BELTHANGADY
ಕೇರಳದಲ್ಲಿ ರಸ್ತೆ ಅಪಘಾತದಿಂದ ಗಾಯಗೊಂಡು ಕೋಮದಲ್ಲಿದ್ದ ಮಾಚಾರು ಅಶ್ರಫ್ ಮೃತ್ಯು..!
Published
2 years agoon
By
Adminಬೆಳ್ತಂಗಡಿ : ಬೈಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆ ಮಾಚಾರು ಮೂಲದ ನಿವಾಸಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಾಚಾರು ಕುದುರು ನಿವಾಸಿಯಾಗಿರುವ ಅಶ್ರಫ್ ಮೃತ ದುರ್ದೈವಿಯಾಗಿದ್ದಾರೆ.
ಇವರು ಜೂನ್ 4ರಂದು ಪತ್ನಿ ಮತ್ತು ತನ್ನಿಬ್ಬರು ಮಕ್ಕಳನ್ನು ಕೇರಳದ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾಗ ಕಣ್ಣೂರು ಜಿಲ್ಲೆ ಪಯ್ಯಂಗಡಿಯಲ್ಲಿ ರಸ್ತೆ ದಾಟುವ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು.
ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 18 ರಂದು ಅಶ್ರಫ್ ಮೃತಪಟ್ಟಿದ್ದಾರೆ.
ಮೃತರು ಉಪ್ಪಿನಂಗಡಿಯಲ್ಲಿ ಬ್ರೈಟ್ ಲುಕ್ ವಸ್ತ್ರ ಮಳಿಗೆ ನಡೆಸುತ್ತಿದ್ದು, ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Ancient Mangaluru
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
Published
1 day agoon
27/11/2024By
NEWS DESKಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ದಿಡುಪೆ: ಮಿತ್ತಬಾಗಿಲು ನೆಲ್ಲಿಗುಡ್ಡೆ ನಿವಾಸಿ ರಿಶಿ (17) ಸಾ*ವನ್ನಪ್ಪಿರುವ ಘಟನೆ 26 ರಂದು ಮಂಗಳವಾರ (ನ.26) ನಡೆದಿದೆ.
ರಾಜೇಶ್ ಅರುಣಾ ದಂಪತಿ ಮಗಳಾದ ರಿಶಿ ಕಳೆದ ವಾರ 20 ರಂದು ಮನೆಯಲ್ಲಿ ಆ*ತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಇದನ್ನೂ ಓದಿ : ರಜೆಗೆ ಎಂದು ಊರಿಗೆ ಬಂದಿದ್ದ ಯೋಧ ಕೆರೆಗೆ ಹಾರಿ ಆತ್ಮಹತ್ಯೆ!
ಚಿಕಿತ್ಸೆ ಫಲಕಾರಿಯಾಗದೆ ನ. 26 ರಂದು ನಿ*ಧನ ಹೊಂದಿದ್ದಾರೆ. ಆ*ತ್ಮಹತ್ಯೆಗೆ ಸೂಕ್ತ ಕಾರಣವೇನೆಂದು ತಿಳಿದು ಬಾರದ ಹಿನ್ನಲೆ, ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
BELTHANGADY
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 12ನೇ ವಷ೯ದ ವೈಭವದ ಪಾದಯಾತ್ರೆ
Published
3 days agoon
26/11/2024By
NEWS DESK2ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ 12ನೇ ವರ್ಷದ ಪಾದಯಾತ್ರೆ ನ.26ರಂದು ಜರುಗಿತು. ತಾಲೂಕಿನ 81 ಗ್ರಾಮಗಳಿಂದ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಉಜಿರೆ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ಶ್ರೀ ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳಕೋಟೆ ಬೆಳ್ತಂಗಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಉಜಿರೆ ದೇವಸ್ಥಾನದ ಧ್ವಜಸ್ತಂಭದ ಬಳಿ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಅವರು ದೀಪ ಪುಜ್ವಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರವುಳ್ಳ ಟ್ಯಾಬ್, ವಿವಿಧ ಯಕ್ಷಗಾನ ವೇಷ ಭೂಷಣಗಳು, ಭಜನಾ ತಂಡಗಳು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡ, ವಿವಿಧ ಸಂಘ ಸಂಸ್ಥೆಯವರು ಪಾದಯಾತ್ರೆಯಲ್ಲಿ ಶಿಸ್ತಿನಿಂದ ಭಾಗವಹಿಸಿದರು. ಚೆಂಡೆ, ವಾದ್ಯ, ಸಮವಸ್ತ್ರಧಾರಿ ಭಕ್ತರು, ಯಕ್ಷಗಾನ ವೇಷಧಾರಿಗಳು, ಭಜನಾ ತಂಡಗಳ ಕುಣಿತ ಭಜನೆ ಪಾದಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಜನಜಾಗೃತಿ ವೇದಿಕೆ ಸ್ಮಾಪಕಾಧ್ಯಕ್ಷ ವಸಂತ ಸಾಲ್ಯಾನ್, ಯು.ಸಿ ಪೌಲೋಸ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ನಿಕಟಪೂರ್ವ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಉಜಿರ ಲಕ್ಷ್ಮೀ ಗ್ರೂಪ್ ಮಾಲಕ ಮೋಹನ್ ಕುಮಾರ್, ಲಯನ್ಸ್ ಕ್ಲಬ್ ಪೂರಣ್ ವರ್ಮ, ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಸಿರಿಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕ ಕೆ.ಎನ್.ಜನಾರ್ದನ್, ನ್ಯಾಯವಾದಿ ಧನಂಜಯ್ ರಾವ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನ, ಮಾಜಿ ಅಧ್ಯಕ್ಷ, ತಿಮ್ಮಪ್ಪ ಗೌಡ ಬೆಳಾಲು, ಡಿ.ಎ ರಹಿಮಾನ್, ಉದ್ಯಮಿ ಮೋಹನ ಶೆಟ್ಟಿಗಾರ್, ರಾಘವೇಂದ್ರ ನಾಯಕ್, ಕೊರಗಪ್ಪ ಗೌಡ ಚಾರ್ಮಾಡಿ, ಸೀತಾರಾಮ ಬೆಳಾಲ್, ರವೀಂದ್ರ ಶೆಟ್ಟಿ, ಬಳಂಜ, ಡಾ. ಶ್ರೀಧರ ಭಟ್, ರವಿ ಚಕ್ಕಿತ್ತಾಯ, ವಡಿವೇಲು ಗುರುವಾಯನಕೆರೆ, ಮಮತಾ ಶೆಟ್ಟಿ, ಅಡೂರು ವೆಂಕಟ್ರಾವ್, ಜಯಂತಿ ಪಾಲೇದು, ಗಣೇಶ್ ಗೌಡ,, ಪುಭಾಕರ ಪೂಸಂದೋಡಿ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಬೂದಪ್ಪ ಗೌಡ, . ಉದ್ಯಮಿ ರಾಘವೇಂದ್ರ ಬೈಪಾಡಿತ್ತಾಯ, ವಿವೇಕ್ ವಿನ್ಸೆಂಟ್ ಪಾಯಿಸ್, ಮಮತಾ ಎಂ. ಶೆಟ್ಟಿ,, ಶ್ಯಾಮ್ ಸುಂದರ್ ನಡ, ಶಶಿಧರ ಕಲ್ಮಂಜ, ಅರುಣ್ ಕುಮಾರ್, ಡಾ. ಬಿ.ಎ ಕುಮಾರ ಹಗ್ಗ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್, ನ್ಯಾಯವಾದಿ ಧನಂಜಯ್ ರಾವ್, ಅಡೂರು ವೆಂಕಟ್ರಾವ್,, ತಿಮ್ಮಪ್ಪ ಗೌಡ ಬೆಳಾಲು, ಪುಷ್ಪರಾಜ ಹೆಗ್ಡೆ ಮಡಂತ್ಯಾರು, ಉಜಿರ ಗ್ರಾ.ಪಂ ಅಧ್ಯಕ್ಷ ಮಾಜಿ ಅಧ್ಯಕ್ಷ ಪುಷ್ಪಾವತಿ ಆರ್ ಶೆಟ್ಟಿ, ವಿಠಲ ಶೆಟ್ಟಿ, ಲಾಯಿಲ, ಶಂಕರ ಹೇಡ, ಯೋಗೀಶ್ ಕುಮಾರ್ ನಡಕ್ಕರ, ಗಿರೀಶ್ ವೇಣೂರು, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹಗ್ಡೆ, ಪುಷ್ಪರಾಜ ಹಗ್ಡೆ ಮಡಂತ್ಯಾರು, ರತ್ನವರ್ಮ ಬುಣು, ಪ್ರಶಾಂತ ಪಾರಂಕಿ, ದುಗೇಗೌಡ, ತಾಲೂಕು ಯೋಜನಾಧಿಕಾರಿಗಳು, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೧೫ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹಗಡೆ ಅಭಿಮಾನಿಗಳು ಮರವಣಿಗೆಯ ಜೊತ ಸಾಗಿದರು.
LATEST NEWS
ಕ್ಯಾನ್ಸರ್ ವಾಸಿ ಬಗ್ಗೆ ಸಿಧು ಹೇಳಿಕೆಗೆ ಆಕ್ಷೇಪ..! 850 ಕೋಟಿ ಮಾನನಷ್ಟ ಕೋರಿ ನೋಟಿಸ್
ಉತ್ತರ ಪ್ರದೇಶ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವು
ಬೆಂ*ಕಿ ಹಚ್ಚಿ ಇಡೀ ಕುಟುಂಬದ ಸಾಮೂಹಿಕ ಹ*ತ್ಯೆಗೆ ಯತ್ನ
ಕೊರೆಯುವ ಚಳಿಯಲ್ಲಿ ತುಟಿಗಳ ಅಂದ ಮಾಸದಿರಲಿ, ಈ ರೀತಿ ಆರೈಕೆ ಮಾಡಿ
Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಅಂತಾರಾಷ್ಟ್ರೀಯ ಸಮ್ಮೇಳನ: ವ್ಯಾಟಿಕನ್ಗೆ ತೆರಳಿದ ಸ್ಪೀಕರ್ ಯುಟಿ ಖಾದರ್
Trending
- Baindooru7 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru1 day ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು