ಗೋಲ್ಡಿ, ಹಾಗೂ ಬೆಲ್ಜಿಯನ್‌ ಮಲಿನೊಯ್ಸ್ ತಳಿಯ ಮ್ಯಾಕ್ಸ್‌ ಮತ್ತು ರೇಂಜರ್‌ ಶ್ವಾನಗಳಿವೆ.

    Continue Reading

    LATEST NEWS

    Trending