Monday, January 24, 2022

ಲಾಕ್​ ಡೌನ್ ಎಫೆಕ್ಟ್​ : ಹೋಟೆಲ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಮಡಿಕೇರಿ ಲಾಕ್​ ಡೌನ್ ಎಫೆಕ್ಟ್​ : ಹೋಟೆಲ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಮಡಿಕೇರಿ: ಹೋಟೆಲ್​ ಮಾಲೀಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆಯ ಬಳಿ  ಈ ಘಟನೆ ನಡೆದಿದೆ. ಮೃತ ದುರ್ದೈವಿ ಪ್ರವೀಣ್​ (34) ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವೀಣ್ ಚಿಕ್ಕಮಗಳೂರಿನ ರೆಸಾರ್ಟ್​ ಮ್ಯಾನೇಜರ್​ ಆಗಿದ್ದರು. ಕೊರೊನಾ ಲಾಕ್​ ಡೌನ್​ನಿಂದಾಗಿ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಇದ್ದ.

ಹಾಗಾಗಿ ಮೂರು ತಿಂಗಳ ಹಿಂದೆ ಮಡಿಕೇರಿಯಲ್ಲಿ ಹೋಟೆಲ್​ ಆರಂಭಿಸಿದ್ದರು. ಆದರೂ, ಪ್ರವೀಣ್ ಜೀವನ ನಡೆಸಲು ಕಷ್ಟವಾಗುತ್ತಿತ್ತು.

ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರವೀಣ್ ಹೋಟೆಲ್​ ಹಿಂಬದಿಯಲ್ಲಿದ್ದ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮಡಿಕೇರಿಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಕಾರ್ಕಳದಲ್ಲಿ ಕೊರೋನಾದಂತೆ ಹರಡುತ್ತಿದೆ ಕಾಲು ಬಾಯಿ ರೋಗ

ಕಾರ್ಕಳ: ಇಲ್ಲಿನ ಆಸುಪಾಸಿನಲ್ಲಿ ಪ್ರಾಣಿಗಳಲ್ಲಿ ಕಂಡುಬರುವ ಅದರಲ್ಲೂ ಜಾನುವಾರಿನಲ್ಲಿ ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡುತ್ತಿದೆ.ಇದರಿಂದಾಗಿ ಈಗಾಗಲೇ ಹಲವು ಜಾನುವಾರು ಬಲಿಯಾಗಿದ್ದು, ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.ಕಾರ್ಕಳ ನಗರ, ತೆಳ್ಳಾರು, ಮಿಯಾರು,...

ಕೋಟ ಲಾಠಿ ಚಾರ್ಜ್ ಪ್ರಕರಣ: ಹುಸಿಯಾದ ಗೃಹಸಚಿವರ ಭರವಸೆ- ಮತ್ತೆ ಪ್ರತಿಭಟನೆಗೆ ನಿರ್ಧಾರ

ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್‌ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ...