LATEST NEWS
ಚಾಮರಾಜನಗರ: ಒಂಟಿ ಸಲಗದೆದುರು ಭೂಪನೋರ್ವನ ಸಾಷ್ಟಾಂಗ ನಮಸ್ಕಾರ..!
Published
3 years agoon
By
Adminಚಾಮರಾಜನಗರ: ಮಧ್ಯ ವಯಸ್ಕ ವ್ಯಕ್ತಿಯೋರ್ವ ಒಂಟಿ ಸಲಗಕ್ಕೆ ಅಡ್ಡ ಬೀಳುವುದನ್ನು ಕಂಡ ಆನೆ ಗಲಿಬಿಲಿಗೊಂಡು ಕಾಡಿನೊಳಕ್ಕೆ ಹಿಂದಿರುಗಿರುವ ಘಟನೆ ಚಾಮರಾಜನಗರ ಗಡಿ ಕಾರೆಪಾಳ್ಯ ಸಮೀಪ ಬುಧವಾರದಂದು ನಡೆದಿದೆ.
ಈ ಮಾರ್ಗದಲ್ಲಿ ರಾತ್ರಿ ಸಂಚಾರ ನಿರ್ಬಂಧದಿಂದ ಟ್ರಾಫಿಕ್ ಜಾಂ ಉಂಟಾಗಿ ಎಲ್ಲಾ ಲಾರಿಗಳು ಸಾಲಾಗಿ ನಿಲ್ಲಿಸಿಕೊಂಡಿದ್ದ ವೇಳೆ ಎಂದಿನಂತೆ ಕಬ್ಬಿಗಾಗಿ ಆನೆಯೊಂದು ರಸ್ತೆ ಬದಿ ಬಂದು ನಿಂತಿದೆ.
ಆ ವೇಳೆ ದಿಢೀರನೇ ಎಂಟ್ರಿ ಕೊಟ್ಟ ವ್ಯಕ್ತಿಯೋರ್ವ ಆನೆ ಬಳಿ ತೆರಳಿ ಕೈ ಮುಗಿದು ಅಡ್ಡಬಿದ್ದಿದ್ದಾನೆ. ಆನೆ ಒಮ್ಮೆ ಕೂಗಿ ಕೋಪ ತೋರಿಸಿದರೂ ಬಿಡದ ಈತ ಆನೆಯನ್ನು ಹಿಂಬಾಲಿಸಿ ಮತ್ತೊಮ್ಮೆ ಆನೆಯೆದುರು ಅಡ್ಡ ಬಿದ್ದಿದ್ದಾನೆ.
ಆನೆ ದಾಳಿ ಮಾಡಲು ಮುಂದಾದರೂ ಚಲಿಸದೇ ನಿರ್ಭೀತಿಯಾಗಿ ನಿಂತಿದ್ದ ಈತನ ವರ್ತನೆಯಿಂದ ಗಲಿಬಿಲಿಗೊಂಡ ಸಲಗ ಕಾಡಿನತ್ತ ಮರಳಿದೆ.
ಈ ವ್ಯಕ್ತಿ ಈಶಾನ್ಯ ರಾಜ್ಯದವನಂತೆ ಕಂಡುಬರುತ್ತಿದ್ದು ಮಾನಸಿಕ ಅಸ್ವಸ್ಥನೋ ಅಥವಾ ಮಾದಕ ವಸ್ತು ಸೇವಿಸಿದ್ದನೋ ಎಂಬುದು ತಿಳಿದುಬಂದಿಲ್ಲ. ಅಲ್ಲಿದ್ದ ಲಾರಿ ಚಾಲಕರು ಈ ವಿಡಿಯೋ ಸೆರೆ ಹಿಡಿದಿದ್ದಾರೆ.
ಆನೆ ಬಳಿ ಹೋಗದಂತೆ ಸಾಕಷ್ಟು ಬಾರಿ ಕೂಗಿ ಕರೆಯುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
LATEST NEWS
BBK 11: ರಜತ್‌ಗೆ ಟಾರ್ಗೆಟ್- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್ ಫಿಕ್ಸಿಂಗ್
Published
4 minutes agoon
13/01/2025By
NEWS DESK2ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಮಿಡ್ ವೀಕ್ ಎಲಿಮಿನೇಷನ್ ಇರೋದ್ರಿಂದ ಓರ್ವ ಸ್ಪರ್ಧಿ ವೀಕೆಂಡ್ಗೂ ಮುನ್ನವೇ ಮನೆಯಿಂದ ಹೊರ ಹೋಗಲಿದ್ದಾರೆ. ಈಗಾಗಲೇ ಈ ಬಗ್ಗೆ ಬಿಗ್ಬಾಸ್ ಅನೌನ್ಸ್ ಮಾಡಿದ್ದು, ಸ್ಪರ್ಧಿಗಳು ಟಾಸ್ಕ್ಗಳನ್ನು ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬೆನ್ನಲ್ಲೇ ಟಾಸ್ಕ್ಗಳು ಕೂಡ ಶುರುವಾಗಿದ್ದು, ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಈ ನಡುವೆ ಮೋಕ್ಷಿತಾ ಹಾಗೂ ಭವ್ಯ ಗೌಡ ಆಕ್ಷೇಪಾರ್ಹ ಪ್ಲಾನ್ ಒಂದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ. ರಜತ್ ಅವರನ್ನು ಟಾಸ್ಕ್ನಿಂದ ಹೊರಗಿಡಲು ಹೊಂಚು ಹಾಕಿದ್ದರು. ಅಂತೆಯೇ ರಜತ್ ಅವರ ಫೋಟೋ ಇರುವ ನೆಟ್ಗೆ ಮರದ ತುಂಡನ್ನು ಎಸೆಯುತ್ತಾರೆ.
ಟಾಸ್ಕ್ ಮುಗಿದ ಬಳಿಕ ರಜತ್ ಮೋಕ್ಷಿತಾ ಮತ್ತು ಭವ್ಯಗೌಡಗೆ ಟಾಂಗ್ ಕೊಡ್ತಾರೆ. ನೀವಿಬ್ಬರು ಏನು ಮಾತನಾಡಿಕೊಂಡಿದ್ರಿ ಅಂತಾ ನನಗೆ ಚೆನ್ನಾಗಿ ಗೊತ್ತಿತ್ತು. ಮೋಕ್ಷಿತಾ ನಿಮ್ಮಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರದಿಂದ ಹೇಳ್ತಾರೆ. ಅಲ್ಲದೇ ತ್ರಿವಿಕ್ರಂ ಕೂಡ ಮೋಕ್ಷಿತಾ ಮೇಲೆ ಗರಂ ಆಗಿದ್ದು, ಟಿಕೆಟ್ ಟು ಫಿನಾಲೆಗೆ ಹೋಗಬಾರದು ಎಂದು ನೀವು ಭವ್ಯ ಹೆಸರು ತೆಗೆದುಕೊಳ್ತೀರಿ. ನಾಮಿನೇಷನ್ನಿಂದ ದೂರ ಇರಬೇಕು ಅನ್ಕೊಂಡು ನೀವು ಅದೇ ಭವ್ಯ ಜೊತೆ ಸೇರಿಕೊಂಡು ಆಡ್ತೀರಿ ಎಂದು ಟಾಂಗ್ ನೀಡಿದ್ದಾರೆ.
ಆಗ ಮೋಕ್ಷಿತಾ ನಾವು ನಿಯತ್ತಾಗಿಯೇ ಆಡಿರೋದು ಎನ್ನುತ್ತಾರೆ. ಅದಕ್ಕೆ ತಿರುಗೇಟು ನೀಡಿರುವ ರಜತ್, ನಿಮ್ಮ ಸಮರ್ಥನೆ ಬೇಡ. ನಿನ್ನ ಮನಸ್ಸಿಗೆ ಏನು ಅಂತಾ ಗೊತ್ತು ಎಂದಿದ್ದಾರೆ. ಈ ಸಂಗತಿಗಳನ್ನು ಬಿಗ್ಬಾಸ್ ತನ್ನ ಪ್ರೊಮೋದಲ್ಲಿ ಶೇರ್ ಮಾಡಿದೆ. ಹೀಗಾಗಿ ಇವತ್ತು ರಾತ್ರಿ ಪ್ರಸಾರವಾಗುವ ಎಪಿಸೋಡ್ನಲ್ಲಿ ನಿಜಕ್ಕೂ ಆಗಿದ್ದೇನು ಅನ್ನೋದ್ರ ಬಗ್ಗೆ ತಿಳಿಯಲಿದೆ. ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ಉಡುಪಿ : ಡ್ರೈವರ್ ಇಲ್ಲದೆ ಬಸ್ಸೊಂದು ಚಲಾಯಿಸಿ ನಿಂತಿದ್ದ ಕಾರಿಗೆ ಡಿ*ಕ್ಕಿಹೊಡೆದ ಘಟನೆ ಇಂದು (ಜ.13) ಬೆಳಿಗ್ಗೆ ಕುಂದಾಪುರ ಹೊರವಲಯ ಹಂಗಲೂರು ಎಂಬಲ್ಲಿ ನಡೆದಿದೆ.
ಡಿಪೋದಲ್ಲಿ ನಿಲ್ಲಿಸಿದ್ದ ಖಾಸಗೊ ಬಸ್ ಚಾಲಕನಿಲ್ಲದೆಯೇ ಚಲಾಯಿಸಿ ಎರಡು ಸರ್ವೀಸ್ ರೋಡ್ ಹಾಗೂ ಹೆದ್ದಾರಿ ಬ್ಯಾರಿಕೇಡ್ ದಾಟಿ ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಕಾರಿಗೆ ಸರಿಸುಮಾರು ಬೆಳಿಗ್ಗೆ 7 ಗಂಟೆಗೆ ಡಿ*ಕ್ಕಿ ಹೊಡೆದು ನಿಂತಿದೆ.
ಬಸ್ ಶುಚಿಗೊಳಿಸಿ ಸಿಬ್ಬಂದಿಗಳು ಬಸ್ಸಿಂದ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರದ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಮ್ಮಿಯಿದ್ದರಿಂದ ಜೊತೆಗೆ ಪಾದಚಾರಿಗಳ ಓಡಾಟ ಅಷ್ಟಾಗಿ ಇರದ ಕಾರಣ ಭಾರೀ ಅ*ವಘಡ ತಪ್ಪಿದೆ.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ
LATEST NEWS
ಫ್ರಿಡ್ಜ್ ಸ್ಪೋಟಗೊಂಡು ಲಕ್ಷಾಂತರ ರೂ.ವಸ್ತುಗಳು ಭಸ್ಮ!
Published
34 minutes agoon
13/01/2025By
NEWS DESK2ಹಾವೇರಿ: ಇಂದು ರಾಜ್ಯದಲ್ಲಿ ಪ್ರತ್ಯೇಕ ಮೂರು ಅಗ್ನಿ ಅವಘಡಗಳು ಸಂಭವಿಸಿವೆ. ಮೊದಲನೆಯದಾಗಿ ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿದ್ದಾರೆ. ಬಳಿಕ ಬೆಂಗಳೂರಿನ ನೆಲಮಂಗಲದಲ್ಲಿ ಗಾರ್ಮೆಂಟ್ಸ್ ಅಂಗಡಿಗೆ ಬೆಂಕಿ ತಗುಲಿ 40 ಲಕ್ಷಕ್ಕೂ ಅಧಿಕ ಬಟ್ಟೆಗಳು ಸುಟ್ಟು ಕರಕಲಾಗಿವೆ. ಇದೀಗ ಹಾವೇರಿಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಎರಡು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಹೌದು ಹಾವೇರಿಯ ಮಂಜುನಾಥ ನಗರದಲ್ಲಿ ಫ್ರಿಡ್ಜ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ನಗರದ ಚನ್ನಬಸಪ್ಪ ಗೂಳಪ್ಪನವರ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಅಗ್ನಿ ಅವಘಡದ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾವ ಕಾರಣಕ್ಕಾಗಿ ಫ್ರಿಡ್ಜ್ ಸ್ಪೋಟಗೊಂಡಿದೆ ಎಂದು ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.
LATEST NEWS
ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?
ದಾಖಲೆ ಬರೆದ ಲವ – ಕುಶ ಜೋಡುಕರೆ ‘ನರಿಂಗಾನ ಕಂಬಳ’; ಫಲಿತಾಂಶ ವಿವರ ಇಲ್ಲಿದೆ
ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ
ತುಳುನಾಡು ಕಂಡ ಅಪೂರ್ವ ರಾಜಕಾರಣಿ ಉಳ್ಳಾಲ ಶ್ರೀನಿವಾಸ ಮಲ್ಯ
ಜಾಸ್ತಿ ರೀಲ್ಸ್ ನೋಡೋದನ್ನು ಬಿಟ್ಟು ಬಿಡಿ; ಇಲ್ಲಾಂದ್ರೆ ನಿಮ್ಮನ್ನು ಆವರಿಸುತ್ತೆ ಈ ರೋಗ
“ಇಂಟರ್ ಕಾಸ್ಟ್ ಮ್ಯಾರೇಜ್ ಹೆಚ್ಚಬೇಕು” : ಸಿಎಂ ಸಿದ್ಧರಾಮಯ್ಯ
Trending
- BIG BOSS2 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS3 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM5 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM4 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ