LATEST NEWS
ಮಹಾಲಕ್ಷ್ಮೀ ಮರ್ಡರ್ ಪ್ರಕರಣ; ಮನೆ ಗೋಡೆ ಮೇಲೆ ಮೂವರ ಫಿಂಗರ್ ಪ್ರಿಂಟ್ ಪತ್ತೆ..!
ಬೆಂಗಳೂರು/ಮಂಗಳೂರು: ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ನಡೆದ ಮಹಿಳೆಯ ಬರ್ಬರ ಕೊಲೆ ಪ್ರಕರಣ ಇಡಿಈ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರು ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಈ ಮಧ್ಯೆ ಮಹಿಳೆಯ ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದೆ.
E
ವರದಿ ಪ್ರಕಾರ ಮಹಾಲಕ್ಷ್ಮೀಯ ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ದೇಹವನ್ನು ತುಂಡರಿಸಿರುವುದು ಪತ್ತೆಯಾಗಿದೆ. ಆದರೆ ಸಾವಿಗೂ ಮೊದಲು ಆಕೆಯನ್ನು ಉಸಿರುಗಟ್ಟಿಸಿ ಅಥವಾ ವಿಷಪ್ರಾಶಾನ ಮಾಡಿದ್ದಾರೆಯೇ? ಎಂಬ ಸಂಶಯ ಮೂಡಿದ್ದು, ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀಯ ಹೊಟ್ಟೆಯ ಭಾಗ ಹಾಗೂ ಕರುಳಿನ ಭಾಗವನ್ನು ಎಫ್.ಎಸ್.ಎಲ್ಗೆ ಕಳುಹಿಸಲಾಗಿದೆ.
ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹ*ತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್ನಲ್ಲಿಟ್ಟು ಆರೋಪಿ ಎಸ್ಕೇಪ್
ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಇನ್ನು ಒಂದು ವಾರದ ಒಳಗೆ ಪೊಲೀಸರ ಕೈ ಸೇರಲಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮೃತದೇಹವನ್ನು 59 ಭಾಗವಾಗಿ ತುಂಡರಿಸಿರೋದು ಪತ್ತೆಯಾಗಿದೆ. ಮೊದಲಿಗೆ ಆರೋಪಿ ಮಹಾಲಕ್ಮಿಯ ಹೊಟ್ಟೆ ಎದೆ ಭಾಗಕ್ಕೆ ಚಾಕು ಇರಿದ ನಂತರ ತಲೆಯನ್ನು ಕತ್ತರಿಸಿ ಬೇರ್ಪಡಿಸಿದ್ದಾರೆ.
ಮಹಾಲಕ್ಷ್ಮಿ ವಾಸವಿದ್ದ ಮನೆಯ ಗೋಡೆ ಹಾಗೂ ಫ್ರಿಡ್ಜ್ ನ ಮೇಲೆ ಮೂವರ ಫಿಂಗರ್ ಪ್ರಿಂಟ್ ಪತ್ತೆಯಾಗಿದೆ. ಹೀಗಾಗಿ ಮಹಾಲಕ್ಷ್ಮೀಯನ್ನು ಒಬ್ಬನೇ ಕೊಲೆ ಮಾಡಿದ್ದಾನಾ..? ಅಥವಾ ಮೂವರು ಸೇರಿ ಕೊಲೆಗೈದು ದೇಹ ತುಂಡರಿಸಿದ್ದಾರಾ..? ಎಂಬ ಪ್ರಶ್ನೆ ಮೂಡಿದೆ. ಇನ್ನೇನು ಪೊಲೀಸರ ತನಿಖೆಯ ಬಳಿಕವೇ ಸತ್ಯಾಂಶ ಹೊರಬರಬೇಕಿದೆ.
LATEST NEWS
ಮೂಡುಬಿದಿರೆ : ಅಪರಿಚಿತ ವ್ಯಕ್ತಿಯ ಸಾ*ವು; ಗುರುತು ಪತ್ತೆಗೆ ಕೋರಿಕೆ
ಮೂಡುಬಿದಿರೆ: ತೋಡರ್ ಜಂಕ್ಷನ್ ಬಳಿ ಸುಮಾರು 45 ರಿಂದ 50 ವರ್ಷದ ಒಳಗಿನ ಅಪರಿಚಿತ ವ್ಯಕ್ತಿಯು ಮೃ*ತಪಟ್ಟಿರುವ ಘಟನೆ ನಡೆದಿದೆ.
ಈ ವ್ಯಕ್ತಿ ಯಾರು ಏನು ಎಂಬುದು ಇನ್ನು ತಿಳಿದಿಲ್ಲ. ಅಲ್ಲದೇ ಇದು ಆತ್ಮ*ಹ*ತ್ಯೆಯೋ ಅಥವಾ ಕೊ*ಲೆಯೋ ಎಂದು ತಿಳಿದುಬರಬೇಕಾಗಿದೆ. ಈ ವ್ಯಕ್ತಿಯ ಗುರುತು ಗೊತ್ತಿದ್ದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
DAKSHINA KANNADA
ಮಂಗಳೂರಿನ ಪಡೀಲ್ ಬಳಿ ಆಂಬ್ಯುಲೆನ್ಸ್ ಪಲ್ಟಿ; ಹೃದ್ರೋಗಿ ದಾಸಪ್ಪ ರೈ ಮೃ*ತ್ಯು
ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮಂಗಳೂರಿನಲ್ಲಿ ಪಲ್ಟಿಯಾಗಿ ಹೃದ್ರೋಗಿ ಕೃಷಿ ದಾಸಪ್ಪ ರೈ ಎಂಬವರು ಸಾವನ್ನಪ್ಪಿದ್ದಾರೆ. ಇಂದು(ಸೆ.25) ಬೆಳಿಗ್ಗೆ ನಸುಕಿನ ಜಾವ ಈ ಘಟನೆ ನಡೆದಿದೆ.
ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್ಗೆ ಕಾರು ಡಿಕ್ಕಿ, 7 ಮಂದಿ ಸಾ*ವು
ರಾಮಕುಂಜ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ ಎಂಬವರು ಸಾವನ್ನಪ್ಪಿದವರು. ಎದೆ ನೋವು ಕಾಣಿಸಿಕೊಂಡ ದಾಸಪ್ಪ ರೈ ಅವರನ್ನು ತಡರಾತ್ರಿ ಪುತ್ತೂರು ಮಹಾವೀರ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವಠಾರದಲ್ಲಿದ್ದ ಇನ್ನೊಂದು ಆ್ಯಂಬುಲೆನ್ಸ್ ನಲ್ಲಿ – ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಹೋಗುತ್ತಿರುವಾಗ ಮಂಗಳೂರು ಪಡೀಲು ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿ ದಾಸಪ್ಪ ರೈ ಮೃತಪಟ್ಟಿದ್ದರು. ಜೊತೆಯಲ್ಲಿದ್ದ ನಳಿನಿ ಎಂಬವರು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸಪ್ಪ ಅವರ ಪುತ್ರ ಹರ್ಷಿತ್ ಮತ್ತು ಸಂಬಂಧಿ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.
LATEST NEWS
ಅಮೇರಿಕಾ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ತಂಡ
“ಅಮೇರಿಕಾದಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಗೌರವ ಅವಿಸ್ಮರಣೀಯ” -ಪಟ್ಲ ಸತೀಶ್ ಶೆಟ್ಟಿ
ಮಂಗಳೂರು: ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು.
ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ. ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು.
“ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು” ಎಂದರು.
ಪ್ರೊ.ಎಂ.ಎಲ್. ಸಾಮಗ ಮಾತನಾಡಿ, “ಅಮೇರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ“ ಎಂದರು.
ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಅಮೇರಿಕಾ ನಗರಗಳಲ್ಲಿ “ಪಟ್ಲ ಫೌಂಡೇಶನ್ ಡೇ”!
ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.
- FILM4 days ago
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
- NATIONAL6 days ago
ಶ್ವಾನ ನೆಗೆದು ಗರ್ಭಪಾತ; ಮಾಲಿಕನಿಗೆ 10 ಲಕ್ಷ ದಂಡ
- NATIONAL6 days ago
ವಿಶ್ವದ ಶ್ರೀಮಂತ ಭಿಕ್ಷುಕ ಇವರೇ ನೋಡಿ ! ಭರತ್ ಜೈನ್ ಒಟ್ಟು ಆಸ್ತಿ ಎಷ್ಟು ಗೊತ್ತಾ ???
- DAKSHINA KANNADA4 days ago
ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!