Connect with us

    LATEST NEWS

    “ಶಾಸಕ ಭರತ್ ಶೆಟ್ಟಿ ಸುಳ್ಳು ಮಾಹಿತಿ ಬದಲಿಗೆ ಟೋಲ್ ಗೇಟ್ ತೆರವಿಗೆ ದಿನಾಂಕ ನಿಗದಿ ಪಡಿಸಲಿ”

    Published

    on

    ಮಂಗಳೂರು: ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆದ ಪಾದಯಾತ್ರೆಗೆ ಸಿಕ್ಕಿದ ಜನಬೆಂಬಲದಿಂದ ಶಾಸಕ ಡಾ. ಭರತ್ ಶೆಟ್ಟಿ ವಿಚಲಿರಾಗಿದ್ದಾರೆ.

    ಸುಳ್ಳು ಆರೋಪ, ಹೇಳಿಕೆಗಳ ಮೂಲಕ ಜನರನ್ನು ದಾರಿ ತಪ್ಪಿಸಲು ಹತಾಷ ಯತ್ನ ಮಾಡಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ. ಶಾಸಕರಿಗೆ ಪ್ರಾಮಾಣಿಕತೆ ಇದ್ದರೆ ಬಹಿರಂಗ ಚರ್ಚೆಗೆ ಬರಲಿ, ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ ಎಂದು ಆಗ್ರಹಿಸಿದೆ.


    ಟೋಲ್ ಗೇಟ್ ಚಲೋ ಪಾದಯಾತ್ರೆ ಯಶಸ್ವಿ ಸಮಾರೋಪಗೊಂಡ ತಕ್ಷಣವೆ ಶಾಸಕ ಭರತ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಹಲವು ಆರೋಪಗಳನ್ನು ಮಾಡಿದ್ದಾರೆ. ಶಾಸಕರು ಆರೋಪಿಸಿದಂತೆ ಸುರತ್ಕಲ್ ಟೋಲ್ ಕೇಂದ್ರ ಆರಂಭಗೊಂಡಿರುವುದು 2013 ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಅಲ್ಲ.

    2015 ಡಿಸೆಂಬರ್‌ನಲ್ಲಿ. ಆಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಇತ್ತು. ನಳಿನ್ ಕುಮಾರ್ ಕಟೀಲ್ ಎರಡನೇ ಅವಧಿಗೆ ಸಂಸದರರಾಗಿದ್ದರು. ಸುರತ್ಕಲ್ ಭಾಗದ ‌ನಾಗರಿಕರು ಟೋಲ್ ಸಂಗ್ರಹಕ್ಕೆ ತಡೆ ಒಡ್ಡಿ ಸತತ ಪ್ರತಿಭಟನೆ ನಡೆಸುತ್ತಿದ್ದರೂ ಜವಾಬ್ದಾರಿ ಹೊಂದಿದ್ದ ಸಂಸದರು ಟೋಲ್ ವಿರೋಧಿ ಹೋರಾಟಗಾರರ ನೆರವಿಗೆ ಬಂದಿರಲಿಲ್ಲ.

    ಗಜೆಟ್‌ ಮೂಲಕ ಟೋಲ್ ಬೂತ್ ಆರಂಭಗೊಂಡಿದ್ದರೂ ಆಗ ಆರು ತಿಂಗಳ ತಾತ್ಕಾಲಿಕ ಅವಧಿಗೆ ಎಂದು ಜನರಿಗೆ ಕೇಂದ್ರದ ಹೆದ್ದಾರಿ ಪ್ರಾಧಿಕಾರ ಭರವಸೆ ನೀಡಿತ್ತು. ಹೆಜಮಾಡಿ ಟೋಲ್ ಗೇಟ್ ಸ್ಥಾಪನೆ ಆದ ತಕ್ಷಣ ತೆರವುಗೊಳಿಸುವುದಾಗಿ ತಿಳಿಸಲಾಗಿತ್ತು.

    2018 ರಲ್ಲಿ ಹೋರಾಟದ ತೀವ್ರತೆಯ ಪರಿಣಾಮವಾಗಿ ಹೆದ್ದಾರಿ ಪ್ರಾಧಿಕಾರವು ರಾಜ್ಯ ಸರಕಾರದ ಅನುಮೋದನೆಯೊಂದಿಗೆ ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ನವಯುಗ್ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿತ್ತು.

    ಸರಕಾರದ ನಿರ್ಣಯವನ್ನೆ ಜಾರಿಗೊಳಿಸಲು ಅಂದಿನಿಂದಲೂ ಶಾಸಕರಾಗಿರುವ ಭರತ್ ಶೆಟ್ಟಿಯವರಿಗೆ ಯಾಕೆ ಸಾಧ್ಯವಾಗಿಲ್ಲ ? ಅವರ ಕೈ ಕಟ್ಟಿ ಹಾಕಿದ್ದು ಯಾರು ? ಇದನ್ನೆಲ್ಲ ಮುಚ್ಚಿಟ್ಟು ಗಜೆಟ್ ನೋಟಿಫಿಕೇಷನ್ ಕುರಿತು ಮಾತಾಡುವುದು ಯಾರನ್ನು ಮೆಚ್ಚಿಸಲು? ಎಂದು ಹೋರಾಟ ಸಮಿತಿ ಶಾಸಕ ಭರತ್ ಶೆಟ್ಟಿಯವರಿಗೆ ಸರಣಿ ಪ್ರಶ್ನೆಗಳನ್ನು ಮಾಡಿದೆ.

    ಹೋರಾಟದ ನೆಪದಲ್ಲಿ ಕೆಲವು ಹೋರಾಟಗಾರರು ಮುಂಚೂಣಿಯಲ್ಲಿ ನಿಂತು ಸ್ವಂತ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕರು ತೀರಾ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ. ಹೋರಾಟ ಸಮಿತಿ ಇದನ್ನು ತೀವ್ರವಾಗಿ ಖಂಡಿಸುತ್ತದೆ.

    ಶಾಸಕ ಭರತ್ ಶೆಟ್ಟಿಯವರದ್ದೇ ಸರಕಾರ ಇದೆ. ಯಾವ ಹೋರಾಟಗಾರರು ಏನು ಸ್ವಂತ ಲಾಭ ಮಾಡಿಕೊಂಡಿದ್ದಾರೆ ಎಂದು ಭರತ್ ಶೆಟ್ಟರು ಬಹಿರಂಗವಾಗಿ ಹೇಳಲಿ, ತನಿಖೆ ಮಾಡಿಸಿ ಕ್ರಮಕೈಗೊಳ್ಳಲಿ.

    ಟೋಲ್ ಸಂಗ್ರಹ ಗುತ್ತಿಗೆಯನ್ನು ಹಿಂಬಾಗಿಲಿನಿಂದ ಆರಂಭದಿಂದಲೂ ಪಡೆಯುತ್ತಿರುವುದು ಬಿಜೆಪಿ ಬೆಂಬಲಿಗರು ಎಂಬುದು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯ. ಶಾಸಕರು ಇದನ್ನೆಲ್ಲ ಮುಚ್ಚಿಟ್ಟು ಹೋರಾಟವನ್ನು ಬೆಂಬಲಿಸುತ್ತಿರುವ ಜನರ ದಿಕ್ಕುತಪ್ಪಿಸಲು ಹಾದಿ ತಪ್ಪಿದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಮಿತಿ ಕಿಡಿಕಾರಿದೆ.

    ಶಾಸಕರು ತಾವು ಮಾಡಿದ ಆರೋಪಗಳಿಗೆ ಬದ್ದರಾಗಿದ್ದರೆ ಹೋರಾಟ ಸಮಿತಿಯ ಮುಖಂಡರ ಜೊತೆ ಬಹಿರಂಗ ಚರ್ಚೆಗೆ ಬರಲಿ. ಇಲ್ಲವೇ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದೆ.

    ಸಂಸದ ನಳಿನ್ ಕುಮಾರ್ ಕಟೀಲ್ ಪ್ರಯತ್ನದಿಂದ ಟೋಲ್ ಗೇಟ್ ತೆರವಿನ ಹಂತಕ್ಕೆ ಬಂದಿದೆ ಎಂದು ಹೋರಾಟವನ್ನು ಕುಗ್ಗಿಸಲು ಯತ್ನಿಸುವ ಶಾಸಕ ಭರತ್ ಶೆಟ್ಟರು ಇದು ನಿಜ ಅಂತಾದರೆ ಸಂಸದರೊಂದಿಗೆ ಸಮಾಲೋಚಿಸಿ ಟೋಲ್ ಗೇಟ್ ತೆರವಿಗೆ ದಿನಾಂಕ ನಿಗದಿ ಮಾಡಲಿ.

    ಆ ಮೂಲಕ ಹೇಳಿಕೆಗಳಿಗೆ ನ್ಯಾಯ ಒದಗಿಸಲಿ, ಇದರ ಹೊರತು ಟೋಲ್ ಗೇಟ್ ವಿರೋಧಿ ಹೋರಾಟವನ್ನು ಹತ್ತಿಕ್ಕಲು ಶಾಸಕ ಭರತ್ ಶೆಟ್ಟರಿಗೆ ಅಸಾಧ್ಯ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

    2018 ರಲ್ಲಿ ಟೋಲ್ ಗೇಟ್ ಕೆಡವಿ ಹಾಕುತ್ತೇನೆ ಎಂದು ಹೇಳಿ ಶಾಸಕರು ಆ ನಂತರ ಮರೆತು ಬಿಟ್ಟದ್ದನ್ನು ಸಮಿತಿ ಇದೇ ಸಂದರ್ಭದಲ್ಲಿ ನೆನಪಿಸಿದೆ.

    Baindooru

    ಪತಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನು ಕೊಂ*ದ ಪಾಪಿ ತಾಯಿ!

    Published

    on

    ಮಂಗಳೂರು/ಬೆಂಗಳೂರು : ರಾಜ್ಯವೇ ಬೆಚ್ಚಿ ಬೀಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಕ್ರೂ*ರಿ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮಗಳನ್ನು ಕೊಂ*ದಿರುವ ಅಮಾನವೀಯ ಘಟನೆ ನಡೆದಿದೆ. ಅಲ್ಲದೇ ಬಳಿಕ ಆಕೆ ಆತ್ಮಹ*ತ್ಯೆಗೂ ಯತ್ನಿಸಿದ್ದಾಳೆ .

    ಎಲ್ಲವೂ ಚೆನ್ನಾಗಿತ್ತು…ಅನುಮಾನ ಶುರುವಾಯ್ತು :

    ಆ ಕುಟುಂಬ ಕಳೆದ ತಿಂಗಳಷ್ಟೇ ಜಾರ್ಖಂಡ್ ನಿಂದ ಬಂದು ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ವಾಸವಾಗಿತ್ತು.  ಪತಿ ಸುನೀಲ್ ಸಾಹೋ, ಪತ್ನಿ ಮಮತಾ ಸಾಹೋ, ಮಕ್ಕಳಾದ ಶಂಭು ಸಾಹೋ, ಶಿಯಾ ಸಾಹೋ…ಪುಟ್ಟ ಸಂಸಾರ…ಸಣ್ಣದೊಂದು ಬಾಡಿಗೆ ಮನೆಯಲ್ಲಿ ವಾಸ…ಆಟೋ ಚಾಲಕನಾಗಿ ದುಡಿಯುತ್ತಿದ್ದ ಸುನೀಲ್ ಸಾಹೋ..ಹೀಗೆ ಸಂಸಾರ ಸಾಗುತ್ತಿತ್ತು. ಎಲ್ಲವೂ ಸರಿಯಾಗಿತ್ತು. ಅದ್ಯಾವಾಗ ಗಂಡನ ಬಗ್ಗೆ ಅ*ನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂತೋ ಎಲ್ಲವೂ ಎಕ್ಕುಟ್ಹೋಗಿತ್ತು. ಪತಿ ಬೇರೊಂದು ಯುವತಿಯೊಂದಿಗೆ ಮಾತಾಡುತ್ತಿರುವುದನ್ನು ಮಮತಾ ಕೇಳಿಸಿಕೊಂಡಿದ್ದಳಂತೆ. ಇದೇ ದಂಪತಿ ನಡುವೆ ನಿತ್ಯ ಜಗಳಕ್ಕೆ ಬುನಾದಿ ಹಾಕಿತ್ತಂತೆ. ನಿನ್ನೆಯೂ(ನ.21) ಜಗಳ ಮುಂದುವರಿದಾಗ ಸುನೀಲ್ ಆಟೋ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

    ಗಂಡ ಹೊರಹೋದ ಮೇಲೆ ಬಾಗಿಲು ಹಾಕಿ, ಇತ್ತ ಮಕ್ಕಳಿಬ್ಬರನ್ನೂ ಕತ್ತು ಹಿಸುಕಿ ಮಮತಾ ಕೊಂ*ದಿದ್ದಾಳೆ. ಬಳಿಕ ತಾನೂ ಚಾ*ಕುವಿನಿಂದ ಕತ್ತು ಕೊ*ಯ್ದುಕೊಂಡಿದ್ದಾಳೆ. ಎಲ್ಲ ಆದ ಮೇಲೆ ತಪ್ಪಿನ ಅರಿವಾಗಿ ಪತಿಗೆ ಸೆಲ್ಫಿ ಫೋಟೋ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ,  ‘ಗಲತ್ ಹೋಗಯಾ…ಮಾಫ್ ಕರೋ’ ಅಂತ ಮೆಸೇಜ್ ಬೇರೆ ಹಾಕಿದ್ದಾಳೆ.

    ಇದನ್ನೂ ಓದಿ : ತಮಾಷೆಗಾಗಿ ಕ*ಪಾಳಮೋಕ್ಷ; ಸೋದರ ಮಾವನಿಂದ 3 ವರ್ಷದ ಮಗುವಿನ ಜೀ*ವಾಂತ್ಯ

    ಮೆಸೇಜ್ ನೋಡಿದ ತಕ್ಷಣ ಮನೆಯತ್ತ ದೌಡಾಯಿಸಿದ ಪತಿ ಬಾಗಿಲು ಒಡೆದು ಒಳ ಹೋಗಿ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಮಮತಾ ಸಾಹೋ ಪ್ರಾ*ಣಾ*ಪಾಯದಿಂದ ಪಾರಾಗಿದ್ದಾಳೆ. ಆದರೆ, ಏನೂ ಅರಿಯದ ಕಂದಮ್ಮಗಳು ಪತಿ – ಪತ್ನಿ ಜಗಳಕ್ಕೆ ಬ*ಲಿಯಾಗಿವೆ.

    Continue Reading

    LATEST NEWS

    ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !

    Published

    on

    ಮಂಗಳೂರು/ಆಸ್ಟ್ರೇಲಿಯಾ: ಪರ್ತ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ತನ್ನ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದೆ.


    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಕೆ ಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತಿದ್ದು ಬಿಟ್ಟರೆ, ಉಳಿದವರಿಂದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ನೀಡಿದ್ದ ಅದೇ ನೀರಸ ಪ್ರದರ್ಶನ ಮುಂದುವರಿಯಿತು.
    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಜೊತೆಯಾಟ ಮುಂದುವರಿಸಲು ಸಾಧ್ಯವಾಗಲಿಲ್ಲ. 5 ರನ್ ಅಷ್ಟೇ ಜೊತೆಯಾಟವಾಡಿದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಜೋಡಿ, ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರ ಮೂಲಕ ಆರಂಭಿಕ ನಿರಾಸೆ ಮೂಡಿಸಿದರು. ನಂತರ ಬಂದ ದೇವದತ್ ಪಡಿಕ್ಕಲ್, ಜೋಶ್ ಹೇಜಲ್ ವುಡ್ ಮಾರಕ ದಾಳಿಗೆ ಖಾತೆ ತೆರೆಯಲು ಕೂಡ ಸಾಧ್ಯವಾಗದೇ ಪೆವಿಲಿಯನ್ ಗೆ ಮರಳಿದರು.

    ಇದನ್ನೂ ಓದಿ:ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!
    ಅಪಾರ ನಿರೀಕ್ಷೆಗಳ ಸಾಗರವೇ ಹೊತ್ತು ಬ್ಯಾಟಿಂಗ್ ಗೆ ಇಳಿದಿದ್ದ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದ್ದಾರೆ, ಕೇವಲ 5 ರನ್ ಗಳಸಿ ಔಟಾದರು. ನಂತರ ಬಂದ ಪಂತ್ ಆಟ ಲಯಕ್ಕೆ ತಂದರಾದರೂ ಇವರಿಗೆ ಯಾರೂ ಕೂಡ ಜೋಡಿಯಾಗಿ ನಿಲ್ಲಲೇ ಇಲ್ಲ. ಧ್ರುವ್ ಜುರೆಲ್ 11 ರನ್ ಗಳಿಗೆ ಔಟಾದರೆ, ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಗೆ ಸುಸ್ತಾದರು. ಆದರೆ 7 ನೇ ವಿಕೆಟ್ ಗೆ ಪಂತ್‌ ಮತ್ತು ನಿತೀಶ್ 48 ರನ್ ಗಳ ಜೊತೆಯಾಟ ನೀಡಿದರು.
    ನಂತರ ಬಂದ ಹರ್ಷಿತ್ ರಾಣಾ 7 ರನ್ ಗಳಿಸಿ ಔಟಾದರು. ಇನ್ನೂ ಬುಮ್ರಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಯಿತು.

    ಅಂಪೈರ್ ತೀರ್ಪು ವಿರುದ್ದ ರಾಹುಲ್ ಅಸಮಾಧಾನ:

    ಮಿಚೆಲ್ ಸ್ಟಾರ್ಕ್ ಎಸೆತವನ್ನು ರಾಹುಲ್ ಹೊಡೆಯಲು ಮುಂದಾದಾಗ, ಅದು ರಾಹುಲ್ ಅವರ ಬ್ಯಾಟ್ ನ ಸಮೀಪ ಹಾದು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿದರು. ತಕ್ಷಣವೇ ಫೀಲ್ಡ್ ಅಂಪೈರ್ ಬಳಿ ಮನವಿ ಮಾಡಿದರು. ನಂತರ ಆಸೀಸ್ ತಂಡ ಥರ್ಡ್ ಅಂಪೈರ್ ಮೊರೆ ಹೋದರು. ಇದನ್ನು ಪುರಸ್ಕರಿಸಿದ ಮೂರನೇ ಅಂಪೈರ್ ರಾಹುಲ್ ಔಟ್ ಎಂದು ಘೋಷಿಸಿದರು.
    ಸ್ಟಾರ್ಕ್ ಎಸೆದ ಚೆಂಡು ರಾಹುಲ್ ಬ್ಯಾಟ್ ತಾಗಿದೆಯೇ ಅಥವಾ ಪ್ಯಾಡ್ ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ರೀಪ್ಲೇಯಲ್ಲಿ ವಿವಿಧ ಆಯಾಮಗಳಿಂದ ಪರಿಶೀಲಿಸಿದ ನಂತರ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ನೀಡಲಾಯಿತು. ಇದರಿಂದ ರಾಹುಲ್ ಅಸಮಾಧಾನದಿಂದಲೇ ಹೊರ ನಡೆದರು.

    Continue Reading

    Baindooru

    ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!

    Published

    on

    ಬೆಂಗಳೂರು : ಮಾದಕ ವಸ್ತು ಮಾರಾಟ, ಸಾಗಾಟ ಜಾಲದ ಮೇಲೆ ಕಣ್ಣಿಟ್ಟಿರುವ ಸಿಸಿಬಿ ಅಧಿಕಾರಿಗಳು ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮಾ*ದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ  ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಹೊಸ ವರ್ಷಕ್ಕೆ ಗಾಂ*ಜಾ ಸಪ್ಲೈ :
    ಹೊಸ ವರ್ಷಾಚರಣೆಯ ಸಲುವಾಗಿ ಕ್ವಿಂಟಾಲ್ ಗಟ್ಟಲೆ ಗಾಂ*ಜಾ ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪೆಡ್ಲರ್ ಅಚ್ಚು ಹಾಗೂ ಜಮೀರ್, ರೇಷ್ಮಾ ದಂಪತಿ ಬಂಧಿತರು. ಆರೋಪಿಗಳಿಂದ 3.25 ಕೋಟಿ ರೂಪಾಯಿ ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

    ಮೂವರು ಆರೋಪಿಗಳು ಒಡಿಶಾ ಮತ್ತು ಆಂಧ್ರದಲ್ಲಿ ಗಾಂ*ಜಾ ಸಂಗ್ರಹಿಸಿದ್ದರು. ಹೊಸ ವರ್ಷಾಚರಣೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಮಾಡಲು ಯೋಜಿಸಿದ್ದರು. ಜಮೀರ್ ಮತ್ತು ರೇಷ್ಮಾ ದಂಪತಿ ಬೆಂಗಳೂರಿನಲ್ಲಿ, ಪೆಡ್ಲರ್ ಅಚ್ಚು ಕೇರಳದಲ್ಲಿ ಗಾಂ*ಜಾ ಮಾರಲು ನಿರ್ಧರಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

    ಬೆಂಗಳೂರು ಮತ್ತು ಕೇರಳಕ್ಕೆ ಸಾಗಿಸಲು ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆಗೆ ಪಡೆದಿದ್ದರು. ಬಳಿಕ ಬೆಡ್ ಶೀಟ್ ನಲ್ಲಿ ಗಾಂಜಾ ತುಂಬಿ ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು . ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ಹೆಚ್ ಬಿ ಆರ್ ಲೇಔಟ್ ಬಳಿ ಕಾರನ್ನು ಅಡ್ಡ ಹಾಕಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುವಾಗ ಕಾರಿನಲ್ಲಿ 3 ಕೋಟಿ ರೂ. ಮೌಲ್ಯದ ಗಾಂ*ಜಾ ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ ಪೆಡ್ಲರ್ ಅಚ್ಚು ಕೇರಳ ಪೊಲೀಸರಿಗೆ ಬೇಕಾದ ಮೋಸ್ಟ್ ವಾಂಟೆಡ್  ಆರೋಪಿ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಆತನ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

    ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ :

    ಬೆಂಗಳೂರಿನಲ್ಲಿ ವಿದೇಶಿ ಡ್ರ*ಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾ*ಳಿ ನಡೆಸಿದ ಸಿಸಿಬಿ ಅಧಿಕಾರಿಗಳು,  1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ : ಏನಾಶ್ಚರ್ಯ ? ಈ ಡಯಟ್​ನಿಂದ ಪತ್ನಿಯ 4ನೇ ಸ್ಟೇಜ್ ಸ್ತನ ಕ್ಯಾನ್ಸರ್ ಮಾಯ !!
    ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರ*ಗ್ಸ್ ತರಿಸುತ್ತಿದ್ದರು. ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ಮಾರಲು ಸಜ್ಜಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ, ಈ ವಿದೇಶಿ ಪೆಡ್ಲರ್ ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

    Continue Reading

    LATEST NEWS

    Trending