Thursday, March 23, 2023

puttur : ಸೂತ್ರಬೆಟ್ಟು ವಿಶ್ವನಾಥ ರೈ ಕೊಲೆ ಪ್ರಕರಣ – ಕೋಡಿಂಬಾಡಿ ವಿಶ್ವನಾಥ ಶೆಟ್ಟಿಗೆ ಜೀವಾವಧಿ ಶಿಕ್ಷೆ..!

ಪುತ್ತೂರು: ಎರಡು ದಶಕಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಪುತ್ತೂರು ನ್ಯಾಯಾಲಯ ಇತ್ಯರ್ಥ ಪಡಿಸಿದ್ದು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.

ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಪುತ್ತೂರು ಸೂತ್ರಬೆಟ್ಟುವಿನ ವಿಶ್ವನಾಥ ರೈಯವರನ್ನು 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಕೊಲೆ ಮಾಡಿದ್ದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅಪರಾಧಿಯಾಗಿರುವ ಕೋಡಿಂಬಾಡಿ ನಿವಾಸಿ ವಿಶ್ವನಾಥ ಶೆಟ್ಟಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕೊಲೆ ಮಾಡಿರುವ ಅಪರಾಧ IPC 302ಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ, ಸಾಕ್ಷಿನಾಶಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 8 ತಿಂಗಳು ಜೈಲು ಶಿಕ್ಷೆ ಹಾಗೂ ಕೊಲೆ ಬೆದರಿಕೆಯೊಡ್ಡಿದ ಅಪರಾಧಕ್ಕಾಗಿ 3 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ.

ದಂಡದ ಮೊತ್ತದಲ್ಲಿ 60 ಸಾವಿರ ರೂ.ಗಳನ್ನು ಕೊಲೆಯಾದ ವಿಶ್ವನಾಥ ರೈಯವರ ಪತ್ನಿಗೆ ನೀಡಬೇಕು ಮತ್ತು ರೂ.20 ಸಾವಿರವನ್ನು ಮಾಫಿ ಸಾಕ್ಷಿಯಾಗಿರುವ ಸುಭಾಶ್ಚಂದ್ರ ಗೌಡರಿಗೆ ನೀಡುವಂತೆಯೂ ಮಾನ್ಯ ನ್ಯಾಯಾಲಯ ಆದೇಶಿಸಿದೆ.

ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ವಾದಿಸಿದ್ದರು.

ಏನಿದು ಪ್ರಕರಣ..? :

2001ರ ಜೂನ್ 7ರಂದು ರಾತ್ರಿ ವೇಳೆ ಫೈನಾನ್ಸ್ ಉದ್ಯಮಿ ಬಡ್ಡಿ ವಿಶ್ವ ಯಾನೆ ಸೂತ್ರಬೆಟ್ಟು ವಿಶ್ವನಾಥ ರೈಯವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ನಡೆಸಲಾಗಿತ್ತು. ಕೊಲೆ ಕೃತ್ಯವೆಸಗಿದ ಬಳಿಕ ಉತ್ತರ ಕನ್ನಡದ ಹೊನ್ನಾವರದವರೆಗೆ ತನ್ನ ಝೆನ್ ಕಾರಿನಲ್ಲಿ ಶವವನ್ನು ಕೊಂಡು ಹೋಗಿ ಅಲ್ಲಿ ಕಂದಕಕ್ಕೆ ಶವವನ್ನು ಬಿಸಾಡಿ ಮರಳಿ ಮಂಗಳೂರು ಕದ್ರಿಯವರೆಗೆ ಅದೇ ಕಾರಲ್ಲಿ ಬಂದಿದ್ದ ಆರೋಪಿ ಪಂಚಮಿ ವಿಶ್ವ ಯಾನೆ ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಕೃತ್ಯ ಎಸಗಿ ಹಲವು ವರ್ಷಗಳಾದರೂ ಆರೋಪಿಯ ಪತ್ತೆಯಾಗದೇ ಇದ್ದುದರಿಂದ ಇದೊಂದು ಎಲ್‌ಪಿಸಿ ಪ್ರಕರಣವಾಗಿ ದಾಖಲಾಗಿತ್ತು. ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿ ಪಂಚಮಿ ವಿಶ್ವ ಯಾನೆ ಕೋಡಿಂಬಾಡಿ ವಿಶ್ವನಾಥ ಶೆಟ್ಟಿಯವರನ್ನು 13 ವರ್ಷಗಳ ಬಳಿಕ ಪೊಲೀಸರು ತಮಿಳ್ನಾಡಿನಲ್ಲಿ ಪತ್ತೆ ಮಾಡಿ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಕೆಲ ಸಮಯದ ಬಳಿಕ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.ಆ ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿ ವಿಶ್ವನಾಥ ಶೆಟ್ಟಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದೆ..ಹೊನ್ನಾವರ ಸಮೀಪದ ಗೇರುಸೊಪ್ಪ ಬಳಿಯ ಮೂಡ್ಕಾಣಿ ಎಂಬಲ್ಲಿ ೨೦ ಅಡಿ ಆಳದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು.ಈ ಅಪರಿಚಿತ ಶವದ ಅಂಗಿಯಲ್ಲಿ “ಪುತ್ತೂರು ಸಿಂಧು ಟೈಲರ್” ಎಂಬ ಲೇಬಲ್ ಇತ್ತು.ಇದರ ಆಧಾರದಲ್ಲಿ ಪೊಲೀಸರು ಪುತ್ತೂರಿನ ಟೈಲರ್ ಸುಭಾಶ್ಚಂದ್ರ ಪೂಜಾರಿಯವರನ್ನು ಸಂಪರ್ಕಿಸಿದ್ದರು.ಶವವನ್ನು ನೋಡಿದ್ದ ಟೈಲರ್ ಸುಭಾಶ್ಚಂದ್ರರವರು ‘ಇದು ಬಡ್ಡಿ ವಿಶ್ವಣ್ಣ’ ಎಂದು ಹೇಳಿದ್ದರು. ಪಂಚಮಿ ವಿಶ್ವನೂ ನಾಪತ್ತೆ: ಆದರೆ, ವಿಶ್ವನಾಥ ರೈಯವರನ್ನು ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು ಎಂದು ಗೊತ್ತಾಗಿರಲಿಲ್ಲ.ಈ ವೇಳೆ, ಮೃತ ವಿಶ್ವನಾಥ ರೈಯವರ ಆಪ್ತ ಸ್ನೇಹಿತ ಮಾತ್ರವಲ್ಲದೆ,ವಿಶ್ವನಾಥ ರೈಯವರ ಉಪ್ಪಿನಂಗಡಿಯ ಶಿವ ಫೈನಾನ್ಸ್‌ನಲ್ಲಿ ಮೆನೇಜರ್ ಆಗಿದ್ದ ಕೋಡಿಂಬಾಡಿಯ ವಿಶ್ವನಾಥ ಶೆಟ್ಟಿಯೂ ನಾಪತ್ತೆಯಾಗಿದ್ದರು.ವಿಶ್ವನಾಥ ರೈ ಜತೆ ವಿಶ್ವನಾಥ ಶೆಟ್ಟಿಯವರನ್ನೂ ಕೊಲೆ ಮಾಡಿರಬಹುದೇ ಅಥವಾ ಅವರೇ ಈ ಕೊಲೆ ನಡೆಸಿ ಪರಾರಿಯಾಗಿರಬಹುದೇ ಎಂದು ಪೊಲೀಸರಲ್ಲಿ ಗೊಂದಲ ಉಂಟಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಂಗಳೂರು ಸಮೀಪದ ಕದ್ರಿ ಬಳಿ ಅನಾಥ ಸ್ಥಿತಿಯಲ್ಲಿ ಮಾರುತಿ ಝೆನ್ ಕಾರು ಇರುವುದು ಕಂಡು ಬಂದಿತ್ತು.ಕಾರಿನಲ್ಲಿ ರಕ್ತದ ಕಲೆಗಳಿದ್ದವು.ಈ ಕಾರು ಯಾರದ್ದು ಎಂದು ಹುಡುಕಾಟದಲ್ಲಿದ್ದ ಪೊಲೀಸರು ಆರ್‌ಟಿಓ ಅಧಿಕಾರಿಗಳ ಮೂಲಕ ಶೋಧ ನಡೆಸಿದಾಗ ಈ ಕಾರಿನ ಮೂಲ ವಾರಸುದಾರರು ಪತ್ತೆಯಾಗಿದ್ದರಲ್ಲದೆ, ತಾನು ಈ ಕಾರನ್ನು ವಿಶ್ವನಾಥ ಶೆಟ್ಟಿಯವರಿಗೆ ಮಾರಾಟ ಮಾಡಿರುವುದಾಗಿ ಅವರು ತಿಳಿಸಿದ್ದರು. ಕೊಲೆಗೂ ವಿಶ್ವನಾಥ ಶೆಟ್ಟಿಗೂ ನಂಟು ಇದೆ ಎಂದು ಖಚಿತಪಡಿಸಿಕೊಂಡಿದ್ದ ಅಂದಿನ ಪ್ರಭಾರ ಎ.ಎಸ್.ಪಿ. ಹರ್ಡಿ ಹಾಗು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಂದು ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಎನ್.ಬಿ. ಕಮಲ್ ನೇತೃತ್ವದ ಪೊಲೀಸ್ ತಂಡ ತನಿಖೆ ಮುಂದುವರಿಸಿ ವಿಶ್ವನಾಥ ಶೆಟ್ಟಿಗಾಗಿ ಶೋಧ ನಡೆಸಿತ್ತು.ಆದರೆ, ಕೊಲೆ ನಡೆದು ೧೩ ವರ್ಷ ಕಳೆದರೂ ಆರೋಪಿ ವಿಶ್ವನಾಥ ಶೆಟ್ಟಿ ಪತ್ತೆಯಾಗಿರಲಿಲ್ಲ.”’ಹೊನ್ನಾವರ ಸಮೀಪದ ಗೇರುಸೊಪ್ಪ ಬಳಿಯ ಮೂಡ್ಕಾಣಿ ಎಂಬಲ್ಲಿ ೨೦ ಅಡಿ ಆಳದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು.ಈ ಅಪರಿಚಿತ ಶವದ ಅಂಗಿಯಲ್ಲಿ “ಪುತ್ತೂರು ಸಿಂಧು ಟೈಲರ್” ಎಂಬ ಲೇಬಲ್ ಇತ್ತು.ಇದರ ಆಧಾರದಲ್ಲಿ ಪೊಲೀಸರು ಪುತ್ತೂರಿನ ಟೈಲರ್ ಸುಭಾಶ್ಚಂದ್ರ ಪೂಜಾರಿಯವರನ್ನು ಸಂಪರ್ಕಿಸಿದ್ದರು.ಶವವನ್ನು ನೋಡಿದ್ದ ಟೈಲರ್ ಸುಭಾಶ್ಚಂದ್ರರವರು ‘ಇದು ಬಡ್ಡಿ ವಿಶ್ವಣ್ಣ’ ಎಂದು ಹೇಳಿದ್ದರು. ಪಂಚಮಿ ವಿಶ್ವನೂ ನಾಪತ್ತೆ: ಆದರೆ, ವಿಶ್ವನಾಥ ರೈಯವರನ್ನು ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು ಎಂದು ಗೊತ್ತಾಗಿರಲಿಲ್ಲ.ಈ ವೇಳೆ, ಮೃತ ವಿಶ್ವನಾಥ ರೈಯವರ ಆಪ್ತ ಸ್ನೇಹಿತ ಮಾತ್ರವಲ್ಲದೆ,ವಿಶ್ವನಾಥ ರೈಯವರ ಉಪ್ಪಿನಂಗಡಿಯ ಶಿವ ಫೈನಾನ್ಸ್‌ನಲ್ಲಿ ಮೆನೇಜರ್ ಆಗಿದ್ದ ಕೋಡಿಂಬಾಡಿಯ ವಿಶ್ವನಾಥ ಶೆಟ್ಟಿಯೂ ನಾಪತ್ತೆಯಾಗಿದ್ದರು.ವಿಶ್ವನಾಥ ರೈ ಜತೆ ವಿಶ್ವನಾಥ ಶೆಟ್ಟಿಯವರನ್ನೂ ಕೊಲೆ ಮಾಡಿರಬಹುದೇ ಅಥವಾ ಅವರೇ ಈ ಕೊಲೆ ನಡೆಸಿ ಪರಾರಿಯಾಗಿರಬಹುದೇ ಎಂದು ಪೊಲೀಸರಲ್ಲಿ ಗೊಂದಲ ಉಂಟಾಗಿತ್ತು. ಝೆನ್ ಕಾರು ಪತ್ತೆ: ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಂಗಳೂರು ಸಮೀಪದ ಕದ್ರಿ ಬಳಿ ಅನಾಥ ಸ್ಥಿತಿಯಲ್ಲಿ ಮಾರುತಿ ಝೆನ್ ಕಾರು (ಕೆ.ಎ.೧೯-ಪಿ.೧೧೩)ಇರುವುದು ಕಂಡು ಬಂದಿತ್ತು.ಕಾರಿನಲ್ಲಿ ರಕ್ತದ ಕಲೆಗಳಿದ್ದವು.ಈ ಕಾರು ಯಾರದ್ದು ಎಂದು ಹುಡುಕಾಟದಲ್ಲಿದ್ದ ಪೊಲೀಸರು ಆರ್‌ಟಿಓ ಅಧಿಕಾರಿಗಳ ಮೂಲಕ ಶೋಧ ನಡೆಸಿದಾಗ ಈ ಕಾರಿನ ಮೂಲ ವಾರಸುದಾರರು ಪತ್ತೆಯಾಗಿದ್ದರಲ್ಲದೆ, ತಾನು ಈ ಕಾರನ್ನು ವಿಶ್ವನಾಥ ಶೆಟ್ಟಿಯವರಿಗೆ ಮಾರಾಟ ಮಾಡಿರುವುದಾಗಿ ಅವರು ತಿಳಿಸಿದ್ದರು.ಕೊಲೆಗೂ ವಿಶ್ವನಾಥ ಶೆಟ್ಟಿಗೂ ನಂಟು ಇದೆ ಎಂದು ಖಚಿತಪಡಿಸಿಕೊಂಡಿದ್ದ ಅಂದಿನ ಪ್ರಭಾರ ಎ.ಎಸ್.ಪಿ. ಹರ್ಡಿ ಹಾಗು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಂದು ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಎನ್.ಬಿ. ಕಮಲ್ ನೇತೃತ್ವದ ಪೊಲೀಸ್ ತಂಡ ತನಿಖೆ ಮುಂದುವರಿಸಿ ವಿಶ್ವನಾಥ ಶೆಟ್ಟಿಗಾಗಿ ಶೋಧ ನಡೆಸಿತ್ತು.ಆದರೆ, ಕೊಲೆ ನಡೆದು ೧೩ ವರ್ಷ ಕಳೆದರೂ ಆರೋಪಿ ವಿಶ್ವನಾಥ ಶೆಟ್ಟಿ ಪತ್ತೆಯಾಗಿರಲಿಲ್ಲ.

LEAVE A REPLY

Please enter your comment!
Please enter your name here

Hot Topics

40 ವರ್ಷಗಳಿಂದ ಅದೇ ಪೊಳ್ಳು ಭರವಸೆ : ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಸುಳ್ಯ ಅರಮನೆಗಾಯದ ಜನತೆ..!

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ...

ಶುಕ್ರವಾರದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ : 3 ವಾರ ಯಾವುದೇ ಮುಷ್ಕರ ನಡೆಸದಂತೆ ಕಟ್ಟಾಜ್ಞೆ..!

ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈ ಕೋರ್ಟ್ ಬ್ರೇಕ್​​ ಹಾಕಿದ್ದು, 3 ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಕಟ್ಟಾಜ್ಞೆ ಹೊರಡಿಸಿದೆ.ಬೆಂಗಳೂರು: ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈ ಕೋರ್ಟ್...

ಕಲಬುರಗಿಯಲ್ಲಿ ಹಾಡು ಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ..!

ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ ಮಾಡಲಾದ ಘಟನೆ ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಲಬುರಗಿ : ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ...