ಹೊಸದಿಲ್ಲಿ: ಗಣರಾಜ್ಯೋತ್ಸವದ ದಿನ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ನಾಯಕರಿಗೆ ಉಗ್ರರಿಂದ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ದಿಲ್ಲಿಯ ಘಾಜಿಪುರ ಹೂವಿನ ಮಾರುಕಟ್ಟೆಯಲ್ಲಿ 3 ಕೆಜಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾದ ಹಾಗೂ ಪಾಕ್‌ನಿಂದ ಗೌಪ್ಯವಾಗಿ 24 ಐಇಡಿಗಳನ್ನು ಭಾರತಕ್ಕೆ ಸಾಗಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಉಗ್ರರ ಬೆದರಿಕೆ ಕುರಿತು ಎಚ್ಚರಿಕೆ ನೀಡಲಾಗಿದೆ.
ಬೆದರಿಕೆ ಕುರಿತು ಗುಪ್ತಚರ ಇಲಾಖೆಯು ಒಂಬತ್ತು ಪುಟಗಳ ಮಾಹಿತಿ ನೀಡಿದ್ದು,
”ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ಉಗ್ರರಿಂದ ನರೇಂದ್ರ ಮೋದಿ ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಲವು ಗಣ್ಯರಿಗೆ ಜೀವ ಬೆದರಿಕೆ ಇದೆ,” ಎಂದು ತಿಳಿಸಿದೆ.
ಅಲ್ಲದೆ, ”ಭಾಗವಹಿಸುವ ಅತಿಥಿಗಳು, ಸಮಾರಂಭ ನಡೆಯುವ ಸ್ಥಳದಲ್ಲಿ ಎಲ್ಲಿಯೇ ಜನ ಗುಂಪಾಗಿ ನಿಂತರೂ ಅಲ್ಲೆಲ್ಲ ದಾಳಿ ಮಾಡಲು ಸಹ ಸಂಚು ರೂಪಿಸಿದ್ದಾರೆ,” ಎಂದೂ ಎಚ್ಚರಿಸಿದೆ.