Connect with us

    DAKSHINA KANNADA

    ನೀತಿ ಸಂಹಿತೆ ಉಲ್ಲಂಘನೆ; ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    Published

    on

    ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್ ಜಾರಿ ಮಾಡಿದೆ.

    ಮಾರ್ಚ್ 30 ರಂದು ಕಟಪಾಡಿ ಖಾಸಗಿ ಕಾಲೇಜು ಅವರಣದಲ್ಲಿ ಶ್ರೀನಿವಾಸ ಪೂಜಾರಿ ಪ್ರಚಾರ ಭಾಷಣ ಮಾಡಿದ್ದರು. ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೆ, ರಾಜಕೀಯ ಭಾಷಣ ಮಾಡಿದ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಲಾಗಿತ್ತು.

    ಕೋಟ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈ ದೂರಿನ ಹಿನ್ನೆಲೆಯಲ್ಲಿ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಮೇ 27ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    DAKSHINA KANNADA

    ಪಾರ್ಕಿಂಗ್ ವಿಚಾರದಲ್ಲಿ ಚೂರಿ ಇರಿತ..! ವ್ಯಕ್ತಿಗೆ ಗಾಯ, ಆಸ್ಪತ್ರೆಗೆ

    Published

    on

    ಪುತ್ತೂರು:  ಅಂಗಡಿ ಮುಂಭಾಗದಲ್ಲಿ ವಾಹನ ಪಾರ್ಕ್‌ ಮಾಡುವ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ಪುತ್ತೂರು ಕೋರ್ಟ್‌ ರಸ್ತೆಯಲ್ಲಿ ನಡೆದಿದೆ. ಪುತ್ತೂರಿನ ಸದಾಶಿವ ಪೈ ಹಾಗೂ ಗುಣಶೇಖರ ಶೆಟ್ಟಿ ಎಂಬವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಅಗಲ ಕಿರಿದಾಗಿರುವ ಕೋರ್ಟ್‌ ರಸ್ತೆಯಲ್ಲಿ ಸಾಮಾನ್ಯವಾಗಿ ವಾಹನ ಪಾರ್ಕಿಂಗ್ ಸಮಸ್ಯೆ ಇದೆ. ಹೀಗಿರುವಾಗ ಈ ರಸ್ತೆಯಲ್ಲಿನ ಅಂಗಡಿಯೊಂದರ ಮುಂದೆ ಈ ಇಬ್ಬರ ನಡುವೆ ವಾಹನ ಪಾರ್ಕ್ ಮಾಡಿದ ವಿಚಾರವಾಗಿ ಗಲಾಟೆ ಆಗಿದೆ. ಈ ವೇಳೆ ಗುಣಶೇಖರ್ ಸದಾಶಿವ ಪೈ ಅವರಿಗೆ ಚೂರಿಯಿಂದ ಇರಿದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಚೂರಿ ಇರಿತದಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಿದ್ದ ಸದಾಶಿವ ಪೈ ಕೈಗೆ ಗಾಯವಾಗಿದೆ. ಸದಾಶಿವ ಪೈ ಪುತ್ತೂರಿನ ದರ್ಬೆ ನಿವಾಸಿಯಾಗಿದ್ದು, ಪ್ರತಿಷ್ಠಿತ ಜಿಎಸ್‌ಬಿ ಮನೆತನಕ್ಕೆ ಸೇರಿದವರಾಗಿದ್ದು, ಪುತ್ತೂರಿನ ಮುಕ್ರಂಪಾಡಿಯ ಆನಂದಾಶ್ರಮದಲ್ಲಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಇನ್ನು ಚೂರಿಯಿಂದಿ ಇರಿಯಲು ಮುಂದಾಗಿದ್ದ ಗುಣಶೇಖರ್ ಶೆಟ್ಟಿ ಉರಮಾಲ್ ನಿವಾಸಿಯಾಗಿದ್ದು, ಇವರೂ ಕೂಡಾ ಪ್ರತಿಷ್ಠಿತ ಕುಟಂಬದ ವ್ಯಕ್ತಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇಬ್ಬರೂ ಕೂಡಾ 60ರ ಆಸುಪಾಸಿನಲ್ಲಿ ಇರುವ ವ್ಯಕ್ತಿಗಳಾಗಿದ್ದು, ಈ ರೀತಿ ಪಾರ್ಕಿಂಗ್ ವಿಚಾರದಲ್ಲಿ ಕೈ ಕೈ ಮಿಲಾಯಿಸಿ ಚೂರಿ ಇರಿತ ಆಗುವ ಮಟ್ಟಕ್ಕೆ ತಲುಪಿದ ಬಗ್ಗೆ ಜನರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    Continue Reading

    DAKSHINA KANNADA

    ಇಂಡಿಯಾನ ಕಾಲೇಜ್‌ ಆಫ್‌ ನರ್ಸಿಂಗ್‌ ಉದ್ಘಾಟನೆ

    Published

    on

    ಮಂಗಳೂರು: ಮಂಗಳೂರಿನ ಪಂಪ್ವಲ್ ಬಳಿ ಇರುವ ಹೃದ್ರೋಗಿಗಳಿಗೆ ಆಶಾಕಿರಣವಾಗಿರುವ ಖ್ಯಾತ ಇಂಡಿಯಾನಾ ಕಾಲೇಜ್‌ ಆಫ್‌ ನರ್ಸಿಂಗ್‌ ಇದರ ಉದ್ಘಾಟನಾ ಸಮಾರಂಭ ಇಂಡಿಯಾನಾ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಿತು.

    ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು. ಮಸೂದ್ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಡಾ. ವೀಣಾ ಗ್ರೆಟ್ಟಾ ತೌರೋ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉದಯೋನ್ಮುಖ, ಪರಿಣತ ದಾದಿಯರ ತಂಡದೊಂದಿಗೆ ವೈದ್ಯಕೀಯ ಸಂಸ್ಥೆ ಬೆಳೆಯ ಬೇಕು. ಪರಿಣತ ವೈದ್ಯರ ಪ್ರೋತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಬೆಳೆಯ ಬೇಕು ಎಂದು ಅವರು ಕರೆ ನೀಡಿದರು.

    ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ಮತ್ತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ, ಇಂಡಿಯಾನಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ ಮನು ಕೆ. ಜೋಸೆಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ನಸಿಂಗ್‌ ಕಾಲೇಜಿನ ವಿದ್ಯಾರ್ಥಿ ಸಮೂಹವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನರಂಜಿಸಿತು.

    Continue Reading

    DAKSHINA KANNADA

    ಜೂ.17: ಜಾಗತಿಕ ಬಂಟರ ಸಂಘಗಳ ಒಕ್ಕೂಟ – ಮೆಗಾ ಆರ್ಥಿಕ ನೆರವು ವಿತರಣೆ, ನೂತನ ಸಂಸದರಿಗೆ ಸಮ್ಮಾನ

    Published

    on

    ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಹಾ ನಿರ್ದೇಶಕ ಹಾಗೂ ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಕೆ. ಮುಂಬಯಿ ಸಿಎಂಡಿ ಕೆ.ಎಂ. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಮಾಜ ಕಲ್ಯಾಣ ಮೆಗಾ ಆರ್ಥಿಕ ನೆರವು ವಿತರಣೆ ಹಾಗೂ ದಕ್ಷಿಣ ಕನ್ನಡ ನೂತನ ಸಂಸದ ಕ್ಯಾ। ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಜೂ. 17ರಂದು ಸಮ್ಮಾನ ಸಮಾರಂಭವು ಬೆಳಗ್ಗೆ 10ರಿಂದ ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ವಿ.ಕೆ ಗ್ರೂಫ್ ಆಫ್ ಕಂಪೆನೀಸ್ ನ ಸಿಎಂಡಿ ಕೆ ಎಂ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಒಕ್ಕೂಟದ ಮಹಾದಾನಿ ಮತ್ತು ಹೇರಂಬಾ ಇಂಡಸ್ಟ್ರೀಸ್ ಲಿ. ನ ಮ್ಯಾನೆಜಿಂಗ್ ಡೈರೆಕ್ಟರ್ ಕನ್ಯಾನ ಸದಾಶಿವ ಶೆಟ್ಟಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರಕುಮಾರ್ ಭಾಗವಹಿಸಲಿದ್ದಾರೆ.

    Read Moreವಿಧಾನ‌ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

    ಒಕ್ಕೂಟದ ವಿಶೇಷ ಮಹಾನಿರ್ದೇಶಕರು ಮತ್ತು ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ತೋನ್ಸೆ ಆನಂದ್ ಎಂ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಹಾ ನಿರ್ದೇಶಕರಾದ ಎಂಆರ್‌ಜಿ ಗ್ರೂಪ್ಸ್ ನ ಚೆಯರ್ ಮೆನ್ ಕೆ. ಪ್ರಕಾಶ್‌ ಶೆಟ್ಟಿ, ಶಶಿ ಕೇಟರಿಂಗ್ ಸರ್ವಿಸಸ್ ಬರೋಡ ಇದರ ಎಂ ಡಿ ಶಶಿಧರ ಶೆಟ್ಟಿ ಬರೋಡ, ರಾಕ್ಷಿ ಬಿಲ್ಡರ್ಸ್‌ನ ರಾಜೇಶ್ ಎನ್. ಶೆಟ್ಟಿ ಅಲಿಯನ್ಸ್ ಇಂಫ್ರಾಸ್ಟ್ರಕ್ಟರ್ ರಿಯಲ್ಟಸ್ ೯ನ ಅರವಿಂದ್ ಆನಂದ್ ಶೆಟ್ಟಿ, ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ವಕ್ವಾಡಿ ಪ್ರವೀಣ್ ಕುಮಾ‌ರ್ ಶೆಟ್ಟಿ ಮೆರಿಟ್ ಹಾಸ್ಪಿಟಾಲಿಟಿಯ ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ಪಂಜುರ್ಲಿ ಗ್ರೂಪ್‌ ಆಫ್ ಹೊಟೇಲ್ಸ್‌ನ ರಾಜೇಂದ್ರ ಶೆಟ್ಟಿ, ಜಾಗತಿ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ಳೂರು ಮೋಹನದಾಸ್ ಶೆಟ್ಟಿ ಜತೆ ಕಾರ್ಯದರ್ಶಿ ಚಂದ್ರಹಾಸ್‌ ಡಿ. ಶೆಟ್ಟಿ ರಂಗೋಲಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

    ಸಮಾರಂಭದಲ್ಲಿ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ “ಸನಾತನ ರಾಷ್ಟ್ರಂಜಲಿ” ಕಾರ್ಯಕ್ರಮ‌ ನಡೆಯಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇ ಶಕರು, ಮಹಾಪೋಷಕರು, ಪೋಷಕರು, ದಾನಿಗಳು, ಬಂಟರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಕಟಣೆ ತಿಳಿಸಿದೆ.

    Continue Reading

    LATEST NEWS

    Trending