Connect with us

    LATEST NEWS

    ಮಗು ಕೈಯಲ್ಲಿದ್ದ ಸಮೋಸಾದಲ್ಲಿ ಹಲ್ಲಿ ಪತ್ತೆ: ಬಾಲ ನೋಡಿ ಬೆಚ್ಚಿಬಿದ್ದ ಪೋಷಕರು..!

    Published

    on

    ರೇವಾ: ಹಲ್ಲಿ ಇರುವ ಸಮೋಸಾ ತಿಂದು ಐದು ವರ್ಷದ ಮಗು ಆಸ್ಪತ್ರೆಗೆ ದಾಖಲಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಂಗಡಿಯಲ್ಲಿ ಖರೀದಿಸಿ ತಂದ ಸಮೋಸದಲ್ಲಿ ಹಲ್ಲಿ ಪತ್ತೆಯಾಗಿದ್ದು ಪೋಷಕರು ಬೆಚ್ಚಿಬಿದ್ದಿದ್ದಾರೆ. ಸಮೋಸಾ ತಿಂದ ತಕ್ಷಣ ಮಗು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


    ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿಪಾನಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮಗುವಿನ ಪೋಷಕರು ಸಮೋಸವನ್ನು ತಿನ್ನಲು ನೀಡಿದ್ದಾರೆ. ಆದರೆ ಮಗು ಸಮೋಸ ವಿಭಿನ್ನ ರುಚಿ ಇರುವುದರಿಂದ ತಿನ್ನುವುದನ್ನು ಬಿಟ್ಟಿದೆ. ಮಗು ತಿಂದ ಸಮೋಸದಲ್ಲಿ ಹಲ್ಲಿಯ ಬಹುತೇಕ ಭಾಗ ಇದ್ದು ಕೇವಲ ಬಾಲ ಮಾತ್ರ ಉಳಿದಿರುವುದು ಕಂಡು ಬಂದಿದೆ. ಇದರಿಂದ ಹೆದರಿದ ಪೋಷಕರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಮಾರ್ಗ ಮಧ್ಯದಲ್ಲಿ ಮಗುವನ ಆರೋಗ್ಯ ಹದಗೆಟ್ಟಿದೆ. ಬಳಿಕ ಕುಟುಂಬಸ್ಥರು ಮಗುವನ್ನು ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಸದ್ಯ ಚಿಕಿತ್ಸೆ ನಡೆಯುತ್ತಿದೆ. ಮಗು ಅಪಾಯದಿಂದ ಪಾರಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಈ ಘಟನೆ ನಡೆದಿದ್ದು ಹೇಗೆ?

    ಮಗುವಿನ ತಂದೆ ಪಂಕಜ್ ಶರ್ಮಾ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಿ ತನ್ನ ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದರು. ದಾರಿಯಲ್ಲಿ ಪಂಕಜ್ ಶರ್ಮಾ ತನ್ನ ಸ್ನೇಹಿತನಿಗೆ ಹತ್ತಿರದ ಅಂಗಡಿಯಲ್ಲಿ ಸಮೋಸ ಮತ್ತು ಜಿಲೇಬಿಯನ್ನು ಖರೀದಿಸಲು ಹೇಳಿದರು. ಪಂಕಜ್ ಶರ್ಮಾ ಸಲಹೆಯಂತೆ ಸ್ನೇಹಿತ ಸಮೋಸ ಮತ್ತು ಜಿಲೇಬಿಯನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

    ಸಮೋಸಾದಲ್ಲಿ ಹಲ್ಲಿ ಬಾಲ ಪತ್ತೆ

    ಮನೆಗೆ ಬಂದ ಬಳಿಕ ಮಗು ಆಹಾರ ಕೇಳಿದೆ. ಆಗ ಮಗುವಿಗೆ ಸಮೋಸವನ್ನು ನೀಡಲಾಗಿದೆ. ಮಗು ಅರ್ಧ ಸಮೋಸ ತಿಂದ ತಕ್ಷಣ ಏನೋ ವಿಚಿತ್ರ ಅನ್ನಿಸಿ ಉಳಿದ ಸಮೋಸವನ್ನು ಕೆಳಗೆ ಹಾಕಿದೆ. ತಕ್ಷಣ ಮಗುವಿನ ಆರೋಗ್ಯ ಹದಗೆಟ್ಟಿದೆ. ತಂದೆಗೆ ಅನುಮಾನ ಬಂದು ಉಳಿದ ಸಮೋಸ ಕೈಗೆತ್ತಿಕೊಂಡಾಗ ಬೆಚ್ಚಿಬಿದ್ದಿದ್ದಾರೆ. ಹಲ್ಲಿಯ ಬಾಲ ಸಮೋಸಾದಲ್ಲಿರುವುದು ಕಂಡಿದೆ.

    ಸಾಮಾನ್ಯವಾಗಿ ಸಮೋಸದಲ್ಲಿ ಇರುವ ಮಸಾಲೆ ಹೊರಗಡೆ ಕಾಣಿಸುವುದಿಲ್ಲ. ಅದನ್ನು ತಿನ್ನುವಾಗ ಜಾಗರೂಕರಾಗಿ ಸೇವಿಸಬೇಕು. ಆದರೆ ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಪಂಕಜ್ ಶರ್ಮಾ ಮಗುವಿಗೆ ಸಮೋಸವನ್ನು ನೀಡಿದ್ದಾರೆ. ಅದನ್ನು ತಿಂದ ಮಗು ಅರ್ಧಕ್ಕೆ ಸಮೋಸವನ್ನು ತಿನ್ನುವುದನ್ನು ಬಿಟ್ಟಿದೆ. ಈ ವೇಳೆ ಮಗುವಿನ ತಂದೆ ಸಮೋಶವನ್ನು ಗಮಸಿದಾಗ ವಿಷಯ ಗೊತ್ತಾಗಿದೆ.

    ಕುಟುಂಬ ಸದಸ್ಯರಿಂದ ದೂರು

    ಪಂಕಜ್ ಶರ್ಮಾ ಸ್ನೇಹಿತ ಧೇಖಾ ಪ್ರದೇಶದಲ್ಲಿರುವ ಸುರೇಶ್ ಹೋಟೆಲ್ ಎಂಬ ಅಂಗಡಿಯಿಂದ ಸಮೋಸಾ ಮತ್ತು ಜಿಲೇಬಿಯನ್ನು ಖರೀದಿಸಿದ್ದರು. ಇದೀಗ ಅಂಗಡಿಯವನ ವಿರುದ್ಧ ಪೊಲೀಸ್ ಹಾಗೂ ಆಹಾರ ಇಲಾಖೆಗೆ ದೂರು ನೀಡಲು ಸಿದ್ಧತೆ ನಡೆಸಿದೆ. ಅಲ್ಲದೆ ಅಂಗಡಿಯಲ್ಲಿ ತಯಾರಾಗುವ ಆಹಾರದ ಶುದ್ಧತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

    Click to comment

    Leave a Reply

    Your email address will not be published. Required fields are marked *

    FILM

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್

    Published

    on

    ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

    ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

    ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.

    ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!

    Continue Reading

    DAKSHINA KANNADA

    ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ

    Published

    on

    ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.

    ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.

    ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು

    Published

    on

    ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.

    ಸಾಂದರ್ಭಿಕ ಚಿತ್ರ

    ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.

    ಇದನ್ನೂ ಓದಿ : BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.

    Continue Reading

    LATEST NEWS

    Trending