Thursday, September 29, 2022

ಚಿಕ್ಕಪ್ಪನೊಂದಿಗೆ ಚಕ್ಕಂದವಾಡಿ ಜೀವ ಕಳಕೊಂಡಳೇ ಕಮಲ..?

ಮಡಿಕೇರಿ: ಹರಿಯುತ್ತಿರುವ ನದಿಗೆ ಬಿದ್ದ ಗ್ರಾಮ ಪಂಚಾಯಿತಿ ಸದಸ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ರೋಚಕ ತಿರುವು ಸಿಕ್ಕಿದ್ದು, ಸ್ವಂತ ಚಿಕ್ಕಪ್ಪನೇ ಕೊಲೆಗಡುಕ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಕಮಲ(35) ಮತ್ತು ಅವಳ ಚಿಕ್ಕಪ್ಪ ಮುತ್ತು ಪಯಸ್ವಿನಿ(50) ಮೃತರು.


ಕಮಲ ಚೆಂಬು ಗ್ರಾಮ ಪಂಚಾಯಿತಿಯ ದಬ್ಬಡ್ಕ ವಾರ್ಡ್‌ನ ಸದಸ್ಯೆ. ಈಕೆಗೆ ಮದುವೆ ಆಗಿ ಒಬ್ಬ ಮಗಳೂ ಇದ್ದಾಳೆ.

ಆದರೂ ವರಸೆಯಲ್ಲಿ ಚಿಕ್ಕಪ್ಪನಾದ ಮುತ್ತು ಜತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಸೆ.15ರ ಸಂಜೆ ಸಂಬಂಧಿಕರೊಬ್ಬರ ಮನೆಗೆ ಬರ್ತ್​ ಡೇ ಪಾರ್ಟಿಗೆಂದು ಮಗಳೊಂದಿಗೆ ಕಮಲ ಹೋಗುತ್ತಿದ್ದಳು.

ಮಾರ್ಗಮಧ್ಯೆ ಸಂಪಾಜೆ ಸಮೀಪದ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಬಳಿ ಕಮಲಳನ್ನು ಅಡ್ಡಗಟ್ಟಿದ ಮುತ್ತು ಕೆಲಕಾಲ ವಾಗ್ವಾದ ನಡೆಸಿದ್ದ.

ಈ ವೇಳೆ ಜತೆಯಲ್ಲಿದ್ದ ಸಂಬಂಧಿಕರನ್ನು ಕತ್ತಿ ತೋರಿಸಿ ಬೆದರಿಸಿ ಮನೆಗೆ ಕಳುಹಿಸಿದ್ದ.

ಬಳಿಕ ಕಮಲಾಳನ್ನು ನದಿಗೆ ತಳ್ಳಿ ಅದೇ ನೀರಿಗೆ ಹಾರಿ ಆಕೆಯನ್ನ ನೀರಿನಿಂದ ಸ್ವತಃ ತಾನೇ ಮೇಲೆತ್ತಿ ಜೀವಂತವಾಗಿ ಹೆಗಲ ಮೇಲೆ ಹೊತ್ತುಕೊಂಡು ಎರಡೂವರೆ ಕಿಲೋ ಮೀಟರ್ ದೂರದವರೆಗೆ ನಡೆದುಕೊಂಡೇ ಸಾಗಿದ್ದ.
ಈ ವೇಳೆ ಸ್ಥಳೀಯರು ಅಡ್ಡಗಟ್ಟಲು ಪ್ರಯತ್ನ ಪಟ್ಟರೂ ಅವನ ಬಳಿ ಕತ್ತಿ ಇದ್ದುದರಿಂದ ತಕ್ಷಣಕ್ಕೆ ಹತ್ತಿರ ಹೋಗುವ ಧೈರ್ಯ ಮಾಡಿರಲಿಲ್ಲ.

ತಕ್ಷಣವೇ ಅಲ್ಲಿದ್ದ ಕೆಲವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸುಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು.

ಆ ವೇಳೆಗಾಗಲೇ ಇಬ್ಬರೂ ಕಾಡಿನಲ್ಲಿ ಮರೆಯಾಗಿದ್ದರು. ತುಂಬಾ ಸಮಯದವರೆಗೂ ಪೊಲೀಸರು ಗ್ರಾಮಸ್ಥರೊಂದಿಗೆ ಕಾಡಿನಲ್ಲಿ ಹುಡುಕಾಟ ನಡೆಸಿದರೂ ಅವರಿಬ್ಬರೂ ಸಿಕ್ಕಿರಲಿಲ್ಲ.
ಮರುದಿನ ಬೆಳಗ್ಗೆ ಅಂದರೆ ಸೆ,16ರ ಬೆಳಗ್ಗೆ ಅವರಿಬ್ಬರ ಶವಗಳು ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸ್ಥಳೀಯರಿಗೆ ಪತ್ತೆಯಾಗಿವೆ.

ಕಮಲಾಳನ್ನು ಕೊಂದು ಶವವನ್ನು ಮರಕ್ಕೆ ನೇತುಹಾಕಿದ ಮುತ್ತು, ಬಳಿಕ ತಾನೂ ಅದೇ ಮರಕ್ಕೆ ನೇಣುಬಿಗಿದುಕೊಂಡು ಸತ್ತಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರಸೆಯಲ್ಲಿ ಮಗಳು ಆಗಬೇಕಿದ್ದ ಕಮಲ ಜತೆ ಮುತ್ತು ಅಕ್ರಮ ಸಂಬಂಧ ಹೊಂದಿದ್ದ. ಪ್ರತಿನಿತ್ಯ ಇವಳ ಮನೆಗೆ ಬರುತ್ತಿದ್ದ ಮುತ್ತುವಿಗೆ ಹಾಗೂ ಕಮಲಳ ಗಂಡನ ಜತೆ ಮುತ್ತುಗೆ ಕೆಲದಿನಗಳ ಹಿಂದೆ ಗಲಾಟೆ ಆಗಿತ್ತು.

ಅಂದಿನಿಂದ ಮುತ್ತು ಆಕೆಯ ಮನೆಗೆ ಬರುವುದನ್ನ ನಿಲ್ಲಿಸಿದ್ದ ಎನ್ನಲಾಗಿದೆ. ಸೆ.15ರಂದು ಆಕೆಯನ್ನ ದಾರಿ ಮಧ್ಯೆ ಕಂಡ ಮುತ್ತು, ಜಗಳ ತೆಗೆದು ನದಿಗೆ ದೂಡಿದ್ದ.

ಕೊನೆಗೆ ಆಕೆಯನ್ನು ಬಿಟ್ಟಿರಲಾಗದೆ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

LEAVE A REPLY

Please enter your comment!
Please enter your name here

Hot Topics

PFIನ್ನು ಕರ್ನಾಟಕದಲ್ಲಿ ಪೋಷಿಸಿದ್ದು ಕಾಂಗ್ರೆಸ್‌-ಸಚಿವ ಸುನಿಲ್ ವಾಗ್ದಾಳಿ

ಉಡುಪಿ: 'ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದ್ದೆ ಪಿಎಫ್ ಐ ಇಷ್ಟು ದೊಡ್ಡ ಪ್ರ‌ಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಕಾರಣವಾಗಿತ್ತು. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಾಸ್ ಪಡೆದಿತ್ತು....

ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಎಂದಿಗೂ ಅವಕಾಶವಿಲ್ಲ-CM ಬೊಮ್ಮಾಯಿ

ಬೆಂಗಳೂರು: ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು...

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...