ಮಂಗಳೂರು : ಮಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸಾವರನೊಬ್ಬ ದಾರುಣವಾಗಿ ಮೃತಪಟ್ಟರೆ ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ, ನಗರದ ನಂತೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಸಂಜೆ ಈ ದುರ್ಘಟನೆ ಸಂಭವಿಸಿದೆ,
ಕೆಪಿಟಿ ಕಡೆಯಿಂದ ನಂತೂರು ಜಂಕ್ಷನ್‌ಗೆ ಕಡೆಗೆ ಎರಡು ಬೈಕು ಳಲ್ಲಿ ಯುವಕರು ಪರಸ್ಪರ ಮಾತನಾಡಿ ಹೋಗುತ್ತಿದ್ದಾಗ ಅಲ್ವಾರೀಸ್ ಸೆಂಟರ್ ಬಳಿ ಒಂದು ಬೈಕಿನ ಹ್ಯಾಂಡಲ್ ಮತ್ತೊಂದು ಬೈಕಿಗೆ ತಾಗಿದೆ,
ಪರಿಣಾಮ ಎರಡೂ ಬೈಕ್ ಗಳು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದಿವೆ.
ಈ ಸಂದರ್ಭ ಅದೇ ದಾರಿಯಾಗಿ ಬರುತ್ತಿದ್ದ ಟ್ಯಾಂಕರ್ ನ ಚಕ್ರಕ್ಕೆ ಸಿಲುಕಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ,
ಮತ್ತೊಂದು ಬೈಕಿನಲ್ಲಿದ್ದ ಇಬ್ಬರಿಗೆ ಕೂಡ ಗಂಭೀರ ಸ್ವರೂಪದ ಗಾಯಗಳಾಗಿವೆ,
ಮೃತ ಯುವಕನನ್ನು 21 ವರ್ಷದ ಸಲಬಿನ್ ಜಾನ್ ಎಂದು ಗುರುತ್ತಿಸಲಾಗಿದೆ.
ಗಂಭೀರ ಗಾಯಗೊಂಡವನನ್ನು ಸಿವಿ ಥಾಮಸ್ ಎಂದು ಗುರುತ್ತಿಸಲಾಗಿದ್ದು, ಇವರು ಕೇರಳದ ಕೊಟ್ಟಾಯಂ ನಿವಾಸಿಗಳಾಗಿದ್ದು ನಿಟ್ಟೆಯಲ್ಲಿ ಹೊಟೇಲ್ ಮ್ಯಾನೆಂಜ್ ಮೆಟ್ ಕೋರ್ಸ್ ಕಲಿಯುತ್ತಿದ್ದರು ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಟ್ವಾಂಕರ್ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ,