Saturday, October 1, 2022

ಉಡುಪಿ: ಚಾಲಕ ನಿದ್ರೆಗೆ ಜಾರಿದ್ದಾಗ ಲಾರಿ ಟಯರ್‌ನ್ನೇ ಎಗರಿಸಿದ ಕಳ್ಳರು ಅಂದರ್

ಉಡುಪಿ: ಶಿರೂರು ಟೋಲ್‌ಗೇಟ್ ಬಳಿ ನಿಂತಿದ್ದ ಲಾರಿಯಿಂದ ಟಯರ್ ಕದ್ದೊಯ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24) ಆಕಾಶ್ ಬಪ್ಪ ಶಿಂಧೆ (19) ಹಾಗೂ ಅಮೂಲ್ ರಾಮ ಕಳೆ (22) ಬಂಧಿತರು.


ಗುರುವಾರ ರಾತ್ರಿ ಟೋಲ್‌ಗೇಟ್ ಸಮೀಪ ಮಂಗಳೂರಿಗೆ ತೆರಳುತ್ತಿದ್ದ ಅಂಕೋಲಾ ಮೂಲದ ಲಾರಿ ಚಾಲಕ ನಿದ್ರೆ ಮಾಡಲು ಎಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ.

ಲಾರಿಯಿಂದ 1.85 ಲಕ್ಷ. ರೂ ಮೌಲ್ಯದ ಒಟ್ಟು 5 ಟಯರ್‌ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದರು.

ಪ್ರಕರಣವನ್ನು ಬೆನ್ನಟ್ಟಿದ್ದ ಬೈಂದೂರು ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಟಿಟಿ ದೃಶ್ಯಾವಳಿ ಮೂಲಕ ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66 ಬಳಿ ಇವರನ್ನು ಬಂಧಿಸಲಾಗಿದೆ.

 

LEAVE A REPLY

Please enter your comment!
Please enter your name here

Hot Topics

‘ಶೋಭಕ್ಕ ಒಂಜಿ ಸೆಲ್ಫಿ’: ಕಾಂಗ್ರೆಸ್ ಮುಖಂಡ ಮಿಥುನ್ ರೈ ‘ಸೆಲ್ಫಿ’ ಸ್ಪರ್ಧೆಗೆ BJP ಕಾರ್ಯಕರ್ತರ ಖಡಕ್ ರೆಸ್ಪಾನ್ಸ್

ಉಡುಪಿ: ರಸ್ತೆ ಅವ್ಯವಸ್ಥೆ, ಕಳಪೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸೆಲ್ಫಿ ವಿಥ್ ಶೋಭಾ ಕರಂದ್ಲಾಜೆ ಎಂಬ ವೈವಿಧ್ಯಮಯ ಪ್ರತಿಭಟನೆಯ ಬಗ್ಗೆ ಘೋಷಣೆ ಮಾಡಿದ್ದರು.ಸಂಸದೆ ಶೋಭಾ...

ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಕುಸಿತ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ

ಬೈಂದೂರು: ಉಡುಪಿ ಜಿಲ್ಲೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ನಿರ್ಮಾಣ ಹಂತದ ಜೆಟ್ಟಿ ಕುಸಿತವಾದ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿದ ಅವರು 'ಜೆಟ್ಟಿಯ 150 ಮೀಟರಿಗೂ...

ಕಳಸದಲ್ಲಿ ನದಿಗೆ ಬಿದ್ದು ಸಾವನ್ನಪ್ಪಿದ ಯುವಕ-ಮೃತದೇಹ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಳಸದಲ್ಲಿ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ ಶಿವಮೊಗ್ಗ ಮೂಲದ ಯುವಕನ ಮೃತದೇಹವನ್ನು ಉಡುಪಿ ಈಶ್ವರ್ ಮಲ್ಪೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಸತತ ಕಾರ್ಯಾಚರಣೆ ನಡೆಸುವ ಮೂಲಕ ನೀರಿನಿಂದ...