Connect with us

    LATEST NEWS

    ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!

    Published

    on

    ಲಕ್ನೋ: ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯದ ಮಹಿಳಾ ಆಯೋಗವು ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ, ಅದರ ಅಡಿಯಲ್ಲಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಗಳ ಅಳತೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.

    ಹೌದು.. ಉತ್ತರ ಪ್ರದೇಶ ರಾಜ್ಯದಲ್ಲಿ ಇಂತಹುದೊಂದು ಮಹತ್ವದ ಆದೇಶ ತರಲಾಗಿದ್ದು, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಲಾಗಿದೆ.

    ಮಹಿಳಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳುತ್ತಾರೆ. ಇದರೊಂದಿಗೆ ಜಿಮ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ನಿಯಮಗಳನ್ನು ನಿಗದಿಪಡಿಸಲಾಗಿದೆ. ಜಿಮ್ ನಿರ್ವಾಹಕರು ಮಹಿಳೆಯರಿಗೆ ಮಹಿಳಾ ತರಬೇತುದಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಮಹಿಳಾ ಆಯೋಗದ ಈ ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಎಲ್ಲ ಜಿಲ್ಲೆಗಳಿಗೆ ತಿಳಿಸಲಾಗಿದೆ.

    ಪುರುಷ ಟೈಲರ್‌ಗಳು ಮಹಿಳೆಯರ ಅಳತೆಗಳನ್ನು ತೆಗೆಯೋಹಾಗಿಲ್ಲ:

    ಇನ್ನುಮುಂದೆ ಟೈಲರ್ ಅಂಗಡಿಯಲ್ಲಿ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ಮಹಿಳೆಯರಿಗಾಗಿ ವಿಶೇಷ ಬಟ್ಟೆಗಳನ್ನು ಮಾರಾಟ ಮಾಡುವ ಮಳಿಗೆಗಳು ಗ್ರಾಹಕರಿಗೆ ಸಹಾಯ ಮಾಡಲು ಮಹಿಳಾ ಉದ್ಯೋಗಿಗಳನ್ನು ನೇಮಿಸಬೇಕಾಗುತ್ತದೆ. ಕೋಚಿಂಗ್ ಸೆಂಟರ್‌ನಲ್ಲಿಯೂ ಮಹಿಳೆಯರಿಗೆ ಸಿಸಿಟಿವಿ ಮತ್ತು ಶೌಚಾಲಯಗಳನ್ನು ಹೊಂದಿರುವುದು ಅವಶ್ಯಕ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲಾ ನಿಯಮಗಳನ್ನು ನಿರ್ಧರಿಸಲಾಗಿದೆ ಎಂದು ಸೂಚಿಸಲಾಗಿದೆ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ರಾಜ್ಯದ ಮಹಿಳಾ ಆಯೋಗವು ಇಂತಹ ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ.

    LATEST NEWS

    ಜಾರಿಗೆ ಬಂದ “ಒಂದು ರಾಷ್ಟ್ರ ಒಂದು ಚಂದಾದಾರಿಕೆ”..! ಏನಿದು ONOS..?

    Published

    on

    ಮಂಗಳೂರು/ ನವದೆಹಲಿ : ನವೆಂಬರ್ 2024 ರಂದು ಸಂಸತ್‌ನಲ್ಲಿ ಅನುಮೋದನೆ ಪಡೆದುಕೊಂಡಿರುವ ” ಒಂದು ರಾಷ್ಟ್ರ ಒಂದು ಚಂದಾದಾರಿಕೆ” (One Nation One Susbriber) ಜನವರಿ 1 ರಿಂದ ಜಾರಿಗೆ ಬಂದಿದ್ದು, ನೋಂದಣಿ ಕೂಡ ಆರಂಭವಾಗಿದೆ. ದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದ್ದು, ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

    ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಈ ONOS ಜಾರಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳು ಸೇರಿದಂತೆ ವಿದೇಶದಲ್ಲಿ ಕಲಿಯುವ ಅವಕಾಶಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಈ ಯೋಜನೆ ಎರಡು ಹಂತಗಳಲ್ಲಿ ಜಾರಿಯಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 6 ಸಾವಿರ ಕೋಟಿಯನ್ನು ಮೀಸಲಿಟ್ಟಿದೆ.

    ಒಂದು ರಾಷ್ಟ್ರ ಒಂದು ಚಂದಾದಾರಿಕೆ ಎಂದರೇನು ?

    ಈ ಯೋಜನೆಯಲ್ಲಿ ಐಐಟಿ ಸೇರಿದಂತೆ ಎಲ್ಲಾ ಸರ್ಕಾರಿ ಅನುದಾನಿತ ಉನ್ನತ ಸಂಸ್ಥೆಗಳ ಸರಿ ಸುಮಾರು 1.80 ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ. ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ 13400 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯತಕಾಲಿಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪೋರ್ಟಲ್‌ನಲ್ಲಿ 6300 ಸಂಸ್ಥೆಗಳು ನೋಂದಾಯಿತವಾಗಿದ್ದು, ಐಐಟಿ, ಎನ್‌ಐಟಿಯಂತಹ ಸಂಸ್ಥೆಗಳೂ ಸೇರಿಕೊಳ್ಳಲಿವೆ. ಇದೊಂದು ಸಂಪೂರ್ಣ ಡಿಜಿಟಲ್ ಪೋರ್ಟಲ್ ಆಗಿದ್ದು ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆ ಮತ್ತು ನಿಯತಕಾಲಿಕಗಳು ಬಳಸಲು ಸಹಕಾರಿಯಾಗಲಿದೆ. ಈ ಯೋಜನೆಯಡಿಯಲ್ಲಿ, ಮೊದಲ ಹಂತದಲ್ಲಿ, ಎಂಜಿನಿಯರಿಂಗ್, ತಂತ್ರಜ್ಞಾನ, ವಿಜ್ಞಾನ, ಗಣಿತ, ವೈದ್ಯಕೀಯ, ನಿರ್ವಹಣೆ, ರಾಜ್ಯಶಾಸ್ತ್ರ ಮತ್ತು ಮಾನವಿಕ ವಿಷಯಗಳಿಗೆ 13400 ಕ್ಕೂ ಹೆಚ್ಚು ಜರ್ನಲ್‌ಗಳು ಮತ್ತು ಸಂಶೋಧನೆಗಳು ಲಭ್ಯವಿರುತ್ತವೆ. ಇದರ ಎರಡನೇ ಹಂತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಆಧಾರದ ಮೇಲೆ ಮುಂದಕ್ಕೆ ತೆಗೆದುಕೊಳ್ಳಲಾಗುವುದು.

    ಪೋರ್ಟಲ್ ಲಿಂಕ್ ಇಲ್ಲಿದೆ

    https://www.psa.gov.in/oneNationOneSubscription
    https://pib.gov.in/PressReleasePage.aspx?PRID=2089179

    Continue Reading

    bangalore

    ಸರಿಗಮಪ ಜ್ಯೂರಿ ಎಸ್ ಬಾಲಿ ವಿಧಿವಶ

    Published

    on

    ಮಂಗಳೂರು/ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್‌ನಲ್ಲಿ ಇರುತ್ತಿದ್ದ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ.

    ಮೃದಂಗ, ತಬಲಾ, ಢೋಲಕ್‌ , ಢೋಲ್ಕಿ, ಖಂಜರಿ, ಕೋಲ್‌ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು.

    ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್‌ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್‌. ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್‌, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದು.

    ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು

    ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದರು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಬಾಗಿಯಾಗಿದ್ದಾರೆ.

    ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ ಎಸ್. ಬಾಲಿ ಅವರದ್ದಾಗಿದೆ. ಶಂಕರನಾಗ್‌ ಅವರ ಸಂಕೇತ್‌ ಸ್ಟುಡಿಯೊ ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳನ್ನು ಎದುರಿಸಲು ಬಾಲಿ ಹೆಗಲು ನೀಡಿದರು.

    ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರು. ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವದೆಲ್ಲೆಡೆ ಬಾಲಿ ಅವರ ಲಯ ಸಂಗೀತ ಶಾಶ್ವತವಾಗಿ ಮೊಳಗುತ್ತಲೇ ಇದೆ. 1970ರ ದಶಕದಲ್ಲಿ ಬಾಲಿ ಬಹುಬೇಡಿಕೆಯ ವ್ಯಕ್ತಿಯಾಗಿದ್ದರು. ಅವರಿಗ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

    Continue Reading

    BIG BOSS

    BBK11: ಅಮ್ಮನ ಅದೊಂದು ಮಾತಿಗೆ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಅಷ್ಟಕ್ಕೂ ಹೇಳಿದ್ದೇನು?

    Published

    on

    ಇಷ್ಟು ದಿನ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕುಂದಾಪುರ ಈ ಗಳಿಗೆಗಾಗಿಯೇ ಕಾಯುತ್ತಿದ್ದರು. 95 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಜೀವನದಲ್ಲೇ ಬಹಳ ಸುಂದರವಾದ ಕ್ಷಣವಿದು.

    ಹೌದು, ಬಿಗ್​ಬಾಸ್​ ಸೀಸನ್ 11 ಶುರುವಾಗಿ ಇಂದಿಗೆ 95 ದಿನಗಳು ಕಳೆದಿವೆ. ಇಷ್ಟು ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಿಗೆ ಈ ವಾರ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ ಈ ವಾರ ಬಿಗ್​ಬಾಸ್​ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟು ಮಕ್ಕಳಿಗೆ ಹೊಸ ಹುರುಪನ್ನು ತುಂಬಿದ್ದರು.

    ಅದರಂತೆ ಮಂಗಳವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್​ ಹಾಗೂ ರಜತ್​ ಕಿಶನ್​ ಫ್ಯಾಮಿಲಿಯವರು ಬಂದಿದ್ದರು. ನಿನ್ನೆ ಬಿಗ್​ಬಾಸ್​ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್​ ಮನೆಗೆ ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಎಂಟ್ರಿ ಕೊಟ್ಟಿದ್ದಾರೆ.

    ಬಿಗ್​ಬಾಸ್​ ಮನಗೆ ಚೈತ್ರಾ ಕುಂದಾಪುರ ತಾಯಿ ಹಾಗೂ ತಂಗಿ ಎಂಟ್ರಿ ಕೊಟ್ಟ. ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಆದ್ರೆ ತಾಯಿ ಆಡಿದ ಅದೊಂದು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಚೈತ್ರಾ. ಹೌದು ಬಿಗ್​ಬಾಸ್​ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಸತತವಾಗಿ 4 ಬಾರಿ ಸ್ಪರ್ಧಿಗಳಿಂದ ಕಳಪೆ ಪಟ್ಟ ಸಿಕ್ಕಿತ್ತು. ಹೀಗಾಗಿ ಇದೇ ವಿಚಾರವಾಗಿ ಚೈತ್ರಾ ಅವರ ತಾಯಿ ಮಾತಾಡಿದ್ದಾರೆ. ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ಧೀರಾ, ಆದ್ರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಅಂತ ಹೇಳುತ್ತಾ ಮೆಡಲ್ ಹಾಕಿದ್ದಾರೆ. ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದ್ದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಗುತ್ತೆ, ಮೂರನೇದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಹೇಳಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

    Continue Reading

    LATEST NEWS

    Trending