ಲಂಡನ್: ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬಳಿಗೆ ಮುತ್ತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಶನಿವಾರ ರಾಜೀನಾಮೆ ನೀಡಿದ್ದಾರೆ.
ಕೊರೋನಾ ವೈರಸ್ ಲಾಕ್‌ಡೌನ್ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಇಂಥ ಕೆಲಸ ಮಾಡುವಂತಿಲ್ಲ ಎಂಬ ನಿರ್ಬಂಧಗಳಿವೆ. ಇದನ್ನು ಮೀರಿ ಈ ‘ಕೃತ್ಯ’ ಎಸಗಿದ್ದಕ್ಕೆ ವಿಪಕ್ಷಗಳು ಕಿಡಿಕಾರಿದ್ದವು. ಮ್ಯಾಟ್ ಹ್ಯಾನ್‌ಕಾಕ್, ಆಪ್ತಳೊಬ್ಬಳಿಗೆ ಮುತ್ತು ಕೊಡುತ್ತಿರುವ ಚಿತ್ರಗಳನ್ನು ‘ದಿ ಸನ್’ ಪತ್ರಿಕೆ ಪ್ರಕಟಿಸಿತ್ತು. ಕೃತ್ಯ ಒಪ್ಪಿಕೊಂಡಿರುವ ಅವರು ಈಗ ರಾಜೀನಾಮೆ ಸಲ್ಲಿಸಿದ್ದಾರೆ.
ಹ್ಯಾನ್‌ಕಾಕ್ 15 ವರ್ಷದ ಹಿಂದೆ ಮಾರ್ಥ ಎಂಬಾಕೆಯನ್ನು ವಿವಾಹವಾಗಿದ್ದರು. ತನ್ನದೇ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿವಾಹಿತ ಮಹಿಳೆಗೆ ಮುತ್ತು ನೀಡುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಘಟನೆ ಮೇ.6ರಂದು ನಡೆದಿದೆ ಎಂದು ‘ದಿ ಸನ್’ ವರದಿ ಮಾಡಿದೆ.