Connect with us

    LATEST NEWS

    ‘ಡೀಸೆಲ್ ಬೆಲೆ 10 ರೂಪಾಯಿ ಕಡಿತಗೊಳಿಸಿ, ಇಲ್ಲದಿದ್ದರೆ ನ.15ರಿಂದ ಲಾರಿ ಮುಷ್ಕರ’

    Published

    on

    ಬೆಂಗಳೂರು: ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 10 ರೂಪಾಯಿ ಕಡಿಮೆ ಮಾಡಬೇಕು, ಇದಕ್ಕೆ ನವೆಂಬರ್ 5ರ ಗಡುವು ನೀಡಲಾಗಿದೆ.

    ಇಲ್ಲದಿದ್ದರೆ ನ.15ಕ್ಕೆ ಲಾರಿ ಮುಷ್ಕರಕ್ಕೆ ಕರೆ ನೀಡಲಾಗುವುದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.


    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಣ್ಮುಗಪ್ಪ, ಬೆಲೆ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು, ಲಾರಿ ಮಾಲೀಕರ ಸಂಕಷ್ಟ ಪರಿಸ್ಥಿತಿಯನ್ನು ತೆರೆದಿಟ್ಟರು.
    ಪರ್ಮಿಟ್​ ಅವಧಿಯನ್ನು ಜನವರಿ ಅಂತ್ಯದವರೆಗೂ ವಿಸ್ತರಿಸಬೇಕು.

    ಲೋಡಿಂಗ್ ಮತ್ತು ಅನ್​ಲೋಡಿಂಗ್​ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಲೋಡಿಂಗ್​ ಮತ್ತು ಅನ್​ಲೋಡಿಂಗ್​ ಹಂತದಲ್ಲಿ ಹಲವು ಸಮಸ್ಯೆಗಳಿವೆ. ಆರ್​ಟಿಒ ಹಾಗೂ ಪೊಲೀಸ್ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿದರು.

    ಓವರ್​ಲೋಡ್ ತಪ್ಪಿಸಬೇಕು ಎಂದು ಲಾರಿ ಮಾಲೀಕರ ಸಂಘವೂ ಒತ್ತಾಯಿಸುತ್ತಿದೆ. ಆದರೆ ಆರ್​ಟಿಒ ಅಧಿಕಾರಿಗಳು ಲಂಚ ತೆಗೆದುಕೊಂಡು ಓವರ್​ಲೋಡ್ ಲಾರಿಗಳನ್ನು ಬಿಟ್ಟು ಕಳಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

    LATEST NEWS

    ವಿಶ್ವದ ದುಬಾರಿ ಅಕ್ಕಿ ಯಾವುದು ಗೊತ್ತಾ? 1 ಕೆಜಿ ಅಕ್ಕಿ ಬೆಲೆ ಕೇಳಿದ್ರೆ ಅಚ್ಚರಿಗೊಳ್ಳುತ್ತೀರಾ..!!

    Published

    on

    ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿಗೆ ಮಾರುಕಟ್ಟೆಯಲ್ಲಿ 30, 60 ರೂಪಾಯಿ ಕೊಟ್ಟು ಖರೀದಿ ಮಾಡುತ್ತೇವೆ. ಆದರೆ ಎಂದಾದರೂ ಸಾವಿರಾರು ರೂಪಾಯಿ ಖರ್ಚು ಮಾಡಿ ಅಕ್ಕಿಯನ್ನು ಖರೀದಿ ಮಾಡಿದ್ದೀರಾ? ವಿಶ್ವದ ಅತೀ ದುಬಾರಿ ಬೆಲೆಯ ಅಕ್ಕಿ ಯಾವುದು ಗೊತ್ತಾ?

    ಇದೀಗ ಈ ದುಬಾರಿ ಅಕ್ಕಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಕಿನ್ಮೆಮೈ ಅಕ್ಕಿ ವಿಶ್ವದ ಅತ್ಯಂತ ದುಬಾರಿ ಎಂದು ಹೇಳಲಾಗಿದೆ. ಈ ಅಕ್ಕಿ ತನ್ನ ಗುಣಮಟ್ಟ ಹಾಗೂ ವಿಶಿಷ್ಟ ಉತ್ಪಾದನಾ ತಂತ್ರದಿಂದಲೇ ಹೆಸರುವಾಸಿಯಾಗಿದೆ. ಒಂದು ಕೆಜಿ ಕಿನ್ಮೆಮೈ ಅಕ್ಕಿಯನ್ನು ಖರೀದಿಸಬೇಕಿದ್ದರೆ ನೀವು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇನ್ನು ಈ ಅಕ್ಕಿ ರುಚಿಯಲ್ಲಿ ಭಿನ್ನವಾಗಿದ್ದುಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೇ ಈ ಅಕ್ಕಿಯನ್ನು ಬೇಯಿಸುವ ಮೊದಲು ತೊಳೆಯುವ ಅಗತ್ಯವಿಲ್ಲ.  ನೀರಿನ ಸಂರಕ್ಷಣೆಯ ಜೊತೆಗೆ ಪರಿಸರ ಸ್ನೇಹಿಯೂ ಆಗಿದೆ.

    ಕಿನ್ಮೆಮೈ ಅಕ್ಕಿಯಲ್ಲಿ ಎರಡು ವಿಧಗಳಿದ್ದು ಒಂದು ಬಿಳಿ ಮತ್ತು ಕಂದು ಬಣ್ಣಗಳನ್ನು ಒಳಗೊಂಡಿದೆ. ಇದು ಸುಲಭವಾಗಿ ಬೇಯುವ ಮತ್ತು ಬೇಗ ಜೀರ್ಣವಾಗುತ್ತದೆ. ಅಲ್ಲದೇ ಸಾಕಷ್ಟು ಪ್ರೊಟೀನ್  ಅಂಸಗಳನ್ನು ಹೊಂದರಿವ ಈ ಅಕ್ಕಿ ಹೊಟ್ಟೆ ಉಬ್ಬರವನ್ನು ಕಡಿಮೆಗೊಳಿಸುತ್ತದೆ. ಕಿನ್ಮೆಮೈ ಸಾಮಾನ್ಯ ವೈಟ್ ರೈಸ್​​ಗಿಂತ 1.8 ಪಟ್ಟು ಹೆಚ್ಚು ಫೈಬರ್ ಮತ್ತು ಏಳು ಪಟ್ಟು ಹೆಚ್ಚು ವಿಟಮಿನ್ ಬಿ1 ಅನ್ನು ಹೊಂದಿದ್ದು, ಇದು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಫ್ಲೂ, ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆಯ ವಿರುದ್ಧ ಹೋರಾಡಲು ಸಹಾಯ ಮಾಡುವ ಲಿಪೊಪೊಲಿಸ್ಯಾಕರೈಡ್‌ಗಳನ್ನು (LPS) ಹೊಂದಿದೆ.

    ಕಿನ್ಮೆಮೈ ಅಕ್ಕಿ ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂಬ ದಾಖಲೆಯನ್ನು ಹೊಂದಿದ್ದು, ಪ್ರತಿ ಕೆಜಿಗೆ ಮಾರುಕಟ್ಟೆ ಬೆಲೆ ಅಂದಾಜು 15,000 ರೂ. ಸಾಮಾನ್ಯವಾಗಿ ತಲಾ 140 ಗ್ರಾಂನ ಆರು ಪ್ಯಾಕೆಟ್‌ಗಳನ್ನು ಹೊಂದಿರುವ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ, ಒಂದು ಬಾಕ್ಸ್‌ನ ಬೆಲೆ ಸುಮಾರು 13,000 ರೂಪಾಯಿ ಆಗಿದೆ.

    Continue Reading

    LATEST NEWS

    ಸುರತ್ಕಲ್, ನಂತೂರು ಹೆದ್ದಾರಿ ಗುಂಡಿ ಮುಚ್ಚಲು, ಕೂಳೂರು ಹೊಸ ಸೇತುವೆ ಕಾಮಗಾರಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಆಗ್ರಹ

    Published

    on

    ಮಂಗಳೂರು: ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬೃಹತ್ ಗಾತ್ರದ ಗುಂಡಿಗಳು ದೊಡ್ಡ ಸಂಖ್ಯೆಯಲ್ಲಿ ಬಿದ್ದಿದ್ದು ವಾಹನ ಸಂಚಾರ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಲವು ಅಪಘಾತಗಳು ನಡೆದು, ಪ್ರಾಣಹಾನಿಗಳು ಉಂಟಾಗಿವೆ. ಕೆಲವೆಡೆ ರಸ್ತೆ ಪೂರ್ತಿ ಆಳವಾದ ಗುಂಡಿಗಳೇ ತುಂಬಿದ್ದು, ವಾಹನಗಳು ಸರಾಗವಾಗಿ ಚಲಿಸಲಾಗದೆ ಮೈಲುಗಳಷ್ಟು ಉದ್ದಕ್ಕೆ ಪ್ರತಿದಿನ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.

    ಮಳೆಗಾಲಕ್ಕೂ ಮುನ್ನ ಈ ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ ನಡೆಸದಿರುವುದು, ವರ್ಷಗಳಿಂದ ಸರಿಯಾಗಿ ನಿರ್ವಹಣೆ ಮಾಡದಿರುವುದು ರಸ್ತೆ ಈ ರೀತಿ ಸಂಚಾರಕ್ಕೆ ಆಯೋಗ್ಯಗೊಳ್ಳಲು ಪ್ರಧಾನ ಕಾರಣ. ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಕೇರಳ, ಗೋವಾ, ಮುಂಬೈ ಸಂಪರ್ಕದ ಅತ್ಯಂತ ಪ್ರಮುಖ ಹೆದ್ದಾರಿಯ ಪ್ರಧಾನ ಭಾಗವಾಗಿರುವ, ಅತಿ ಹೆಚ್ಚು ಸಂಚಾರ ದಟ್ಟಣೆಯ ನಂತೂರು, ಸುರತ್ಕಲ್ ಭಾಗವನ್ನು ಕಡೆಗಣಿಸಿರುವುದು ಖೇದಕರ. ಕಳೆದ ನಾಲ್ಕು ತಿಂಗಳುಗಳಲ್ಲಿ ರಸ್ತೆಗುಂಡಿಗಳಿಂದ ಉಂಟಾದ ಅಪಘಾತಗಳಿಗೆ ಹಲವು ಜೀವಗಳು ಬಲಿಯಾಗಿದ್ದರೂ ಸ್ಥಳೀಯ ಶಾಸಕರು, ಸಂಸದರು ಹೆದ್ದಾರಿ ದುರವಸ್ಥೆಯ ಕುರಿತು ಗಮನ ಹರಿಸದಿರುವುದು ಖಂಡನೀಯ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಹಾಗೂ ನಂತೂರು- ಸುರತ್ಕಲ್ ಹೆದ್ದಾರಿಯನ್ನು ಪೂರ್ಣ ಪ್ರಮಾಣದ ದುರಸ್ತಿಗೆ ಮಳೆಗಾಲದ ತರುವಾಯ ಮುಂದಾಗಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸುತ್ತದೆ.

    ಕೂಳೂರು ಹೊಸ ಸೇತುವೆ ಕಾಮಗಾರಿ ಪೂರ್ತಿಗೊಳಿಸಲು ಒತ್ತಾಯ :

    ಇದೇ ಹೆದ್ದಾರಿಯ ಭಾಗವಾಗಿರುವ “ಕೂಳೂರು ಹಳೆಯ ಸೇತುವೆ ಸಂಚಾರಕ್ಕೆ ಅನರ್ಹ ಗೊಂಡು ಕುಸಿಯುವ ಸಾಧ್ಯತೆ ಇದೆ, ಈ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧಿಸಬೇಕು” ಎಂದು ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ಆರು ವರ್ಷ ದಾಟಿದೆ. ಈ ನಡುವೆ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳಾದರೂ ಇನ್ನೂ ಪಿಲ್ಲರ್ ಗಳ ನಿರ್ಮಾಣ ಪೂರ್ಣಗೊಂಡಿಲ್ಲ. ತೀರಾ ಕುಂಟುತ್ತಾ ಸಾಗಿರುವ ಸೇತುವೆ ನಿರ್ಮಾಣ ಕಾಮಗಾರಿ ಈಗ ಪೂರ್ತಿ ಸ್ಥಗಿತಗೊಂಡಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧ ಪಟ್ಟ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಈ ಸ್ಥಿತಿ ಉಂಟಾಗಿದೆ.

    ಆರು ವರ್ಷಗಳ ಹಿಂದೆಯೇ ಹಳೆಯ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದ್ದರೂ, ಉಡುಪಿ -ಮಂಗಳೂರು ನಡುವೆ ಸಂಚಾರ, ಸಂಪರ್ಕ ಪೂರ್ತಿ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ, ಹಾಗೂ ಹೊಸ ಸೇತುವೆ ನಿರ್ಮಾಣದ ನಂತರವೇ ಹಳೆಯ ಸೇತುವೆ ಮುಚ್ಚಬೇಕು ಎಂಬ ನಾಗರಿಕ ಸಮಾಜದ ಆಗ್ರಹದಿಂದಾಗಿ ಹಳೆಯ ಸೇತುವೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ.

    ಈಗಂತೂ ಹಳೆಯ ಸೇತುವೆ ಮತ್ತಷ್ಟು ದುರ್ಬಲಗೊಂಡು ಯಾವುದೇ ಕ್ಷಣ ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಸೇತುವೆ ಮುಚ್ಚುವ ಕುರಿತು ಆಲೋಚಿಸುತ್ತಿದೆ. ಈ ರೀತಿ ಹಳೆಯ ಸೇತುವೆ ಮುಚ್ಚಲ್ಪಟ್ಟರೆ ಮಂಗಳೂರು, ಸುರತ್ಕಲ್, ಉಡುಪಿ ನಡುವೆ ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ವ್ಯಾಪಾರ, ವ್ಯವಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ ಕುಸಿದರೆ ಬಹಳ ದೊಡ್ಡ ದುರಂತವನ್ನು ಎದುರುಗೊಳ್ಳಬೇಕಿದೆ.

    ಸಂಬಂಧ ಪಟ್ಟವರ ತೀರಾ ಬೇಜವಾಬ್ದಾರಿತನದಿಂದ ನಾಲ್ಕು ವರ್ಷಗಳಿಂದ ತೆವಳುತ್ತಾ ಸಾಗಿರುವ ಕೂಳೂರು ಹೊಸ ಸೇತುವೆಯ ಕಾಮಗಾರಿಯನ್ನು ಈ ವರ್ಷಾಂತ್ಯದ ಗಡುವನ್ನು ನಿರ್ಧರಿಸಿ ಪೂರ್ಣಗೊಳಿಸಬೇಕು, ಅಲ್ಲಿಯವರಗೆ ಹಳೆಯ ಸೇತುವೆ ಮುಚ್ಚಬಾರದು ಹಾಗೂ ನಂತೂರು – ಸುರತ್ಕಲ್ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಿ ದುರಸ್ತಿಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರವನ್ನು ಹೋರಾಟ ಸಮಿತಿ ಬಲವಾಗಿ ಆಗ್ರಹಿಸುತ್ತದೆ. ಈ ಬೇಡಿಕೆಗಳ ಮೇಲೆ ಸರಣಿ ಪ್ರತಿಭಟನೆಗಳನ್ನು ಸಂಘಟಿಸುವುದಾಗಿ ಸಮಿತಿ ಎಚ್ಚರಿಸಿದೆ.

    Continue Reading

    DAKSHINA KANNADA

    ಬೈಕ್‌ಗಳ ನಡುವೆ ಭೀ*ಕರ ಅಪ*ಘಾತ; ಬಸ್ ಹರಿದು ಸವಾರ ಸಾ*ವು

    Published

    on

    ಮಂಗಳೂರು : ಕುಲಶೇಖರ ಸೇಕ್ರೇಡ್ ಹಾರ್ಟ್ ಶಾಲೆ ಬಳಿ ಇಂದು (ಸೆ.27) ಬೆಳಿಗ್ಗೆ ಭೀ*ಕರ ರಸ್ತೆ ಅಪ*ಘಾತ ಸಂಭವಿಸಿ, ಬೈಕ್ ಸವಾರ ಮೃತ*ಪಟ್ಟಿದ್ದಾನೆ. ಚಂದನ್ (20) ಮೃ*ತ ಬೈಕ್ ಸವಾರ.


    ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಂದನ್ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಬಸ್ಸೊಂದು ಆತನ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃ*ತಪಟ್ಟಿದ್ದಾನೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    Trending