Connect with us

    DAKSHINA KANNADA

    ಪೊಲೀಸರಿಗೆ ಬಹಿರಂಗ ಕೊಲೆ ಬೆದರಿಕೆ: ದಾಖಲಾಯಿತು ಕದ್ರಿ ಠಾಣೆಯಲ್ಲಿ ದೂರು

    Published

    on

    ಮಂಗಳೂರು: ಸಾಮಾಜಿಕ ಜಾಲತಾಣವೊಂದರಲ್ಲಿ ಪೊಲೀಸರ ವಿರುದ್ಧ ಬಹಿರಂಗ ಬೆದರಿಕೆ ಹಾಕಿದ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


    ಪ್ರದೀಪ್‌ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದು, ಕರೆಂಟ್‌ ಅಫೇರ್ಸ್‌ ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ನಡೆದ ಚರ್ಚೆ ವೇಳೆ ‘ಇದು ತಲ್ವಾರ್‌ ದಾಳಿ ಪೊಲೀಸರಿಗೆ ತಲ್ವಾರ್‌ ಹಿಡಿಯೋಕೆ ಮುಸಲ್ಮಾನರನ್ನು ಒಡೆದು ಉರುಳಿಸೋಕೆ ಯಾರು ಪರ್ಮಿಷನ್‌ ಕೊಟ್ಟದ್ದು,

    ಬೇವರ್ಸಿ ಪೊಲೀಸರನ್ನು ಮುಂದೆ ಒಂದು ದಿನ ರೋಡಲ್ಲೇ ಉರುಳಿಸಬೇಕಾಗುತ್ತದೆ ಇದೇ ರೀತಿಯಾಗಿ’ ಎಂದು ನಿನ್ನೆ ಪ್ರತಿಭಟನೆಯ ವೇಳೆ ನಡೆದ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡವನ ಫೊಟೋಗೆ ಕಮೆಂಟ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಪುತ್ತೂರು: `50ರ ದಾಂಪತ್ಯಕ್ಕೊಂದು ಸನ್ಮಾನ’ ವಿಶಿಷ್ಠ ಕಾರ್ಯಕ್ರಮ

    Published

    on

    ಪುತ್ತೂರು: ಹಿಂದೂ ಸಮಾಜದಲ್ಲಿ ಕೌಟುಂಬಿಕ ಪರಂಪರೆಗಳು ಮರೆಯಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇದರ ಫಲವಾಗಿಯೇ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸ್ಥಿತಿ ಕೃಷಿ ಬದುಕನ್ನೇ ನಂಬಿಕೊಂಡು ಬಂದ ಗೌಡ ಸಮುದಾಯಕ್ಕೆ ಬರಬಾರದು.

    ನಮ್ಮ ಪಾರಂಪರಿಕ ಸಂಸ್ಕøತಿಗೆ ಬದುಕಿಗೆ ಅಗತ್ಯವಾಗಿದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿದರು. ಶುಕ್ರವಾರ ನಡ್ಪ ಹೊಸಮನೆ ಗುಡ್ಡಪ್ಪ ಗೌಡ ಅವರ ಮನೆಯಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಸಂಘ ಟ್ರಸ್ಟ್ ಪುತ್ತೂರು ಇದರ ದಶಮಾನೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಬಜತ್ತೂರು ಗ್ರಾಮದ 50ರ ದಾಂಪತ್ಯದ ಬದುಕಿಗೊಂದು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದಶಮಾನೋತ್ಸವ ಸಂಭ್ರಮ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಮಾತನಾಡಿದರು. ಇದೆ ಸಂದರ್ಭದಲ್ಲಿ 13 ದಂಪತಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಗ್ರಾಮಸಮಿತಿ ಅಧ್ಯಕ್ಷ ದೇರಣ್ಣ ಗೌಡ ಓಮಂದೂರು ವಹಿಸಿದ್ದರು. ಮಾಜಿ ತಾಪಂ ಸದಸ್ಯ ಮುಕುಂದ ಗೌಡ ಬಜತ್ತೂರು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ್ ಮೊದಲಾದವರಿದ್ದರು.

    Continue Reading

    DAKSHINA KANNADA

    ಮಂಗಳೂರು: ಕ್ಷುಲ್ಲಕ ಕಾರಣ ಮುಂದಿಟ್ಟು ಬೂತ್‌ ಅಧ್ಯಕ್ಷರಿಗೆ ಹಲ್ಲೆ

    Published

    on

    ಮಂಗಳೂರು: ಹರೇಕಳ ಬೂತ್‌ ಅಧ್ಯಕ್ಷ ಶರತ್‌ ಕುಮಾರ್‌ ಗಟ್ಟಿ ಎಂಬವರ ಮೇಲೆ ಗುಂಪೊಂದು ನಡೆಸಿರುವ ಹಲ್ಲೆ ಪ್ರಕರಣವನ್ನು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು ಖಂಡಿಸಿದ್ದಾರೆ.

    ಗಾಯಾಳು ಶರತ್‌ ಕುಮಾರ್‌ ಭೇಟಿಯಾಗಿ ಧೈರ್ಯ ತುಂಬಿದ ಅವರು, ಮತಾಂಧ ಗುಂಪು ನಡೆಸಿರುವ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಗೃಹ ಇಲಾಖೆ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಇಲ್ಲದೇ ಹೋದಲ್ಲಿ ಹಿಂದೂ ಸಮಾಜಕ್ಕೆ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ. ಸುಮಾರು 15-20 ಜನರಿದ್ದ ಗುಂಪೊಂದು ಶುಕ್ರವಾರ ಮಸೀದಿಯಿಂದ ನೇರವಾಗಿ ಶರತ್‌ ಕುಮಾರ್‌ ಗಟ್ಟಿ ಅವರ ಮನೆಗೆ ನುಗ್ಗಿ ಕ್ಷುಲ್ಲಕ ಕಾರಣ ಮುಂದಿಟ್ಟು ಹಲ್ಲೆ ನಡೆಸಿದೆ. ಈ ವೇಳೆ ತಡೆಯಲು ಬಂದ ಶರತ್‌ ಕುಮಾರ್‌ ಅವರ ಅಜ್ಜಿಯನ್ನು ದೂಡಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಕಿಶೋರ್‌ ಕುಮಾರ್‌ ಆರೋಪಿಸಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: 73ನೇ ವರ್ಷದ ಬಳ್ಳಾಲ್‌ಭಾಗ್‌ ಗುರ್ಜಿ ದೀಪೋತ್ಸವ ಸಂಭ್ರಮ

    Published

    on

    ಮಂಗಳೂರು: ಬಳ್ಳಾಲ್‌ಭಾಗ್‌ ಗುರ್ಜಿ ದೀಪೋತ್ಸವ ಸಮಿತಿ ವತಿಯಿಂದ 73ನೇ ವರ್ಷದ ಗುರ್ಜಿ ದೀಪೋತ್ಸವ ಬಹಳ ಸಂಭ್ರಮದಿಂದ ಜರುಗಿತು.

    ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ , ಸೇವಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ನೆರವೇರಿಸಲಾಯಿತು. ಅತ್ಯಂತ ಜನಮಣ್ಣನೆ ಗಳಿಸಿದ ಈ ಗುರ್ಜಿ ದೀಪೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಬಾರಿಯೂ ನಡೆಯಿತು. ಸಂಜೆ 5.55ಕ್ಕೆ ದೀಪಾರಾಧನೆ, ಸಂಜೆ 6 .30ಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ರಾತ್ರಿ 9.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಿತು. ವೈಭವದ ಮೆರವಣಿಗೆ ಮೂಲಕ ಶ್ರೀದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬರಲಾಯಿತು. ವಿದ್ಯುತ್ ಅಲಂಕಾರ, ಹೂವಿನ ಅಲಂಕಾರದಿಂದ ರಥವನ್ನು ಶೃಂಗರಿಸಲಾಗಿತ್ತು.

    ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ಉದ್ಯಮಿ ಕುಡ್ಪಿ ಜಗದೀಶ್ ಶೆಣೈ ಅವರು ನೀಡಿದರು. ಕಾರ್ಮಿಕ ನಾಯಕ ಸುರೇಶ್ಚಂದ್ರ ಶೆಟ್ಟಿ, ಉದ್ಯಮಿ ರವೀಂದ್ರ ಶೇಟ್‌, ಕಾಂಗ್ರೆಸ್ ನಾಯಕ ಸುರೇಶ್ ಬಲ್ಲಾಳ್‌, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್‌ , ರಂಗ ಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲು, ಸುಶಾಂತ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಪ್ರಮೋದ್ ಭಂಢಾರಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸನಾತನ ನೃತ್ಯಾಂಜಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಇದೇ ವೇಳೆ ಗುರ್ಜಿ ದೀಪೋತ್ಸವದಲ್ಲಿ ಹಲವು ಮಂದಿ ಸಾಧಕರನ್ನು ಗೌರವಿಸಲಾಯಿತು.

     

    Continue Reading

    LATEST NEWS

    Trending