ಮಡಿಕೇರಿ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ಕೊಡಗಿನ ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಏರ್‌ಗನ್ ತರಬೇತಿ ನೀಡಿರುವ ಕುರಿತು ವರದಿಯಾಗಿದೆ.
ಸುಮಾರು ಹತ್ತು ದಿನಗಳ ಕಾಲ ನಡೆದ ತರಬೇತಿಯಲ್ಲಿ ಶಾಸಕರುಗಳು, ಹಿಂದೂ ಪರ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.
ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು, ಸಂಸ್ಥೆಯ ಸಭಾಂಗಣ ಮತ್ತು ಆವರಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವುದು, ತ್ರಿಶೂಲಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪರ ವೀರೋಧ ಟೀಕೆಗಳು ವ್ಯಕ್ತವಾಗಿವೆ.
ಶೂಲ ದೀಕ್ಷೆ ಹಾಗೂ ಏರ್‌ಗನ್ ತರಬೇತಿ ಸಮರ್ಥಿಸಿದ ಬಜರಂಗದಳ :
ಪೊನ್ನಂಪೇಟೆಯಲ್ಲಿ ನಡೆದ ಬಜರಂಗದಳದ ಪ್ರಶಿಕ್ಷಾ ವರ್ಗದಲ್ಲಿ ನೀಡಿದ ತ್ರಿಶೂಲ ದೀಕ್ಷೆ ಹಾಗೂ ಬಂದೂಕು ತರಬೇತಿಯನ್ನು ಬಜರಂಗದಳದ ಸಮರ್ಥಿಸಿಕೊಂಡಿದೆ.
ಕಾನೂನು ವ್ಯಾಪ್ತಿಯಲ್ಲೇ ಈ ತರಬೇತಿ ನಡೆದಿರೋದು.ಈ ಹಿಂದಿನಿಂದಲೂ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇದೇ ರೀತಿ ತರಬೇತಿ ನೀಡಲಾಗುತ್ತಿತ್ತು.
ಹೀಗಾಗಿ ಇದರಲ್ಲಿ ಯಾವುದೇ ಕಾನೂನು ಬಾಹಿರ ಕೆಲಸಗಳಿಲ್ಲ ಎಂದು ಬಜರಂಗದಳದ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಹೇಳಿಕೆ ನೀಡಿದ್ದಾರೆ.