ತಾಕತ್ ಇದ್ರೆ ಪಿಎಫ್ ಐ ಸಂಘಟನೆ ಬ್ಯಾನ್ ಮಾಡಲಿ;ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು..!
ಮಂಗಳೂರು: ಎಸ್ ಡಿ ಪಿ ಐ ಮತ್ತು ಪಿಎಫ್ ಐ ಸಂಘಟನೆಗಳನ್ನು ತಾಕತ್ ಇದ್ದರೆ ಸರ್ಕಾರ ಬ್ಯಾನ್ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಮಂಗಳೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು.
ಮಂಗಳೂರಿನಲ್ಲಿ ಪಿಎಫ್ ಐ ನಿಷೇಧ ಎಂಬ ಗೃಹಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎಸ್ ಡಿ ಪಿ ಐ – ಪಿಎಫ್ ಐ ಬಿಜೆಪಿಯ ಬಿ ಟೀಂ.ಪಿಎಫ್ ಐಯನ್ನು ಬೆಳೆಸುತ್ತಿರುವುದೇ ಬಿಜೆಪಿ ಎಂದ ಅವರು ರಾಲಿಗೆ ಅವಕಾಶ ಕೊಟ್ಟಿರುವುದು ಯಾರು, ಅವರೇ ಅಲ್ವಾ..? ಸರ್ಕಾರ ಅವರದ್ದೇ ಅಲ್ವಾ, ಪಿಎಫ್ ಐ ಯನ್ನು ನಿಷೇಧ ಮಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಇನ್ನು ಪುದುಚೇರಿಯಲ್ಲಿ ಸರ್ಕಾರ ಪತನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಆಟ ಆರಂಭವಾಗಿದೆ.
ಚುನಾವಣೆ ಬರುವಾಗ ನಾರಾಯಣಸ್ವಾಮಿ ಸಿಎಂ ಆಗಿರಬಾರದು ಎಂಬುದೇ ಅವರ ಟಾರ್ಗೆಟ್ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದು ಚುನಾವಣೆ ನಡೆಸಬಾರದು ಎಂದು ಕುತಂತ್ರವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದರು.