Connect with us

DAKSHINA KANNADA

ಸಂಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಬೆಳೆಯೋಣ : ಮಹಾಬಲೇಶ್ವರ ಎಂ. ಎಸ್‌

Published

on

ಸಂಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಬೆಳೆಯೋಣ : ಮಹಾಬಲೇಶ್ವರ ಎಂ. ಎಸ್‌

ನಮ್ಮ ಕುಡ್ಲ ದಸರಾ ಸಂಭ್ರಮ : ದಶ ದಿನಗಳ ಸಂಭ್ರಮಕ್ಕೆ ವೈಭವದ ತೆರೆ..!

ಮಂಗಳೂರು : ಸಂಕಷ್ಟಗಳು ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲಿ ಬರುತ್ತದೆ. ಆದರೆ ಸಂಕಷ್ಟಗಳನ್ನು ಅವಕಾಶಗಳನ್ನಾಗಿ ನಾವು ಹೇಗೆ ಪರಿವರ್ತನೆ ಮಾಡುತ್ತೇವೆ ಎನ್ನುವುದನ್ನು ಅವಲಂಬಿಸಿ ನಾವು ಬೆಳೆಯುತ್ತೇವೆ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ ಎಸ್‌ ನುಡಿದರು.

ಅವರು ನಮ್ಮ ಕುಡ್ಲ ವಾಹಿನಿಯ ದಶದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ವೈಭವ- 2020ಯ ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಕೊರೊನಾದ ಬಗ್ಗೆ ನಮಗೆ ನೀಡಲಾಗಿರುವ ಆರೋಗ್ಯದ ಸೂತ್ರಗಳನ್ನು ನಾವು ಮುಂದಿನ ದಿನಗಳಲ್ಲೂ ಖಡ್ಡಾಯವಾಗಿ ಪಾಲಿಸೋಣ. ಈ ಮೂಲಕ ನಮ್ಮ ಜವಾಬ್ದಾರಿ, ಹೊಣೆಯನ್ನು ನಾವು ನಿಭಾಯಿಸಬೇಕಾಗಿದೆ. ಕೊರೊನಾದ ಸಂಕಷ್ಟದ ವೇಳೆ ಹಲವು ರಾಷ್ಟ್ರೀಯಮಟ್ಟದ ವಾಹಿನಿಗಳೇ ಕಾರ್ಯಕ್ರಮ ನೀಡಲಾಗದೇ ಸಂಕಷ್ಟಕ್ಕೆ ಸಿಲುಕಿರುವಾಗ ನಮ್ಮ ಕುಡ್ಲದ ಈ ಪ್ರಯತ್ನ ಶ್ಲಾಘನೀಯ. ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಜವಾಬ್ದಾರಿಯುತವಾಗಿ ಸುದ್ದಿಗಳನ್ನು ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಕೊರೊನಾದಿಂದಾಗಿ ಬ್ಯಾಂಕಿಂಗ್‌, ವೈದ್ಯಕೀಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ  ತಲ್ಲಣ ಉಂಟಾಗಿದೆ.  ಆದರೆ ಇದರಿಂದ ಕೆಲವೊಂದು ಕ್ಷೇತ್ರದಲ್ಲಿ ಪ್ರಗತಿಯೂ ಉಂಟಾಗಿದೆ. ಮಾಹಿತಿ ತಂತ್ರಜ್ಞಾನ, ಆನ್ಲೈನ್‌ ಶಿಕ್ಷಣದ ಮೂಲಕ ಪ್ರಗತಿ ಸಾಧಿಸುವಂತಾಗಿದೆ. ಕಷ್ಟಕಾಲ ಬಂದಾಗ ಎದೆಗುಂದದೆ ಅದನ್ನು ನಿಭಾಯಿಸುವುದೇ ನಮ್ಮ ಜಾಣತನವಾಗಿದೆ ಎಂದರು.

ನವಾರಾತ್ರಿಯ ಈ ಪರ್ವಕಾಲದಲ್ಲಿ ದುರ್ಗಾಮಾತೆಯ ಅನುಗ್ರಹದಿಂದ, ಮಾನವನ ಪ್ರಯತ್ನದಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗತೊಡಗಿದೆ. ಹಾಗಾಗಿ ನಮಗೀಗ ಆಶಾಭಾವನೆ ಮೂಡಿದೆ. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಬರತೊಡಗಿವೆ. ಕೆಟ್ಟದ್ದನ್ನು ಒಳ್ಳೆತನ ಹೇಗೆ ನಿಭಾಯಿಸಿದೆ ಎನ್ನುವುದು ದಸರಾದ ಈ ಸಂದರ್ಭದಲ್ಲಿ ನಾವು ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ ಅತಿಥಿಗಳನ್ನು ಸ್ವಾಗತಿಸಿದರು. ದಸರಾ ಸಂಭ್ರಮ 2020ರ ಕಾರ್ಯಕ್ರಮದ ಸಮಗ್ರ ನೋಟವನ್ನು ಅವರು ನೀಡಿದರು. 120 ತಂಡಗಳ 1500ಕ್ಕೂ ಮಿಕ್ಕಿದ ಕಲಾವಿದರನ್ನು ಕರೆಸಿ ಕಾರ್ಯಕ್ರಮದ ಆಯೋಜನೆ ಸುಲಭದ ಮಾತಾಗಿರಲಿಲ್ಲ. ಕೊರೊನಾದ ಸಂಕಷ್ಟವನ್ನೂ ಮೆಟ್ಟಿ ಎಲ್ಲರನ್ನೂ ಸುಧಾರಿಸಿಕೊಂಡು ಎಲ್ಲಾ ರಂಗದ ಕಲಾವಿದರನ್ನು ಒಗ್ಗೂಡಿಸುವುದು ಸವಾಲಿನ ಕೆಲಸವಾಗಿತ್ತು. ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ನುಡಿದರು.

ಸಹನಾ ಮಳಲಿ ಪ್ರಾರ್ಥಿಸಿದರೆ, ನಿತಿನ್‌ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಕುಡ್ಲ ದಸರಾ ಸಂಭ್ರಮ : ದಶ ದಿನಗಳ ಸಂಭ್ರಮಕ್ಕೆ ವೈಭವದ ತೆರೆ..!

ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾವಾಹಿನಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನಮ್ಮಕುಡ್ಲ ವಾಹಿನಿ ಸುಮಾರು 20 ವರ್ಷಗಳಿಂದಲೂ ನೇರಪ್ರಸಾರ ಕಾರ್ಯಕ್ರಮದ ಮೂಲಕ ಜನಮನ್ನಣೆ ಗಳಿಸಿದೆ.

ಬಳಿಕ 24*7 ವಾಹಿನಿಯು ಸೇರ್ಪಡೆಗೊಂಡು ಸಮಗ್ರ ಸುದ್ದಿಗಳನ್ನು ಬಿತ್ತರಿಸುವುದರ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ವೀಕ್ಷಕರ ಮನೆಗೆದ್ದಿದೆ.ಕೊರೊನಾ ಕಾರಣಕ್ಕೆ 2020 ಅಕ್ಷರಶಃ ನೋವು- ಕಷ್ಟ ನಷ್ಟಗಳನ್ನು ಅನುಭವಿಸಿದ ವರ್ಷ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

ಜನರ ಮನಸ್ಥಿತಿಯೂ ತೀರ ಹದಗೆಟ್ಟಿತ್ತು..ಹಬ್ಬ ಹರಿದಿನಗಳು ನೀರಸವಾಗಿತ್ತು..ಹೊರ ಜಗತ್ತಿಗೆ ಕಾಲಿಡದಂತೆ ಕೋವಿಡ್ ಆವರಿಸಿ ಬಿಟ್ಟಿತ್ತು.ಜೊತೆಗೆ ಅದೆಷ್ಟೋ ಕಲಾವಿದರ ಬದುಕು ಹೈರಾಣಾಗಿತ್ತು.

ಈ ಸಂದರ್ಭದಲ್ಲಿ ಜನರನ್ನು ಒಂದಿಷ್ಟು ಸಂತೋಷ ಪಡಿಸಬೇಕು, ಹೊರಗಡೆ ಸಂಭ್ರಮವಿಲ್ಲದಿದ್ರೂ ಮನೆಯೊಳಗಡೆ ಕೂತು ಹಬ್ಬ ಹರಿದಿನಗಳನ್ನು ಆಚರಿಸಿ, ಮನೋರಂಜನೆಯನ್ನು ಕೂಡ ಅನುಭವಿಸಲೀ ಅನ್ನುವ ದೃಷ್ಟಿಯಿಂದ, ಜೊತೆಗೆ ಕಲಾವಿದರಿಗೂ ಒಂದೊಳ್ಳೆ ವೇದಿಕೆ ಒದಗಿಸಬೇಕು ಅನ್ನುವ ನಿಟ್ಟಿನಲ್ಲಿ ನಮ್ಮ ಕುಡ್ಲ ವಾಹಿನಿಯು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೂರು ದಿನಗಳಲ್ಲೂ ಸಾಂಸ್ಕೃತಿಕ  ಹಾಗೂ ಸಭಾ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ವೀಕ್ಷಕರಿಗೆ ಹಾಗೂ ಕಲಾವಿದರಿಗೆ ಮನೋಲ್ಲಾಸವನ್ನು ನೀಡಿದೆ.

ಇದರ ಯಶಸ್ಸೇ ನಮಗೆ ದಸರಾ ವೈಭವ ಕಾರ್ಯಕ್ರಮ ಮಾಡಲು ಸ್ಪೂರ್ತಿಯಾಯ್ತು..ದಶದಿನಗಳು ನಾರಾರು ಕಾರ್ಯಕ್ರಮಗಳು, ಸಾವಿರಾರು ಕಲಾವಿದರು, 50-60 ಸಭಾ ಅತಿಥಿಗಳನ್ನೊಳಗೊಂಡು ಕಾರ್ಯಕ್ರಮ ಯಶಸ್ವಿಯಾಯ್ತು.

.ದಸರಾ ವೈಭವದ ಹತ್ತು ದಿನಗಳಲ್ಲೂ ಪ್ರತೀ ದಿನ ಬೆಳಗ್ಗೆ ನಾಡಿನ ಹೆಸರಾಂತ ನಾದಸ್ವರವಾದಕರಿಂದ ಸ್ಯಾಕ್ಷೋಫೋನ್ ಕಚೇರಿ ಹಾಗೂ ಪ್ರಸಿದ್ದ ಗಾಯಕರಾದ ಅಜಯ್ ವಾರಿಯರ್, ಜಗದೀಶ್ ಪುತ್ತೂರು, ರವೀಂದ್ರ ಪ್ರಭು, ವಿ.ಶೀಲಾ ದಿವಾಕರ್ , ದೇವದಾಸ್ ಕಾಪಿಕಾಡ್ , ಭೋಜರಾಜ ವಾಮಂಜೂರು ಹಾಗೂ ಉದಯೋನ್ಮುಖ ಗಾಯಕರಿಂದ ಭಕ್ತಿ ಹಾಡುಗಳ ಸುರಿಮಳೆ , ಮ್ಯೂಸಿಕ್ ಕಲಾವಿದರಿಂದ ಮನಮೋಹಕ ಆರ್ಕೆಸ್ಟ್ರಾ , ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಭರತನಾಟ್ಯ ಹಾಗೂ ನೃತ್ಯ ಪಟುಗಳಿಂದ ಮನಮೋಹಕ  ಡಾನ್ಸ್, ತುಳುನಾಡಿನ ಕಾರಣಿಕವನ್ನು ಎತ್ತಿ ತೋರಿಸಿದ ತುಳು ಪೌರಾಣಿಕ ನಾಟಕ, ತೆಂಕು ಹಾಗೂ ಬಡಗು ಮೇಳದ ಪ್ರಸಿದ್ದ ಯಕ್ಷ ಲಾವಿದರ ಕೂಡುವಿಕೆಯಲ್ಲಿ ಪ್ರತಿ ದಿನವೂ ಯಕ್ಷಗಾನ, ತಾಳಮದ್ದಳೆ… ಹುಲಿವೇಷಧಾರಿಗಳ ಅಬ್ಬರ ,ಶ್ರೀ ದೇವಿಮಹಾತ್ಮೆ ಯ ಯಕ್ಷಕಾವ್ಯ ಕಥನ, ಮಾರ್ನೆಮಿಡ್ ಭೂತಾರಾಧನೆ,  ನಾರಿಯರಿಗಾಗಿ ನವರಂಗ್ ಸ್ಪರ್ಧೆಯೊಂದಿಗೆ ಪ್ರತಿ ದಿನವೂ ಸಭಾ ಕಾರ್ಯಕ್ರಮ ನಡೆದು ಕಾರ್ಯಕ್ರಮಕ್ಕೆ  ಇನ್ನಷ್ಟು ಮೆರುಗು ನೀಡಿತು…ಮೊದಲ ದಿನ ಒಡಿಯೂರು ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಆಶೀರ್ವಾದದೊಂದಿಗೆ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಕರ್ನಾಟಕ ಬ್ಯಾಂಕ್ ನ ಮುಖ್ಯನಿರ್ವಹಣಾಧಿಕಾರಿ ವೈ.ವಿ.ಬಾಲಚಂದ್ರ, ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಅಂದಗಾಣಿಸಿಕೊಟ್ಟು, ದಸರಾ ವೈಭವದ ಎರಡನೇ ದಿನ ಸರ್ವಧರ್ಮ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದರಲ್ಲದೆ, ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ , ಮಂಗಳೂರು ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ, ಸಯ್ಯದ್ ಮದನಿ ದರ್ಗಾ ಉಳ್ಳಾಲದ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಸಹಿತ ಪ್ರತೀ ದಿನವೂ ಗಣ್ಯಾತಿಗಣ್ಯರು ಸಭಾ ಕಾರ್ಯಕ್ರಮಕ್ಕಾಗಮಿಸಿ  ಶುಭಾಶಿರ್ವಚಿಸಿ, ಕಾರ್ಯಕ್ರಮದ ಕೊನೆಯದಾಗಿ ಇಂದು ಸಮಾರೋಪ ಸಮಾರಂಭ ನಡೆಯುತ್ತಿದೆ. ಇಂದಿನ ಅತಿಥಿಗಳು ಶ್ರೀಯುತ ಮಹಾಬಲೇಶ್ವರ ಎಂ ಎಸ್, ಸಿಇಒ ಮತ್ತು ಎಂ.ಡಿ.ಕರ್ಣಾಟಕ ಬ್ಯಾಂಕ್ , ಡಾ.ಎಂ.ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳು ಮೂಡಬಿದಿರೆ, ಡಾ.ಸತೀಶ್ ಭಂಡಾರಿ ಕುಲಪತಿ ನಿಟ್ಟೆ ವಿವಿ…. ಹತ್ತು ದಿನಗಳು ನಡೆದ ದಸರಾ ವೈಭವ ಕಾರ್ಯಕ್ರಮಗಳನ್ನು ಅಂದಗಾಣಿಸಿಕೊಟ್ಟ ಎಲ್ಲಾ ಅತಿಥಿ ಅಭ್ಯಾಗತರಿಗೆ, ಎಲ್ಲಾ ಕಲಾವಿದರಿಗೆ ಹಾಗೂ ನಮ್ಮ ಜಾಹೀರಾತುದಾರರಿಗೆ ಮತ್ತು ತಾಳ್ಮೆಯಿಂದ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದ ಸಮಸ್ತ ವೀಕ್ಷಕ ಬಾಂಧವರಿಗೂ ನಮ್ಮಕುಡ್ಲ ವಾಹಿನಿಯ ಪರವಾಗಿ ಅನಂತ ಅನಂತ ಧನ್ಯವಾದಗಳು…….

Click to comment

Leave a Reply

Your email address will not be published. Required fields are marked *

DAKSHINA KANNADA

ಯುವರಾಜ್ ಸಿಂಗ್ ಹಳೇ ಸೀಕ್ರೆಟ್ ಬಯಲು..! ರೋಹಿತ್ ಶರ್ಮಾ ಹೇಳಿದ ಕಥೆ..!

Published

on

ಮಂಗಳೂರು ( ಮುಂಬೈ ) : ಕಪಿಲ್ ಶರ್ಮಾ ಅವರ ಸ್ಟ್ಯಾಂಡ್‌ ಅಪ್ ಕಾಮಿಡಿ ಶೋದಲ್ಲಿ ಕಟ್ ಮಾಡಿದ್ದ ಸೀನ್‌ ಒಂದು ಈಗ ರಿಲೀಸ್ ಆಗಿದೆ. ಎರಡು ವಾರಗಳ ಹಿಂದೆ ಕ್ರಿಕೆಟರ್ ರೋಹಿತ್‌ ಶರ್ಮಾ ಮತ್ತು ಶ್ರೇಯಸ್ಸ ಐಯ್ಯರ್ ಜೊತೆ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದರು. ಆದ್ರೆ ಶೋದಲ್ಲಿ ಟೆಲಿಕಾಸ್ಟ್‌ ಆಗದೇ ಇದ್ದ ಕೆಲವೊಂದು ಸೀಕ್ರೆಟ್ ಈಗ ಬಯಲಾಗಿದೆ.

ಐಪಿಎಲ್‌ ಪಂದ್ಯಾಟದ ನಡುವೆಯೂ ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಕೆಕೆಆರ್‌ ಕ್ಯಾಪ್ಟನ್‌ ಶ್ರೇಯಸ್ ಐಯ್ಯಾರ್ ಕಾಮಿಡಿ ಶೋದಲ್ಲಿ ಭಾಗವಹಿಸಿದ್ದಾರೆ. ಇನ್ನು 2024 ರ ಅಂತ್ಯದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡ ತೊರೆಯುವ ಸಾಧ್ಯತೆ ಇದೆ ಅಂತ ಚರ್ಚೆಗಳು ನಡಿತಾ ಇದೆ. ಹಾರ್ದಿಕ್ ಪಾಂಡ್ಯ ಜೊತೆಗಿನ ಭಿನ್ನಾಭಿಪ್ರಾಯದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಇಷ್ಟೆಲ್ಲಾ ಇರುವಾಗಲೇ ರೋಹಿತ್ ಶರ್ಮಾ ಕಾಮಿಡಿ ಶೋದಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗಳಿಗೆ ಖುಷಿ ನೀಡಿದ್ದಾರೆ.

ಕಪಿಲ್ ಶರ್ಮಾರ ಸ್ಟ್ಯಾಂಡ್ ಅಪ್ ಕಾಮಿಡಿ ಶೋದಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೆಯಸ್ ಅಯ್ಯಾರ್ ಭಾಗವಹಿಸಿದ್ದಾರೆ. ಈಗಾಗಲೇ ಇದರ ಎಪಿಸೋಡ್ ಪ್ರಸಾರವಾಗಿದ್ದು, ಅದರಲ್ಲಿ ಪ್ರಸಾರ ಆಗದೇ ಇದ್ದ ಕೆಲವೊಂದು ವಿಚಾರವನ್ನು ಕಪಿಲ್ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅನ್‌ ಎಡಿಟೆಡ್ ಎಪಿಸೋಡ್ ಶನಿವಾರ ಪ್ರಸಾರ ಮಾಡೋದಾಗಿ ಹೇಳಿದ್ದಾರೆ.

ಕಪಿಲ್ ಶರ್ಮಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಯುವರಾಜ್ ಸಿಂಗ್ ಅವರ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾ ಸೇರಿದಾಗ ಯುವರಾಜ್ ಸಿಂಗ್ ತನ್ನ ಜೊತೆ ಹೇಗೆ ವರ್ತಿಸಿದ್ರು ಅಂತ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ಸೀನಿಯರ್ ಆಟಗಾರರಂತೆ ಪೋಸ್ ನೀಡಿ ಜ್ಯೂನಿಯರ್ ಆಟಗಾರರ ಮುಂದೆ ಬಿಲ್ಡಪ್ ಕೊಡ್ತಾ ಇದ್ರು ಅಂದಿದ್ದಾರೆ. ಆಟಗಾರರ ಬಸ್‌ ನಲ್ಲಿ ಯುವರಾಜ್ ಅವರ ಸೀಟಿನಲ್ಲಿ ಕುಳಿತ ನನ್ನನ್ನು ಬರೇ ಕಣ್ ಸನ್ನೆಯಿಂದಲೇ ಸೀಟ್‌ನಿಂದ ಎಬ್ಬಿಸಿದ ಘಟನೆಯನ್ನು ವಿವರಿಸಿದ್ದಾರೆ. ಈ ಎಪಿಸೋಡ್ ಬಹಳಷ್ಟು ಕುತೂಹಲ ಕೆರಳಿಸಿದ್ದು , ರೋಹಿತ್ ಶರ್ಮಾ ಫ್ಯಾನ್ಸ್‌ ಎಪಿಸೋಡ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Continue Reading

DAKSHINA KANNADA

ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಗೆ ಕ್ಷಣಗಣನೆ

Published

on

ಲೋಕಸಭಾ ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿಗೆ ಆಗಮಿಸಿ, ರಾತ್ರಿ ರೋಡ್​ ಶೋ ನಡೆಸಲಿದ್ದು, ಈ ಕಾರ್ಯಕ್ರಮಕ್ಕೆ ಮಂಗಳೂರು ನಗರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಮೈಸೂರಿನ ಕಾರ್ಯಕ್ರಮ ಮುಗಿಸಿ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ‌ ಆಗಮಿಸುವ ಪ್ರಧಾನಿ ಮೋದಿ ಅವರು ಕೆಂಜಾರಿನಿಂದ ನೇರವಾಗಿ ಲೇಡಿಹಿಲ್ ಜಂಕ್ಷನಿಗೆ ಆಗಮಿಸಿ ಅಲ್ಲಿನ ವೃತ್ತದಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ರಾತ್ರಿ 7.45 ಕ್ಕೆ ರೋಡ್ ಶೋ ಆರಂಭವಾಗಲಿದೆ. ಲಾಲ್ ಭಾಗ್, ಬಲ್ಲಾಳ್ ಭಾಗ್, ಪಿವಿಎಸ್ ಜಂಕ್ಷನ್‌ ಮೂಲಕ ರೋಡ್ ಶೋ ಬಂದು ನವಭಾರತ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿಂದ ಪ್ರಧಾನಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿ ವಿಶೇಷ ವಿಮಾನ ಮೂಲಕ ಕೊಚ್ಚಿಗೆ ಪ್ರಯಾಣ ಬೆಳೆಸುವರು. ಮೋದಿ ರೋಡ್ ಶೋಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಬಿಜೆಪಿ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ರೋಡ್ ಶೋ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೊರ ಜಿಲ್ಲೆಗಳ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆ ಹೊಣೆ ಹೊತ್ತ ಎಸ್‌ಪಿಜಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದೆ. ಮೋದಿ ರೋಡ್ ಶೋ ನಡೆಸುವ ರಸ್ತೆಯುದ್ದಕ್ಕೂ ಬ್ಯಾರಿಕೇಡ್​ ಅಳವಡಿಸಲಾಗಿದೆ. ರಸ್ತೆಯ ಬದಿಯಲ್ಲಿನ ತ್ಯಾಜ್ಯಗಳನ್ನು ತೆರವು ಮಾಡಿ  ಸ್ವಚ್ಛಗೊಳಿಸಲಾಗಿದೆ.

ಬ್ಯಾನರ್​ಗಳು, ಇಂಟರ್‌ನೆಟ್ ಕೇಬಲ್‌ಗಳನ್ನೂ ತೆರವುಗೊಳಿಸಲಾಗಿದೆ. ಆದರೆ ರಸ್ತೆ ಬದಿಯ ಬ್ಯಾರಿಕೇಡ್‌ಗಳುದ್ದಕ್ಕೂ ಬಿಜೆಪಿ ಬಂಟಿಂಗ್ಸ್‌ ಕಟ್ಟಲಾಗಿದೆ. ರೋಡ್‌ ಶೋ ನಡೆಯುವ ರಸ್ತೆಯಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ವಾಹನಗಳ ಪಾರ್ಕಿಂಗ್‌ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 60 ಮಂದಿ ಶಸ್ತ್ರಸಜ್ಜಿತ ಅಧಿಕಾರಿಗಳು ಮೋದಿಗೆ ಬೆಂಗಾವಲಾಗಿ ಇರಲಿದ್ದಾರೆ. ರೋಡ್​ ಶೋ ಪ್ರದೇಶವನ್ನು ಏರಿಯಲ್​ ವ್ಯೂ ಮೂಲಕ ಪರಿಶೀಲನೆ ನಡೆಸಲಾಗಿದೆ‌.

ಶನಿವಾರ ರಾತ್ರಿ ವೇಳೆ ಎಸ್‌ಪಿಜಿ ನೇತೃತ್ವದಲ್ಲಿ ಪೊಲೀಸರು ರಿಹರ್ಸಲ್, ಅಣಕು ರೋಡ್‌ ಶೋ ನಡೆಸಿದರು. ಈ ಸಂದರ್ಭ ಕೆಂಜಾರು ವಿಮಾನ ನಿಲ್ದಾಣದಿಂದ ಮೋದಿಯವರು ಆಗಮಿಸಿ ನವಭಾರತ ವೃತ್ತದವರೆಗೆ ರೋಡ್​ ಶೋ ನಡೆಸುವುದನ್ನು ರಿಯಲ್ ಟೈಂ ರೀತಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ರಾತ್ರಿ ವೇಳೆ ವಿದ್ಯುತ್ ಸರಬರಾಜಿನಲ್ಲಿಯೂ ಏರುಪೇರಾಗಿತ್ತು. ಪ್ರಧಾನಿ ಮೋದಿ ಈ ಹಿಂದೆ 9 ಬಾರಿ ಮಂಗಳೂರಿಗೆ ಭೇಟಿ ನೀಡಿದ್ದು, ಇದು ಅವರ 10 ನೇ ಭೇಟಿಯಾಗಿದೆ.

Continue Reading

DAKSHINA KANNADA

ಸಾಲು ಸಾಲು ರಜೆ ಎಂದು ಮತದಾನಕ್ಕೆ ಚಕ್ಕರ್ ಹಾಕಿ ಔಟಿಂಗ್ ಹೋದ್ರೆ ಬರುತ್ತೆ ನೋಟಿಸ್

Published

on

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೊನೆ ಹಂತದ ತಯಾರಿ ನಡೆಸುತ್ತಿದ್ದಾರೆ. ಇದರೊಂದಿಗೆ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಬಿಎಂಪಿ ಸಕ್ರಿಯ ಪಾತ್ರವನ್ನು ವಹಿಸಿತ್ತು. ಇದೀಗ ಎಪ್ರಿಲ್ 26 ರಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಿನೂತನ ಮಾರ್ಗ ಕಂಡುಕೊಂಡಿದೆ.

ಸಾಲು ಸಾಲು ರಜೆ ಇದೆ ಎಂದು ಮತದಾನ ಮಾಡುವುದು ಬಿಟ್ಟು ಐಟಿಬಿಟಿ ಉದ್ಯೋಗಿಗಳು ಔಟಿಂಗ್ ಹೋದರೆ ನೋಟಿಸ್ ಬರುವುದು ಖಂಡಿತ. ಮತದಾನ ಜಾಗೃತಿ ಬೆನ್ನಲ್ಲೇ ಬಿಬಿಎಂಪಿ ಬಿಸಿ ಮುಟ್ಟಿಸಲು ಮುಂದಾಗಿದೆ. ಈ ಬಾರೀ ಕಡ್ಡಾಯ ಮತದಾನಕ್ಕೆ ಕ್ರಮ ವಹಿಸಲಾಗುತ್ತಿದೆ.

ವೋಟ್ ಮಾಡದೆ ರಜೆ ಎಂಜಾಯ್ ಮಾಡಲು ಊರು ಬಿಡುವ ಉದ್ಯೋಗಿಗಳಿಗೆ ಆಯಾ ಕಂಪನಿಗಳಿಂದಲೇ ಬಿಬಿಎಂಪಿಗೆ ಸಂದೇಶ ರವಾನೆ ಆಗುತ್ತದೆ. ಕಂಪೆನಿ ನೀಡುವ ಮಾಹಿತಿ ಆಧಾರದ ಮೇಲೆ ಉದ್ಯೋಗಿಗಳ ಮೇಲೆ ಬಿಬಿಎಂಪಿ ಕ್ರಮಕ್ಕೆ ಮುಂದಾಗಲಿದೆ.

Continue Reading

LATEST NEWS

Trending