Connect with us

    LATEST NEWS

    ಆನ್​ಲೈನ್​ನಲ್ಲಿ ಹಣ ಕಳೆದುಕೊಂಡ ಉಪನ್ಯಾಸಕಿಯಿಂದ ಜೀವಾಂತ್ಯ..!

    Published

    on

    ಬೀದರ್ : ಉಪನ್ಯಾಸಕಿಯೊಬ್ಬರು ಆನ್​ಲೈನ್​ನಲ್ಲಿ ಹಣ ಕಳೆದುಕೊಂಡು  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ  ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಎಂಬ  ಗ್ರಾಮದಲ್ಲಿ ನಡೆದಿದೆ.

    ಉಪನ್ಯಾಸಕಿ 28 ವರ್ಷದ  ಆರತಿ ಕನಾಟೆ ಎಂಬಾಕೆ ಆನ್​ಲೈನ್​ನಲ್ಲಿ ಹಣ ಕಳೆದುಕೊಂಡು ಇಸ್ಲಾಂಪುರ ಗ್ರಾಮದ ಸಮೀಪವೊಂದರ  ಬಾವಿಗೆ ಹಾರಿ ಆತ್ಮಹ್ಯತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

    ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ  ಆರತಿ ಕನಾಟೆಯವರು ಆನ್​ಲೈನ್​ನಲ್ಲಿ ಪರಿಚಯವಾದ ವ್ಯಕ್ತಿಗೆ ಹಂತ ಹಂತವಾಗಿ ಒಟ್ಟು 2.5 ಲಕ್ಷ ಹಣ ನೀಡಿದ್ದರು.

    ಆದರೆ ಮುಂದೆ, ಮೋಸ ಹೋಗಿರುವುದು ಗೊತ್ತಾಗಿ ಬೇಸರದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಕಳೆದ ನಾಲ್ಕು ದಿನಗಳ ಹಿಂದೆ ಡೆತ್​ನೋಟ್ ಬರೆದಿಟ್ಟ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬಸವಕಲ್ಯಾಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    DAKSHINA KANNADA

    ತುಳುನಾಡನ್ನು ಹಾಡಿ ಹೊಗಳಿದ ಸುನಿಲ್ ಶೆಟ್ಟಿ.. ಮಾವನ ಪೋಸ್ಟನ್ನು ರಿ ಪೋಸ್ಟ್‌ ಮಾಡಿ ಗಮನ ಸೆಳೆದ ಕೆ.ಎಲ್ ರಾಹುಲ್

    Published

    on

    ಮಂಗಳೂರು: ಬಾಲಿವುಡ್ ನಟ ಸುನಿಲ್ ಶೆಟ್ಟಿ ತುಳುನಾಡನ್ನು ಹಾಡಿ ಹೊಗಳಿದ್ದಾರೆ.  ಇನ್ಸ್ಟಾಗ್ರಾಮ್ ಖಾತೆಯಲ್ಲಿ ತುಳುನಾಡು ಎಷ್ಟು ಸುಂದರ ಅನ್ನೋ ರೀತಿಯಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದೀಗ ಆ ಪೋಸ್ಟ್ ಅನ್ನು ಅಳಿಯ ಕೆ.ಎಲ್ ರಾಹುಲ್ ರಿ ಪೋಸ್ಟ್ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

    sunil shetty, rahul

    ಸುನಿಲ್ ಶೆಟ್ಟಿ ಕರಾವಳಿ ಮೂಲದವರಾಗಿದ್ದು ಇಲ್ಲಿನ ಆಚಾರ, ವಿಚಾರಗಳನ್ನು ಗೌರವಿಸುತ್ತಾರೆ. ಯಾವುದೇ ಭೂತಕೋಲ, ಧಾರ್ಮಿಕ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳದೆ ತಪ್ಪದೆ ಹಾಜರಿರುತ್ತಾರೆ. ಇತ್ತೀಚೆಗೆ ಬಪ್ಪನಾಡಿನಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಸುನಿಲ್ ಶೆಟ್ಟಿ ಭಾಗವಹಿಸಿದ್ದರು. ಮುಂಬೈನಲ್ಲಿ ನೆಲೆಕಂಡಿದ್ದರೂ ಸುನಿಲ್ ಶೆಟ್ಟಿ ಕರಾವಳಿ ಬಗ್ಗೆ ಹೆಚ್ಚು ಅಭಿಮಾನ, ಪ್ರೀತಿ ಇಟ್ಟುಕೊಂಡಿದ್ದಾರೆ.

    ಮಗಳು ಆಥಿಯಾ ಶೆಟ್ಟಿಯನ್ನು ಕನ್ನಡದ ಹುಡುಗ ಕೆ.ಎಲ್ ರಾಹುಲ್‌ ಗೆ ಕೊಟ್ಟು ವಿವಾಹ ಮಾಡಿಕೊಡುವುದರೊಂದಿಗೆ ಕರುನಾಡಿನ ಬಾಂಧವ್ಯವನ್ನು ಮುಂದುವರಿಸಿದ್ದಾರೆ. ಇನ್ನು ಕೆ.ಎಲ್ ರಾಹುಲ್ ಕೂಡಾ ದೈವ ಭಕ್ತರಾಗಿದ್ದು, ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ  ಭೇಟಿ ಕೊಡುತ್ತಾರೆ.

    Read More..; ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮುಲ್ಕಿಯ ಜನಾರ್ಧನ ದೇವಸ್ಥಾನಕ್ಕೆ ಭೇಟಿ

    ಇದೀಗ ಸುನಿಲ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ತುಳುನಾಡಿನ ಕುರಿತು ಬರೆದು ಹಾಕಿದ್ದಾರೆ. ತುಳುನಾಡು ಬಹಳ ಸುಂದರವಾಗಿದೆ. ‘ನಾನು ಹೋಟೆಲ್‌ಗೆ ಹೋಗಿದ್ದಾಗ.. ವೈಟರ್‌ಅನ್ನು ಧಣಿ ಎಂದು ಕರೆದೆ.. ಆ ವೇಳೆ ನನ್ನ ಬಳಿ ಬಂದು ಹೇಳಿ ಧಣಿ ಎಂದು ಕೇಳಿದ್ರು..ಈಗ ನಾವಿಬ್ಬರೂ ಕೂಡಾ ಶ್ರೀಮಂತರಲ್ಲ. ಒಂದು ಅಂಗಡಿ ಹೋದೆ..ಅಂಗಡಿಯವರನ್ನು ಅಣ್ಣಾ ಎಂದು ಕರೆದೆ..ಅವರು ಮರುತ್ತರಿಸಿ ಹೇಳಿ ಅಣ್ಣಾ ಎಂದು ಹೇಳಿದ್ರು. ಅಸಲಿಗೆ ನಾವು ಸಹೋದರರಲ್ಲ. ಮೀನಿನ ಮಾರ್ಕೆಟ್‌ ಗೆ ಹೋದಾಗ ಅವರನ್ನು ಅಮ್ಮಾ ಎಂದು ಕರೆದರೆ ಅವರು ಹೇಳಿ ಮಗು ಎಂದು ಹೇಳುತ್ತಾರೆ. ಅಸಲಿಗೆ ಅವರು ನನ್ನ ತಾಯಿ ಅಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇದು ನಮ್ಮ ತುಳುನಾಡಿನ ಶ್ರೀಮಂತ  ಸಂಸ್ಕೃತಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

    Continue Reading

    LATEST NEWS

    ಲೋಕಸಭಾ ಚುನಾವಣೆ: ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡರಿಂದ ಮತದಾನ.. ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ವಿದೇಶಾಂಗ ಸಚಿವ

    Published

    on

    ದೆಹಲಿ: ಇಂದು ಲೋಕಸಭಾ 6ನೇ ಹಂತದ ಚುನಾವಣೆ ನಡೆಯುತ್ತಿದ್ದು, ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಮತ ಚಲಾವಣೆ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಸೇರಿದಂತೆ ಹಲವು ಗಣ್ಯರುಗಳು ಮತ ಚಲಾಯಿಸಿದ್ದಾರೆ.

    6th lokasabha election

    ದಿಲ್ಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ ಚಲಾವಣೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇನ್ನೊಂದು ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.

    Read More..; ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

    ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಹಕ್ಕನ್ನು ಚಲಾಯಿಸಿದರು.  ಇನ್ನೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ ಚಲಾಯಿಸಿದ ಮೊದಲ ಪುರುಷ ಮತದಾರರಾಗಿದ್ದು ಪ್ರಮಾಣ ಪತ್ರವನ್ನು ಕೂಡಾ ಪಡೆದುಕೊಂಡಿದ್ದಾರೆ. ಇನ್ನು ಪಮಾಣ ಪತ್ರದ ಜೊತೆ ಫೊಟೊ ತೆಗಿಸಿಕೊಂಡು ತನ್ನ X ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    Continue Reading

    DAKSHINA KANNADA

    ಹರೀಶ್ ಪೂಂಜಾ ಪ್ರಕರಣ : ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? : ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

    Published

    on

    ಮಂಗಳೂರು : ದ.ಕ ಜಿಲ್ಲೆಗೆ ಆಗಮಿಸಿರುವ ಸಿಎಂ ಸಿದ್ಧರಾಮಯ್ಯ ವಿಮಾನ ನಿಲ್ದಾಣದಲ್ಲಿ ಹರೀಶ್ ಪೂಂಜಾ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
    ಪ್ರಕರಣದಲ್ಲಿ ಕಾಂಗ್ರೆಸ್‌ ಒತ್ತಡ ಅಂದ್ರೆ ಏನು? ಎಂದು ಪ್ರಶ್ನೆ ಮಾಡಿದ ಸಿಎಂ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಹರೀಶ್ ಪೂಂಜಾ ವಿರುದ್ಧ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಏಳು ವರ್ಷ ಜೈಲುವಾಸದ ಶಿಕ್ಷೆ ಸಿಗಬಹುದಾದ ಕೇಸ್ ಆಗಿದ್ದು, ಬೇಲೇಬಲ್‌ ಪ್ರಕರಣ ಅಲ್ಲ ಎಂದಿದ್ದಾರೆ.


    ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? ಶಾಸಕ ಅಂದ ಮಾತ್ರಕ್ಕೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಶಾಸಕರು ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಅನ್ನೋದು ಇಂಪಾರ್ಟೆಂಟ್. ಹಾಗಾಗಿ ಅವರ ಮೇಲೆ ಎರಡು ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.

    Continue Reading

    LATEST NEWS

    Trending