Connect with us

LATEST NEWS

ಲಾರಿ-ಕಾರು ಢಿಕ್ಕಿ: ಓರ್ವ ಮಹಿಳೆ ಸಾವು

Published

on

ಉತ್ತರಕನ್ನಡ: ಲಾರಿ ಹಾಗೂ ಓಮಿನಿ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇದ್ದ ಓರ್ವ ಮಹಿಳೆ ಸಾವನ್ನಪ್ಪಿದಂತಹ ದುರಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ಹೊನ್ನಾವಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.

ಯಲ್ಲಾಪುರದಲ್ಲಿ ಹೋಟೆಲ್ ಉದ್ಯಮಿ ಆಗಿರುವ ಮಂಜುನಾಥ ಶ್ಯಾನುಭೋಗ್ ಅವರ ಪತ್ನಿ ಸಹನಾ ಮಂಜುನಾಥ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಮದುವೆ ಸಮಾರಂಭಕ್ಕೆ ಕಾರಿನಲ್ಲಿ ಹೋಗಿ ವಾಪಾಸ್ ಬರುವಾಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

LATEST NEWS

ಮದುವೆಯ ಕಾರಣ ಕೊಟ್ಟು ಮಹಿಳೆಯನ್ನು ಕೆಲಸದಿಂದ ತೆಗೆಯುವಂತಿಲ್ಲ- ಸುಪ್ರೀಂಕೋರ್ಟ್

Published

on

SUPREME COURT : ಮದುವೆ ಎಂಬುವುದು ಒಬ್ಬ ಹುಡುಗ ಹಾಗೂ ಹುಡುಗೀಯ ಬದುಕಿನಲ್ಲಿ ಅತ್ಯಮೂಲ್ಯ ಕ್ಷಣ. ಜೀವನದಲ್ಲಿ ಒಂದು ಬಾರಿ ಮಾತ್ರ ಮದುವೆ ಆಗುವ ಸೌಭಾಗ್ಯ ಕೂಡಿ ಬಂದಾಗ ಹೆಣ್ಣು ಮಗಳು ತಾಯಿ ಮನೆ ಬಿಟ್ಟು ಗಂಡನ ಮನೆ ಸೇರುವುದು ವಾಡಿಕೆ. ಆದ್ರೆ ಒಬ್ಬಳು ಕೆಲಸ ಮಾಡಿ ಮನೆ ಸಾಗಿಸುವ ಯುವತಿಯನ್ನು ಮದುವೆ ಎಂಬ ಕಾರಣದಿಂದ ಕೆಲಸದಿಂದ ವಜಾ ಮಾಡುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಕೋರ್ಟ್ ನೀಡಿದೆ.
ಹೌದು ಇದು ಅಚ್ಚರಿ ಎನಿಸಿದರೂ ಸತ್ಯ. ಮಹಿಳೆಯೊಬ್ಬರು ಮದುವೆಯಾದರು ಎಂಬುದು ಅವರನ್ನು ಕೆಲಸದಿಂದ ತೆಗೆಯಲು ಬಾರದು ಎಂದು ಸುಪ್ರೀಕೋರ್ಟ್ ಹೇಳಿದೆ. ಸೇನಾ ನರ್ಸಿಂಗ್ ಸೇವೆಯಲ್ಲಿ ಕಾಯಂ ಉದ್ಯೋಗಿಯಾಗಿದ್ದ ಮಹಿಳೆಯನ್ನು ಮದುವೆಯಾದ ಕೂಡಲೇ ಕೆಲಸದಿಂದ ವಜಾಗೊಳಿಸಿದ್ದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.


1988ರಲ್ಲಿ ಮದುವೆ ಬಳಿಕ ಕೆಲಸದಿಂದ ಬಿಡುಗಡೆಗೊಂಡಿದ್ದ ಕಾಯಂ ಉದ್ಯೋಗಿಗೆ ಮಿಲಿಟರಿ ನರ್ಸಿಂಗ್ ಸರ್ವಿಸ್‌ನಿಂದ 60 ಲಕ್ಷ ರೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸೇನಾಪಡೆಯಲ್ಲಿ ನರ್ಸ್‌ ಆಗಿದ್ದ ಲೆ.ಸೆಲಿನಾ ಜಾನ್‌ ಅವರನ್ನು ಮದುವೆಯಾದ ಕಾರಣಕ್ಕೆ 1988ರಲ್ಲಿ ಉದ್ಯೋಗದಿಂದ ವಜಾ ಮಾಡಲಾಗಿತ್ತು. ಅವರು ಇದನ್ನು ಸೇನಾಪಡೆಯ ನ್ಯಾಯಾಧೀಕರಣದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಧೀಕರಣವು ಸೆಲಿನಾ ಅವರ ಕೆಲಸದ ಅವಧಿಯ ವೇತನ ನೀಡಲು ಸೂಚಿಸಿತ್ತು. ಆದರೆ 1977ರ ಕಾಯ್ದೆಯ ಪ್ರಕಾರ ಮದುವೆಯಾದ ಮಹಿಳೆಯರನ್ನು ಕೆಲಸದಿಂದ ತೆಗೆಯಬಹುದಿತ್ತು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಈ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ವಜಾ ಮಾಡುವುದು ತಪ್ಪು. ಇದು ಮನುಷ್ಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಹೀಗಾಗಿ ಇಲ್ಲಿಯವರೆಗೆ ಸೆಲಿನಾ ಎಷ್ಟು ದುಡಿಯುತ್ತಿದ್ದರು ಎಂಬುದನ್ನು ಅಂದಾಜಿಸಿ 60 ಲಕ್ಷ ರು. ಪಾವತಿ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

 

Continue Reading

DAKSHINA KANNADA

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನೂತನ ಧ್ವಜ ಮರ ಸ್ಥಾಪನೆ

Published

on

ಸುರತ್ಕಲ್‍: ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ನೂತನ ಧ್ವಜಮರ ಸ್ಥಾಪನೆ ಫೆ. 21ರಂದು  ಜರಗಿತು.


ಶಿಬರೂರು ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು,ಪೂಜೆ ನೆರವೇರಿದ ಬಳಿಕ ಧ್ವಜಮರವನ್ನು ಪುನರ್ ಸ್ಥಾಪಿಸಲಾಯಿತು.

ಇದೇ ಸಂದರ್ಭ ಎ.22ರಿಂದ 30ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.


ಉಮೇಶ್ ಗುತ್ತಿನಾರ್ ಶಿಬರೂರುಗುತ್ತು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಶೆಟ್ಟಿ, ಸಿ.ಎ ಉದಯಕುಮಾರ್ ಶೆಟ್ಟಿ, ಉದಯ ಸುಂದರ್ ಶೆಟ್ಟಿ, ಯದುನಾರಾಯಣ ಶೆಟ್ಟಿ , ಸುಧಾಕರ ಪೂಂಜ ಸುರತ್ಕಲ್, ಸಿ.ಎ ಸುದೇಶ್ ಕುಮಾರ್ ರೈ, ಬಾಲಕೃಷ್ಣ ಕೊಠಾರಿ,ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಕ್ಷೇತ್ರದ ಸಮಿತಿ ಪ್ರಮುಖರು, ಸಂಬಂಧಪಟ್ಟ ಗುತ್ತು ಮನೆತನದವರು , ಗ್ರಾಮಸ್ಥರು ಭಾಗವಹಿಸಿದ್ದರು

Continue Reading

FILM

ನಟ ದರ್ಶನ್ “ತಗಡು” ಪದ ಪ್ರಯೋಗಕ್ಕೆ ರಾಜ್ಯ ಒಕ್ಕಲಿಗರ ಸಂಘ ಕೆಂಡಾಮಂಡಲ

Published

on

ಬೆಂಗಳೂರು : ನಟ ದರ್ಶನ್ ಸದಾ ಸುದ್ದಿಯಲ್ಲಿರೋದಂತು ಸತ್ಯ. ಒಂದಾ ಸಿನೆಮಾದ ವಿಚಾರಕ್ಕೆ ಸುದ್ದಿಯಾದ್ರೆ , ಇನ್ನೊಂದು ಅವರ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರ್ತಾರೆ. ಇರಲಾರ್ದೆ ಇರುವೆ ಬಿಟ್ಟುಕೊಂಡ್ರು ಅನ್ನೋ ಹಾಗೆ ಈಗ ಮತ್ತೆ ದರ್ಶನ್ ವಿವಾದವೊಂದನ್ನು ಮೈಗೆ ಎಳೆದುಕೊಂಡಿದ್ದಾರೆ. ನಟ ದರ್ಶನ್​ ಅವರು ‘ಕಾಟೇರ’ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ವೇಳೆ ‘ರಾಬರ್ಟ್​’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಬಗ್ಗೆ ಆಡಿದ ಮಾತುಗಳಿಗೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ.

ದರ್ಶನ್​ ಅವರು ‘ತಗಡು’ ಎಂಬ ಪದ ಬಳಕೆ ಮಾಡಿದ್ದಕ್ಕೆ ಆಕ್ಷೇಪ ಎದುರಾಗಿದೆ. ತಗಡು ಎಂಬ ಪದವನ್ನು ದರ್ಶನ್​ ಅವರು ಬಳಕೆ ಮಾಡಿದ್ದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘ ಕೂಡ ಕೆಂಡಾಮಂಡಲರಾಗಿದ್ದಾರೆ.


ದರ್ಶನ್​ ಮತ್ತು ಉಮಾಪತಿ ಶ್ರೀನಿವಾಸ್​ ಗೌಡ ಅವರು ಜೊತೆಯಾಗಿ ‘ರಾಬರ್ಟ್​’ ಸಿನಿಮಾ ಮಾಡಿದ್ದರು.ಉತ್ತಮ ಸ್ನೇಹ ಸಂಬಂಧವೂ ಇವರಿಬ್ಬರ ನಡುವೆ ಇತ್ತು. ಜೊತೆಗೆ ಆ ಸಿನಿಮಾವೂ ಉತ್ತಮವಾಗಿ ಪ್ರದರ್ಶನ ಕಂಡಿತು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು.


ಇದೀಗ ಬೆಂಕಿ ಮುಚ್ಚಿದ ಕೆಂಡದಂತಿದ್ದ ಇವರಿಬ್ಬರ ಕೋಲ್ಡ್ ವಾರ್ ಮತ್ತೆ ಮುನ್ನಲೆಗೆ ಬಂದಿದೆ. ಕಾಟೇರ’ ಸಿನಿಮಾದ ಟೈಟಲ್​ ನೀಡಿದ್ದು ಮತ್ತು ಕಥೆ ಸಿದ್ಧ ಮಾಡಿಸಿದ್ದು ತಾವೇ ಎಂದು ಉಮಾಪತಿ ಹೇಳಿದ್ದನ್ನು ದರ್ಶನ್ ತಿರಸ್ಕರಿಸಿದ್ದು, ವೇದಿಕೆಯಲ್ಲಿ ಉಮಾಪತಿಯವರಿಗೆ “ತಗಡು” ಎಂಬ ಶಬ್ಧ ಪ್ರಯೋಗ ಮಾಡಿದ್ದರು. ಈಗಾಗಲೇ ದರ್ಶನ್ ವಿರುದ್ಧ ಕೇಸ್ ಫೈಲ್ ಆಗಿದ್ದು, ಇದೀಗ ಈ ವಿಚಾರ ಎಲ್ಲಿ ಹೋಗಿ ನಿಲ್ಲುತ್ತೋ ಎಂಬುವುದನ್ನು ಕಾದು ನೋಡ್ಬೇಕಾಗಿದೆ.

Continue Reading

LATEST NEWS

Trending