Connect with us

    LATEST NEWS

    ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ಐವರು ಸಾ*ವು, 38 ಮಕ್ಕಳು ಅಸ್ವ*ಸ್ಥ

    Published

    on

    ಮಧ್ಯಪ್ರದೇಶದಲ್ಲಿರುವ ಯುಗಪುರುಷ ಧಾಮ್ ಬೌದ್ಧಿಕ ವಿಕಾಸ ಕೇಂದ್ರದಲ್ಲಿ ವಿಷಪೂರಿತ ಆಹಾರ ಸೇವಿಸಿ ಐದು ಮಕ್ಕಳು ಸಾ*ವನ್ನಪ್ಪಿದ್ದು, 38 ಮಂದಿ ಅಸ್ವ*ಸ್ಥರಾಗಿದ್ದಾರೆ. 38 ಮಕ್ಕಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ಮಕ್ಕಳು ನಗರದ ಸರ್ಕಾರಿ ಚಾಚಾ ನೆಹರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

    ಒಟ್ಟು 38 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಈ ನಾಲ್ವರು ಐಸಿಯು ವಾರ್ಡ್‌ನಲ್ಲಿ ದಾಖಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಶಾಲೆಯಲ್ಲಿ ಯಾವುದೇ ಮಕ್ಕಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ಆಶ್ರಮದ ಮೇಲೆ ನಿಗಾ ಇಡುತ್ತೇವೆ ಎಂದು ಜಿಲ್ಲಾಧಿಕಾರಿ ಆಶೀಶ್ ಸಿಂಗ್ ತಿಳಿಸಿದ್ದಾರೆ.

    ಘಟನೆಯ ತನಿಖೆ ನಡೆಸಲಾಗುತ್ತಿದೆ. ಆಶ್ರಮದಲ್ಲಿ ಸುಮಾರು 200 ಮಕ್ಕಳು ವಾಸಿಸುತ್ತಿದ್ದಾರೆ. ಇದನ್ನು ಎನ್‌ಜಿಒ ನಿರ್ವಹಿಸುತ್ತದೆ. 5 ರಿಂದ 15 ವರ್ಷದೊಳಗಿನ ಮಕ್ಕಳು ಅಲ್ಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಾರ್ಕಳ: ಅಜೆಕಾರು ಬಳಿ ರಸ್ತೆ ಅಪ*ಘಾತ – ಐವರಿಗೆ ಗಾ*ಯ

    Published

    on

    ಕಾರ್ಕಳ: ಅಜೆಕಾರು ಸಮೀಪದ ಕೈಕಂಬ ಮಥುರಾ ಪಟ್ಲ ಎಂಬಲ್ಲಿ ಸಂಭವಿಸಿದ ರಸ್ತೆ ಅಪ*ಘಾತದಲ್ಲಿ ಐವರು ಗಾ*ಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

    ಜೀಪು ಹಾಗೂ ರಿಕ್ಷಾ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿದ್ದ ಹರೀಶ್(35) ಲಲಿತಾ(62) ಪ್ರೇಮಾ(58) ಶಾರದಾ(52) ಗೀತಾ(39) ಎಂಬವರಿಗೆ ಗಾಯವಾಗಿದೆ.

    ಅಜೆಕಾರು ವಿಭಾಗದ 108 ಅಂಬುಲೆನ್ಸ್ ಘಟನಾ ಸ್ಥಳಕ್ಕೆ ಅಗಮಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    108 ಅಂಬುಲೆನ್ಸ್ ನ ಪೈಲೆಟ್ ಕಿಶೋರ್ ಹಾಗೂ ಇಎಂಟಿ ದೇವಿಕಾ ಕಾರ್ಯಚರಣೆಯಲ್ಲಿ ಪಾಲ್ಗೊಂಡರು.

    Continue Reading

    LATEST NEWS

    ತಾಯ್ನಾಡಿಗೆ ಬಂದ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ..! ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾದ ಮುಂಬೈ

    Published

    on

    ಮುಂಬೈ/ಮಂಗಳೂರು: ಟಿ20 ವಿಶ್ವಕಪ್‌ನೊಂದಿಗೆ ತಾಯ್ನಾಡಿಗೆ ಮರಳಿದ ಟೀಂ ಇಂಡಿಯಾಗೆ ಮುಂಬೈನಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಗಿದೆ. ನಿನ್ನೆ(ಜು.4) ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಂಡಕ್ಕೆ ದೆಹಲಿಯಲ್ಲೂ ಅದ್ದೂರಿ ಸ್ವಾಗತ ನೀಡಲಾಗಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ಬೇಟಿಯಾದ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನಿವಾಸದಲ್ಲಿ ಉಪಹಾರ ಸ್ವೀಕರಿಸಿದ್ದರು. ಚಾಂಪಿಯನ್ಸ್ ಎಂದು ಬರೆಯಲಾದ ಟೀಂ ಇಂಡಿಯಾ ಜರ್ಸಿಯಲ್ಲೇ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಬಿಸಿಸಿಐ ಕಡೆಯಿಂದ ಪ್ರಧಾನಿ ಮೋದಿ ಅವರಿಗೆ ನಮೋ ಹೆಸರಿನ ಜೆರ್ಸಿಯನ್ನು ಬಿಸಿಸಿಐ ಅಧ್ಯಕ್ಷ ಜಯ್‌ ಶಾ ನೀಡಿ ಗೌರವಿಸಿದರು.

    ಇದಾದ ಬಳಿಕ ಮುಂಬೈಗೆ ಆಗಮಿಸಿದ ಟೀಂ ಇಂಡಿಯಾವನ್ನು ಮುಂಬೈ ನಗರಿಯ ಲಕ್ಷಾಂತರ ಜನ ಸ್ವಾಗತಿಸಿದ್ದಾರೆ. ವಾಖೆಂಡೆ ಸ್ಟೇಡಿಯಂನಲ್ಲಿ ಬಿಸಿಸಿಐ ವತಿಯಿಂದ ಆಟಗಾರರಿಗೆ ಸನ್ಮಾನ ಹಾಗೂ ಘೋಷಣೆ ಕೂಗಿ, 125 ಕೋಟಿ ಬಹುಮಾನದ ಮೊತ್ತ ನೀಡಲಾಗಿದೆ. ಸಂಜೆ 7 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಂಜಾನೆಯಿಂದಲೇ ಜನ ಜಮಾವಣೆಗೊಂಡಿದ್ದಾರೆ. ಹೀಗಾಗಿ ಮುಂಬೈ ಕ್ವೀನ್‌ನೆಕ್ಲೆಸ್ ರೋಡ್‌ನಲ್ಲಿ ಜನ ಸಾಗರ ತುಂಬಿಕೊಂಡಿದ್ದು ವಿಶೇಷವಾಗಿತ್ತು. ಇಡೀ ಮುಂಬೈ ನಗರಿಯಲ್ಲಿ ಇಂಡಿಯಾ ಪರ ಘೋಷಣೆಗಳು ಮುಗಿಲು ಮಟ್ಟಿತ್ತು.

    Continue Reading

    LATEST NEWS

    ಹೆಬ್ರಿ : ಜೆಸಿಬಿಗೆ ಬೈಕ್ ಡಿ*ಕ್ಕಿ; ಸವಾರ ಸಾ*ವು

    Published

    on

    ಹೆಬ್ರಿ : ಜೆಸಿಬಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃ*ತಪಟ್ಟ ಹೆಬ್ರಿಯ ಶಿವಪುರದಲ್ಲಿ ಶುಕ್ರವಾರ(ಜು.5) ಸಂಭವಿಸಿದೆ. ನಾಯರ್‌ಕೋಡು ನಿವಾಸಿ ಪ್ರತ್ಯಕ್ಷ್‌ ಶೆಟ್ಟಿ (21) ಮೃ*ತ ಬೈಕ್ ಸವಾರ.

    ಪ್ರತ್ಯಕ್ಷ್‌ ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭ ಪೆರ್ಡೂರು ಗ್ರಾಮದ ನಾಯರ್‌ಕೋಡ್‌ನಲ್ಲಿ ಜೆಸಿಬಿಗೆ ಪ್ರತ್ಯಕ್ಷ್ ಚಲಾಯಿಸುತ್ತಿದ್ದ ಬೈಕ್‌ ಡಿ*ಕ್ಕಿಯಾಗಿದೆ. ಪರಿಣಾಮವಾಗಿ ತೀವ್ರವಾಗಿ ಗಾ*ಯಗೊಂಡಿದ್ದ ಪ್ರತ್ಯಕ್ಷ್‌ ಇಹಲೋಕ ತ್ಯಜಿಸಿದ್ದಾರೆ.

    ಇದನ್ನೂ ಓದಿ  : ಹೋಂ ವರ್ಕ್ ಮಾಡುತ್ತಿದ್ದಾಗ ತಲೆಗೆ ಪೆನ್ ಚುಚ್ಚಿ ಯುಕೆಜಿ ಮಗು ಸಾ*ವು!

    ಬೈಕಿನಲ್ಲಿದ್ದ ಪ್ರತ್ಯಕ್ಷ್ ಅವರ ಸಹೋದರ ಪ್ರಿತೇಶ್‌ ಕೂಡ ಗಾ*ಯಗೊಂಡಿದ್ದಾರೆ. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೃ*ತ ಪ್ರತ್ಯಕ್ಷ್ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದರು.

    Continue Reading

    LATEST NEWS

    Trending